ನಾನು ಒಬ್ಬ ರೈತ ಎಂದು ಹೇಳಿಕೊಳ್ಳಲು ತುಂಬಾ ಜನ ಹಿಂದೆ ಮುಂದೆ ನೋಡುತ್ತಾರೆ ಮತ್ತು ಇದಕ್ಕೆ ಕಾರಣ ನಮ್ಮ ಸಮಾಜ ಎಂದು ಹೇಳಬಹುದು, ರೈತ ಅಂದರೆ ಆತನ ಬಳಿ ಹಣ ಇರುವುದಿಲ್ಲ ಅನ್ನುವ ಭಾವನೆ ಎಲ್ಲರ ಮನದಲ್ಲಿ ಇದೆ ಮತ್ತು ಇಷ್ಟೇ ಅಲ್ಲದೆ ನಾನು ರೈತ ಅಂದರೆ ಹೆಣ್ಣು ಮಗಳನ್ನ ಕೊಟ್ಟು ಮದುವೆ ಮಾಡಿಕೊಡಲು ಕೂಡ ಹಿಂದೆ ಮುಂದೆ ನೋಡುತ್ತಾರೆ ಜನರು. ಇನ್ನು ನಮ್ಮ ಸಮಾಜಕ್ಕೆ ತಿಳಿಯದ ಇನ್ನೊಂದು ವಿಚಾರ ಏನು ಅಂದರೆ ಪ್ರತಿಯೊಬ್ಬ ರೈತ ಕೂಡ ಒಬ್ಬ ವಿಜ್ಞಾನಿ ಆಗಿರುತ್ತಾನೆ ಅನ್ನುವುದು ಆಗಿದೆ, ಸ್ನೇಹಿತರೆ ನಾವು ಹೇಳುವ ಈ ರೈತ ಕೂಡ ಹಾಗೆ. ಪ್ರಾರಂಭದಲ್ಲಿ ಎಷ್ಟೇ ನಷ್ಟ ಮತ್ತು ಸೋಲನ್ನ ಅನುಭವಿಸದರು ಅದರಿಂದ ಪಾಠವನ್ನ ಕಲಿತು ಇಂದು ಮಾದರಿಯ ರೈತನಿಗೆ ಹೊರಹೊಮ್ಮಿದ್ದಾರೆ ಈ ರೈತ.

ಹಾಗಾದರೆ ಈ ರತ ಯಾರು ಮತ್ತು ಈ ಮಾಡಿದ ಸಾಧನೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ನಾವು ಹೇಳುವ ಈ ರೈತನ ಸದಾನಂದ ಮತ್ತು ಇವರು ದೊಡ್ಡಬಳ್ಳಾಪುರದವರು ಆಗಿದ್ದಾರೆ, ಇನ್ನು ಇವರು ಕೂಡ ಪ್ರಾರಂಭದಲ್ಲಿ ಎಲ್ಲಾ ರೈತರು ಮಾಡುವಂತೆ ಇವರು ಎರಡು ತಪ್ಪುಗಳನ್ನ ಮಾಡಿದರು. ಹೌದು ಅಕ್ಕಪಕ್ಕದರು ಈರುಳ್ಳಿ ಅಥವಾ ಟೊಮೆಟೊ ಹಾಕಿದರೆ ಎಲ್ಲಾ ರೈತರು ಕೂಡ ಅದನ್ನೇ ಹಾಕುವುದು ಮತ್ತು ಒಂದು ಎಕರೆ ಜಮೀನು ಇದ್ದರೆ ಆ ಜಮೀನಿನ ಪೂರ್ತಿ ಒಂದೇ ಬೆಳೆಯನ್ನ ಬೆಳೆಯುವುದು, ರೈತರು ಅನುಸರಿಸುವ ಈ ಎರಡು ಮಾರ್ಗಗಳು ಕೂಡ ತುಂಬಾ ಅಪಾಯವಾದವು ಆಗಿದೆ.

News of Farmer Sadanandha

ಇನ್ನು ಎಲ್ಲರು ಟೊಮೆಟೊ ಬೆಳೆಯನ್ನ ಬೆಳೆಯುತ್ತಾರೆ ಎಂದು ನಾವು ಕೂಡ ಅದನ್ನೇ ಬೆಳೆದರೆ ಉತ್ಪಾದನೆ ಜಾಸ್ತಿ ಆಗಿ ಬೆಲೆ ಕಡಿಮೆ ಆಗುತ್ತದೆ ಮತ್ತು ಇರುವ ಜಮೀನಿಗೆಲ್ಲ ಒಂದೇ ಬೆಳೆಯನ್ನ ಹಾಕಿದರೆ ಅವು ಒಂದು ಭಾರಿ ನಮ್ಮ ಕೈ ಹಿಡಿಯುತ್ತದೆ ಮತ್ತು ಕೆಲವು ಭಾರಿ ನಮ್ಮ ಕೈ ಸುಡುತ್ತದೆ ಮತ್ತು ನಷ್ಟವಾದರೆ ವ್ಯವಸಾಯದ ಮೇಲೆ ನಂಬಿಕೆ ಕಳೆದು ಹೋಗುತ್ತದೆ. ಪ್ರಾರಂಭದಲ್ಲಿ ಹೀಗೆ ಮಾಡಿದ ಸದಾನಂದ ಅವರು ಕೆಲವು ಭಾರಿ ತಮ್ಮ ಕೈ ಸುಟ್ಟುಕೊಂಡರು ಮತ್ತು ಹೀಗೆ ಮಾಡಿದರೆ ಮುಂದೆ ಕಷ್ಟ ತುಂಬಾ ಕಷ್ಟ ಆಗುತ್ತದೆ ಎಂದು ಅರಿತ ಸದಾನಂದ ಅವರು ಒಂದು ಉಪಾಯ ಮಾಡಿದರು.

ಇನ್ನು ಇವರು ಮಾಡಿದ ಸದಾನಂದ ಅವರು ತಮಗಿರುವ ಎರಡು ಎಕರೆ ಜಮೀನನ್ನ ವ್ಯವಸ್ಥಿತವಾಗಿ ವಿಂಗಡಿಸಿ ಮೊದಲು ಒಂದಷ್ಟು ಅಡಿಕೆ ಮತ್ತು ತೆಂಗಿನ ಮರಗಳನ್ನ ನೆಟ್ಟರು ಹಾಗೆ ಇನ್ನೊಂದು ಜಾಗದಲ್ಲಿ ಒಂದು ತಿಂಗಳು ಶುಂಠಿ, ಇನ್ನೊಂದು ತಿಂಗಳು ಸಪೋಟ ಮತ್ತು ಒಂದಷ್ಟು ಜಮೀನಿಗೆ ಟೊಮೆಟೊ ಮತ್ತು ಕ್ಯಾಪ್ಸಿಕಮ್ ಮತ್ತು ಹೀಗೆ ಕಾಲದ ಮಿತಿಯನ್ನ ಕೊಟ್ಟು ಸುಮಾರು 30 ಬೆಳೆಗಳನ್ನ ಹಾಕಿದರು. ಇನ್ನು ಸದಾನಂದ ಅವರ ಉಪಾಯ ಹೇಗಿತ್ತು ಅಂದರೆ ಒಂದು ತಿಂಗಳು ಸಪೋಟದಲ್ಲಿ ಒಳ್ಳೆಯ ಲಾಭ ಬಂದರೆ ಇನ್ನೊಂದು ತಿಂಗಳು ಶುಂಠಿಯಲ್ಲಿ ಒಳ್ಳೆಯ ಲಾಭ ಬರುತ್ತಿತ್ತು, ಹೀಗೆ ಪ್ರತಿ ತಿಂಗಳು ಕೈಗೆ ಹಣ ಬರುವಂತೆ ಮಾಡಿಕೊಂಡರು ಸದಾನಂದ ಅವರು.

News of Farmer Sadanandha

ಇನ್ನು ಸದಾನಂದ ಅವರ ಉಪಾಯದಲ್ಲಿ ಇರುವ ಇನೊಂದು ಪ್ರಯೋಜನ ಏನು ಅಂದರೆ ಟೊಮೆಟೊದಲ್ಲಿ ನಷ್ಟವಾದರೆ ಇನ್ನೊಂದರಲ್ಲಿ ಒಳ್ಳೆಯ ಲಾಭ ಸಿಗುತ್ತದೆ, ಹೀಗೆ ತನ್ನ ಉಪಾಯದ ಮೂಲಕ ವರ್ಷಕ್ಕೆ ಸುಮಾರು 22 ಲಕ್ಷ ಸಂಪಾದನೆ ಮಾಡುತ್ತಿದ್ದಾರೆ ಸದಾನಂದ ಅವರು. ಸ್ನೇಹಿತರೆ ವ್ಯವಸಾಯ ಅನ್ನುವುದು ಸಂಶೋಧನೆ ಮತ್ತು ಆವಿಷ್ಕಾರ ಇದ್ದಹಾಗೆ ಮತ್ತು ಅದಕ್ಕೆ ಸೀಮಿತ ಮಿತಿ ಅನ್ನುವುದು ಇಲ್ಲ ಹಾಗೆ ಹೊಸ ಹೊಸ ಪ್ರಯೋಗಗಳನ್ನ ಮಾಡುವುದರಿಂದ ಹೊಸ ವಿಧಾನ ಕಂಡುಹಿಡಿಯಬಹುದಾಗಿದೆ, ಸ್ನೇಹಿತರೆ ಸದಾನಂದ ಅವರ ಈ ಉಪಾಯದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Please follow and like us:
error0
http://karnatakatoday.in/wp-content/uploads/2020/03/Farmer-Sadaandha-1024x576.jpghttp://karnatakatoday.in/wp-content/uploads/2020/03/Farmer-Sadaandha-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲನಾನು ಒಬ್ಬ ರೈತ ಎಂದು ಹೇಳಿಕೊಳ್ಳಲು ತುಂಬಾ ಜನ ಹಿಂದೆ ಮುಂದೆ ನೋಡುತ್ತಾರೆ ಮತ್ತು ಇದಕ್ಕೆ ಕಾರಣ ನಮ್ಮ ಸಮಾಜ ಎಂದು ಹೇಳಬಹುದು, ರೈತ ಅಂದರೆ ಆತನ ಬಳಿ ಹಣ ಇರುವುದಿಲ್ಲ ಅನ್ನುವ ಭಾವನೆ ಎಲ್ಲರ ಮನದಲ್ಲಿ ಇದೆ ಮತ್ತು ಇಷ್ಟೇ ಅಲ್ಲದೆ ನಾನು ರೈತ ಅಂದರೆ ಹೆಣ್ಣು ಮಗಳನ್ನ ಕೊಟ್ಟು ಮದುವೆ ಮಾಡಿಕೊಡಲು ಕೂಡ ಹಿಂದೆ ಮುಂದೆ ನೋಡುತ್ತಾರೆ ಜನರು. ಇನ್ನು ನಮ್ಮ ಸಮಾಜಕ್ಕೆ ತಿಳಿಯದ ಇನ್ನೊಂದು...Film | Devotional | Cricket | Health | India