News of Tirupati Venkataramana

ಬದುಕಿದ್ದಾಗ ಒಮ್ಮೆಯಾದರೂ ತಿರುಪತಿ ತಿಮ್ಮಪ್ಪನ ದರ್ಶನ ಮಾಡಬೇಕೆಂಬ ಹಂಬಲ ಎಲ್ಲರಿಗೂ ಇರುತ್ತದೆ, ಆ ವೆಂಕಟೇಶ್ವರನ ಕ್ರಪೆಗೆ ಪಾತ್ರರಾಗಿ ಕುಬೇರನಷ್ಟೇ ಆಗರ್ಭ ಶ್ರೀಮಂತರಾದವರು ಇಂದಿಗೂ ಕೂಡ ದೇವಾಲಯಕ್ಕೆ ಬಂದು ಹರಕೆಗಳನ್ನು ತೀರಿಸುತ್ತಾರೆ.

ಅಂತಹುದರಲ್ಲಿ ತಿರುಮಲವಾಸನ ಬಗ್ಗೆ ನಿಮಗೆ ಗೊತ್ತಿರದ ಕೆಲ ಸಂಗತಿಗಳಿವೆ ಅದರ ಬಗ್ಗೆ ನಾವಿಂದು ಹೇಳ ಹೊರಟಿದ್ದೇವೆ, ಇಷ್ಟಕ್ಕೂ ತಿಮ್ಮಪ್ಪನ ಸನ್ನಿಧಾನದಲ್ಲಿ ಇರುವ ಆ ರಹಸ್ಯ ಏನು ಇದರ ಬಗ್ಗೆ ಚರ್ಚೆ ಶುರುವಾಗಿದ್ದು ಯಾವಾಗ ಎನ್ನುವುದನ್ನು ಕೂಡ ತಿಳಿಯೋಣ.

ಕೇರಳದ ಅನಂತ ಪದ್ಮನಾಭ ಸ್ವಾಮಿ ದೇಗುಲದ ನೆಲಮಾಳಿಗೆಯಲ್ಲಿರುವ ಅಪಾರ ಪ್ರಮಾಣದ ಚಿನ್ನಾಭರಣ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾದ ಸುದ್ದಿ ಇನ್ನೂ ಹಸಿರಾಗಿರುವಾಗಲೇ ವಿಶ್ವ ವಿಖ್ಯಾತ, ಕಲಿಯುಗ ವೈಕುಂಠ ತಿರುಪತಿ ತಿರುಮಲದಲ್ಲಿ ಅದನ್ನೂ ಮೀರಿಸುವ ಅಪಾರ ಸಂಪತ್ತಿರುವ ರಹಸ್ಯ ಕೋಣೆಯೊಂದಿದೆ ಎನ್ನಲಾಗುತ್ತಿದೆ.

News of Tirupati Venkataramana

ಇಂತಹುದೊಂದು ವಾದಕ್ಕೆ ಕಾರಣವಾಗಿದ್ದು, ಟಿಟಿಡಿಯ ಮಾಜಿ ಪ್ರಧಾನ ಅರ್ಚಕ ಹಾಗೂ ಆಗಮಶಾಸ್ತ್ರ ತಜ್ಞ ರಮಣ ದೀಕ್ಷಿತುಲು ಅವರ ಆರೋಪ, ರಮಣ ದೀಕ್ಷಿತುಲು ಅವರ ಆರೋಪದಂತೆ ತಿರುಮಲ ದೇಗುಲದ ಸಿಬ್ಬಂದಿಗಳು ಆಡಳಿತ ವರ್ಗದ ಅನುಮತಿ ಇಲ್ಲದೇ ದೇವಾಲಯದ ಪ್ರಸಾದ ತಯಾರಿಸುವ ಕೋಣೆಯನ್ನು ದುರಸ್ತಿ ಮಾಡಿದ್ದರು.

ಆದರೆ ಆ ಕೋಣೆಯಲ್ಲಿ ನೆಲವನ್ನು ಅಗಿದುರುವ ಕುರುಹುಗಳು ಪತ್ತೆಯಾಗಿದೆ, ಈ ಬಗ್ಗೆ ತಾವು ವಿಚಾರಿಸಿದಾಗ ಕೋಣೆಯಲ್ಲಿನ ಕಲ್ಲಿನ ನೆಲಹಾಸನ್ನು ಬದಲಿಸಬೇಕಿತ್ತು ಎಂದು ಹೇಳಿದ್ದಾರೆ.

ಆದರೆ ಕೇವಲ 5 ರಿಂದ 6 ಕಲ್ಲಿನ ನೆಲಹಾಸುಗಳನ್ನು ಬದಲಿಸಲು ನೆಲವನ್ನು ಅಗೆಯುವ ಅಗತ್ಯವೇನಿತ್ತು, ಅಲ್ಲದೆ ಬರೊಬ್ಬರಿ 25 ದಿನಗಳ ಕಾಲ ಆ ಕೋಣೆಯನ್ನು ಮುಚ್ಚಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.

News of Tirupati Venkataramana

ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ತಮಗೇನೂ ತಿಳಿದಿಲ್ಲ, ತಾವು ಯಾವುದೇ ದುರಸ್ತಿ ಕಾರ್ಯಕ್ಕೂ ಅನುಮತಿ ನೀಡಿಲ್ಲ ಎಂದು ಹೇಳಿದ್ದಾರೆ, ಹಾಗಾದರೇ ಯಾರ ನೇತೃತ್ವದಲ್ಲಿ ಈ ದುರಸ್ತಿಕಾರ್ಯ ನಡೆಯಿತು ಎಂದು ರಮಣ ದೀಕ್ಷಿತುಲು ಪ್ರಶ್ನಿಸಿದ್ದಾರೆ. ಇನ್ನು ಇದಕ್ಕೆ ಪುಷ್ಠಿ ನೀಡುವಂತೆ 1800ರಲ್ಲೇ ಲೇಖಕನೋರ್ವ ತಿರುಪತಿ ತಿರುಮಲ ದೇಗುಲದ ರಹಸ್ಯ ಅಂಶಗಳ ಕುರಿತು ತನ್ನ ಪುಸ್ತಕದಲ್ಲಿ ಉಲ್ಲೇಖಿಸಿದ್ದಾನೆ.

ಲೇಖಕ ವಿಎನ್ ಶ್ರೀನಿವಾಸ ರಾವ್ ಎಂಬುವವರು ತಮ್ಮ ‘ಸವಾಲ್ ಇ ಜವಾಬ್’ ಪುಸ್ತಕದಲ್ಲಿ ರಹಸ್ಯ ಕೋಣೆಯ ಉಲ್ಲೇಖ ಮಾಡಿದ್ದಾರೆ, ಸುಮಾರು 200 ಪುಟಗಳ ಈ ಪುಸ್ತಕದಲ್ಲಿ 13ನೇ ಪುಟದ ಅಂತ್ಯ ಮತ್ತು 14ನೇ ಪುಟದ ಆರಂಭದಲ್ಲಿರುವ ಆರು ಸಾಲುಗಳು ರಹಸ್ಯ ಕೋಣೆಯ ಉಲ್ಲೇಖ ಮಾಡುತ್ತವೆ.

ಪುಸ್ತಕದಲ್ಲಿರುವಂತೆ ದೇಗುಲದ ಪ್ರದಕ್ಷಿಣೆ ಪ್ರಾಂಗಣದ ಕೆಳಗೆ ರಹಸ್ಯ ಕೋಣೆಯಿದ್ದು, ಇಲ್ಲಿ ಅಪಾರ ಪ್ರಮಾಣದ ಸಂಪತ್ತಿದೆ, ಈ ಸಂಪತ್ತಿನ ಮೇಲೆಯೇ ಭಕ್ತರು ನಡೆದಾಡುತ್ತಿದ್ದಾರೆ, ದೇಗುಲದ ಇತರೆ ಕೋಣೆಗಳಂತೆ ಈ ಕೋಣೆಯ ಪ್ರವೇಶ ನಿಷಿದ್ಧ ಎಂದು ಪುಸ್ತಕದಲ್ಲಿ ಉಲ್ಲೇಖ ಮಾಡಲಾಗಿದೆ.

ಇನ್ನು ಈ ರಹಸ್ಯ ಕೋಣೆಗಳ ಇರುವಿಕೆ ಕುರಿತು ಮತ್ತು ಮಾಜಿ ಪ್ರಧಾನ ಅರ್ಚಕ ರಮಣ ದೀಕ್ಷಿತುಲು ಅವರ ಆರೋಪಕ್ಕೆ ಸಂಬಂಧಿಸಿದಂತೆ ಟಿಟಿಡಿ ಪ್ರತಿಕ್ರಿಯೆ ನೀಡಿಲ್ಲ.

News of Tirupati Venkataramana

Please follow and like us:
error0
http://karnatakatoday.in/wp-content/uploads/2019/02/TIRUMALA-SECRETS-1024x576.jpghttp://karnatakatoday.in/wp-content/uploads/2019/02/TIRUMALA-SECRETS-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಬದುಕಿದ್ದಾಗ ಒಮ್ಮೆಯಾದರೂ ತಿರುಪತಿ ತಿಮ್ಮಪ್ಪನ ದರ್ಶನ ಮಾಡಬೇಕೆಂಬ ಹಂಬಲ ಎಲ್ಲರಿಗೂ ಇರುತ್ತದೆ, ಆ ವೆಂಕಟೇಶ್ವರನ ಕ್ರಪೆಗೆ ಪಾತ್ರರಾಗಿ ಕುಬೇರನಷ್ಟೇ ಆಗರ್ಭ ಶ್ರೀಮಂತರಾದವರು ಇಂದಿಗೂ ಕೂಡ ದೇವಾಲಯಕ್ಕೆ ಬಂದು ಹರಕೆಗಳನ್ನು ತೀರಿಸುತ್ತಾರೆ. ಅಂತಹುದರಲ್ಲಿ ತಿರುಮಲವಾಸನ ಬಗ್ಗೆ ನಿಮಗೆ ಗೊತ್ತಿರದ ಕೆಲ ಸಂಗತಿಗಳಿವೆ ಅದರ ಬಗ್ಗೆ ನಾವಿಂದು ಹೇಳ ಹೊರಟಿದ್ದೇವೆ, ಇಷ್ಟಕ್ಕೂ ತಿಮ್ಮಪ್ಪನ ಸನ್ನಿಧಾನದಲ್ಲಿ ಇರುವ ಆ ರಹಸ್ಯ ಏನು ಇದರ ಬಗ್ಗೆ ಚರ್ಚೆ ಶುರುವಾಗಿದ್ದು ಯಾವಾಗ ಎನ್ನುವುದನ್ನು ಕೂಡ ತಿಳಿಯೋಣ. ಕೇರಳದ ಅನಂತ...Film | Devotional | Cricket | Health | India