ದ್ವಾದಶಿ ಅಂದರೆ ತುಳಸಿ ಪೂಜೆ, ಹೌದು ನಾಳೆ ತುಳಸಿ ಪೂಜೆಯನ್ನ ಪ್ರತಿಯೊಬ್ಬ ಹಿಂದೂಗಳು ಬಹಳ ಸಡಗರದಿಂದ ಆಚರಣೆ ಮಾಡುತ್ತಾರೆ, ಇನ್ನು ವರ್ಷದಲ್ಲಿ ಒಮ್ಮೆ ಬರುತ್ತದೆ ಈ ದ್ವಾದಶಿ ತುಳಸಿ ಪೂಜೆ, ಆದ್ದರಿಂದ ಈ ತುಳಸಿ ಪೂಜೆಗೆ ಅದರದ್ದೇ ಆದ ಮಹತ್ವ ಇದೆ. ಈ ದಿನ ಮಾಡುವ ಕೆಲವು ಚಿಕ್ಕ ಕೆಲಸಗಳಿಂದ ನಮಗೆ ಏಳು ಜನ್ಮದ ಪುಣ್ಯ ಸಿಗುತ್ತದೆ ಮತ್ತು ನಾವು ಮಾಡುವ ಕೆಲವು ಚಿಕ್ಕ ತಪ್ಪುಗಳಿಂದ ನಮಗೆ ಏಳು ಜನ್ಮದ ಪಾಪಗಳು ಕೂಡ ಬರುತ್ತದೆ. ಇನ್ನು ಈ ದಿನ ದೇವರುಗಳು ಭೂಲೋಕದಲ್ಲಿ ಸಂಚರಿಸುವ ಕಾರಣ ಮನುಷ್ಯರು ಮಾಡುವ ಪಾಪ ಕರ್ಮಗಳಿಗೆ ಸರಿಯಾಗಿ ಪುಣ್ಯ ಮತ್ತು ಶಿಕ್ಷೆಯನ್ನ ಕೊಟ್ಟು ಹೋಗುತ್ತಾರೆ ಅನ್ನುವ ನಂಬಿಕೆ ಇದೆ, ಇನ್ನು ಕರಾವಳಿ ಪ್ರದೇಶದಲ್ಲಿ ರಾತ್ರಿಯ ಸಮಯದಲ್ಲಿ ತುಂಬಾ ಸಡಗರದಿಂದ ತುಳಸಿ ಪೂಜೆಯನ್ನ ಮಾಡುತ್ತಾರೆ ಮತ್ತು ತಿರುಪತಿಗೆ ಹಾಕುವ ಕಾಣಿಕೆಗಳನ್ನ ಇಟ್ಟು ಅದಕ್ಕೆ ಪೂಜೆ ಮಾಡುತ್ತಾರೆ.

ಇನ್ನು ಈ ದ್ವಾದಶಿಯ ದಿನ ತಿರುಪತಿ ತಿಮ್ಮಪ್ಪನಿಗೆ ವಿಶೇಷವಾದ ಪೂಜೆಯನ್ನ ಸಲ್ಲಿಸಲಾಗುತ್ತದೆ, ಸ್ನೇಹಿತರೆ ನಾವು ಮಾಡುವ ಈ ಕೆಲವು ಒಳ್ಳೆಯ ಕೆಲಸಗಳಿಂದ ನಮಗೆ ಏಳೇಳು ಜನ್ಮ ಪುಣ್ಯ ಇಂದು ಸಿಗುತ್ತದೆ. ಹಾಗಾದರೆ ಆ ಒಳ್ಳೆಯ ಕೆಲಸಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ತುಳಸಿ ಪೂಜೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ನಾವು ನಾಳೆಯ ದಿನ ತುಳಸಿ ಗಿಡವನ್ನ ನೆಟ್ಟು ಅದಕ್ಕೆ ನೀರನ್ನ ಹಾಕಿ ಪೂಜೆ ಮಾಡಬೇಕು ಹೀಗೆ ಮಾಡುವುದರಿಂದ ನಮಗೆ ತಾಯಿ ತುಳಸಿಯ ಆಶೀರ್ವಾದ ಸಿಗಲಿದೆ, ಇನ್ನು ಪೂಜೆಯನ್ನ ಮಾಡುವ ಸಮಯದಲ್ಲಿ ಕಳಸವನ್ನ ನಿರ್ಮಿಸಿ ಅದಕ್ಕೆ ಅದಕೆ ಹೂವನ್ನ ಹಾಕಿ ಪೂಜೆ ಮಾಡಬೇಕು.

News of Tulasi Pooja

ಇನ್ನು ನಾಳೆಯ ದಿನ ನೀವು ಶುದ್ಧ ಮನಸ್ಸಿನಿಂದ ಮತ್ತು ಮನಸ್ಸಿನಲ್ಲಿ ಯಾವುದೇ ಕಲ್ಮಶವನ್ನ ಇಟ್ಟುಕೊಳ್ಳದೆ ಪೂಜೆ ಮಾಡಿದರೆ ನಿಮ್ಮ ಕನಸಗಳು ನನಸಾಗಲಿದ್ದು ಮಾಡುವ ಕೆಲಸ ಕಾರ್ಯದಲ್ಲಿ ಒಳ್ಳೆಯ ಲಾಭ ನಿಮ್ಮದಾಗಲಿದೆ. ಇನ್ನು ನಾಳೆ ಹಸುವಿಗೆ ಪೂಜೆಯನ್ನ ಮಾಡಿ ಅದಕ್ಕೆ ಆಹಾರವನ್ನ ನಿಮ್ಮ ಕೈಯಿಂದಲೇ ನೀಡಬೇಕು ಹೀಗೆ ಮಾಡಿದರೆ ಲಕ್ಷ್ಮಿ ದೇವಿಯ ಆಶೀರ್ವಾದ ನಿಮಗೆ, ದ್ವಾದಶಿಯ ದಿನ ನಿಮ್ಮ ಕೈಯಲ್ಲಿ ಆದಷ್ಟು ಹಣವನ್ನ ಅಥವಾ ಆಹಾರವನ್ನ ಬಡವರಿಗೆ ಅಥವಾ ಭಿಕ್ಷುಕರಿಗೆ ದಾನ ಮಾಡಿದರೆ ನೀವು ಮಾಡಿದ ಪಾಪಕ್ಕೆ ಪ್ರಾಯಶ್ಚಿತ ಸಿಕ್ಕಂತೆ ಆಗುತ್ತದೆ.

ಇನ್ನು ಈ ದಿನ ಯಾವುದೇ ಕಾರಣಕ್ಕೂ ನೀವು ತುಳಸಿ ಎಲೆಗಳನ್ನ ಕೀಳಬಾರದು ಮತ್ತು ತುಳಸಿ ಗಿಡವನ್ನ ಕೂಡ ಕೀಳಬಾರದು, ಒಂದುವೇಳೆ ನೀವು ಈ ಕೆಲಸವನ್ನ ಮಾಡಿದರೆ ನಿಮಗೆ ಏಳೇಳು ಜನ್ಮದ ಪಾಪ ಅಂಟಿಕೊಳ್ಳುತ್ತದೆ. ಇನ್ನು ಈ ದಿನ ವೆಂಕಟರಮಣನಿಗೆ ವಿಶೇಷವಾದ ಪೂಜೆಯನ್ನ ಸಲ್ಲಿಸಿ ನಿಮ್ಮ ಮನಸ್ಸಿನಲ್ಲಿ ಇರುವುದನ್ನ ಬೇಡಿಕೊಂಡರೆ ಅದೂ ಆದಷ್ಟು ಬೇಗ ನೆರವೇರಲಿದೆ, ಪೂಜೆ ಮಾಡುವ ಸಮಯದಲ್ಲಿ ಮಡಿಯನ್ನ ಉಟ್ಟು ಪೂಜೆ ಮಾಡಬೇಕು ಹಾಗೆ ನಾಳೆಯ ದಿನ ಯಾವುದೇ ರೀತಿಯ ಮಾಂಸದ ಆಹಾರವನ್ನ ಸೇವನೆ ಮಾಡಬಾರದು.

News of Tulasi Pooja

Please follow and like us:
error0
http://karnatakatoday.in/wp-content/uploads/2019/11/Tulasi-pooja-1024x576.jpghttp://karnatakatoday.in/wp-content/uploads/2019/11/Tulasi-pooja-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಸುದ್ದಿಜಾಲದ್ವಾದಶಿ ಅಂದರೆ ತುಳಸಿ ಪೂಜೆ, ಹೌದು ನಾಳೆ ತುಳಸಿ ಪೂಜೆಯನ್ನ ಪ್ರತಿಯೊಬ್ಬ ಹಿಂದೂಗಳು ಬಹಳ ಸಡಗರದಿಂದ ಆಚರಣೆ ಮಾಡುತ್ತಾರೆ, ಇನ್ನು ವರ್ಷದಲ್ಲಿ ಒಮ್ಮೆ ಬರುತ್ತದೆ ಈ ದ್ವಾದಶಿ ತುಳಸಿ ಪೂಜೆ, ಆದ್ದರಿಂದ ಈ ತುಳಸಿ ಪೂಜೆಗೆ ಅದರದ್ದೇ ಆದ ಮಹತ್ವ ಇದೆ. ಈ ದಿನ ಮಾಡುವ ಕೆಲವು ಚಿಕ್ಕ ಕೆಲಸಗಳಿಂದ ನಮಗೆ ಏಳು ಜನ್ಮದ ಪುಣ್ಯ ಸಿಗುತ್ತದೆ ಮತ್ತು ನಾವು ಮಾಡುವ ಕೆಲವು ಚಿಕ್ಕ ತಪ್ಪುಗಳಿಂದ ನಮಗೆ ಏಳು...Film | Devotional | Cricket | Health | India