ವಾಹನ ಸವಾರರ ಹಿತದೃಷ್ಟಿಯಿಂದ ದೇಶದಲ್ಲಿ ಅನೇಕ ಹೊಸ ಸಂಚಾರಿ ನಿಯಮಗಳನ್ನ ಜಾರಿಗೆ ತಂದಿದ್ದರು ಕೂಡ ಜನರು ಅದನ್ನ ಸರಿಯಾಗಿ ಪಾಲನೆ ಮಾಡುತ್ತಿಲ್ಲ ಮತ್ತು ಸಂಚಾರಿ ನಿಯಮಗಳನ್ನ ಪಾಲನೆ ಮಾಡದೆ ತಮ್ಮ ಪ್ರಾಣವನ್ನ ಕಳೆದುಕೊಳ್ಳುವುದರ ಜೊತೆಗೆ ಇತರರ ಪ್ರಾಣವನ್ನ ತೆಗೆಯುತ್ತಿದ್ದಾರೆ. ದೇಶದಲ್ಲಿ ಸಂಚಾರಿ ನಿಯಮಗಳ ಮೇಲೆ ಹೊಸದಾದ ನಿಯಮಗಳನ್ನ ಜಾರಿಗೆ ತಂದಿರುವುದು ನಿಮಗೆಲ್ಲ ಗೊತ್ತೇ ಇದೆ, ಇನ್ನು ಜಾರಿಗೆ ಬಂದ ನಿಯಮಗಳು ಮತ್ತು ದಂಡಗಳ ಏರಿಕೆಯಿಂದ ಜನ ಸಾಮಾನ್ಯವರಿಗೆ ತುಂಬಾ ಸಂಕಷ್ಟ ಎದುರಾಗಿತ್ತು. ಇನ್ನು ಕೆಲವು ಸಮಯದ ನಂತರ ಜನರ ಕಷ್ಟವನ್ನ ಅರಿತ ರಾಜ್ಯದ ಮುಖ್ಯ ಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರು ಸಂಚಾರಿ ನಿಯಮಗಳ ಮೇಲಿಂದ ದಂಡವನ್ನ ಅರ್ಧದಷ್ಟು ಇಳಿಕೆ ಮಾಡಿ ಜನರು ನಿಟ್ಟುಸಿರು ಬಿಡುವಂತೆ ಮಾಡಿದ್ದರು.

ಆದರೆ ಈಗ ರಾಜ್ಯದ ಎಲ್ಲಾ ವಾಹನ ಸವಾರರಿಗೆ ದೊಡ್ಡ ಶಾಕ್ ನೀಡಿದೆ ನಮ್ಮ ರಾಜ್ಯ ಸರ್ಕಾರ ಮತ್ತು ಅದರ ಜೊತೆಗೆ ಒಂದು ಸಿಹಿ ಸುದ್ದಿಯನ್ನ ನೀಡಿದೆ ನಮ್ಮ ರಾಜ್ಯ ಸರ್ಕಾರ. ನೀವು ಕೂಡ ದ್ವಿಚಕ್ರ ವಾಹನ ಮತ್ತು ಯಾವುದೇ ವಾಹನ ಹೊಂದಿದ್ದರು ಕೂಡ ಈ ಮಾಹಿತಿಯನ್ನ ತಪ್ಪದೆ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಎಲ್ಲಾ ದಾಖಲೆಗಳು ಸರಿಯಾಗಿ ಒದ್ದರೂ ಕೂಡ ಯಾವುದಾದರೂ ಒಂದು ತಪ್ಪನ್ನ ಹುಡುಕಿ ದಂಡವನ್ನ ಹಾಕುತ್ತಾರೆ ಅನ್ನುವ ಭಯಕ್ಕೆ ವಾಹನವನ್ನ ಓಡಿಸುವುದಕ್ಕೆ ಕೆಲವರು ಭಯ ಪಡುತ್ತಿದ್ದಾರೆ.

News of half Helmet

ಇನ್ನು ಈಗ ವಾಹನ ಸವಾರರು ಹೆಲ್ಮೆಟ್ ಧರಿಸಿದ್ದರೂ ಕೂಡ ಆ ಹೆಲ್ಮೆಟ್ ನ್ನ ಕಿತ್ತುಕೊಂಡು ದಂಡವನ್ನ ಹಾಕುತ್ತಿದ್ದಾರೆ ಸಂಚಾರಿ ಪೊಲೀಸರು, ಇನ್ನು ಸ್ನೇಹಿತರೆ ಹೊಸ ನಿಯಮದ ಪ್ರಕಾರ ಅರ್ಧ ಹೆಲ್ಮೆಟ್ ಅಂದರೆ ಹಾಫ್ ಹೆಲ್ಮೆಟ್ ನ್ನ ವಾಹನ ಚಲಾಯಿಸುವಾಗ ಧರಿಸುವ ಹಾಗೆ ಇಲ್ಲ ಮತ್ತು ಅದನ್ನ ಧರಿಸಿದರೆ ದಂಡ ಹಾಕುವುದರ ಜೊತೆಗೆ ಆ ಹೆಲ್ಮೆಟ್ ನ್ನ ಪುಡಿ ಪುಡಿ ಮಾಡುತ್ತಿದ್ದಾರೆ ಪೊಲೀಸರು. ಇನ್ನು ಇದರ ಜೊತೆಗೆ ಯಾವ ವಾಹನ ಸವಾರ ಹೆಲ್ಮೆಟ್ ಧರಿಸಿಲ್ಲವೋ ಅವರ ಬಳಿ ದಂಡವನ್ನ ಕಟ್ಟಿಸಿಕೊಂಡು ಅವರಿಗೆ ಆ ಸ್ಥಳದಲ್ಲೇ ಹೊಸ ಹೆಲ್ಮೆಟ್ ನೀಡುವ ಚಿಂತನೆಯನ್ನ ನಡೆಸಿದೆ ನಮ್ಮ ರಾಜ್ಯ ಸರಕಾರ. ಇನ್ನು ಕೆಲವು ಸಮಯದಲ್ಲಿ ವಾಹನದ ಎಲ್ಲಾ ದಾಖಲೆಗಳನ್ನ ತೆಗೆದುಕೊಂಡು ಹೋಗಲು ಸಾಧ್ಯವಾಗುವುದಿಲ್ಲ ಮತ್ತು ಕೆಲವೊಮ್ಮೆ ನಾವು ಅದನ್ನ ಮರೆತುಬಿಡುತ್ತೇವೆ ಮತ್ತು ಪೊಲೀಸರಿಗೆ ದಂಡವನ್ನ ಕಟ್ಟುತ್ತೇವೆ.

ಇನ್ನು ಈಗ ಬಂದಿರುವ ಹೊಸ ನಿಯಮದ ಪ್ರಕಾರ ವಾಹನ ಸವಾರರು ತಮ್ಮ ಮೊಬೈಲ್ ನಲ್ಲಿ ಇರುವ ಡಿಜಿ ಲಾಕರ್ ಮೂಲಕಾನೇ ಎಲ್ಲಾ ದಾಖಲೆಗಳನ್ನ ತೋರಿಸಿದರೆ ಸಾಕು ಮತ್ತು ಒರಿಜಿನಲ್ ದಾಖಲೆಗಳು ನಿಮ್ಮ ಕೈಯಲ್ಲಿ ಇನ್ನುವ ಸಲುವಾಗಿ ದಂಡ ಅಗತ್ಯ ಇಲ್ಲ. ಇನ್ನು ಡಿಜಿ ಲಾಕರ್ ನಲ್ಲಿ ನಿಮ್ಮ ಎಲ್ಲಾ ಮುಖ್ಯವಾದ ದಾಖಲೆಗಳನ್ನ ಸೇರಿಸಿ ಇಡಬಹುದು, ಸ್ನೇಹಿತರೆ ಹಾಫ್ ಹೆಲ್ಮೆಟ್ ಗಳ ಮೇಲೆ ತಂದಿರುವ ಈ ಹೊಸ ನಿಯಮ ಸರಿ ಇದೆಯಾ ಅಥವಾ ಇಲ್ಲವಾ ಅನ್ನುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ವಾಹನ ಚಲಾಯಿಸುವ ಎಲ್ಲಾ ವಾಹನ ಸವವರಿಗೆ ತಲುಪಿಸಿ.

News of half Helmet

Please follow and like us:
error0
http://karnatakatoday.in/wp-content/uploads/2019/11/News-of-half-Helmet-1-1024x576.jpghttp://karnatakatoday.in/wp-content/uploads/2019/11/News-of-half-Helmet-1-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಮಂಗಳೂರುಸುದ್ದಿಜಾಲವಾಹನ ಸವಾರರ ಹಿತದೃಷ್ಟಿಯಿಂದ ದೇಶದಲ್ಲಿ ಅನೇಕ ಹೊಸ ಸಂಚಾರಿ ನಿಯಮಗಳನ್ನ ಜಾರಿಗೆ ತಂದಿದ್ದರು ಕೂಡ ಜನರು ಅದನ್ನ ಸರಿಯಾಗಿ ಪಾಲನೆ ಮಾಡುತ್ತಿಲ್ಲ ಮತ್ತು ಸಂಚಾರಿ ನಿಯಮಗಳನ್ನ ಪಾಲನೆ ಮಾಡದೆ ತಮ್ಮ ಪ್ರಾಣವನ್ನ ಕಳೆದುಕೊಳ್ಳುವುದರ ಜೊತೆಗೆ ಇತರರ ಪ್ರಾಣವನ್ನ ತೆಗೆಯುತ್ತಿದ್ದಾರೆ. ದೇಶದಲ್ಲಿ ಸಂಚಾರಿ ನಿಯಮಗಳ ಮೇಲೆ ಹೊಸದಾದ ನಿಯಮಗಳನ್ನ ಜಾರಿಗೆ ತಂದಿರುವುದು ನಿಮಗೆಲ್ಲ ಗೊತ್ತೇ ಇದೆ, ಇನ್ನು ಜಾರಿಗೆ ಬಂದ ನಿಯಮಗಳು ಮತ್ತು ದಂಡಗಳ ಏರಿಕೆಯಿಂದ ಜನ ಸಾಮಾನ್ಯವರಿಗೆ ತುಂಬಾ...Film | Devotional | Cricket | Health | India