ಸರೋಜಿನಿ ಮಹಿಷಿ ವರದಿಯ ಜಾರಿಗೆ ಆಗ್ರಹಿಸಿ ನಾಳೆ ಕರ್ನಾಕಟ ಬಂದ್ ಗೆ ಕರೆಯನ್ನ ನೀಡಲಾಗಿದೆ, ಹೌದು ಕನ್ನಡಿಗರ ಕಿಚ್ಚಿನ ಹೋರಾಟಕ್ಕೆ ಕರುನಾಡು ಸ್ಥಬ್ದವಾಗುತ್ತ ಅನ್ನುವ ಪ್ರಶ್ನೆ ಎಲ್ಲರಲೂ ಮೂಡುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ನಾಳೆ ಬಂದ್ ಇರುವ ಕಾರಣ ಮನೆಯಿಂದ ಹೊರಗೆ ಬರಬಹುದಾ ಅಥವಾ ಬೇಡವಾ, ಶಾಲಾ ಕಾಲೇಜು ಇರುತ್ತಾ ಅಥವಾ ಇರಲ್ವ, ಬಸ್ ಮತ್ತು ಇತರೆ ವಾಹನಗಳು ನಾಳೆ ಇರುತ್ತೋ ಇಲ್ಲವೋ ಅನ್ನುವ ಪ್ರಶ್ನೆ ಜನಸಾಮಾನ್ಯರಲ್ಲಿ ಮೂಡಿದೆ. ಹಾಗಾದರೆ ನಾಳೆ ಬಂದ್ ಯಾವ ರೀತಿಯಲ್ಲಿ ಇರಲಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಹೌದು ಸ್ನೇಹಿತರೆ ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ನಾಳೆ ಕರ್ನಾಟಕ ಬಂದ್ ಗೆ ಕರೆ ಕೊಡಲಾಗಿದೆ ಮತ್ತು ಈ ಬಂದ್ ಗೆ ಕರ್ನಾಟಕ ಸಾರಿಗೆ ನೌಕರರ ನೈತಿಕ ಬೆಂಬಲ ಕೂಡ ಇದೆ ಅನ್ನುವ ಮಾಹಿತಿ ಈಗ ಸಿಕ್ಕಿದೆ. ಹೌದು ಸ್ನೇಹಿತರೆ ನಾಳೆಯ ಪರಿಸ್ಥಿತಿಯನ್ನ ನೋಡಿಕೊಂಡು ಬಸ್ಸುಗಳು ಸಂಚರಿಸಬೇಕೋ ಅಥವಾ ಬೇಡವೋ ಅನ್ನುವುದನ್ನ ನಿರ್ಧಾರ ಮಾಡಲಾಗುತ್ತದೆ, ನಾಳೆ ಪ್ರಭಟನೆಗಳು ಜೋರಾಗಿದ್ದು ಅಹಿತಕರ ಘಟನೆಗಳು ನಡೆದಲ್ಲಿ ಅಥವಾ ಕಲ್ಲು ತೂರಾಟಗಳು ನಡೆದಲ್ಲಿ ಬಸ್ ಸಂಚಾರವನ್ನ ಸ್ಥಗಿತ ಮಾಡಲಾಗುತ್ತದೆ ಎಂದು ನೌಕರರು ಹೇಳಿದ್ದಾರೆ, ಈಗಿನ ಮಾಹಿತಿಯ ಪ್ರಕಾರ ನಾಳೆ ಎಲ್ಲಾ ಬಸ್ ಎಂದಿನಂತೆ ಸಂಚರಿಸಲಿದೆ.

News of Karnataka Bandh

ನಾಳೆ ಬಂದ್ ಇರುವ ಕಾರಣ ಶಾಲೆ ಮತ್ತು ಕಾಲೇಜಿಗೆ ಹೋಗುವ ಮಕ್ಕಳಲ್ಲಿ ನಾಳೆ ಶಾಲೆ ಅಥವಾ ಕಾಲೆಜಿಕ್ ಇರುತ್ತಾ ಅಥವಾ ಇಲ್ಲವ ಪ್ರಶ್ನೆ ಮೂಡಿದೆ, ಇನ್ನು ಈಗ ಬಂದಿರುವ ಮಾಹಿತಿಯ ಪ್ರಕಾರ ಶಾಲೆ ಅಥವಾ ಕಾಲೇಜಿಗೆ ರಜೆ ಕೊಡಬೇಕಾ ಅಥವಾ ಬೇಡವಾ ಅನ್ನುವುದರ ಬಗ್ಗೆ ಇನ್ನು ನಿರ್ಧಾರ ಕೈಗೊಳ್ಳಲಾಗಿಲ್ಲ ಮತ್ತು ನಾಳಿನ ಪರಿಸ್ಥಿತಿಯನ್ನ ನೋಡಿಕೊಂಡು ಆಯಾ ಶಿಕ್ಷಣ ಸಂಸ್ಥೆಯವರು ನಿರ್ಧಾರವನ್ನ ತಗೆದುಕೊಳ್ಳಲಿದ್ದಾರೆ, ಇಂದು ಸಭೆ ನಡೆಯಲಿದ್ದು ಆ ಸಭೆಯಲ್ಲಿ ನಿರ್ಧಾರವನ್ನ ತಿಳಿಸಲಾಗುತ್ತದೆ. ಇನ್ನು ಬೆಂಗಳೂರು ಆಟೋ ಮತ್ತು ಟ್ಯಾಕ್ಸಿ ಯೂನಿಯನ್ ನಿಂದ ಬಂದ್ ಗೆ ಬೆಂಬಲ ಸಿಕ್ಕಿದೆ, ಹೌದು ಸ್ನೇಹಿತರೆ ಒಂದು ಲಕ್ಷ ಆಟೋ ಸಂಚಾರ ನಾಳೆ ಸ್ತಬ್ದವಾಗಲಿದೆ ಅನ್ನುವ ಮಾಹಿತಿ ಸಿಕ್ಕಿದೆ ಮತ್ತು ಇದರ ಓಲಾ, ಉಬೆರ್ ಮತ್ತು ಟ್ಯಾಕ್ಸಿ ಸೇವೆಗಳು ಇರುವುದು ಕೂಡ ಡೌಟ್ ಎಂದು ಹೇಳಲಾಗುತ್ತಿದೆ ಮತ್ತು ಅವರ ಬೆಂಬಲ ಕೂಡ ಸಿಕ್ಕಿದೆ.

ಇನ್ನು ನಾಳೆ ಬಂದ್ ಇದ್ದರೂ ಕೂಡ ಲಾರಿಗಳ ಸಂಚಾರ ಮಾತ್ರ ಏತಾಸ್ಥಿತಿಯಲ್ಲಿ ಇರಲಿದೆ, ಇನ್ನು ಜನರಲ್ಲಿ ಹೆಚ್ಚು ಪ್ರಶ್ನೆಗೆ ಒಳಗಾಗಿರುವ ವಿಷಯ ಏನು ಅಂದರೆ ನಾಳೆ ಬ್ಯಾಂಕುಗಳು ಓಪನ್ ಇರತ್ತ ಅಥವಾ ಇಲ್ಲವ ಅನ್ನುವುದು ಸ್ನೇಹಿತರೆ ನಾಳೆ ಬಂದ್ ಇರುವ ಕಾರಣ ಬ್ಯಾಂಕುಗಳ ವ್ಯವಹಾರ ಇರುತ್ತಾ ಅಥವಾ ಇಲ್ಲವ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಸಂಜೆ ಸಿಗಲಿದ್ದು ಇದರ ಕುರಿತು ಇನ್ನು ನಿರ್ಧಾರವನ್ನ ತಗೆದುಕೊಳ್ಳಲಾಗಿಲ್ಲ. ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ನಾಳೆ ಆಗುತ್ತಿರುವ ಕರ್ನಾಟಕ ಬಂದ್ ಗೆ ನಿಮ್ಮ ಬೆಂಬಲ ಉಂಟಾ ಅಥವಾ ಇಲ್ಲವ ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ.

News of Karnataka Bandh

Please follow and like us:
error0
http://karnatakatoday.in/wp-content/uploads/2020/02/News-of-Karnataka-Bandh-1-1024x576.jpghttp://karnatakatoday.in/wp-content/uploads/2020/02/News-of-Karnataka-Bandh-1-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಮಂಗಳೂರುಸುದ್ದಿಜಾಲಸರೋಜಿನಿ ಮಹಿಷಿ ವರದಿಯ ಜಾರಿಗೆ ಆಗ್ರಹಿಸಿ ನಾಳೆ ಕರ್ನಾಕಟ ಬಂದ್ ಗೆ ಕರೆಯನ್ನ ನೀಡಲಾಗಿದೆ, ಹೌದು ಕನ್ನಡಿಗರ ಕಿಚ್ಚಿನ ಹೋರಾಟಕ್ಕೆ ಕರುನಾಡು ಸ್ಥಬ್ದವಾಗುತ್ತ ಅನ್ನುವ ಪ್ರಶ್ನೆ ಎಲ್ಲರಲೂ ಮೂಡುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ ನಾಳೆ ಬಂದ್ ಇರುವ ಕಾರಣ ಮನೆಯಿಂದ ಹೊರಗೆ ಬರಬಹುದಾ ಅಥವಾ ಬೇಡವಾ, ಶಾಲಾ ಕಾಲೇಜು ಇರುತ್ತಾ ಅಥವಾ ಇರಲ್ವ, ಬಸ್ ಮತ್ತು ಇತರೆ ವಾಹನಗಳು ನಾಳೆ ಇರುತ್ತೋ ಇಲ್ಲವೋ ಅನ್ನುವ ಪ್ರಶ್ನೆ ಜನಸಾಮಾನ್ಯರಲ್ಲಿ...Film | Devotional | Cricket | Health | India