ಮನುಷ್ಯ ಅಂದಮೇಲೆ ಅವನ ಜೀವನಕ್ಕೆ ಒಂದು ಗುರಿ ಇರಬೇಕು ಇಲ್ಲವಾದರೆ ಅವನ ಜೀವನಕ್ಕೆ ಯಾವ ಅರ್ಥ ಕೂಡ ಇರುವುದಿಲ್ಲ, ಜೀವನದಲ್ಲಿ ಗುರಿಯನ್ನ ತಲುಪುವುದಕ್ಕೆ ನಮಗೆ ಸಾಕಷ್ಟು ಅಡಚಣೆಗಳು ಆಗುತ್ತದೆ ಮತ್ತು ನಾವು ಮಾಡುವ ಕೆಲವು ತಪ್ಪುಗಳೇ ಆ ಅಡಚಣೆಗಳಿಗೆ ಕಾರಣ ಆಗುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ನಾವು ಹಿಂದಿನ ಜನ್ಮದಲ್ಲಿ ಮಾಡಿದ ಕೆಲವು ತಪ್ಪುಗಳಿಂದ ನಾವು ಈಗಿನ ಜನ್ಮದಲ್ಲಿ ಕೆಲವು ಕಷ್ಟಗಳನ್ನ ಎದುರಿಸುತ್ತ ಇರುತ್ತೇವೆ, ಇನ್ನು ಹೆಣ್ಣು ಮಾಡುವ ಕೆಲವು ತಪ್ಪುಗಳಿಂದ ಕೂಡ ಅವರ ಗಂಡ ಅವರ ಮನೆಯವರು ಬೀದಿಗೆ ಬರಬಹುದು ಎಂದು ಹೇಳುತ್ತಿದೆ ಕೆಲವು ಪುರಾಣಗಳು. ಹೆಣ್ಣು ಮಾಡುವ ಈ ಕೆಲವು ತಪ್ಪುಗಳಿಂದ ಅವಳ ಗಂಡನಿಗೆ ಅಥವಾ ಅವರ ಮನೆಯವರಿಗೆ ತಮ್ಮ ಗುರಿಯನ್ನ ತಲುಪಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರೆ ತಪ್ಪಾಗಲ್ಲ.

ಇನ್ನು ಹೆಣ್ಣು ಮಾಡುವ ಈ ತಪ್ಪುಗಳಿಂದ ಅವಳ ಗಂಡ ಅಥವಾ ಮನೆಯವರು ಕಷ್ಟಕರವಾದ ಜೀವನವನ್ನ ಎದುರಿಸಬೇಕಾಗುತ್ತದೆ ಮತ್ತು ವ್ಯಾಪಾರ ವ್ಯವಹಾರದಲ್ಲಿ ಲಾಭ ಅವರಿಗೆ ಸಿಗುವುದಿಲ್ಲ. ಹಾಗಾದರೆ ಆ ಕೆಲವು ತಪ್ಪುಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಹೆಣ್ಣು ಮಕ್ಕಳು ತಿಳಿಯದೆ ಕೆಲವು ತಪ್ಪುಗಳನ್ನ ಮಾಡುತ್ತಾರೆ, ಮೊದಲನೆಯದಾಗಿ ಹೆಣ್ಣು ಮಕ್ಕಳು ಬೆಳಿಗ್ಗೆ ತಡವಾಗಿ ಏಳುವುದು, ಹೆಣ್ಣು ಮಕ್ಕಳಿಗೆ ಬೆಳಿಗ್ಗೆ ತಡವಾಗಿ ಏಳುವುದು ಒಳ್ಳೆಯದಲ್ಲ ಮತ್ತು ಇದು ದರಿದ್ರವನ್ನ ತರುತ್ತದೆ. ಮನೆಯ ಹೆಣ್ಣು ಮಕ್ಕಳು ಬೆಳಿಗ್ಗೆ ಬೇಗ ಏಳುವುದರಿಂದ ಮನೆಗೆ ಒಳ್ಳೆಯದಾಗುತ್ತದೆ ಮತ್ತು ಮನೆಯಲ್ಲಿ ದೊಡ್ಡ ಬದಲಾವಣೆಗಳನ್ನ ಕಾಣಬಹುದಾಗಿದೆ.

News of ladies problem in home

ಇನ್ನು ಎರಡನೆಯದಾಗಿ ಹೆಣ್ಣು ಮಕ್ಕಳು ಮನೆಯಲ್ಲಿ ಕೆಟ್ಟ ಪದಗಳನ್ನ ಮಾತನಾಡಬಾರದು ಮತ್ತು ಮುಖವನ್ನ ಗಂಟು ಹಾಕಿಕೊಳ್ಳಬಾರದು, ಹೌದು ಹೆಣ್ಣು ಮಕ್ಕಳು ಈ ಈರೀತಿಯಾಗಿ ವರ್ತಿಸಿದರೆ ಆ ಮನೆಗೆ ಏಳಿಗೆ ಆಗುವುದಿಲ್ಲ ಎಂದು ಹೇಳುತ್ತಿದೆ ಪುರಾಣಗಳು ಮತ್ತು ಜಗಳ ಮಾಡುವ ಹೆಣ್ಣು ಮಕ್ಕಳು ಯಾವ ಮನೆಯಲ್ಲಿ ಇರುತ್ತಾರೋ ಅಲ್ಲಿ ಲಕ್ಷ್ಮಿ ದೇವಿ ನೆಲೆಸುವುದಿಲ್ಲ. ಮನೆಯ ಲಕ್ಷ್ಮಿಯಾದ ಹೆಣ್ಣು ಮಕ್ಕಳು ಯಾವಾಗಲೂ ಮನೆಯಲ್ಲಿ ಖುಷಿಯಿಂದ ನಗುನಗುತ್ತಾ ಇರಬೇಕು ಆವಾಗ ಮಾತ್ರ ಆ ಮನೆ ಏಳಿಗೆಯಾಗಲು ಸಾಧ್ಯ, ಹೆಣ್ಣಿನ ಕಣ್ಣೀರು ಆ ಮನೆಗೆ ಒಳ್ಳೆಯದಲ್ಲ. ಇನ್ನು ಮೂರನೆಯದಾಗಿ ಹೆಣ್ಣು ಮಕ್ಕಳು ಬಳಸುವ ಬಳೆ ಅಥವಾ ಬೆಜ್ಜೆಗಳನ್ನ ಬೇರೆಯವರಿಗೆ ಕೊಡಬಾರದು, ಹೀಗೆ ಗೆಜ್ಜೆ ಮತ್ತು ಬಳೆಗಳನ್ನ ಬೇರೆಯವರಿಗೆ ಲಕ್ಷ್ಮಿ ದೇವಿಯನ್ನ ಬೇರೆಯವರಿಗೆ ದಾನ ಮಾಡಿದಂತೆ ಆಗುತ್ತದೆ.

ಇನ್ನು ನಾಲ್ಕನೆಯದಾಗಿ ಹೆಣ್ಣು ಮಕ್ಕಳು ಮನೆಯನ್ನ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಹೌದು ಯಾರ ಮನೆ ಸ್ವಚ್ಚಾಗಿ ಇರುತ್ತದೆಯೋ ಆ ಮನೆಯಲ್ಲಿ ಲಕ್ಷ್ಮಿ ದೇವಿ ಯಾವಾಗಲು ನೆಲೆಸುತ್ತಾಳೆ ಮತ್ತು ಯಾರ ಮನೆ ಸ್ವಚ್ಛವಾಗಿ ಇರುವುದಿಲ್ಲವೋ ಅವರ ಮನೆಯಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ. ಇನ್ನು ಈ ಕೆಲಸವನ್ನ ಹೆಣ್ಣು ಮಕ್ಕಳು ಮಾಡದೆ ಇದ್ದರೆ ಆ ಮನೆಗೆ ಒಳ್ಳೆಯದಾಗುವದಿಲ್ಲ ಎಂದು ಹೇಳುತ್ತಿದೆ ಪುರಾಣಗಳು, ಮನೆಯಲ್ಲಿ ನೆಮ್ಮದಿ ಮತ್ತು ಮನೆ ಏಳಿಗೆಯಾಗಬೇಕು ಅಂದರೆ ಹೆಣ್ಣು ಮಕ್ಕಳು ಈ ತಪ್ಪುಗಳನ್ನ ಮಾಡದೆ ಇರುವುದು ಬಹಳ ಉತ್ತಮ.

News of ladies problem in home

Please follow and like us:
error0
http://karnatakatoday.in/wp-content/uploads/2019/11/bad-thinking-of-girls-1024x576.jpghttp://karnatakatoday.in/wp-content/uploads/2019/11/bad-thinking-of-girls-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಸುದ್ದಿಜಾಲಮನುಷ್ಯ ಅಂದಮೇಲೆ ಅವನ ಜೀವನಕ್ಕೆ ಒಂದು ಗುರಿ ಇರಬೇಕು ಇಲ್ಲವಾದರೆ ಅವನ ಜೀವನಕ್ಕೆ ಯಾವ ಅರ್ಥ ಕೂಡ ಇರುವುದಿಲ್ಲ, ಜೀವನದಲ್ಲಿ ಗುರಿಯನ್ನ ತಲುಪುವುದಕ್ಕೆ ನಮಗೆ ಸಾಕಷ್ಟು ಅಡಚಣೆಗಳು ಆಗುತ್ತದೆ ಮತ್ತು ನಾವು ಮಾಡುವ ಕೆಲವು ತಪ್ಪುಗಳೇ ಆ ಅಡಚಣೆಗಳಿಗೆ ಕಾರಣ ಆಗುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ನಾವು ಹಿಂದಿನ ಜನ್ಮದಲ್ಲಿ ಮಾಡಿದ ಕೆಲವು ತಪ್ಪುಗಳಿಂದ ನಾವು ಈಗಿನ ಜನ್ಮದಲ್ಲಿ ಕೆಲವು ಕಷ್ಟಗಳನ್ನ ಎದುರಿಸುತ್ತ ಇರುತ್ತೇವೆ, ಇನ್ನು ಹೆಣ್ಣು...Film | Devotional | Cricket | Health | India