ಸ್ನೇಹಿತರೆ ಒಬ್ಬ ವ್ಯಕ್ತಿಯ ಮುಖವನ್ನ ನೋಡಿ ಆತನ ಯಾರು ಮತ್ತು ಆತನ ವ್ಯಕ್ತಿತ್ವವನ್ನ ಯಾರಿಂದಲೂ ಅಳೆಯಲು ಸಾಧ್ಯವಿಲ್ಲ ಮತ್ತು ಇದಕ್ಕೆ ಅದೆಷ್ಟೋ ಉದಾಹರಣೆಗಳು ಕೂಡ ಇದೆ. ಒಬ್ಬ ವಯಸ್ಸಾದ ಮಹಿಳೆ ಯಾವಾಗಲು ರೋಡಿನಲ್ಲಿ ಕುಳಿತುಕೊಂಡು ಭಿಕ್ಷೆ ಬೇಡುತ್ತಿದ್ದಳು ಮತ್ತು ಈಕೆಯನ್ನ ನೋಡಿದ ಪೊಲೀಸರು ಈಕೆ ಒಬ್ಬಳು ಭೀಕಾರಿ ಅಂದುಕೊಂಡು ಈಕೆಯನ್ನ ವೃದ್ಧಾಶ್ರಮಕ್ಕೆ ಸೇರಿಸಲು ಮುಂದಾದಾಗ ಅವರಿಗೆ ದೊಡ್ಡ ಶಾಕ್ ಕಾದಿತ್ತು. ಹಾಗಾದರೆ ಆ ವಯಸ್ಸಾದ ಮಹಿಳೆ ಯಾರು ಮತ್ತು ಆಕೆಯ ಬಳಿ ಇದ್ದದ್ದು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ಈ ಘಟನೆ ನಡೆದಿರುವುದು ಉತ್ತರ ಪ್ರದೇಶದಲ್ಲಿ, ಹೌದು ಉತ್ತರ ಪ್ರದೇಶದ ಸರ್ಕಾರ ರಸ್ತೆ ಬದಿಯಲ್ಲಿ ಭಿಕ್ಷೆ ಬೇಡುವವರನ್ನ ಮತ್ತು ಯಾರು ಇಲ್ಲದ ವಯಸ್ಸಾದವರನ್ನ ಅನಾಥ ಆಶ್ರಮ ಮತ್ತು ವೃದ್ಧಾಶ್ರಮಕ್ಕೆ ಸೇರಿಸುವ ಒಂದು ಒಳ್ಳೆಯ ನಿರ್ಧಾರವನ್ನ ತಗೆದುಕೊಂಡಿತು.

ಇನ್ನು ಸರ್ಕಾರ ಈ ನಿರ್ಧಾರ ತಗೆದುಕೊಳ್ಳುತ್ತಿದ್ದಂತೆ ಭಿಕ್ಷೆ ಬೇಡುವ ಪ್ರತಿಯೊಬ್ಬರನ್ನ ತಮ್ಮ ವಶಕ್ಕೆ ತಗೆದುಕೊಳ್ಳಬೇಕು ಎಂದು ಪೊಲೀಸರಿಗೆ ಆದೇಶವನ್ನ ಕೂಡ ನೀಡಲಾಯಿತು ಮತ್ತು ಅದೇ ರೀತಿಯಾಗಿ ವಯಸ್ಸಾದ 86 ವರ್ಷದ ಒಬ್ಬ ಮಹಿಳೆಯನ್ನ ತಮ್ಮ ವಶಕ್ಕೆ ಪಡೆದುಕೊಳ್ಳಲು ಮುಂದಾದರು ಉತ್ತರ ಪ್ರದೇಶದ ಪೊಲೀಸರು. ಇನ್ನು ಹೀಗೆ ಆ ಅಜ್ಜಿಯನ್ನ ವಶಕ್ಕೆ ಪಡೆದುಕೊಳ್ಳುವಾಗ ಆ ಅಜ್ಜಿಯ ಬಳಿ ಒಂದು ಚೀಲ ಇರುವುದು ಪೋಲೀಸರ ಕಣ್ಣಿಗೆ ಬಿದ್ದಿದೆ ಮತ್ತು ಆ ಚೀಲದಲ್ಲಿ ಏನಿದೆ ಮತ್ತು ಆ ಚೀಲ ಕೊಡು ಎಂದು ಆ ಅಜ್ಜಿಯ ಬಳಿ ಎಷ್ಟೇ ಹೇಳಿದರು ಕೂಡ ಆ ಅಜ್ಜಿ ಚೀಲವನ್ನ ಪೋಲೀಸರ ಕೈಗೆ ಕೊಡಲು ನಿರಾಕರಣೆ ಮಾಡಿದಳು. ಇದರಿಂದ ಕೊಂಚ ಅನುಮಾನಗೊಂಡ ಪೊಲೀಸರು ಅಜ್ಜಿ ಬಳಿ ಇದ್ದ ಚೀಲವನ್ನ ಕಸಿದುಕೊಂಡು ನೋಡಿದಾಗ ಅದರಲ್ಲಿ ಇದ್ದದ್ದನ್ನ ನೋಡಿ ಒಮ್ಮೆ ಬೆಚ್ಚಿ ಬಿದ್ದರು, ಹೌದು ಅಜ್ಜಿಯ ಇಟ್ಟುಕೊಂಡಿರುವ ಆ ಚೀಲದಲ್ಲಿ ಎರಡು ಲಕ್ಷ ರೂಪಾಯಿ ಹಣ ಇದ್ದಿತ್ತು. ಈ ಅಜ್ಜಿ ಇಷ್ಟು ಹಣವನ್ನ ಎಲ್ಲೋ ಕಳ್ಳತನ ಮಾಡಿರಬೇಕು ಅಂದುಕೊಂಡರು ಪೊಲೀಸರು ಮತ್ತು ಆ ಹಣದ ಬಗ್ಗೆ ಆ ಅಜ್ಜಿಯ ಬಳಿ ವಿಚಾರಣೆ ಮಾಡಿದರೆ ಸತ್ಯಂಶಾ ಹೊರಗೆ ಬಂದಿದೆ.

News of old beggar

ಈ ಅಜ್ಜಿಗೆ ಇಬ್ಬರು ಗಂಡು ಮಕ್ಕಳು ಮತ್ತು ಫರೀದಾಬಾದ್ ನಲ್ಲಿ ಈ ಅಜ್ಜಿಗೆ ಹತ್ತು ಎಕರೆ ಜಮೀನು ಕೂಡ ಇದ್ದಿತ್ತು, 13 ವರ್ಷಗಳ ಹಿಂದೆ ಈ ಅಜ್ಜಿಯ ಗಂಡ ತೀರಿ ಹೋದಾಗ ಈ ಅಜ್ಜಿಯ ಇಬ್ಬರು ಮಕ್ಕಳು ಆ ಜಮೀನನ್ನ ಸಮನಾಗಿ ಹಂಚಿಕೊಂಡು ಅಜ್ಜಿಯನ್ನ ಮನೆಯಿಂದ ಹೊರಗೆ ಹಾಕಿದ್ದಾರೆ. ಈ ಸಮಯದಲ್ಲಿ ಏನು ಮಾಡಬೇಕು ಎಂದು ತೋಚದ ಈ ಅಜ್ಜಿ ನೋಯಿಡಾಗೆ ಬಂದು ಭಿಕ್ಷೆ ಬೇಡಲು ಆರಂಭ ಮಾಡಿದರು, 13 ವರ್ಷಗಳಿಂದ ಭಿಕ್ಷೆ ಬೇಡುತ್ತ ಇರುವ ಈ ಅಜ್ಜಿ ಊಟದ ಹಣವನ್ನ ಬಿಟ್ಟು ಉಳಿದ ಎಲ್ಲಾ ಹಣವನ್ನ ಉಳಿತಾಯ ಮಾಡುತ್ತಿದ್ದಳು. ಹೀಗೆ ಉಳಿತಾಯ ಮಾಡಿದ ಕಾರಣ ನನ್ನ ಬಳಿ ಇಷ್ಟು ಹಣ ಇದೆ ಎಂದು ಪೊಲೀಸರಿಗೆ ಹೇಳಿದಳು ಆ ಅಜ್ಜಿ, ಅಜ್ಜಿಯ ಕಥೆ ಕೇಳಿದ ಪೊಲೀಸರು ಈ ಅಜ್ಜಿಯ ದೊಡ್ಡ ಮಗನಿಗೆ ವಿಚಾರವನ್ನ ತಿಳಿಸಿ ಅವರನ್ನ ಮನೆಗೆ ಕರೆದುಕೊಂಡು ಹೋಗಲು ಪೊಲೀಸರು ಹೇಳಿದಾಗ ಆ ಕೆಟ್ಟ ಮಕ್ಕಳು ತಾಯಿಯ ಕರೆದುಕೊಂಡು ಹೋಗಲು ಬರಲಿಲ್ಲ ಮತ್ತು ಅಜ್ಜಿಯನ್ನ ಆಶ್ರಮಕ್ಕೆ ಸೇರಿಸಿ ಎಂದು ಪೊಲೀಸರಿಗೆ ಹೇಳಿದರು ಈ ಅಜ್ಜಿಯ ಮಕ್ಕಳು.

ಮಕ್ಕಳು ಇಷ್ಟೆಲ್ಲ ಹೇಳಿದರು ಕೂಡ ಈ ಅಜ್ಜಿ ನನ್ನ ಬಳಿ ಇರುವ ಈ ಹಣವನ್ನ ತನ್ನ ಮೊಮ್ಮಕ್ಕಳಿಗೆ ಹಂಚಿಕೊಡಿ ಎಂದು ಪೋಲೀಸರ ಬಳಿ ಹೇಳಿ ತನ್ನ ತಾಯಿತನವನ್ನ ಮರೆದಳು. ನಮ್ಮ ತಂದೆ ತಾಯಿ ನಮ್ಮನ್ನ ಕಷ್ಟಪಟ್ಟು ಹೆತ್ತು ಹೊತ್ತು ಸಾಕಿರುತ್ತಾರೆ ಮತ್ತು ಅವರ ಅರ್ಧ ಜೀವನವನ್ನ ನಮಗಾಗಿ ಮುಡಿಪು ಇಟ್ಟಿರುತ್ತಾರೆ, ಆದರೆ ನಾವು ದೊಡ್ಡವರಾದಮೇಲೆ ಅವರಿಗೆ ಎರಡು ಹೊತ್ತು ಊಟ ಹಾಕಲು ಹಿಂದೆ ಮುಂದೆ ನೋಡುತ್ತೇವೆ, ಇದು ಎಂತಹ ವಿಪರ್ಯಾಸ ಅಲ್ಲವೇ ಸ್ನೇಹಿತರೆ. ಮಕ್ಕಳು ತಾಯಿಯನ್ನ ಸಾಯಿಸಿದರು ಕೂಡ ಕಡೆಯ ಕ್ಷಣದ ವರೆಗೆ ತಾಯಿಯ ಹೃದಯ ಮಕ್ಕಳಿಗೆ ಮಿಡಿಯುತ್ತ ಇರುತ್ತದೆ, ಸ್ನೇಹಿತರೆ ನಿಮ್ಮ ತಾಯಿಯ ಪ್ರೀತಿಯ ಬಗ್ಗೆ ನಿಮ್ಮ ಒಂದೆರಡು ಅಭಿಪ್ರಾಯವನ್ನ ನಮ್ಮಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬ ಮಕ್ಕಳಿಗೂ ತಲುಪಿಸಿ.

News of old beggar

Please follow and like us:
error0
http://karnatakatoday.in/wp-content/uploads/2020/02/News-of-Beggar-Lady-1024x576.jpghttp://karnatakatoday.in/wp-content/uploads/2020/02/News-of-Beggar-Lady-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಹಣಸ್ನೇಹಿತರೆ ಒಬ್ಬ ವ್ಯಕ್ತಿಯ ಮುಖವನ್ನ ನೋಡಿ ಆತನ ಯಾರು ಮತ್ತು ಆತನ ವ್ಯಕ್ತಿತ್ವವನ್ನ ಯಾರಿಂದಲೂ ಅಳೆಯಲು ಸಾಧ್ಯವಿಲ್ಲ ಮತ್ತು ಇದಕ್ಕೆ ಅದೆಷ್ಟೋ ಉದಾಹರಣೆಗಳು ಕೂಡ ಇದೆ. ಒಬ್ಬ ವಯಸ್ಸಾದ ಮಹಿಳೆ ಯಾವಾಗಲು ರೋಡಿನಲ್ಲಿ ಕುಳಿತುಕೊಂಡು ಭಿಕ್ಷೆ ಬೇಡುತ್ತಿದ್ದಳು ಮತ್ತು ಈಕೆಯನ್ನ ನೋಡಿದ ಪೊಲೀಸರು ಈಕೆ ಒಬ್ಬಳು ಭೀಕಾರಿ ಅಂದುಕೊಂಡು ಈಕೆಯನ್ನ ವೃದ್ಧಾಶ್ರಮಕ್ಕೆ ಸೇರಿಸಲು ಮುಂದಾದಾಗ ಅವರಿಗೆ ದೊಡ್ಡ ಶಾಕ್ ಕಾದಿತ್ತು. ಹಾಗಾದರೆ ಆ ವಯಸ್ಸಾದ ಮಹಿಳೆ ಯಾರು ಮತ್ತು...Film | Devotional | Cricket | Health | India