News of Megaha gaonkar

ದುಡ್ಡಿನ ಮಾಯೆಯಲ್ಲಿ ಮುಳುಗಿರುವ ಈ ಪ್ರಪಂಚದಲ್ಲಿ ಕೆಲವೊಮ್ಮೆ ಮಾನವೀಯತೆಯ ಮೌಲ್ಯವನ್ನ ಸಾರುವ ಕೆಲವು ವ್ಯಕ್ತಿಗಳು ಕಾಣಿಸುತ್ತಾರೆ, ಅವರಲ್ಲಿ ಈ ನಟಿ ಕೂಡ ಒಬ್ಬರು ಅಂತ ಹೇಳಿದರೆ ತಪ್ಪಾಗಲ್ಲ.

ನಟಿ ಮೇಘನಾ ಗಾಂವ್ಕಾರ್ ಅವರಿಗೆ ಮಧ್ಯರಾತ್ರಿಯಲ್ಲಿ ಒಬ್ಬ ರಿಯಲ್ ಹೀರೋ ಕಾಣಿಸಿಕೊಂಡಿದ್ದಾರೆ, ಇನ್ನು ಆ ರಿಯಲ್ ಹೀರೋ ಕಾಣಿಸಿಕೊಂಡಾಗ ಈ ನಟಿ ಏನು ಮಾಡಿದ್ದಾರೆ ಅಂತ ನಟಿ ಮೇಘನಾ ಅವರ ಮಾತಲ್ಲೇ ಕೇಳಿ, ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

News of Megaha gaonkar

ಒಂದು ದಿನ ಸಾಯಂಕಾಲ ನಾನು ನನ್ನ ಕಾರ್ ನ್ನ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿ ಹತ್ತಿರದ ಒಂದು ಚಿತ್ರ ಮಂದಿರಕ್ಕೆ ಸಿನಿಮಾ ನೋಡಲು ಹೋದೆ, ಇನ್ನು ನಾವು ವಾಪಾಸ್ ಬರುವಾಗ ಮಧ್ಯರಾತ್ರಿ ಆಗಿತ್ತು ಆದರೂ ಕೂಡ ಕಾರ್ ಪಾರ್ಕಿಂಗ್ ಹಣವನ್ನ ಕಲೆಕ್ಟ್ ಮಾಡುವ ವ್ಯಕ್ತಿ ನನ್ನ ಕಾರ್ ಬಳಿಯೇ ನಿಂತಿದ್ದರು.

ನಾನು ಮೊದಲೇ ನನ್ನ ಕಾರ್ ನ ಪಾರ್ಕಿಂಗ್ ಹಣ ಕೊಟ್ಟಿದ್ದೆ ಆದರೂ ಈ ವ್ಯಕ್ತಿ ಯಾಕೆ ನನ್ನ ಕಾರ್ ಬಳಿ ನಿಂತಿದ್ದಾನೆ ಎಂದು ನಾವು ಭಾವಿಸಿದೆ, ಆದರೆ ಕಾರ್ ಹತ್ತಿರ ಹೋದಾಗ ನನಗೆ ಗೊತ್ತಾಯಿತು, ಏನೆಂದರೆ.

ನಾನು ಕಾರ್ ಪಾರ್ಕ್ ಮಾಡಿ ಹೋಗುವಾಗ ತರಾತುರಿಯಲ್ಲಿ ಕಾರ್ ನ ಡೋರ್ ಕ್ಲೋಸ್ ಮಾಡದೆ ಹಾಗೆ ಹೋಗಿದ್ದೆ, ಇನ್ನು ಇದನ್ನ ನೋಡಿದ ಕೆಲವು ವ್ಯಕಿಗಳು ಈ ಅವಕಾಶವನ್ನ ಬಳಸಿಕೊಂಡು ಕಳ್ಳತನ ಮಾಡಲು ಪ್ರಯತ್ನ ಮಾಡಿದಾಗ ಅವರನ್ನ ಓಡಿಸಿ ಕಾರ್ ಬಳಿಯೇ ನಿಂತಿದ್ದರು ಈ ವ್ಯಕ್ತಿ.

News of Megaha gaonkar

ಇನ್ನು ಮಧ್ಯರಾತ್ರಿಯ ವರೆಗೂ ತನ್ನ ಕಾರ್ ಬಳಿಯೇ ನಿಂತು ಏನು ಅನಾಹುತ ನಡೆಯದಂತೆ ನೋಡಿಕೊಂಡಿದ್ದ ಈ ವ್ಯಕ್ತಿಗೆ ಧನ್ಯವಾದ ಹೇಳಿ ನಾನು ಒಂದಷ್ಟು ಹಣವನ್ನ ಕೊಡಲು ಮುಂದಾದೆ, ಆದರೆ ಆ ವ್ಯಕ್ತಿ ಹಣವನ್ನ ತೆಗೆದುಕೊಳ್ಳಲಿಲ್ಲ, ಈ ಸಮಯದಲ್ಲಿ ಇವರೇ ನನಗೆ ರಿಯಲ್ ಹೀರೋ ಅನಿಸಿತು ಎಂದು ಹೇಳಿದ್ದಾರೆ ನಟಿ ಮೇಘನಾ ಗಾಂವ್ಕಾರ್.

ನಾನು ಯಾವಾಗ ಆ ಸ್ಥಳಕ್ಕೆ ಹೋದರು ಅವರು ನನಗೆ ಜ್ಞಾಪಕ ಬರುತ್ತಾರೆ, ನಾವಿಬ್ಬರು ಈಗ ಫ್ರೆಂಡ್ಸ್ ಆಗಿದ್ದೇವೆ, ಕೆಲವೊಮ್ಮೆ ಒಟ್ಟಿಗೆ ಕುಳಿತು ಟೀ ಕುಡಿಯುತ್ತೇವೆ, ಇನ್ನು ನನ್ನ ಜೀವನದಲ್ಲಿ ಕೇಳಿ ಫೋಟೋ ತೆಗೆದುಕೊಂಡಿದ್ದು ಇವರ ಜೊತೇನೆ ಮೊದಲು ಎಂದು ಹೇಳಿದ್ದಾರೆ ನಟಿ ಮೇಘನಾ ಗಾಂವ್ಕಾರ್. ಇಂದು ಒಂದು ಚಿಕ್ಕ ಕಥೆ ಇರಬಹುದು ಆದರೆ ಪ್ರತಿಫಲ ಆಶಿಸದೆ ಸಹಾಯ ಮಾಡುವವರು ಇನ್ನು ಕೂಡ ಇದ್ದಾರೆ ಅನ್ನುವುದು ಮಾತ್ರ ಸಂತೋಷದ ವಿಷಯ.

News of Megaha gaonkar

Please follow and like us:
0
http://karnatakatoday.in/wp-content/uploads/2019/04/news-of-Meghana-Gaonkar-1024x576.jpghttp://karnatakatoday.in/wp-content/uploads/2019/04/news-of-Meghana-Gaonkar-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲದುಡ್ಡಿನ ಮಾಯೆಯಲ್ಲಿ ಮುಳುಗಿರುವ ಈ ಪ್ರಪಂಚದಲ್ಲಿ ಕೆಲವೊಮ್ಮೆ ಮಾನವೀಯತೆಯ ಮೌಲ್ಯವನ್ನ ಸಾರುವ ಕೆಲವು ವ್ಯಕ್ತಿಗಳು ಕಾಣಿಸುತ್ತಾರೆ, ಅವರಲ್ಲಿ ಈ ನಟಿ ಕೂಡ ಒಬ್ಬರು ಅಂತ ಹೇಳಿದರೆ ತಪ್ಪಾಗಲ್ಲ. ನಟಿ ಮೇಘನಾ ಗಾಂವ್ಕಾರ್ ಅವರಿಗೆ ಮಧ್ಯರಾತ್ರಿಯಲ್ಲಿ ಒಬ್ಬ ರಿಯಲ್ ಹೀರೋ ಕಾಣಿಸಿಕೊಂಡಿದ್ದಾರೆ, ಇನ್ನು ಆ ರಿಯಲ್ ಹೀರೋ ಕಾಣಿಸಿಕೊಂಡಾಗ ಈ ನಟಿ ಏನು ಮಾಡಿದ್ದಾರೆ ಅಂತ ನಟಿ ಮೇಘನಾ ಅವರ ಮಾತಲ್ಲೇ ಕೇಳಿ, ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ...Kannada News