LIC ಯಾರು ತಾನೇ ಮಾಡಿಲ್ಲ ಹೇಳಿ, ಈಗಿನ ಕಾಲದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ LIC ಯನ್ನು ಮಾಡೇ ಇರುತ್ತಾರೆ, ನಮ್ಮ ಭವಿಷ್ಯದಲ್ಲಿ ಉಪಯೋಗವಾಗಲಿ ಅನ್ನುವ ಸಲುವಾಗಿ ಈಗಿನ ಕಾಲದಲ್ಲಿ ಎಲ್ಲರೂ ಕೂಡ LIC ಮಾಡೇ ಮಾಡುತ್ತಾರೆ. LIC ನಮ್ಮ ದೇಶದ ಅತೀ ದೊಡ್ಡ ಕಂಪನಿ ಎಂದು ಹೇಳಿದರೆ ತಪ್ಪಾಗಲ್ಲ ಮತ್ತು ಈ ಕಂಪನಿಗಳು ಲಕ್ಷ ಲಕ್ಷ ಜನರು ಉದ್ಯೋಗವನ್ನ ಮಾಡುತ್ತಿದ್ದಾರೆ ಮತ್ತು ಕೋಟಿ ಕೋಟಿ ಜನರು ನಮ್ಮ ಭವಿಷಯಕ್ಕಾಗಿ ಮತ್ತು ಕುಟುಂಬದ ಒಳಿತಿಗಾಗಿ LIC ಯನ್ನು ಮಾಡುತ್ತಾರೆ. ಇನ್ನು LIC ಯಲ್ಲಿ ಹಲವು ರೀತಿಯ ಪಾಲಿಸಿಗಳು ಇದ್ದು ಬಡವರಿಂದ ಹಿಡಿದು ಶ್ರೀಮಂತರ ವರೆಗೆ LIC ಕಂಪನಿಯ ಅಡಿಯಲ್ಲಿ ಪಾಲಿಸಿಗಳನ್ನ ಮಾಡುತ್ತಾರೆ, ಆದರೆ LIC ತನ್ನ ಗ್ರಾಹಕರಿಗೆ ಒಂದು ಮುಖ್ಯವಾದ ಮಾಹಿತಿಯನ್ನ ನೀಡಿದ್ದು ಅದನ್ನ ಗ್ರಾಹಕರು ತಿಳಿದುಕೊಳ್ಳುವುದು ತುಂಬಾ ಅವಶ್ಯಕವಾಗಿದೆ.

ಹೌದು ಸ್ನೇಹಿತರೆ ಈ ತಿಂಗಳ ಕೊನೆಯಲ್ಲಿ ಕೆಲವು LIC ಪಾಲಿಸಿಗಳು ಬಂದ್ ಆಗಲಿದ್ದು LIC ಮಾಡಿದ ಪ್ರತಿಯೊಬ್ಬ ಗ್ರಾಹಕರು ಮತ್ತು ಮುಂದೆ LIC ಮಾಡುವವರು ತಿಳಿದುಕೊಳ್ಳುವುದು ಒಳ್ಳೆಯದು. ಹಾಗಾದರೆ ಯಾವ LIC ಪಾಲಿಸಿಗಳು ಬಂದ್ ಆಗಲಿದೆ ಮತ್ತು LIC ಕಂಪನಿ ಮಾಡುತ್ತಿರುವ ಬದಲಾವಣೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ಸುಮಾರು 24 ಪಾಲಿಸಿಗಳನ್ನ ಬಂದ್ ಮಾಡಲು LIC ಕಂಪನಿಯು ನಿರ್ಧಾರವನ್ನ ಮಾಡಿದೆ ಮತ್ತು ಇದೆ ತಿಂಗಳ ಕೊನೆಯಿಂದ ಈ ಪಾಲಿಸಿಗಳು ಚಾಲ್ತಿಯಲ್ಲಿ ಇರುವುದಿಲ್ಲ.

ಜೀವನ್ ಆನಂದ್, ಜೀವನ ಉಮಂಗ್, ಜೀವನ ಲಕ್ಷ, ಜೀವನ ಲಾಭ ಸೇರಿದಂತೆ ಅನೇಕ ಪಾಲಿಸಿಗಳನ್ನ ಮೋಡಿಫೈ ಮಾಡಲಿದ್ದೇವೆ ಎಂದು LIC ಹಣಕಾಸು ವಿಭಾಗದ ಅಧಿಕಾರಿಯಾಗಿರುವ ಕುಮಾರ್ ಅವರು ತಿಳಿಸಿದ್ದಾರೆ. ಹೊಸ ನಿಯಮಗಳಿಗೆ ಅನುಸಾರವಾಗಿ LIC ಕಂಪನಿಯು ಕೆಲವು ಬದಲಾವಣೆಗಳನ್ನ ಮಾಡಿಕೊಳ್ಳಲು ನಿರ್ಧಾರವನ್ನ ಮಾಡಿದೆ, ಇನ್ನು ಕೇವಲ LIC ಮಾತ್ರವಲ್ಲದೆ IRDI ನಿಯಮಗಳಿಗೆ ಅನುಗುಣವಾಗಿ ಉಳಿದ ಕಂಪನಿಗಳು ಕೂಡ ಕೆಲವು ಬದಲಾವಣೆಗಳನ್ನ ಮಾಡಿಕೊಳ್ಳಲಿದೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ. ಇನ್ನು ಈಗ ಬಂದಿರುವ ವರದಿಯ ಪ್ರಮಖ ಸುಮಾರು 80 ಬಗೆಯ ವಿಭಿನ್ನ ಪಾಲಿಸಿಗಳು ತಿಂಗಳ ಕೊನೆಯಲ್ಲಿ ಬದಲಾವಣೆಯನ್ನ ಹೊಂದಲಿವೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ.

ಇನ್ನು ನವೆಂಬರ್ ಕೊನೆಯ ಒಳಗಾಗಿ ಈ ಪಾಲಿಸಿಗಳು ಬಂದ್ ಆಗಲಿದ್ದು ಮುಂದಿನ ದಿನಗಳಲ್ಲಿ ನಿಮಗೆ ಈ ಪಾಲಿಸಿಗಳನ್ನ ಮಾಡಲು ಸಾಧ್ಯವಾಗುವುದಿಲ್ಲ, ಇನ್ನು ಈ ಪಾಲಿಸಿಗಳನ್ನ ಹೇಗೆ ಮೋಡಿಫೈ ಮಾಡಲುತ್ತದೆ ಅನ್ನುವುದರ ಬಗ್ಗೆ ಸರಿಯಾದ ಮಾಹಿತಿ ಇನ್ನು ತಿಳಿದು ಬಂದಿಲ್ಲ ಮತ್ತು ಮುಂದಿನ ದಿನಗಳಲ್ಲಿ ಅದರ  ಕುರಿತು ಮಾಹಿತಿಗಳನ್ನ LIC ಕಂಪನಿ ನೀಡಲಿದೆ. ಈಗಾಗಲೇ ಪಾಲಿಸಿ ಮಾಡಿರುವವರು ಭಯ ಪಡುವ ಅಗತ್ಯ ಇಲ್ಲ ಮತ್ತು ಪಾಲಿಸಿ ಮಾಡದವರು ಇದೆ ಕೊನೆಯ ಒಳಗಾಗಿ ಪಾಲಿಸಿಗಳನ್ನ ಮಾಡಿಕೊಳ್ಳಿ ಯಾಕೆ ಅಂದರೆ ಮತ್ತೆ ಪಾಲಿಸಿಗಳನ್ನ ಮಾಡಲು ಸಾಧ್ಯವಿಲ್ಲ.

News of LIC

Please follow and like us:
error0
http://karnatakatoday.in/wp-content/uploads/2019/11/News-of-LIC-1-1024x576.jpghttp://karnatakatoday.in/wp-content/uploads/2019/11/News-of-LIC-1-150x104.jpgeditorಎಲ್ಲಾ ಸುದ್ದಿಗಳುಬೆಂಗಳೂರುಮಂಗಳೂರುಸುದ್ದಿಜಾಲLIC ಯಾರು ತಾನೇ ಮಾಡಿಲ್ಲ ಹೇಳಿ, ಈಗಿನ ಕಾಲದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ LIC ಯನ್ನು ಮಾಡೇ ಇರುತ್ತಾರೆ, ನಮ್ಮ ಭವಿಷ್ಯದಲ್ಲಿ ಉಪಯೋಗವಾಗಲಿ ಅನ್ನುವ ಸಲುವಾಗಿ ಈಗಿನ ಕಾಲದಲ್ಲಿ ಎಲ್ಲರೂ ಕೂಡ LIC ಮಾಡೇ ಮಾಡುತ್ತಾರೆ. LIC ನಮ್ಮ ದೇಶದ ಅತೀ ದೊಡ್ಡ ಕಂಪನಿ ಎಂದು ಹೇಳಿದರೆ ತಪ್ಪಾಗಲ್ಲ ಮತ್ತು ಈ ಕಂಪನಿಗಳು ಲಕ್ಷ ಲಕ್ಷ ಜನರು ಉದ್ಯೋಗವನ್ನ ಮಾಡುತ್ತಿದ್ದಾರೆ ಮತ್ತು ಕೋಟಿ ಕೋಟಿ ಜನರು...Film | Devotional | Cricket | Health | India