ಸ್ನೇಹಿತರೆ ಯಾವುದೇ ಕಾರಣಕ್ಕೂ ಈ ವಸ್ತುಗಳನ್ನ ಯಾರಿಗೂ ದಾನ ಮಾಡಬೇಡಿ ಮತ್ತು ಈ ವಸ್ತುಗಳನ್ನ ನೀವು ದಾನ ಮಾಡಿದರೆ ನೀವು ಮುಂದೆ ನಾನಾರೀತಿಯ ಕಷ್ಟಗಳನ್ನ ಎದುರಿಸಬೇಕಾಗುತ್ತದೆ. ನಮ್ಮ ಹಿಂದೂ ಸಂಪ್ರದಾಯದಲ್ಲಿ ದಾನಕ್ಕೆ ವಿಶೇಷವಾದ ಮಹತ್ವ ಇದೆ ಮತ್ತು ದಾನಕ್ಕೆ ಪ್ರತಿರೂಪವಾಗಿ ಕರ್ಣನನ್ನ ಕರೆಯುತ್ತಾರೆ, ಇನ್ನು ನಮ್ಮ ಜೀವನದಲ್ಲಿ ದಾನಕ್ಕಿಂತ ಶ್ರೇಷ್ಠವಾದ ಕೆಲಸ ಬೇರೆ ಯಾವುದು ಇಲ್ಲ ಎಂದು ಹೇಳುತ್ತಿದ್ದೆ ನಮ್ಮ ಹಿಂದೂ ಪುರಾಣ. ಇನ್ನು ಯಾವುದೇ ಫಲವನ್ನ ಅಪೇಕ್ಷಿಸದೆ ನಾವು ದಾನವನ್ನ ಮಾಡಬೇಕು, ಇನ್ನು ದಾನ ಅನ್ನುವುದು ಸನಾತನ ಕಾಲದಿಂದಲೂ ಬಂದಂತ ಒಂದು ಕಾರ್ಯ ಎಂದು ಹೇಳಿದರೆ ತಪ್ಪಾಗಲ್ಲ. ಹಬ್ಬ, ಉಪವಾಸ ಮತ್ತು ಯಾವುದೇ ಮಹತ್ವದ ಕಾರ್ಯದ ಸಲುವಾಗಿ ಬಡವರಿಗೆ ದಾನವನ್ನ ಮಾಡುವುದು ನಮ್ಮ ಪೂರ್ವಜರ ಕಾಲದಿಂದಲೂ ನಡೆದುಬಂದ ಪದ್ಧತಿ, ಇನ್ನು ನಾವು ಮಾಡುವ ದಾನದಿಂದ ನಮಗೆ ದೇವಾನು ದೇವತೆಗಳ ಆಶೀರ್ವಾದ ಸಿಗುತ್ತದೆ ಅನ್ನುವ ನಂಬಿಕೆ ಸಾಕಷ್ಟಿದೆ.

ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಾವು ಕೆಲವು ವಸ್ತುಗಳನ್ನ ಯಾವುದೇ ಕಾರಣಕ್ಕೂ ದಾನ ಮಾಡಬಾರದು, ಇನ್ನು ಯಾವ ವಸ್ತುಗಳನ್ನ ದಾನ ಮಾಡಬೇಕು ಮತ್ತು ಮತ್ತು ಯಾವ ವಸ್ತುಗಳನ್ನ ದಾನ ಮಾಡಬಾರದು ಅನ್ನುವುದನ್ನ ಅರಿತು ದಾನ ಮಾಡಿದರೆ ನಮಗೆ ಅದರ ಫಲ ಸಿಗುತ್ತದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಇತ್ತೀಚಿನ ದಿನಗಳಲ್ಲಿ ಜನರು ಪ್ಲಾಸ್ಟಿಕ್ ವಸ್ತುಗಳನ್ನ ಹೆಚ್ಚಾಗಿ ಬಳಕೆ ಮಾಡುತ್ತಾರೆ, ಸ್ನೇಹಿತರೆ ನೀವು ನಿಮ್ಮ ಉಪಯೋಗಕ್ಕೆ ಪ್ಲಾಸ್ಟಿಕ್ ವಸ್ತುಗಳನ್ನ ಖರೀದಿ ಮಾಡಿ ಮನೆಗೆ ತನ್ನಿ ಆದರೆ ಯಾವುದೇ ಕಾರಣಕ್ಕೂ ಆ ಪ್ಲಾಸ್ಟಿಕ್ ವಸ್ತುಗಳನ್ನ ಯಾರಿಗೂ ಕೂಡ ದಾನದ ರೂಪದಲ್ಲಿ ಕೊಡಬೇಡಿ.

News of dana

ಇನ್ನು ಪ್ಲಾಸ್ಟಿಕ್ ವಸ್ತುಗಳನ್ನ ನೀವು ದಾನ ಮಾಡಿದರೆ ಅದೂ ನಿಮ್ಮ ಕುಟುಂಬದ ಮೇಲೆ, ವ್ಯಾಪಾರದ ಮೇಲೆ ಮತ್ತು ಉನ್ನತಿಯ ಮೇಲೆ ಸಾಕಷ್ಟು ಪರಿಣಾಮವನ್ನ ಬೀರುತ್ತದೆ ಎದು ಹೇಳುತ್ತಿದೆ ನಮ್ಮ ಜ್ಯೋತಿಷ್ಯ ಶಾಸ್ತ್ರ. ಇನ್ನು ಪೊರಕೆಯನ್ನ ಕೂಡ ನಾವು ಯಾವುದೇ ಕಾರಣಕ್ಕೂ ದಾನವಾಗಿ ನೀಡಬಾರದು, ಪೊರಕೆಯನ್ನ ನೀವು ದಾನದ ರೂಪದಲ್ಲಿ ಕೊಟ್ಟರೆ ಮುಂದಿನ ದಿನಗಳಲ್ಲಿ ನೀವು ನಾನಾರೀತಿಯ ಕಷ್ಟಗಳನ್ನ ಎದುರಿಸಬೇಕಾಗುತ್ತದೆ. ನೀವು ಪೊರಕೆಯನ್ನ ದಾನ ಮಾಡಿದರೆ ಲಕ್ಷ್ಮಿ ದೇವಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ ಮತ್ತು ನಿಮ್ಮ ಕೈಯಲ್ಲಿ ಯಾವತ್ತೂ ಹಣ ನಿಲ್ಲುವುದಿಲ್ಲ. ಇನ್ನು ಕಬ್ಬಿಣದ ವಸ್ತುಗಳನ್ನ ಕೂಡ ದಾನವಾಗಿ ಯಾರಿಗೂ ನೀಡಬಾರದು, ಹೌದು ಕಬ್ಬಿಣ ಒಬ್ಬರ ಕೈಯಿಂದ ಇನ್ನೊಬ್ಬರ ಕೈಗೆ ಹೋಗಬಾರದು ಅನ್ನುವ ಶಾಸ್ತ್ರ ಇದೆ, ಇನ್ನು ಈ ಕಬ್ಬಿಣದ ವಸ್ತುಗಳನ್ನ ದಾನ ಮಾಡಿದರೆ ಮಕ್ಕಳ ಮತ್ತು ಪೋಷಕರ ನಡುವೆ ಸಂಬಂಧ ಹದಗೆಡುತ್ತದೆ ಎಂದು ಹೇಳಲಾಗುತ್ತಿದೆ.

ಇನ್ನು ಆಹಾರವನ್ನ ದಾನದ ರೂಪದಲ್ಲಿ ಸಾಕಷ್ಟು ಜನ ಕೊಡುತ್ತಾರೆ, ಸ್ನೇಹಿತರೆ ನೀವು ಆಹಾರವನ್ನ ದಾನವಾಗಿ ಕೊಡಿ ಹಳಸಿದ ಆಹಾರವನ್ನ ದಾನವಾಗಿ ಕೊಡಬೇಡಿ, ಇನ್ನು ಜ್ಞಾನಕ್ಕೆ ಸಮಬಂಧಿಸಿದ ಪುಸ್ತಕಗಳನ್ನ ದಾನ ಮಾಡುವುದು ಕೆಲವರು ಪುಣ್ಯದ ಕೆಲಸ ಎಂದು ಭಾವಿಸುತ್ತಾರೆ ಆದರೆ ಹಾಳಾದ ಪುಸ್ತಕವನ್ನ ಯಾರಿಗೂ ದಾನವಾಗಿ ಕೊಡಬೇಕು, ಯಾಕೆ ಅಂದರೆ ಇದರಿಂದ ಪುಣ್ಯಕ್ಕಿಂತ ಪಾಪವೇ ಜಾಸ್ತಿ ಬರುತ್ತದೆ. ಇನ್ನು ಆಯುಧಗಳನ್ನ ಯಾರಿಗೂ ಕೂಡ ದಾನವಾಗಿ ಕೊಡಬಾರದು ಮತ್ತು ಸ್ವೀಕರಿಸಲು ಬಾರದು, ಸ್ನೇಹಿತರೆ ಈ ಕೆಲವು ವಸ್ತುಗಳನ್ನ ದಾನವಾಗಿ ಕೊಡುವುದರಿಂದ ನಿಮ್ಮ ಜೀವನದಲ್ಲಿ ಇರುವ ಎಲ್ಲಾ ನೆಮ್ಮದಿ ಮತ್ತು ಸುಖ ನಮ್ಮಿಂದ ದೂರವಾಗುತ್ತದೆ ಎಂದು ಹೇಳುತ್ತಿದೆ ಜ್ಯೋತಿಷ್ಯ ಶಾಸ್ತ್ರ.

News of dana

Please follow and like us:
error0
http://karnatakatoday.in/wp-content/uploads/2019/11/News-of-dana-1-1024x576.jpghttp://karnatakatoday.in/wp-content/uploads/2019/11/News-of-dana-1-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಮಂಗಳೂರುಸುದ್ದಿಜಾಲಸ್ನೇಹಿತರೆ ಯಾವುದೇ ಕಾರಣಕ್ಕೂ ಈ ವಸ್ತುಗಳನ್ನ ಯಾರಿಗೂ ದಾನ ಮಾಡಬೇಡಿ ಮತ್ತು ಈ ವಸ್ತುಗಳನ್ನ ನೀವು ದಾನ ಮಾಡಿದರೆ ನೀವು ಮುಂದೆ ನಾನಾರೀತಿಯ ಕಷ್ಟಗಳನ್ನ ಎದುರಿಸಬೇಕಾಗುತ್ತದೆ. ನಮ್ಮ ಹಿಂದೂ ಸಂಪ್ರದಾಯದಲ್ಲಿ ದಾನಕ್ಕೆ ವಿಶೇಷವಾದ ಮಹತ್ವ ಇದೆ ಮತ್ತು ದಾನಕ್ಕೆ ಪ್ರತಿರೂಪವಾಗಿ ಕರ್ಣನನ್ನ ಕರೆಯುತ್ತಾರೆ, ಇನ್ನು ನಮ್ಮ ಜೀವನದಲ್ಲಿ ದಾನಕ್ಕಿಂತ ಶ್ರೇಷ್ಠವಾದ ಕೆಲಸ ಬೇರೆ ಯಾವುದು ಇಲ್ಲ ಎಂದು ಹೇಳುತ್ತಿದ್ದೆ ನಮ್ಮ ಹಿಂದೂ ಪುರಾಣ. ಇನ್ನು ಯಾವುದೇ ಫಲವನ್ನ ಅಪೇಕ್ಷಿಸದೆ...Film | Devotional | Cricket | Health | India