News of Mala Lakhani

ನಟಿ ಕಮ್ ಫಾಶಿಯನ್ ಡಿಸೈನರ್ ಮನೆ ಏನಿಲ್ಲ ಅಂದರು 20 -30 ಕೋಟಿ ಬೆಲೆ ಬಾಳುತ್ತದೆ, ಆದರೆ ಕೇವಲ ಬ್ಲೌಸ್ ಹಣಕ್ಕಾಗಿ, ಅದರಲ್ಲೂ ಕೇವಲ 50 ರೂಪಾಯಿ ವಿಷಯವಾಗಿ ಕೊಲೆಯಾಗಿದ್ದಾಳೆ ಒಬ್ಬ ನಟಿ.

ಈಕೆಯ ಸಾವು 50 ರೂಪಾಯಿಯ ರೂಪದಲ್ಲಿ ನಡೆದಿದೆ, ಆ ನಟಿ ಯಾರು ಮತ್ತು ಆಕೆ ಹೇಗೆ ಕೊಲೆಯಾದಳು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಮಾಲಾ ಲಖಾನಿ, ಖ್ಯಾತ ಫಾಶಿಯನ್ ಡಿಸೈನರ್ ಆಗಿರುವ ಇವರು ಕೆಲವು ಸೀರಿಯಲ್ ಗಳಲ್ಲಿ ನಟನೆ ಮಾಡಿದ್ದಾರೆ, ಈಗ ಹೆಚ್ಚು ಫೀಶಿಯನ್ ಡಿಸೈನ್ ಕಡೆ ಗಮನ ಕೊಟ್ಟಿರುವ ಈಕೆ ಡೆಲ್ಲಿಯ ತನ್ನ ಬಂಗಲೆಯಲ್ಲಿ ವಾಸವಿದ್ದಳು.

News of Mala Lakhani

ಇನ್ನು ಫಾಶಿಯನ್ ಡಿಸೈನ್ ಗೆ ಸಂಬಂಧಪಟ್ಟ ಎಲ್ಲಾ ಬಟ್ಟೆಗಳನ್ನ ಸ್ಟಿಚ್ ಮಾಡಲು ಒಬ್ಬ ಟೈಲರ್ ಗೆ ಬಟ್ಟೆಯಾಗಳನ್ನ ಕೊಟ್ಟಿದ್ದಳು ಫಾಶಿಯನ್ ಡಿಸೈನರ್ ಮಾಲಾ ಲಖಾನಿ, ಇನ್ನು ಆ ಟೈಲರ್ ಹೆಸರು ರಾಹುಲ್ ಅನ್ವರ್, ಮಾಲಾ ಅವರ ಫಾಶಿಯನ್ ಡಿಸೈನ್ ಗೆ ಎಲ್ಲಾ ಬಟ್ಟೆಗಳನ್ನ ಈತನೇ ಸ್ಟಿಚ್ ಮಾಡುತ್ತಿದ್ದ.

ಇನ್ನು ಕೆಲವು ದಿನಗಳಿಂದ ಹೊಲಿದ ಬಟ್ಟೆಗೆ ಹಣವನ್ನ ಕೊಟ್ಟಿರಲಿಲ್ಲ ಮಾಲಾ ಅವರು ಮತ್ತು ಅನ್ವರ್ ಒಂದೊಂದು ಬಟ್ಟೆಗೂ 50 ರೂಪಾಯಿ ಕಮಿಷನ್ ಕೊಡುವಂತೆ ಕೇಳಿದ್ದ ಆದರೆ ಇದಕ್ಕೆ ಮಾಲಾ ಅವರು ಒಪ್ಪಿರಲಿಲ್ಲ.

ಇನ್ನು ಇದರಿಂದ ಕೋಪಗೊಂಡ ಅನ್ವರ್ ತನ್ನ ಇಬ್ಬರು ಸಂಬಂದಿಕರ ಜೊತೆ ರಾತ್ರಿ 10 ಗಂಟೆಗೆ ಮಾಲಾ ಅವರ ಮನೆಗೆ ಹೋದ, ಇನ್ನು ಮನೆಗೆ ಹೋದ ಆತ ಮಾಲಾ ಅವರ ಜೊತೆ ಜಗಳಕ್ಕೆ ಇಳಿದ ಮತ್ತು ಆಕೆಯ ಮುಖಕ್ಕೆ ಕಬ್ಬಿಣದ ರಾಡ್ ನಿಂದ ಹೊಡೆದು ಸಾಯಿಸಿಯೇ ಬಿಟ್ಟ.

News of Mala Lakhani

ಇನ್ನು ಆಕೆಯ ಸಹಾಯಕ್ಕೆ ಬಂದ ಮನೆಗೆಲಸ ಬಹದ್ದೂರ್ ನ ಕೊಲೆ ಮಾಡಿದನು ಅನ್ವರ್, ನಂತರ ಮಾಲಾ ಅವರ ಮನೆಯಲ್ಲಿ ಇದ್ದ ಚಿನ್ನ ದೋಚಿ ಅಲ್ಲಿಂದ ಪರಾರಿಯಾದ ಅನ್ವರ್.

ಈಗ ಅನ್ವರ್ ಮತ್ತು ಆತನ ಇಬ್ಬರು ಸಂಬಂದಿಗಳನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ, ಇಲ್ಲಿ ವಿಚಿತ್ರ ಏನು ಅಂದರೆ ಕೆಲವು ವರ್ಷಗಳ ಹಿಂದೆ ಒಬ್ಬ ಹುಡುಗಿಗೆ ಲೈಂಗಿಕ ಕಿರುಕುಳ ಕೊಟ್ಟು ಜೈಲಿನಲ್ಲಿ ಇದ್ದ ಅನ್ವರ್ ನ್ನ ಇದೆ ಮಾಲಾ ಅವರು ಬಿಸಿಕೊಂಡು ಬಂದಿದ್ದರು. ಆತ ಮತ್ತೆ ತನ್ನ ಬುದ್ದಿಯನ್ನ ತೋರಿದ್ದಾನೆ, ಹಾವಿಗೆ ಎಷ್ಟೇ ಹಾಲು ಹಾಕಿದರು ಅದು ವಿಷವನ್ನ ಕಕ್ಕುತ್ತದೆ ಅಲ್ಲವೇ, ಸ್ನೇಹಿತರೆ ಈತನ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

News of Mala Lakhani

Please follow and like us:
0
http://karnatakatoday.in/wp-content/uploads/2019/02/News-mala-Lakhani-1024x576.jpghttp://karnatakatoday.in/wp-content/uploads/2019/02/News-mala-Lakhani-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರನಗರಬೆಂಗಳೂರುಸುದ್ದಿಜಾಲನಟಿ ಕಮ್ ಫಾಶಿಯನ್ ಡಿಸೈನರ್ ಮನೆ ಏನಿಲ್ಲ ಅಂದರು 20 -30 ಕೋಟಿ ಬೆಲೆ ಬಾಳುತ್ತದೆ, ಆದರೆ ಕೇವಲ ಬ್ಲೌಸ್ ಹಣಕ್ಕಾಗಿ, ಅದರಲ್ಲೂ ಕೇವಲ 50 ರೂಪಾಯಿ ವಿಷಯವಾಗಿ ಕೊಲೆಯಾಗಿದ್ದಾಳೆ ಒಬ್ಬ ನಟಿ. ಈಕೆಯ ಸಾವು 50 ರೂಪಾಯಿಯ ರೂಪದಲ್ಲಿ ನಡೆದಿದೆ, ಆ ನಟಿ ಯಾರು ಮತ್ತು ಆಕೆ ಹೇಗೆ ಕೊಲೆಯಾದಳು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಿಮ್ಮ ಅನಿಸಿಕೆಯನ್ನ...Kannada News