ಒಂದು ವರ್ಷಕ್ಕೆ 365 ದಿನಗಳು ಅನ್ನುವ ವಿಚಾರ ಎಲ್ಲರಿಗೂ ತಿಳಿದಿರುತ್ತದೆ ಮತ್ತು ನಾಲ್ಕು ವರ್ಷಗಳಿಗೊಮ್ಮೆ ಅಧಿಕ ವರ್ಷ ಬರುತ್ತದೆ ಮತ್ತು ಆ ವರ್ಷ 366 ದಿನಗಳು ಇರುತ್ತದೆ. ಹೌದು ನಿಮಗೆಲ್ಲ ಸಾಮಾನ್ಯವಾಗಿ ತಿಳಿದಿರುವ ಹಾಗೆ ಪ್ರತಿ ವರ್ಷದ ಫೆಬ್ರವರಿ ತಿಂಗಳು 28 ದಿನಗಳು ಮಾತ್ರ ಇರುತ್ತದೆ ಆದರೆ ನಾಲ್ಕು ವರ್ಷಳಿಗೊಮ್ಮೆ 29 ದಿನಗಳು ಬರುತ್ತದೆ ಮತ್ತು ಈ ಕಾರಣಕ್ಕೆ ಈ 366 ದಿನಗಳು ಇವೆ ಮತ್ತು ಈ ವರ್ಷವನ್ನ ಅಧಿಕ ವರ್ಷ ಎಂದು ಕರೆಯಲಾಗುತ್ತದೆ. ಇನ್ನು ಹೆಚ್ಚಿನ ಜನರಿಗೆ ತಿಳಿದಿರದ ಇನ್ನೊಂದು ಮುಖ್ಯವಾದ ವಿಚಾರ ಏನು ಅಂದರೆ ಪ್ರತಿ ವರ್ಷ ಫೆಬ್ರವರಿ 28 ದಿನಗಳು ಬರುತ್ತದೆ ಆದರೆ ನಾಲ್ಕು ವರ್ಷಳಿಗೊಮ್ಮೆ ಯಾಕೆ ಫೆಬ್ರವರಿ ತಿಂಗಳಲ್ಲಿ 29 ದಿನಗಳು ಬರುತ್ತದೆ ಅನ್ನುವುದು, ಇನ್ನು ಈ ನಾಲ್ಕು ವರ್ಷಗಳಿಗೊಮ್ಮೆ ಫೆಬ್ರವರಿ ತಿಂಗಳಲ್ಲಿ ಯಾಕೆ 29 ದಿನಗಳು ಬರುವುದರ ಬಗ್ಗೆ ಕೆಲವು ಶಾಲೆಗಳಲ್ಲಿ ಕೂಡ ಮಕ್ಕಳಿಗೆ ತಿಳಿಸಿಕೊಟ್ಟಿರುವುದಿಲ್ಲ.

ಹಾಗಾದರೆ ನಾಲ್ಕು ವರ್ಷಗಳಿಗೊಮ್ಮೆ ಫೆಬ್ರವರಿ ತಿಂಗಳಲ್ಲಿ 29 ದಿನಗಳು ಯಾಕೆ ಬರುತ್ತದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ಈ ವರ್ಷದ ಕ್ಯಾಲೆಂಡರ್ ಗೆ ಸಾಮಾನ್ಯ ವರ್ಷಕ್ಕಿಂತ ಒಂದು ದಿನ ಹೆಚ್ಚಾಗಿ ಇದೆ, ಸ್ನೇಹಿತರೆ ಈ ಹೆಚ್ಚುವರಿ ದಿನವನ್ನ ಅಧಿಕ ದಿನ ಲೀಪ್ ಡೇ ಎಂದು ಕರೆಯುತ್ತಾರೆ, ಸ್ನೇಹಿತರೆ ನಮ್ಮ ಭೂಮಿ ಸೂರ್ಯನಿಗೆ ಒಂದು ಸುತ್ತನ್ನ ಹಾಕಲು 365 ದಿನಗಳು ಬೇಕಾಗುತ್ತದೆ ಮತ್ತು ಇದನ್ನ ನಾವು ಒಂದು ವರ್ಷ ಎಂದು ಹೇಳುತ್ತೇವೆ ಮತ್ತು ನಿಮಿಷಗಳಲ್ಲಿ ಹೇಳಬೇಕು ಅಂದರೆ ಭೂಮಿ ಸೂರ್ಯನನ್ನ ಸುತ್ತಲೂ 365 ದಿನ, 5 ಘಂಟೆ, 48 ನಿಮಿಷ ಮತ್ತು 45 ಸೆಕೆಂಡ್ ಗಳು ಬೇಕು. ಸ್ನೇಹಿತರೆ ಈ ಹೆಚ್ಚುವರಿ 5 ಘಂಟೆ, 48 ನಿಮಷ ಮತ್ತು 45 ಸೆಕೆಂಡ್ ಗಳನ್ನ ಯಾವುದೇ ಕ್ಯಾಲೆಂಡರ್ ನಲ್ಲಿ ಸೇರಿಸಲು ಸಾಧ್ಯವಿಲ್ಲ ಮತ್ತು ಈ ಹೆಚ್ಚುವರಿ ಅವಧಿ ನಾಲ್ಕು ವರ್ಷಗಳಿಗೊಮ್ಮೆ ಒಂದು ದಿನ ಆಗುತ್ತದೆ ಹಾಗೆ ಅದನ್ನ ಕ್ಯಾಲೆಂಡರ್ ನಲ್ಲಿ ತೋರಿಸಲೇಬೇಕಾಗುತ್ತದೆ ಮತ್ತು ಆಗ ವರ್ಷದಲ್ಲಿ ಒಂದು ದಿನವನ್ನ ಹೆಚ್ಚುವರಿ ಮಾಡಿ 366 ದಿನಗಳನ್ನಾಗಿ ಮಾಡಲಾಗುತ್ತದೆ.

News of Leap year

ಸ್ನೇಹಿತರೆ ನಮಗೆ ಈಗ ಅಧಿಕ ಯಾಕೆ ಬರುತ್ತದೆ ಎಂದು ತಿಳಿಯಿತು ಆದರೆ ಆ ದಿನ ಫೆಬ್ರವರಿ ತಿಂಗಳಲ್ಲೇ ಯಾಕೆ ಬರುತ್ತದೆ ಅಂತ ಹೇಳುತ್ತೀವಿ ಓದಿ, ಸ್ನೇಹಿತರೆ ಪ್ರಪಂಚದಲ್ಲಿ ಎಲ್ಲಾ ದೇಶಗಳು ಗ್ರಿಗೋರಿಯನ್ ಕ್ಯಾಲೆಂಡರ್ ಗಳನ್ನ ಫಾಲೋ ಮಾಡುತ್ತದೆ ಮತ್ತು ಈ ಕ್ಯಾಲೆಂಡರ್ ಪ್ರಕಾರ ಜನವರಿ ತಿಂಗಳಲ್ಲಿ 31, ಫೆಬ್ರವರಿ ತಿಂಗಳು 28 ಮತ್ತು ಅಧಿಕ ವರ್ಷ ಇದ್ದರೆ 29 ದಿನ ಇರುತ್ತದೆ ಮತ್ತು ಉಳಿದ ತಿಂಗಳುಗಳು ಹೇಗೆ ಇರುತ್ತದೆಯೋ ಹಾಗೆ ಇರುತ್ತದೆ. ಸ್ನೇಹಿತರೆ ಈ ಗ್ರಿಗೋರಿಯನ್ ಕ್ಯಾಲೆಂಡರ್ ಗಳನ್ನ 1582 ರಲ್ಲಿ ಅಂದರೆ ಸುಮಾರು 500 ವರ್ಷಗಳ ಹಿಂದೆ 8 ನೇ ಪೋಪ್ ಗ್ರಿಗೋರಿಯನ್ ತಯಾರಿಸುತ್ತಾನೆ ಮತ್ತು ಒಂದುವೇಳೆ ಯಾವುದಾದರೂ ಒಂದು ದೇಶ ಅಧಿಕ ವರ್ಷ ಇಲ್ಲದ ಕ್ಯಾಲೆಂಡರ್ ಗಳನ್ನ ಅನುಕರಣೆ ಮಾಡಿದರೆ ಎಲ್ಲವೂ ಹಿಂದೆ ಮುಂದೆ ಆಗುತ್ತಿತ್ತು.

ಹೌದು ಸ್ನೇಹಿತರೆ ಯಾವುದಾದರೂ ಒಂದು ದೇಶ ಅಧಿಕ ವರ್ಷ ಇಲ್ಲದ ಕ್ಯಾಲೆಂಡರ್ ನ್ನ ಬಳಕೆ ಮಾಡಿದರೆ ಯಾವುದೇ ಹಬ್ಬ, ಜಾಗತಿಕ ಸಮಾವೇಶ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳ ವ್ಯವಹಾರ ಎಲ್ಲವೂ ಕೂಡ ಅಯೋಮಯ ಆಗುತ್ತಿತ್ತು ಮತ್ತು ಇದರಿಂದ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿತ್ತು. ಇನ್ನು ಗ್ರಿಗೋರಿಯನ್ ಕ್ಯಾಲೆಂಡರ್ ಜಾರಿಗೆ ಬಂದಾಗಲೂ ಕೂಡ ಈ ಸಮಸ್ಯೆಗಳು ಎದುರಾಗಿದ್ದವು, ಹೌದು ಕೆಲವು ದೇಶಗಳು ಇದನ್ನ ಫಾಲೋ ಮಾಡಿದರೆ ಇನ್ನು ಕೆಲವು ದೇಶಗಳು ಇದನ್ನ ಫಾಲ್ಲೋ ಮಾಡಲಿಲ್ಲ, ಹೀಗಾಗಿ ಕೆಲವು ದೇಶಗಳು ಸಾಕಷ್ಟು ಸಮಸ್ಯೆಗಳನ್ನ ಎದುರಿಸಬೇಕಾಯಿತು ಮತ್ತು ಮುಂದೆ ಈ ಸಮಸ್ಯೆ ಬರಬಾರದು ಅನ್ನುವ ಕಾರಣದಿಂದ ಈ ಕ್ಯಾಲೆಂಡರ್ ಗಳನ್ನ ಪ್ರಪಂಚದ ಎಲ್ಲಾ ದೇಶಗಳು ಬಳಕೆ ಮಾಡಲು ಆರಂಭ ಮಾಡಿದವು. ಸ್ನೇಹಿತರೆ ಈ ಅಧಿಕ ವರ್ಷದ ಬಗ್ಗೆ ನಾವು ಕೊಟ್ಟಿರುವ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ.

News of Leap year

Please follow and like us:
error0
http://karnatakatoday.in/wp-content/uploads/2020/02/Leap-year-1024x576.jpghttp://karnatakatoday.in/wp-content/uploads/2020/02/Leap-year-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಒಂದು ವರ್ಷಕ್ಕೆ 365 ದಿನಗಳು ಅನ್ನುವ ವಿಚಾರ ಎಲ್ಲರಿಗೂ ತಿಳಿದಿರುತ್ತದೆ ಮತ್ತು ನಾಲ್ಕು ವರ್ಷಗಳಿಗೊಮ್ಮೆ ಅಧಿಕ ವರ್ಷ ಬರುತ್ತದೆ ಮತ್ತು ಆ ವರ್ಷ 366 ದಿನಗಳು ಇರುತ್ತದೆ. ಹೌದು ನಿಮಗೆಲ್ಲ ಸಾಮಾನ್ಯವಾಗಿ ತಿಳಿದಿರುವ ಹಾಗೆ ಪ್ರತಿ ವರ್ಷದ ಫೆಬ್ರವರಿ ತಿಂಗಳು 28 ದಿನಗಳು ಮಾತ್ರ ಇರುತ್ತದೆ ಆದರೆ ನಾಲ್ಕು ವರ್ಷಳಿಗೊಮ್ಮೆ 29 ದಿನಗಳು ಬರುತ್ತದೆ ಮತ್ತು ಈ ಕಾರಣಕ್ಕೆ ಈ 366 ದಿನಗಳು ಇವೆ ಮತ್ತು ಈ ವರ್ಷವನ್ನ...Film | Devotional | Cricket | Health | India