ಸ್ವಂತ ಮನೆ, ಜಮೀನು ಮತ್ತು ಜಾಗವನ್ನ ಹೊಂದಿರುವ ಪ್ರತಿಯೊಬ್ಬರಿಗೂ ರಾಜ್ಯ ಸರ್ಕಾರದಿಂದ ಹೊಸ ನಿಯಮವನ್ನ ಜಾರಿಗೆ ತರಲಾಗಿದೆ, ಸ್ನೇಹಿತರೆ ನಿಮ್ಮ ಬಳಿ ಕೂಡ ಸ್ವಂತ ಮನೆ, ಜಮೀನು ಮತ್ತು ಜಾಗ ಇದ್ದರೆ ನೀವು ಈ ಮಾಹಿತಿಯನ್ನ ಕಡ್ಡಾಯವಾಗಿ ತಿಳಿದುಕೊಳ್ಳಲೇಬೇಕು. ಹೌದು ಸ್ನೇಹಿತರೆ ರಾಜ್ಯ ಕಂದಾಯ ಇಲಾಖೆಯು ಕೃಷಿ ಭೂಮಿ ಖರೀದಿ ಮತ್ತು ಮಾರಾಟದಲ್ಲಿ ದೊಡ್ಡ ಬದಲಾವಣೆಯನ್ನ ಜಾರಿಗೆ ತರಲು ಮುಂದಾಗಿದ್ದು ಸಂಪೂರ್ಣವಾಗಿ ರಿಯಲ್ ಎಸ್ಟೇಟ್ ಕೆಲಸ ಮಾಡುವವರಿಗೆ, ರೈತರಿಗೆ ಹಾಗು ಈಗಾಗಲೇ ಕೃಷಿ ಭೂಮಿಯಲ್ಲಿ ಮನೆ ಕಟ್ಟಿಕೊಂಡವರಿಗೆ ಬಿಗ್ ಶಾಕ್ ನೀಡಿದೆ. ಹಾಗಾದರೆ ಏನದು ಹೊಸ ನಿಯಮ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಹೊಸ ನಿಯಮದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ವಲ್ಪ ಕೃಷಿ ಭೂಮಿಯನ್ನ ಖರೀದಿ ಮಾಡಿ ಅದನ್ನ ನೋಂದಣಿ ಮಾಡಿಕೊಂಡು ಮನೆ ಅಥವಾ ಇತರೆ ಕಡ್ಡಾಯವನ್ನ ನಿರ್ಮಿಸಿಕೊಳ್ಳುವುದರ ಮೂಲಕ ಹೆಚ್ಚಾಗುತ್ತಿರುವ ಅಸ್ತವೆಸ್ತ ನಾಗರೀಕರಣಕ್ಕೆ ತಡೆ ಹಾಕಲು ರಾಜ್ಯ ಸರ್ಕಾರ ಈಗ ಮುಂದಾಗಿದೆ.

ಹೌದು ಇನ್ನುಮುಂದೆ ಕೃಷಿ ಭೂಮಿ ಮಾರಾಟ ಮಾಡುವುದಕ್ಕಾಗಲಿ ಅಥವಾ ಖರೀದಿ ಮಾಡುವುದಕ್ಕಾಗಲಿ ಸಬ್ ರಿಜಿಸ್ಟರ್ ನಲ್ಲಿ ನೋಂದಾವಣೆ ಮಾಡಿಕೊಳ್ಳಲು ಕನಿಷ್ಠ ಮಿತಿಯನ್ನ ನಿಗದಿ ಮಾಡಲು ಈಗ ಕಂದಾಯ ಇಲಾಖೆ ಮುಂದಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಕನಿಷ್ಠ ಅಳತೆಗಿಂತ ಕಡಿಮೆ ಇರುವ ಕೃಷಿ ಭೂಮಿಗೆ ಕಂದಾಯ ನಕ್ಷೆ, ಪೋಡಿ, RTC ಯನ್ನು ಮಾಡಿಸಿಕೊಂಡು ಅದರಲ್ಲಿ ಮನೆ ಅಥವಾ ಇತರೆ ಕಡ್ಡಾಡಗಳನ್ನ ನಿರ್ಮಾಣ ಮಾಡಿಕೊಳ್ಳಲು ಯಾವುದೇ ರೀತಿಯ ಅವಕಾಶ ಇರುವುದಿಲ್ಲ, ಸರ್ಕಾರ ನಿಗದಿ ಮಾಡುವ ಕನಿಷ್ಠ ಭೂಮಿಗಿಂತ ಹೆಚ್ಚಾಗಿದ್ದರೆ ಮಾತ್ರ ಸರಳವಾಗಿ ಯಾವುದೇ ತೊಂದರೆ ಇಲ್ಲದೆ ಮಾರಾಟ ಅಥವಾ ಖರೀದಿ ಮಾಡಬಹುದಾಗಿದೆ.

 News of land sale in India

ಈ ಹಿಂದಿನಿಂದಲೂ ಕಂದಾಯ ಇಲಾಖೆಯು ಕನಿಷ್ಠ ಭೂಮಿ ಯೋಜನೆಯನ್ನ ಜಾರಿಗೆ ತರಲು ಚಿಂತನೆ ಮಾಡುತ್ತಿದ್ದು ಈಗ ಸರ್ಕಾರಕ್ಕೆ ಪ್ರಸ್ತಾವನೆಯನ್ನ ಸಲ್ಲಿಸಲಾಗಿದೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ, ಇನ್ನು ಈ ಯೋಜನೆ ಜಾರಿಯಾದ ಮೇಲೆ ಇನ್ನುಮುಂದೆ ಕೊಡಗು, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಕನಿಷ್ಠ ಮೂರೂ ಗುಂಟೆಯ ಜಮೀನು ಇದ್ದರೆ ಮಾತ್ರ ಮಾರಾಟ ಮತ್ತು ಖರೀದಿ ಮಾಡಬಹುದಾಗಿದೆ, ಇಲ್ಲವಾದರೆ ಮಾರಾಟ ಮತ್ತು ಖರೀದಿ ಮಾಡಲು ಸಾಧ್ಯವಿಲ್ಲ. ಇನ್ನು ಈ ಜಿಲ್ಲೆಗಳನ್ನ ಹೊರತುಪಡಿಸಿ ರಾಜ್ಯಾದ್ಯಂತ ಯಾರೇ ಕೃಷಿ ಭೂಮಿಯನ್ನ ಮಾರಬೇಕಾದರೆ ಅಥವಾ ಖರೀದಿ ಮಾಡಬೇಕಾದರೆ ಕನಿಷ್ಠ 6 ಗುಂಟೆ ಜಮೀನು ಹೊಂದಿರಬೇಕು, ಇಲ್ಲವಾದರೆ ಮಾರಾಟ ಮಾಡುವುದಕ್ಕಾಗಲಿ ಅಥವಾ ಖರೀದಿ ಮಾಡುವುದಕ್ಕಾಗಲಿ ಸಾಧ್ಯವಿಲ್ಲ ಮತ್ತು ಪಹಣಿ ಕೂಡ ಅವರ ಹೆಸರಿಗೆ ಬರುವುದಿಲ್ಲ ಅಂದರೆ ಖರೀದಿ ಮಾಡುವವರ ಹೆಸರಿಗೆ ಜಮೀನಿನ ಪಹಣಿ ಬರುವುದಿಲ್ಲ.

ಇನ್ನು ಸರ್ಕಾರ ಈ ಕ್ರಮವನ್ನ ಕೈಗೊಳ್ಳಲು ಮುಖ್ಯವಾದ ಕಾರಣ ಏನು ಅಂದರೆ ನಗರ ಪಟ್ಟಣದ ಸುತ್ತಮುತ್ತಲು ಇರುವ ಕೃಷಿ ಭೂಮಿಯಲ್ಲಿ ಯಾವುದೇ ರೀತಿಯಾಗಿ NA ಅಥವಾ GDA ನೋಂದಣಿ ಫ್ಲಾಟ್ ಗಳನ್ನ ಮಾಡುವುದು ಮತ್ತು ಅಸ್ತವೆಸ್ತವಾಗಿ ತುಂಡು ತುಂಡು ಅಳತೆಯ ಕೃಷಿ ಭೂಮಿಯನ್ನ ಮಾರುವುದು, ಖರೀದಿ ಮಾಡುವುದು ಹಾಗು ಅದರಲ್ಲಿ ಮನೆ ಮತ್ತು ಕಟ್ಟಡಗಳನ್ನ ನಿರ್ಮಾಣ ಮಾಡಿಕೊಳ್ಳುತ್ತಿರುವುದರಿಂದ ಈ ನಿಯಮವನ್ನ ಜಾರಿಗೆ ತರಲಾಗಿದೆ. 6 ಗುಂಟೆಗಿಂತ ಹೆಚ್ಚು ಇರುವ ಕೃಷಿ ಭೂಮಿಯನ್ನ ಮಾರುವುದು ಅಥವಾ ಖರೀದಿ ಮಾಡುವುದು ಮಾಡಬಹುದಾಗಿದೆ ಮತ್ತು ಅದಕ್ಕೂ ಕಡಿಮೆ ಜಮೀನನ್ನ ಖರೀದಿ ಅಥವಾ ಮಾರಾಟ ಮಾಡಲು ಸಾಧ್ಯವಿಲ್ಲ, ಸ್ನೇಹಿತರೆ ಸರ್ಕಾರದ ಈ ನಿಯಮದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

 News of land sale in India

Please follow and like us:
error0
http://karnatakatoday.in/wp-content/uploads/2020/01/News-of-land-sale-in-India-1-1024x576.jpghttp://karnatakatoday.in/wp-content/uploads/2020/01/News-of-land-sale-in-India-1-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಮಂಗಳೂರುಸುದ್ದಿಜಾಲಸ್ವಂತ ಮನೆ, ಜಮೀನು ಮತ್ತು ಜಾಗವನ್ನ ಹೊಂದಿರುವ ಪ್ರತಿಯೊಬ್ಬರಿಗೂ ರಾಜ್ಯ ಸರ್ಕಾರದಿಂದ ಹೊಸ ನಿಯಮವನ್ನ ಜಾರಿಗೆ ತರಲಾಗಿದೆ, ಸ್ನೇಹಿತರೆ ನಿಮ್ಮ ಬಳಿ ಕೂಡ ಸ್ವಂತ ಮನೆ, ಜಮೀನು ಮತ್ತು ಜಾಗ ಇದ್ದರೆ ನೀವು ಈ ಮಾಹಿತಿಯನ್ನ ಕಡ್ಡಾಯವಾಗಿ ತಿಳಿದುಕೊಳ್ಳಲೇಬೇಕು. ಹೌದು ಸ್ನೇಹಿತರೆ ರಾಜ್ಯ ಕಂದಾಯ ಇಲಾಖೆಯು ಕೃಷಿ ಭೂಮಿ ಖರೀದಿ ಮತ್ತು ಮಾರಾಟದಲ್ಲಿ ದೊಡ್ಡ ಬದಲಾವಣೆಯನ್ನ ಜಾರಿಗೆ ತರಲು ಮುಂದಾಗಿದ್ದು ಸಂಪೂರ್ಣವಾಗಿ ರಿಯಲ್ ಎಸ್ಟೇಟ್ ಕೆಲಸ ಮಾಡುವವರಿಗೆ, ರೈತರಿಗೆ...Film | Devotional | Cricket | Health | India