ದೇಶದಲ್ಲಿ ಸರ್ಕಾರವು ನೋಟುಗಳನ್ನ ಮುದ್ರಣ ಮಾಡುತ್ತದೆ ಅನ್ನುವುದು ನಿಮಗೆಲ್ಲ ಗೊತ್ತೇ ಇದೆ ಮತ್ತು ಸರ್ಕಾರದ ಬಳಿ ನೋಟುಗಳನ್ನ ಮುದ್ರಣ ಮಾಡುವ ಯಂತ್ರ ಇದೆ ಅನ್ನುವುದು ಕೂಡ ನಿಮಗೆಲ್ಲ ಗೊತ್ತೇ ಇದೆ. ಇನ್ನು ಸರ್ಕಾರದ ಬಳಿ ನೋಟುಗಳನ್ನ ಮುದ್ರಣ ಯಂತ್ರ ಇದ್ದರೂ ಕೂಡ ಜಾಸ್ತಿ ನೋಟುಗಳನ್ನ ಮುದ್ರಣ ಮಾಡುವುದಿಲ್ಲ ಯಾಕೆ ಗೊತ್ತಾ, ಹಾಗಾದರೆ ಯಾಕೆ ಸರ್ಕಾರವು ಲೆಕ್ಕ ಇಲ್ಲದಷ್ಟು ನೋಟುಗಳನ್ನ ಮುದ್ರಣ ಮಾಡುವುದಿಲ್ಲ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ತಮ್ಮ ಬಳಿ ಯಂತ್ರ ಇದೆ ಮತ್ತು ಅಧಿಕಾರ ಇದೆ ಅಂದ ಮಾತ್ರ ಯಾವುದೇ ದೇಶ ತಮ್ಮ ಮನಸ್ಸಿಗೆ ಇಷ್ಟ ಬಂದಷ್ಟು ನೋಟುಗಳನ್ನ ಮುದ್ರಣ ಮಾಡುವುದಿಲ್ಲ ಮತ್ತು ಮುದ್ರಣ ಮಾಡುವ ಹಾಗಿಲ್ಲ.

ಸ್ನೇಹಿತರೆ ನೋಟುಗಳನ್ನ ಮುದ್ರಣ ಮಾಡಲು ಒಂದು ಫಾರ್ಮುಲಾ ಇದೆ ಅದೇ GDP ಕರೆನ್ಸಿ, ಹೌದು ಪ್ರತಿಯೊಂದು ದೇಶವು GDP ಗೆ ಸರಿಯಾಗಿ ನೋಟುಗಳನ್ನ ಮುದ್ರಣ ಮಾಡಬೇಕು. ಒಂದು ನಿರ್ದಿಷ್ಟ ಅವಧಿಯಲ್ಲಿ ಒಂದು ದೇಶದಲ್ಲಿ ಉತ್ಪತ್ತಿ ಆಗುವ ಎಲ್ಲಾ ರೀತಿಯ ಸರಕು ಮತ್ತು ಸೇವೆಗಳ ಒಟ್ಟು ಮೊತ್ತವನ್ನ ಜಿಡಿಪಿ ಎಂದು ಕರೆಯುತ್ತಾರೆ, ಇನ್ನು ಜಿಡಿಪಿ ಯಲ್ಲಿ ಎಲ್ಲಾ ರೀತಿಯ ಸೇವೆಗಳು ಕೂಡ ಬರುತ್ತದೆ. ಇನ್ನು ಈ ಜಿಡಿಪಿ ಮೊತ್ತಕ್ಕಿಂತ ಜಾಸ್ತಿಯಾಗಿ ನೋಟುಗಳನ್ನ ಯಾವುದೇ ಕಾರಣಕ್ಕೂ ಮುದ್ರಣ ಮಾಡುವ ಹಾಗೆ ಇಲ್ಲ ಮತ್ತು ಮಾಡಿದರೆ ಜನರ ಬಳಿ ಸಿಕ್ಕಾಪಟ್ಟೆ ಹಣ ಇರುತ್ತದೆ ಮತ್ತು ದೇಶದಲ್ಲಿ ಯಾರು ಕೂಡ ಬಡವರಿರುವುದಿಲ್ಲ ಮತ್ತು ಭಿಕ್ಷುಕ ಕೂಡ ಹಣವಂತ ಆಗುತ್ತಾನೆ, ಆದರೆ ಅದಕ್ಕೆ ತಕ್ಕಂತೆ ಖರೀದಿ ಮಾಡಲು ಸರಕು ಮತ್ತು ಸೇವೆಗಳು ಇರುವುದಿಲ್ಲ.

News of note print

ಜನರ ಬಳಿ ಜಾಸ್ತಿ ಹಣ ಇದ್ದರೆ ಅವರು ಜಾಸ್ತಿ ವಸ್ತುಗಳನ್ನ ಖರೀದಿ ಮಾಡುತ್ತಾರೆ ಮತ್ತು ಜಾಸ್ತಿ ವಸ್ತುಗಳನ್ನ ಖರೀದಿ ಮಾಡಿದರೆ ಮಾರುಕಟ್ಟೆಯಲ್ಲಿ ಸರಕುಗಳ ಪ್ರಮಾಣ ತುಂಬಾ ಕಡಿಮೆ ಆಗಿ ಸರಕುಗಳ ಬೆಲೆ ಕೂಡ ಜಾಸ್ತಿ ಆಗುತ್ತದೆ. ಈ ಕಾರಣಕ್ಕೆ ಯಾವ ದೇಶ ಕೂಡ ತಮ್ಮ ಜಿಡಿಪಿ ಗಿಂತ ಅಧಿಕ ಹಣವನ್ನ ಯಾವುದೇ ಕಾರಣಕ್ಕೂ ಮುದ್ರಣ ಮಾಡುವ ಹಾಗೆ ಇಲ್ಲ, ಇನ್ನು ಈ ಹಿಂದೆ ಜರ್ಮನಿ ಮತ್ತು ಜಿಂಬಾಬೆ ದೇಶಗಳಿ ಹೀಗೆ ಅಧಿಕ ಹಣವನ್ನ ಮುದ್ರಣ ಮಾಡಲು ಹೋಗಿ ಭಾರಿ ಸಂಕಷ್ಟಕ್ಕೆ ಎದುರಾಗಿದ್ದು ನಿಮಗೆಲ್ಲ ಗೊತ್ತಿರಬಹುದು. ಇನ್ನು ನಮ್ಮ ಭಾರತದಲ್ಲಿ ಒಟ್ಟು ನಾಲ್ಕು ಕಡೆ ನೋಟುಗಳನ್ನ ಮುದ್ರಣ ಮಾಡಲಾಗುತ್ತದೆ, ಮೊದಲನೆಯದಾಗಿ ಮೈಸೂರಿನ ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಪ್ರೈವೇಟ್ ಲಿಮಿಟೆಡ್ ಮತ್ತು ಇಲ್ಲಿ ಎರಡು ಸಾವಿರ ರೂಪಾಯಿಗಳ ನೋಟುಗಳನ್ನ ಮುದ್ರಣ ಮಾಡಲಾಗುತ್ತದೆ.

ಇನ್ನು ಎರಡನೆಯದಾಗಿ ಪಶ್ಚಿಮ ಬಂಗಾಳದ ಸಾಲ್ಬೋನಿಯಲ್ಲಿರುವ ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಪ್ರೈವೇಟ್ ಲಿಮಿಟೆಡ್, ಮೂರನೆಯದಾಗಿ ಮದ್ಯ ಪ್ರದೇಶದ ದೇವಾಸ್ ನಲ್ಲಿ ಇರುವ ಬ್ಯಾಂಕ್ ನೋಟ್ ಪ್ರೆಸ್ ಮತ್ತು ಇಲ್ಲಿ 10,50 ಮತ್ತು 500 ರೂಪಾಯಿಗಳ ನೋಟುಗಳನ್ನ ಮುದ್ರಣ ಮಾಡಲಾಗುತ್ತದೆ. ಇನ್ನು ಕೊನೆಯದಾಗಿ ಮಹಾರಾಷ್ಟ್ರದ ನಾಸಿಕ್ ನಲ್ಲಿ ಇರುವ ಕರೆನ್ಸಿ ನೋಟ್ ಪ್ರೆಸ್, ಇನ್ನು ನೋಟು ಮುದ್ರಣ ಮಾಡಲು ಬೇಕಾಗುವ ಹಾಳೆಗಳನ್ನ ಸ್ವಲ್ಪ ಭಾರತದಲ್ಲಿ ಉತ್ಪಾದನೆ ಮಾಡಿದರೆ ಇನ್ನಷ್ಟು ಹಾಳೆಗಳನ್ನ ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಇನ್ನು ದೇಶದಲ್ಲಿ ರಿಸರ್ವ್ ಬ್ಯಾಂಕ್ ನ 18 ಶಾಖೆಗಳು ಇವೆ ಮತ್ತು ಆ ಬ್ಯಾಂಕುಗಳು ಆ ನೋಟುಗಳನ್ನ ಜನರ ಕೈಗೆ ಹಸ್ತಾಂತರ ಮಾಡುತ್ತದೆ, ಸ್ನೇಹಿತರೆ ನೋಟುಗಳಿಗೆ ಸಂಬಂದಿಸಿದ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಉಪಯುಕ್ತ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ.

News of note print

Please follow and like us:
error0
http://karnatakatoday.in/wp-content/uploads/2019/11/News-of-note-print-1-1024x576.jpghttp://karnatakatoday.in/wp-content/uploads/2019/11/News-of-note-print-1-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಮಂಗಳೂರುಸುದ್ದಿಜಾಲಹಣದೇಶದಲ್ಲಿ ಸರ್ಕಾರವು ನೋಟುಗಳನ್ನ ಮುದ್ರಣ ಮಾಡುತ್ತದೆ ಅನ್ನುವುದು ನಿಮಗೆಲ್ಲ ಗೊತ್ತೇ ಇದೆ ಮತ್ತು ಸರ್ಕಾರದ ಬಳಿ ನೋಟುಗಳನ್ನ ಮುದ್ರಣ ಮಾಡುವ ಯಂತ್ರ ಇದೆ ಅನ್ನುವುದು ಕೂಡ ನಿಮಗೆಲ್ಲ ಗೊತ್ತೇ ಇದೆ. ಇನ್ನು ಸರ್ಕಾರದ ಬಳಿ ನೋಟುಗಳನ್ನ ಮುದ್ರಣ ಯಂತ್ರ ಇದ್ದರೂ ಕೂಡ ಜಾಸ್ತಿ ನೋಟುಗಳನ್ನ ಮುದ್ರಣ ಮಾಡುವುದಿಲ್ಲ ಯಾಕೆ ಗೊತ್ತಾ, ಹಾಗಾದರೆ ಯಾಕೆ ಸರ್ಕಾರವು ಲೆಕ್ಕ ಇಲ್ಲದಷ್ಟು ನೋಟುಗಳನ್ನ ಮುದ್ರಣ ಮಾಡುವುದಿಲ್ಲ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು...Film | Devotional | Cricket | Health | India