ಶೃಂಗೇರಿ ಶಾರದಾ ಮಾತೆಯ ಸ್ಥಳ, ದೇಶ ಮತ್ತು ವಿದೇಶಗಳಿಂದ ಇಲ್ಲಿಗೆ ಲಕ್ಷಾಂತರ ಭಕ್ತರು ಬಂದು ಶಾರದಾ ಮಾತೆಯ ದರ್ಶನವನ್ನ ಮಾಡಿ ಹೋಗುತ್ತಾರೆ. ಇನ್ನು ಜನರಿಗೆ ವಿದ್ಯೆ ಮತ್ತು ಬುದ್ದಿಯನ್ನ ಕೊಡುವ ಶಾರದಾ ಮಾತೆ ಇಲ್ಲಿ ಬಂದು ನೆಲೆಸಿದ್ದು ಯಾಕೆ, ಇನ್ನು ಶಂಕರಾಚಾರ್ಯರು ಈ ಕ್ಷೇತ್ರವನ್ನ ಸ್ಥಾಪನೆ ಮಾಡಲು ಇದ್ದ ಬಲವಾದ ಕಾರಣ ಏನು ಮತ್ತು ಈ ಪುಣ್ಯ ಕ್ಷೇತ್ರದ ವಿಶೇಷತೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಾಮಗೆ ತಿಳಿಸಿ. ಅಕ್ಷರಗಳ ಅಭ್ಯಾಸಕ್ಕೆ ಶೃಂಗೇರಿ ಶಾರದಾಂಭೆ ತುಂಬಾ ಫೇಮಸ್ ಎಂದು ಹೇಳಿದರೆ ತಪ್ಪಾಗಲ್ಲ, ಇನ್ನು ತುಂಗಾ ನದಿಯ ದಡದಲ್ಲಿ ಇರುವ ಇರುವ ಈ ದೇವಸ್ಥಾನ ಬಹಳ ವಿಶೇಷತೆಗಳನ್ನ ಹೊಂದಿದೆ.

ಇನ್ನು ಶೃಂಗೇರಿ ಕ್ಷೇತ್ರವು ಈ ಹಿಂದೆ ಶೃಂಗ ಗಿರಿ ಎಂದು ಹೆಸರುವಾಸಿಯಾಗಿತ್ತು ಮತ್ತು ಇಲ್ಲಿ ಋಷಿಗಳು ತಪಸ್ಸನ್ನ ಮಾಡಿದ್ದರು ಮತ್ತು ಈ ಊರು ಬರಗಾಲವನ್ನ ಎದುರಿಸಿದಾಗ ಯಜ್ಞ ಮತ್ತು ಜಾಗಧಿಗಳನ್ನ ಮಾಡಿ ಮಳೆ ಬರುವಂತೆ ಮಾಡುತ್ತಿದ್ದರು ಈ ಋಷಿಗಳು ಮತ್ತು ಈ ಕಾರಣಕ್ಕೆ ಈ ಊರಿಗೆ ಶೃಂಗೇರಿ ಎಂದು ಹೆಸರು ಬಂತು ಹೇಳಲಾಗುತ್ತಿದೆ. ಇನ್ನು ಕೆಲವು ಮೂಲಗಳ ಇಲ್ಲಿನ ಗಿರಿಗಳು ಗೋವಿನ ಕೊಂಬಿಗೆ ಹೋಲುವುದರಿಂದ ಈ ಊರನ್ನ ಶೃಂಗೇರಿ ಎಂದು ಕರೆಯಲಾಗುತ್ತದೆ, ಇನ್ನು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ದೇಶವನ್ನ ಸುತ್ತಿದ ಶಂಕರಾಚಾರ್ಯರು ದೇಶದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಪೀಠಗಳನ್ನ ಸ್ಥಾಪನೆ ಮಾಡುತ್ತಾರೆ ಮತ್ತು ಆ ಪೀಠಗಳಲ್ಲಿ ಶೃಂಗೇರಿ ಕೂಡ ಒಂದು.

sringeri temple

ಹೌದು ದೇಶ ಪರ್ಯಟನೆಯಲ್ಲಿ ಮುಳುಗಿದ್ದ ಶಂಕರಾಚಾರ್ಯರು ತುಂಬಾ ತೀರದ ಶೃಂಗೇರಿಗೆ ಬಂದಾಗ ಅವರಿಗೆ ಶಾಕ್ ಕೊಡುವಂತರ ಒಂದು ವಿಷಯ ಅವರ ಎದುರು ನಡೆಯುತ್ತದೆ. ಹೌದು ಸ್ನೇಹಿತರೆ ಕಾಳಿಂಗ ಸರ್ಪ ಬಿಸಿಲಿನಿಂದ ಬೇಸತ್ತಿದ್ದ ಗರ್ಭಿಣಿ ಕಪ್ಪೆಗೆ ತನ್ನ ಹೆಡೆಯನ್ನ ಎತ್ತಿ ನೆರಳನ್ನ ಕೊಡುತ್ತಿತ್ತು, ಇದನ್ನ ಕಂಡ ಶಂಕರಾಚಾರ್ಯರು ಪರಸ್ಪರ ಶತ್ರುಗಳಾದ ಹಾವು ಮತ್ತು ಕಪ್ಪೆಗಳೇ ಸ್ನೇಹದಿಂದ ವರ್ತಿಸುತ್ತಿದೆ ಮತ್ತು ಇದಕ್ಕಿಂತ ಪುಣ್ಯ ಕ್ಷೇತ್ರ ಇನ್ನೊಂದು ಇಲ್ಲಾ ಅನ್ನುವ ನಿರ್ಧಾರಕ್ಕೆ ಬಂದ ಈ ಜಾಗದಲ್ಲಿ ಶಾರದಾ ಪೀಠವನ್ನ ಸ್ಥಾಪನೆ ಮಾಡುತ್ತಾರೆ.

ಶಂಕರಾಚಾರ್ಯರು ಇಲ್ಲಿ ಪೀಠವನ್ನ ಸ್ಥಾನೇ ಮಾಡಿದರು ಆದರೆ ವಿಜನಗರ ಸಾಮ್ರಾಜ್ಯದ ಅರಸರುಗಳಾದ ಹಕ್ಕಾ ಬುಕ್ಕರು ಇಲ್ಲಿ ದೇಗುಲವನ್ನ ನಿರ್ಮಾಣ ಮಾಡಿದರು ಎನ್ನಲಾಗುತ್ತಿದೆ, ಆದರೆ ಈ ದೇಗುವ ಹೊಯ್ಸಳರ ಕಾಲದಲ್ಲೇ ನಿರ್ಮಾಣ ಆಗಿದೆ ಎಂದು ವಾಸ್ತು ಶಿಲ್ಪ ಹೇಳುತ್ತಿದೆ. ಇನ್ನು ಈಗ ಶೃಂಗೇರಿಯಲ್ಲಿ ಹೊಸ ದೇವಸ್ಥಾನ ಸ್ಥಾಪನೆ ಆಗಿದ್ದರು ಹಳೆ ದೇಗುಲ ಇನ್ನು ಇದೆ ಮತ್ತು ಇಲ್ಲಿ ಹಲವಾರು ದೇವರುಗಳ ಸಾನಿಧ್ಯ ಇದೆ, ಇನ್ನು ದೇವಸ್ಥಾನದ ಪಕ್ಕದಲ್ಲಿ ಇರುವ ತುಂಗಾ ನದಿ ದಡದಲ್ಲಿ ರಾಶಿ ಸುಂದರವಾದ ಕಪ್ಪು ಮೀನುಗಳಿವೆ ಮತ್ತು ಈ ಮೀನುಗಳನ್ನ ದೇವರ ಮೀನುಗಳೆಂದು ಕರೆಯುತ್ತಾರೆ, ಇನ್ನು ಹಿಂದೆ ಯಾರೋ ಈ ಮೀನನ್ನ ಹಿಡಿದುಕೊಂಡು ಹೋದಾಗ ಅವರು ಮಾಡಿದ ಪದಾರ್ಥಗಳೆಲ್ಲಾ ರಕ್ತ ಆಯಿತು ಅನ್ನುವ ದಂತ ಕಥೆ ಇದೆ.

sringeri temple

Please follow and like us:
error0
http://karnatakatoday.in/wp-content/uploads/2019/11/News-of-Sringeri-temple-1024x576.jpghttp://karnatakatoday.in/wp-content/uploads/2019/11/News-of-Sringeri-temple-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಸುದ್ದಿಜಾಲಶೃಂಗೇರಿ ಶಾರದಾ ಮಾತೆಯ ಸ್ಥಳ, ದೇಶ ಮತ್ತು ವಿದೇಶಗಳಿಂದ ಇಲ್ಲಿಗೆ ಲಕ್ಷಾಂತರ ಭಕ್ತರು ಬಂದು ಶಾರದಾ ಮಾತೆಯ ದರ್ಶನವನ್ನ ಮಾಡಿ ಹೋಗುತ್ತಾರೆ. ಇನ್ನು ಜನರಿಗೆ ವಿದ್ಯೆ ಮತ್ತು ಬುದ್ದಿಯನ್ನ ಕೊಡುವ ಶಾರದಾ ಮಾತೆ ಇಲ್ಲಿ ಬಂದು ನೆಲೆಸಿದ್ದು ಯಾಕೆ, ಇನ್ನು ಶಂಕರಾಚಾರ್ಯರು ಈ ಕ್ಷೇತ್ರವನ್ನ ಸ್ಥಾಪನೆ ಮಾಡಲು ಇದ್ದ ಬಲವಾದ ಕಾರಣ ಏನು ಮತ್ತು ಈ ಪುಣ್ಯ ಕ್ಷೇತ್ರದ ವಿಶೇಷತೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು...Film | Devotional | Cricket | Health | India