ಜೀವನದಲ್ಲಿ ಕೆಲವೊಮ್ಮೆ ನಾವು ಅಂದುಕೊಳ್ಳುವುದೇ ಒಂದು ಆದರೆ ಆಗುವುದೇ ಇನ್ನೊಂದು, ಅದೃಷ್ಟ ಅನ್ನುವುದೇ ಹಾಗೆ ಕೆಲವೊಮ್ಮೆ ನಾವು ಎಲ್ಲೇ ಇದ್ದರೂ ಅದೂ ನಮ್ಮನ್ನ ಹುಡುಕಿಕೊಂಡು ಬರುತ್ತದೆ. 25 ಸಾವಿರ ರೂಪಾಯಿ ಕೊಟ್ಟು ಖರೀದಿ ಮಾಡಿದ ವಾಚ್ 5 ಕೋಟಿ ರೂಪಾಯಿಗೆ ಮಾರಾಟ ಆಗುತ್ತದೆ ಊಹೆ ಮಾಡಲು ಸಾಧ್ಯವೇ ಮತ್ತು ನಂಬುವುದಕ್ಕೂ ಕಷ್ಟ ಆಗುತ್ತದೆ ಅಲ್ಲವೇ, ಹಾಗಾದರೆ ಅದರ ಹಿಂದಿನ ಕಥೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಇಂಗ್ಲೆಂಡ್ ಮತ್ತು ಅಮೇರಿಕಾ ದೇಶದಲ್ಲಿ ಬಿಬಿಸಿ ಟಿವಿ ಅವರು ಒಂದು ಶೋ ನಡೆಸುತ್ತಾರೆ ಮತ್ತು ಅದರ ಹೆಸರು ಆಂಟಿಕ್ಯೂಸ್ ರೋಡ್ ಶೋ.

ನಮ್ಮಲ್ಲಿ ಇರುವ ಅತ್ಯಮೂಲ್ಯವಾದ ವಸ್ತುಗಳನ್ನ, ಅಂದರೆ ಹಳೆಯ ಪೇಂಟಿಂಗ್, ಹಳೆಯ ಕಾಲದ ದಿನ ಬಳಕೆಯ ವಸ್ತುಗಳು, ಆಭರಣಗಳು ಹೀಗೆ ಯಾವುದೇ ವಸ್ತುಗಳನ್ನ ಈ ರೋಡ್ ಶೋ ಗೆ ತಗೆದುಕೊಂಡು ಹೋದರೆ ಅಲ್ಲಿನ ಪರಿಣಿತರ ತಂಡ ಆ ವಸ್ತುವನ್ನ ಪರಿಶೀಲನೆ ಮಾಡಿ ಅವರ ಇತಿಹಾಸ ಮತ್ತು ಅದರ ವೈಶಿಷ್ಟ್ಯತೆಯನ್ನ ಪರಿಶೀಲನೆ ಮಾಡಿ ಆ ವಸ್ತುವಿನ ಈಗಿನ ಬೆಲೆ ಎಷ್ಟು ಎಂದು ಹೇಳುತ್ತಾರೆ. ಇನ್ನು ಹೀಗೆ ತಮ್ಮ ಹಳೆಯ ವಸ್ತುಗಳನ್ನ ಈ ರೋಡ್ ಗೆ ತಗೆದುಕೊಂಡು ಹೋಗಿ ಕೋಟಿಗಟ್ಟಲೆ ಹಣ ಮಾಡಿದವರು ಕೂಡ ಇದ್ದಾರೆ, 1971 ರಲ್ಲಿ ಅಂದರೆ ಸುಮಾರು 50 ವರ್ಷಗಳ ಹಿಂದೆ ಅಮೇರಿಕನ್ ಏರ್ಫೋರ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಈ ವ್ಯಕ್ತಿ ರೋಲ್ಸ್ ವಾಚ್ ಮೇಲೆ ಆಸೆಪಟ್ಟು ತಮ್ಮ ಒಂದು ತಿಂಗಳ ಸಂಬಳವನ್ನ ಖರ್ಚು ಮಾಡಿ 1973 ರಲ್ಲಿ 375 ಡಾಲರ್ ಅಂದರೆ 24 ಸಾವಿರ ರೂಪಾಯಿ ರೋಲ್ಸ್ ವಾಚ್ ಖರೀದಿ ಮಾಡಿದರು.

News of Rolex Watch

ಇನ್ನು ಆ ನೋಡುವುದಕ್ಕೆ ತುಂಬಾ ಸುಂದರವಾಗಿದ್ದ ಕಾರಣ ಅದನ್ನ ಕೈಗೆ ಕಟ್ಟಿಕೊಂಡರೆ ಹಾಳಾಗುತ್ತದೆ ಎಂದು ಭಾವಿಸಿದ ಈ ವ್ಯಕ್ತಿ ಅದನ್ನ ಕೈಗೆ ಹಾಕಿಕೊಳ್ಳದೆ ಒಂದು ಬಾಕ್ಸ್ ನಲ್ಲಿ ಜೋಪಾನವಾಗಿ ಇಡುತ್ತಾನೆ. ಹೀಗೆ 50 ವರ್ಷ ಕಳೆಯಿತು ಮತ್ತು ಇತ್ತೀಚಿಗೆ ಅಮೇರಿಕಾದ ವೆಸ್ಟ್ ಫ್ಯಾರ್ಗೊ ದಲ್ಲಿ ಈ ರೋಡ್ ಶೋ ನಡೆಯುತ್ತಿದೆ ಎಂದು ಈ ವ್ಯಕ್ತಿ ತನ್ನ ರೋಲ್ಸ್ ವಾಚ್ ತಗೆದುಕೊಂಡು ಹೋಗಿ ಅಲ್ಲಿನ ಪರಿಣಿತರಿಗೆ ತೋರಿಸಿದರು, ಇನ್ನು ಈ ವಾಚ್ ನೋಡಿ ಶಾಕ್ ಆದ ಅವರು ಅದನ್ನ ಪರಿಶೀಲಿಸಿ ಅದರ ಈಗಿನ ಬೆಲೆ ಸುಮಾರು 7 ಲಕ್ಷ ಡಾಲರ್ ಅಂದರೆ 5 ಕೋಟಿ ರೂಪಾಯಿ ಎಂದು ಹೇಳಿದರು. ಇನ್ನು ಇದನ್ನ ಕೇಳಿ ಶಾಕ್ ಆದ ಆ ವ್ಯಕ್ತಿ ನೆಲಕ್ಕೆ ಉರುಳಿದರು, ನಂತರ ಚೇತರಿಸಿಕೊಂಡು ಮೇಲಕ್ಕೆ ಎದ್ದ ಆ ವ್ಯಕ್ತಿ ಇದು ನಿಜಾನಾ ಎಂದು ಕೇಳಿದರು.

ಅದಕ್ಕೆ ಉತ್ತರಿಸಿದ ಅವರು, ಹೌದು ಒಮ್ಮೆಯೂ ಧರಿಸದ 50 ವರ್ಷ ಹಳೆಯ ರೋಲ್ಸ್ ವಾಚ್ ಈ ಪ್ರಪಂಚದಲ್ಲಿ ಎಲ್ಲಿಯೂ ಇಲ್ಲ ಹಾಗಾಗಿ ಇದನ್ನ ಇವತ್ತೇ ಆಕ್ಷನ್ ನಲ್ಲಿ ಇಟ್ಟರೆ ಸುಮಾರು 5 ಕೋಟಿ ರೂಪಾಯಿಗೆ ಸೇಲ್ ಆಗುತ್ತದೆ ಎಂದು ಹೇಳಿದ ಅವರು ನೀವು ಈಗ ಒಂದು ಭಾರಿ ವಾಚ್ ಕಟ್ಟಿಕೊಂಡರು ಅದರ ಬೆಲೆ 4 ಕೋಟಿಗೆ ಇಳಿಯುತ್ತದೆ ಎಂದು ಹೇಳಿದರು. ಇದನ್ನ ಕೇಳಿ ಸಂತಸದಿಂದ ಕುಣಿದು ಕುಪ್ಪಳಿಸಿದ ಆ ವ್ಯಕ್ತಿ, 24 ಸಾವಿರ ಎಲ್ಲಿ 5 ಕೋಟಿ ಎಲ್ಲಿ, ಬಹುಷಃ ಇಂತಹ ರೋಡ್ ಶೋ ನಮ್ಮ ದೇಶದಲ್ಲಿ ಕೂಡ ನಡೆದರೆ ನಮ್ಮ ದೇಶದ ಅದ್ಬುತ ವಸ್ತುಗಳಿ ಆಚೆ ಬರಬಹುದು ಹಾಗೆ ಹಣವನ್ನ ಗಳಿಸಬಹುದು, ಸ್ನೇಹಿತರೆ ಈ ರೋಡ್ ಶೋ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

News of Rolex Watch

Please follow and like us:
error0
http://karnatakatoday.in/wp-content/uploads/2020/02/News-of-Rolex-Watch-1024x576.jpghttp://karnatakatoday.in/wp-content/uploads/2020/02/News-of-Rolex-Watch-150x104.jpgeditorಎಲ್ಲಾ ಸುದ್ದಿಗಳುಬೆಂಗಳೂರುಸುದ್ದಿಜಾಲಹಣಜೀವನದಲ್ಲಿ ಕೆಲವೊಮ್ಮೆ ನಾವು ಅಂದುಕೊಳ್ಳುವುದೇ ಒಂದು ಆದರೆ ಆಗುವುದೇ ಇನ್ನೊಂದು, ಅದೃಷ್ಟ ಅನ್ನುವುದೇ ಹಾಗೆ ಕೆಲವೊಮ್ಮೆ ನಾವು ಎಲ್ಲೇ ಇದ್ದರೂ ಅದೂ ನಮ್ಮನ್ನ ಹುಡುಕಿಕೊಂಡು ಬರುತ್ತದೆ. 25 ಸಾವಿರ ರೂಪಾಯಿ ಕೊಟ್ಟು ಖರೀದಿ ಮಾಡಿದ ವಾಚ್ 5 ಕೋಟಿ ರೂಪಾಯಿಗೆ ಮಾರಾಟ ಆಗುತ್ತದೆ ಊಹೆ ಮಾಡಲು ಸಾಧ್ಯವೇ ಮತ್ತು ನಂಬುವುದಕ್ಕೂ ಕಷ್ಟ ಆಗುತ್ತದೆ ಅಲ್ಲವೇ, ಹಾಗಾದರೆ ಅದರ ಹಿಂದಿನ ಕಥೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು...Film | Devotional | Cricket | Health | India