duplicate helmet

ಜನರ ಸುರಕ್ಷತೆಗಾಗಿ ಜಾರಿಗೆ ತಂದ ಕಾನೂನುಗಳು ಈಗ ದಂಡವನ್ನು ಹೆಚ್ಚಿಗೆ ಮಾಡಿರುವುದರಿಂದ ಭಾರೀ ಮಟ್ಟದಲ್ಲಿ ಜನರಿಗೆ ಸಂಕಷ್ಟ ಎದುರಾಗಿದೆ, ಹೌದು ಸರಿಯಾದ ದಾಖಲೆಗಳು ನಿಮ್ಮ ಬಳಿ ಇಲ್ಲವಾದಲ್ಲಿ ಹಿಂದಿಗಿಂತ ಮೂರು ಪಟ್ಟು ದಂಡವನ್ನು ಈಗ ಹೆಚ್ಚಿಸಲಾಗಿದೆ, ಈ ನಿಟ್ಟಿನಲ್ಲಿ ವಸೂಲಿ ಕೂಡ ಆರಂಭವಾಗಿದೆ. ನಿಮ್ಮಲ್ಲಿರುವ ಯಾವ ಪತ್ರಗಳು ಕೂಡ ಅಧಿಕೃತವಾದ ದಿನಾಂಕದೊಳಗೆ ರಿನಿವಲ್ ಮಾಡಿಕೊಳ್ಳಿಲ್ಲವೆಂದರೆ ಸಾಕು ಟ್ರಾಫಿಕ್ ಪೊಲೀಸರು ದಂಡವನ್ನು ದಾಖಲಿಸಲಿದ್ದಾರೆ.

ಇನ್ನು ಬಹಳಷ್ಟು ಜನರಿಗೆ ದ್ವಿಚಕ್ರ ವಾಹನ ಓಡಿಸುವಾಗ ಹೆಲ್ಮೆಟ್ ಧರಿಸುವುದು ಎಂದರೆ ಅಲರ್ಜಿ, ಹೀಗಾಗಿ ಹೆಲ್ಮೆಟ್ ಧರಿಸುವ ಗೋಜಿಗೆ ಹೋಗಲ್ಲ, ಇನ್ನು ಮೇಲೆ ನೀವು ಹೆಲ್ಮೆಟ್ ಹಾಕಿಕೊಂಡರೂ ಕೂಡ ಹಾಕಿಲ್ಲವೆಂದು ದಂಡ ಕಟ್ಟಬೇಕಾಗುತ್ತದೆ, ಇದಕ್ಕೆ ಕಾರಣ ಏನೆಂದರೆ ಮಾರ್ಕೆಟ್ ನಲ್ಲಿ ನೀವು ಕಡಿಮೆ ರೇಟಿಗೆ ಖರೀದಿ ಮಾಡಿರುವ ಕಳಪೆ ಹೆಲ್ಮೆಟ್ ಗಳು.

ಹೌದು ಸೆಪ್ಟೆಂಬರ್ 1 ರಿಂದ ತಿದ್ದುಪಡಿ ಮಾಡಲಾದ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದಿರುವದರಿಂದ ಇನ್ನು ಮೇಲೆ ನೀವು ISI ಮಾರ್ಕ್ ಇಲ್ಲದ ಹೆಲ್ಮೆಟ್ ಹಾಕಿಕೊಂಡರೆ ಹೆಲ್ಮೆಟ್ ಹಾಕಿಲ್ಲವೆನ್ನುವ ಚಲನ್ ಬೀಳುವುದು ಕಡ್ಡಾಯ.

duplicate helmet

ರಸ್ತೆ ಬದಿಯಲ್ಲಿ ನಕಲಿ ಮತ್ತು ಯಾವುದೇ ಸೇಫ್ಟಿ ಇಲ್ಲದ ಈ ಹೆಲ್ಮೆಟ್ ಗಳು ಜೀವವನ್ನು ಉಳಿಸುವುದಿಲ್ಲ, ಬದಲಿಗೆ ನಿಮಗೆ ದಂಡ ಬೀಳದಂತೆ ಕಾಪಾಡಿಕೊಳ್ಳಲು ಅಷ್ಟೇ.  ಒಂದು ವೇಳೆ ಪೊಲೀಸರು ನಿಮ್ಮ ಹೆಲ್ಮೆಟ್ ಅನ್ನು ಪರೀಕ್ಷಿಸಿ ಅದರಲ್ಲಿ ISI ಮಾರ್ಕ್ ಕಂಡುಬಂದಿಲ್ಲ ಎಂದರೆ ಸ್ಥಳದಲ್ಲೇ ದಂಡ ವಿಧಿಸುತ್ತಾರೆ ಮತ್ತು ಹೆಲ್ಮೆಟ್ ವಶಪಡಿಸಿಕೊಂಡು ಚಲನ್ ನೀಡುತ್ತಾರೆ.

ಈಗಾಗಲೇ ದೇಶದ ಹಲವು ನಗರಗಳಲ್ಲಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ಧರಿಸದೆ ಇದ್ದರೆ ಪೆಟ್ರೋಲ್‌ ಬಂಕ್‌ಗಳಲ್ಲಿ ಇನ್ನು ಮುಂದೆ ಪೆಟ್ರೋಲ್‌ ಸಿಗುವುದಿಲ್ಲ, ವಾಹನ ಸವಾರರ ಮತ್ತು ರಸ್ತೆ ಸುರಕ್ಷತೆಯ ಉದ್ದೇಶದಿಂದ ನಗರ ಸಂಚಾರ ಪೊಲೀಸರು ‘ಹೆಲ್ಮೆಟ್‌ ಇಲ್ಲದಿದ್ದರೆ, ಪೆಟ್ರೋಲ್‌ ಇಲ್ಲ’ ಎಂಬ ನಿಯಮವನ್ನು ನಗರದಾದ್ಯಂತ ಜಾರಿಗೊಳಿಸಲು ಮುಂದಾಗಿದ್ದಾರೆ.

ಈ ಸಂಬಂಧ ಆದೇಶವೊಂದನ್ನು ಜಾರಿಗೊಳಿಸುವ ಉದ್ದೇಶವಿದೆ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ, ಹೀಗಾಗಿ ಇನ್ಮೇಲೆ ಹೆಲ್ಮೆಟ್ ಇದ್ದರೂ ಕೂಡ ಅದು ಗುಣಮಟ್ಟದ್ದಾಗಿರಬೇಕು.

duplicate helmet

ಈ ಹಿಂದೆಯೇ ಆಪರೇಷನ್‌ ಸೇಫ್‌ ರೈಡ್‌ ಹೆಸರಿನಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು, ಕಡ್ಡಾಯವಾಗಿ ಎಲ್ಲಾ ದ್ವಿಚಕ್ರವಾಹನ ಸವಾರರು ಬಿಎಸ್‌ಐ/ ಐಎಸ್‌ಐ ಮಾರ್ಕ್‌ ಇರುವ ಹೆಲ್ಮೆಟ್‌ಗಳನ್ನು ಧರಿಸಬೇಕು ಎಂದು ಸೂಚನೆ ನೀಡಿದ್ದರು. ಸೂಚನೆಯ ಬೆನ್ನಲ್ಲೇ ಎಲ್ಲಾ ಅಂಗಡಿಗಳು ಸೇರಿದಂತೆ ರಸ್ತೆ ಬದಿ ಹೆಲ್ಮೆಟ್‌ ಮಾರಾಟ ಜೋರಾಗಿತ್ತು, ಇದನ್ನೇ ಬಂಡವಾಳವಾಗಿಸಿಕೊಂಡ ಕೆಲ ಮಾರಾಟಗಾರರು ನಕಲಿ ಐಎಸ್‌ಐ ಗುರುತಿನ ಹೆಲ್ಮೆಟ್‌ಗಳನ್ನು ಮಾರಾಟ ಮಾಡುತ್ತಿದ್ದರು, ಅಂತಹವರಿಗೂ ಕೂಡ ದಂಡ ವಿಧಿಸಲಾಗುತ್ತಿದೆ.

ನಕಲಿ ಹೆಲ್ಮೆಟ್ ಮಾರಾಟ ಮತ್ತು ಅದನ್ನು ಧರಿಸುವುದು ಕೂಡ ದಂಡಿಸಬಹುದಾದ ಅಪರಾಧ, ಹೀಗಾಗಿ ಇನ್ನು ಮೇಲೆ ಪೊಲೀಸರು ನಿಮ್ಮನ್ನು ಹೆಲ್ಮೆಟ್ ಹಾಕಿದರೂ ಕೂಡ ದಂಡ ವಿಧಿಸಬಹುದು, ಕೂಡಲೇ ನೀವು ನಿಮ್ಮ ಹೆಲ್ಮೆಟ್ ಸರ್ಕಾರದಿಂದ ಮಾನ್ಯತೆ ಪಡೆದ ಮಾರ್ಕ್ ಹೊಂದಿದೆಯೇ ಇಲ್ಲವೇ ಎನ್ನುವುದನ್ನು ಪರೀಕ್ಷಿಸಿಕೊಳ್ಳಿ.

duplicate helmet

Please follow and like us:
error0
http://karnatakatoday.in/wp-content/uploads/2019/09/new-helmet-rules-1024x576.jpghttp://karnatakatoday.in/wp-content/uploads/2019/09/new-helmet-rules-150x104.jpgKarnataka Trendingಅಂಕಣಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಜನರ ಸುರಕ್ಷತೆಗಾಗಿ ಜಾರಿಗೆ ತಂದ ಕಾನೂನುಗಳು ಈಗ ದಂಡವನ್ನು ಹೆಚ್ಚಿಗೆ ಮಾಡಿರುವುದರಿಂದ ಭಾರೀ ಮಟ್ಟದಲ್ಲಿ ಜನರಿಗೆ ಸಂಕಷ್ಟ ಎದುರಾಗಿದೆ, ಹೌದು ಸರಿಯಾದ ದಾಖಲೆಗಳು ನಿಮ್ಮ ಬಳಿ ಇಲ್ಲವಾದಲ್ಲಿ ಹಿಂದಿಗಿಂತ ಮೂರು ಪಟ್ಟು ದಂಡವನ್ನು ಈಗ ಹೆಚ್ಚಿಸಲಾಗಿದೆ, ಈ ನಿಟ್ಟಿನಲ್ಲಿ ವಸೂಲಿ ಕೂಡ ಆರಂಭವಾಗಿದೆ. ನಿಮ್ಮಲ್ಲಿರುವ ಯಾವ ಪತ್ರಗಳು ಕೂಡ ಅಧಿಕೃತವಾದ ದಿನಾಂಕದೊಳಗೆ ರಿನಿವಲ್ ಮಾಡಿಕೊಳ್ಳಿಲ್ಲವೆಂದರೆ ಸಾಕು ಟ್ರಾಫಿಕ್ ಪೊಲೀಸರು ದಂಡವನ್ನು ದಾಖಲಿಸಲಿದ್ದಾರೆ. ಇನ್ನು ಬಹಳಷ್ಟು ಜನರಿಗೆ ದ್ವಿಚಕ್ರ ವಾಹನ ಓಡಿಸುವಾಗ...Film | Devotional | Cricket | Health | India