News of Sumalatha ambarsih

ಲೋಕಸಭಾ ಚುನಾವಣಾ ದಿನಾಂಕ ನಿಗಧಿಯಾಗಿರುವ ಬೆನ್ನಲ್ಲೇ ದೇಶದಾದ್ಯಂತ ಚುನಾವಣೆಯ ಕ್ರೇಜ್ ತುಂಬಾ ಜಾಸ್ತಿಯಾಗುತ್ತಾ ಇದೆ, ಇನ್ನು ಅದರಲ್ಲೂ ನಮ್ಮ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯ ಬಗ್ಗೆ ಜನರು ಬಾರಿ ಕುತೂಹಲವನ್ನ ಹೊಂದಿದ್ದಾರೆ.

ಮಾಜಿ ಸಚಿವ ಮತ್ತು ನಟ ರೆಬಲ್ ಸ್ಟಾರ್ ಅಂಬರೀಷ್ ಅವರ ಹೆಂಡತಿ ಸುಮಲತಾ ಅಂಬರೀಷ್ ಅವರು ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗದೇ ಇದ್ದರೆ ಪಕ್ಷೇತರವಾಗಿ ನಿಲ್ಲುತ್ತೇನೆ ಎಂದು ಸುಮಲತಾ ಅವರು ಹೇಳಿರುವುದು ನಿಮಗೆಲ್ಲ ಗೊತ್ತೇ ಇದೆ.

ಇನ್ನು ಮಂಡ್ಯದಲ್ಲಿ ಸುಮಲತಾ ಮತ್ತು ನಿಖಿಲ್ ಕುಮಾರಸ್ವಾಮಿಯ ಅವರ ಮದ್ಯೆ ಬಾರಿ ಹೋರಾಟ ನಡೆಯುತ್ತಿದೆ ಅಂತ ಹೇಳಿದರೆ ತಪ್ಪಾಗಲ್ಲ, ಸಮ್ಮಿಶ್ರ ಸರ್ಕಾರದ ವತಿಯಿಂದ ಹೇಗಾದರೂ ಮಾಡಿ ನಿಖಿಲ್ ಕುಮಾರಸ್ವಾಮಿಯನ್ನ ಮಂಡ್ಯದಲ್ಲಿ ನಿಲ್ಲಿಸಬೇಕು ಅಂದು ಪಣ ತೊಟ್ಟಿರುವ ಕಾಂಗ್ರೆಸ್ ಪಕ್ಷದ ನಾಯಕರು ಏನೇ ಹೇಳಿದರು ಸುಮಲತಾ ಅವರು ಇದಕ್ಕೆ ಒಪ್ಪುತ್ತಿಲ್ಲ.

News of Sumalatha ambarsih

ಇನ್ನು ಈಗ ಈ ವಿಷಯಕ್ಕೆ ಸಂಬಂಧಪಟ್ಟಂತೆ ಸಿದ್ದರಾಮಯ್ಯ ಹಾಗು ಡಿ ಕೆ ಶಿವಕುಮಾರ ಅವರು ಎಂಟ್ರಿ ಕೊಟ್ಟಿದ್ದು ಒಂದೇ ಕಲ್ಲಿನಿಂದ ಎರಡು ಹಕ್ಕಿಯನ್ನ ಹೊಡೆಯಲು ಮುಂದಾಗಿದ್ದಾರೆ.

ಇನ್ನು ಇವರಿಬ್ಬರ ಪ್ಲಾನ್ ಪ್ರಕಾರ ಸುಮಲತಾ ಅಂಬರೀಷ್ ಅವರಿಗೆ ಟಿಕೆಟ್ ಕೊಡಲು ಮುಂದಾಗಿದ್ದಾರೆ, ಹಾಗಾದರೆ ಸುಮಲತಾ ಅವರಿಗೆ ಮಂಡ್ಯದಲ್ಲಿ ಟಿಕೆಟ್ ಸಿಗುತ್ತಾ, ಒಂದುವೇಳೆ ಟಿಕೆಟ್ ಸಿಗದೇ ಇದ್ದರೆ ಬೇರೆ ಯಾವ ಕ್ಷೇತ್ರದಲ್ಲಿ ಟಿಕೆಟ್ ಸಿಗಬಹುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ.

ಮಂಡ್ಯ ಲೋಕಸಭಾ ಚುನಾವಣೆಯಿಂದ ಶತಾಯಗತಾಯ ಹಿಂದೆ ಸರಿಯುವ ಯೋಚನೇನೇ ಇಲ್ಲ ಅನ್ನುತ್ತಿರುವ ಸುಮಲತಾ ಅವರಿಗೆ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರು ಏನು ಹೇಳಿದ್ದಾರೆ ಅಂದರೆ, ನಿಮ್ಮನ್ನ MP ಮಾಡುವ ಜವಾಬ್ದಾರಿ ನಮಗೆ ಬಿಡಿ, ಆದರೆ ರಾಜ್ಯದ ಸಮ್ಮಿಶ್ರ ಸರ್ಕಾರ ಸುಗಮವಾಗಿ ನಡೆಯಬೇಕು ಅಂದರೆ ಜೆಡಿಎಸ್ ನ ಭದ್ರಕೋಟೆಯಾಗಿರುವ ಮಂಡ್ಯ ಕ್ಷೇತ್ರವನ್ನ ಜೆಡಿಎಸ್ ಗೆ ಬಿಟ್ಟುಕೊಟ್ಟು ನಿಮಗೆ ಕಾಂಗ್ರೆಸ್ ಪಕ್ಷದಿಂದ ಮೈಸೂರಿಯಲ್ಲಿ ಟಿಕೆಟ್ ಕೊಡುತ್ತೇವೆ ಎಂದು ಹೇಳಿದ್ದಾರೆ.

News of Sumalatha ambarsih

ಒಂದು ಕಡೆ ನಮ್ಮ ಆಶಯದಂತೆ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಜಯಗೊಳಿಸುವುದು ಪಕ್ಕ ಆಗುತ್ತದೆ ಹಾಗೆ ಮೈಸೂರಿನಲ್ಲಿ ಸಿದ್ದರಾಮಯ್ಯ ಅವರ ಅಭಿಮಾನಿಗಳು, ಅಂಬರೀಷ್ ಅವರ ಅಭಿಮಾನಿಗಳು ಮತ್ತು ದರ್ಶನ್ ಅವರು ಕೂಡ ಪ್ರಚಾರಕ್ಕೆ ಬರುವುದರಿಂದ ನಿಮ್ಮ ಜಯ ಖಚಿತವಾಗುತ್ತದೆ ಎಂದು ಹೇಳಿದ್ದಾರೆ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರು.

ಹೀಗೆ ಬಿಜೆಪಿಗೆ ಬಿಗ್ ಶಾಕ್ ಕೊಡಲು ಮುಂದಾಗಿದ್ದಾರೆ ಸಿದ್ದರಾಮಯ್ಯ ಅವರು, ಇನ್ನು ಸುಮಲತಾ ಅವರಿಗೆ ಬಿಜೆಪಿ ಕಡೆಯಿಂದ ಕೂಡ ಆಫರ್ ಬಂದಿದ್ದು ಅವರು ಯಾವ ಪಕ್ಷದಿಂದ ಯಾವ ಕ್ಷೇತ್ರದಲ್ಲಿ ನಿಲ್ಲುತ್ತಾರೆ ಎಂದು ಮಾರ್ಚ್ 18 ರ ಒಳಗೆ ತಿಳಿಯಲಿದೆ.

News of Sumalatha ambarsih

Please follow and like us:
0
http://karnatakatoday.in/wp-content/uploads/2019/03/News-of-Sumalatha-Ambarish-1024x576.jpghttp://karnatakatoday.in/wp-content/uploads/2019/03/News-of-Sumalatha-Ambarish-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಲೋಕಸಭಾ ಚುನಾವಣಾ ದಿನಾಂಕ ನಿಗಧಿಯಾಗಿರುವ ಬೆನ್ನಲ್ಲೇ ದೇಶದಾದ್ಯಂತ ಚುನಾವಣೆಯ ಕ್ರೇಜ್ ತುಂಬಾ ಜಾಸ್ತಿಯಾಗುತ್ತಾ ಇದೆ, ಇನ್ನು ಅದರಲ್ಲೂ ನಮ್ಮ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯ ಬಗ್ಗೆ ಜನರು ಬಾರಿ ಕುತೂಹಲವನ್ನ ಹೊಂದಿದ್ದಾರೆ. ಮಾಜಿ ಸಚಿವ ಮತ್ತು ನಟ ರೆಬಲ್ ಸ್ಟಾರ್ ಅಂಬರೀಷ್ ಅವರ ಹೆಂಡತಿ ಸುಮಲತಾ ಅಂಬರೀಷ್ ಅವರು ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗದೇ ಇದ್ದರೆ ಪಕ್ಷೇತರವಾಗಿ ನಿಲ್ಲುತ್ತೇನೆ ಎಂದು ಸುಮಲತಾ ಅವರು ಹೇಳಿರುವುದು ನಿಮಗೆಲ್ಲ ಗೊತ್ತೇ...Kannada News