News of Yash Birthday

ಸ್ನೇಹಿತರೆ ಹುಟ್ಟು ಹಬ್ಬದ ದಿನ ಯಾರು ತಾನೇ ಖುಷಿಯಿಂದ ಇರಲ್ಲ ಹೇಳಿ, ಹುಟ್ಟು ಹಬ್ಬ ಬಂದರೆ ಸಾಕು ಕೇಕ್ ಗಳನ್ನ ಕಟ್ ಮಾಡಿ ವಿಜೃಂಭಣೆಯಿಂದ ಹುಟ್ಟು ಹಬ್ಬವನ್ನ ಆಚರಣೆ ಮಾಡಿಕೊಳ್ಳುತ್ತಾರೆ ಇಂದಿನ ಜನರು.

ಇನ್ನು ನಿನ್ನೆ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟು ಹಬ್ಬ ಇದ್ದಿದ್ದು ನಿಮಗೆಲ್ಲ ಗೊತ್ತೇ ಇದೆ, ಮತ್ತು ರಾಕಿಂಗ್ ಸ್ಟಾರ್ ಯಶ್ ಅವರು ಅಂಬರೀಷ್ ಅವರ ನೆನಪಿನ ಸಲುವಾಗಿ ಈ ವರ್ಷ ನಾನು ಹುಟ್ಟು ಹಬ್ಬವನ್ನ ಆಚರಣೆ ಮಾಡಿಕೊಳ್ಳುವುದಿಲ್ಲ ಎಂದು ಲೈವ್ ನಲ್ಲಿ ಬಂದು ಹೇಳಿದ್ದರು.

News of Yash Birthday

ಇನ್ನು ರಾಕಿಂಗ್ ಸ್ಟಾರ್ ಯಶ್ ಅವರಿಗೆ ಈ ವರ್ಷದ ಹುಟ್ಟು ಹಬ್ಬ ತುಂಬಾ ದುಃಖವನ್ನ ಉಂಟು ಮಾಡಿದೆ ಎಂದು ಹೇಳಿದರೆ ತಪ್ಪಾಗಲ್ಲ, ರಾಕಿಂಗ್ ಸ್ಟಾರ್ ಯಶ್ ಈ ಬಾರಿ ಹುಟ್ಟು ಹಬ್ಬವನ್ನ ಆಚರಿಸಿಕೊಳ್ಳದ ಹಿನ್ನಲೆಯಲ್ಲಿ ನೊಂದ ಅಭಿಮಾನಿಯೊಬ್ಬ ಯಶ್ ಅವರ ಮನೆಯ ಮುಂದೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ಮಾಡಿದ್ದಾನೆ.

ಇನ್ನು ಗಂಭೀರ ಗಾಯಗೊಂಡಿದ್ದ ಆತನನ್ನ ವಿಕ್ಟೊರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಆದರೆ ಇಂದು ಮದ್ಯಾಹ್ನ ಒಂದು ಘಂಟೆ ಸುಮಾರಿಗೆ ಈ ಅಭಿಮಾನಿ ಚಿಕೆತ್ಸೆ ಫಲಕಾರಿಯಾಗದೆ ಪ್ರಣವನ್ನ ಬಿಟ್ಟಿದ್ದಾನೆ.

News of Yash Birthday

ಇನ್ನು ಘಟನೆಯಿಂದ ಮನಸಿಗೆ ತುಂಬಾ ನೋವು ಮಾಡಿಕೊಂಡು ಬೇಸರದಿನ ಮಾತನಾಡಿದ ಯಶ್ ದಯಮಾಡಿ ಯಾರು ಈ ತರಹ ಅಭಿಮಾನವನ್ನ ತೋರಿಸಬೇಡಿ, ನಿಮ್ಮ ತಂದೆ ಮತ್ತು ತಾಯಿಯನ್ನ ನೀವು ಚನ್ನಾಗಿ ನೋಡಿಕೊಳ್ಳಿ ಅದೇ ನೀವು ನನಗೆ ತೋರಿಸುವ ದೊಡ್ಡ ಅಭಿಮಾನ ಎಂದು ನೊಂದು ಹೇಳಿದರು ಯಶ್.

ಇನ್ನುಮೇಲೆ ಈ ತರಹ ಆದರೆ ನಾನು ಯಾರನ್ನ ಕೂಡ ನೋಡೋಕೆ ಬರಲ್ಲ ಮತ್ತು ಇಂತವರು ನನ್ನ ಅಭಿಮಾನಿಗಳೇ ಅಲ್ಲ ಎಂದು ತುಂಬಾ ನೋವಿನಲ್ಲಿ ಹೇಳಿದ್ದಾರೆ ಯಶ್, ಇನ್ನು ಮರಣ ಹೊಂದಿದ ರವಿ ಅವರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಅದೇನೇ ಆಗಲಿ ಯಶ್ ಅವರು ಎಷ್ಟೇ ಪರಿಹಾರವನ್ನ ಕೊಟ್ಟರು ಇದರಲ್ಲಿ ಯಶ್ ಅವರ ತಪ್ಪು ಏನು ಇಲ್ಲ, ಆದರೆ ಆ ಹುಚ್ಚು ಅಭಿಮಾನಿ ದುಡುಕಿ ಈ ನಿರ್ಧಾರವನ್ನ ತೆಗೆದುಕೊಳ್ಳುವ ಬದಲು ತಮ್ಮ ತಂದೆ ತಾಯಿಯ ಬಗ್ಗೆ ಯೋಚನೆ ಮಾಡಬೇಕಿತ್ತು ಅನ್ನುವುದು ನಮ್ಮ ಅನಿಸಿಕೆ, ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

News of Yash Birthday

Please follow and like us:
0
http://karnatakatoday.in/wp-content/uploads/2019/01/Yash-Help-to-Ravi-1024x576.jpghttp://karnatakatoday.in/wp-content/uploads/2019/01/Yash-Help-to-Ravi-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರನಗರಬೆಂಗಳೂರುಸುದ್ದಿಜಾಲಸ್ನೇಹಿತರೆ ಹುಟ್ಟು ಹಬ್ಬದ ದಿನ ಯಾರು ತಾನೇ ಖುಷಿಯಿಂದ ಇರಲ್ಲ ಹೇಳಿ, ಹುಟ್ಟು ಹಬ್ಬ ಬಂದರೆ ಸಾಕು ಕೇಕ್ ಗಳನ್ನ ಕಟ್ ಮಾಡಿ ವಿಜೃಂಭಣೆಯಿಂದ ಹುಟ್ಟು ಹಬ್ಬವನ್ನ ಆಚರಣೆ ಮಾಡಿಕೊಳ್ಳುತ್ತಾರೆ ಇಂದಿನ ಜನರು. ಇನ್ನು ನಿನ್ನೆ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟು ಹಬ್ಬ ಇದ್ದಿದ್ದು ನಿಮಗೆಲ್ಲ ಗೊತ್ತೇ ಇದೆ, ಮತ್ತು ರಾಕಿಂಗ್ ಸ್ಟಾರ್ ಯಶ್ ಅವರು ಅಂಬರೀಷ್ ಅವರ ನೆನಪಿನ ಸಲುವಾಗಿ ಈ ವರ್ಷ ನಾನು ಹುಟ್ಟು...Kannada News