ರಾಜ್ಯದಲ್ಲಿ ಇರುವ ಬಡವರಿಗೆ ರಾಜ್ಯ ಸರ್ಕಾರವು ಸಿಹಿ ಸುದ್ದಿಯನ್ನ ನೀಡಿದೆ, ಇನ್ನುಮುಂದೆ ಸರ್ಕಾರವೇ ಮಾಡಲಿದೆ ಬಡವರ ಮದುವೆ, ನಮ್ಮ ರಾಜ್ಯದ ಮುಖ್ಯ ಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರು ನೂತನ ಯೋಜನೆಯನ್ನ ಜಾರಿಗೆ ತರಲು ನಿರ್ಧಾರವನ್ನ ಮಾಡಲಾಗಿದೆ. ಹಾಗಾದರೆ ಬಡವರ ಮದುವೆಯನ್ನ ಸರ್ಕಾರವೇ ಮಾಡುತ್ತದೆ ಅಂದರೆ ಅದೂ ಎಲ್ಲಿ, ಹೇಗೆ ಮತ್ತು ಮಧುವಿಗೆ ಎಷ್ಟು ಗ್ರಾಂ ಚಿನ್ನದ ಮಾಂಗಲ್ಯವನ್ನ ನೀಡಲಾಗುತ್ತದೆ ಅನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಸರ್ಕಾರ ಈ ಯೋಜನೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ಬಡವರು ತಮ್ಮ ಮನೆಯ ಮಗಳ ಮದುವೆಯನ್ನ ಮಾಡಲು ಬಹಳ ಕಷ್ಟಪಡುತ್ತಾರೆ ಮತ್ತು ಕೈಯಲ್ಲಿ ಹಣವಿಲ್ಲದೆ ಸಾಲವನ್ನ ಮಾಡಿ ಮದುವೆಯನ್ನ ಮಾಡುತ್ತಾರೆ, ಹಾಗೆ ನಂತರ ಆ ಸಾಲವನ್ನ ತೀರಿಸಲು ಆಗದೆ ಕಷ್ಟ ಪಡುತ್ತಾರೆ.

ಇನ್ನು ಬಡವರನ್ನ ಹೊರತುಪಡಿಸಿ ಅನಾಥ ಹೆಣ್ಣು ಮಕ್ಕಳಿಗೆ ಮದುವೆಯನ್ನ ಮಾಡಿಸಲು ಯಾರು ಕೂಡ ಮುಂದೆ ಬರುವುದಿಲ್ಲ ಮತ್ತು ಆ ಹೆಣ್ಣು ಮಕ್ಕಳು ಜೀವನಪರ್ಯಂತ ಒಂಟಿಯಾಗಿರಬೇಕುತ್ತದೆ ಅನ್ನುವ ಮಹತ್ವದ ಉದ್ದೇಶದಿಂದ ಸರ್ಕಾರ ಈ ಯೋಜನೆಯನ್ನ ಜಾರಿಗೆ ತಂದಿದೆ. ರಾಜ್ಯದಲ್ಲಿ ಹಿಂದೂ ಸಂಪ್ರದಾಯದಂತೆ ರಾಜ್ಯದಲ್ಲಿ ಉಚಿತ ಸಾಮೂಹಿಕ ವಿವಾಹ ಯೋಜನೆಯನ್ನ ಜಾರಿಗೆ ತರಲು ಚಿಂತನೆಯನ್ನ ನಡೆಸಲಾಗಿದ್ದು ರಾಜ್ಯದಲ್ಲಿ A ದರ್ಜೆಯ ದೇಗುಲಗಳಲ್ಲಿ ಸರ್ಕಾರದ ವತಿಯಿಂದ ವರ್ಷೇಕ್ಕ ಒಮ್ಮೆ ಸಾಮೂಹಿಕ ವಿವಾಹವನ್ನ ಮಾಡಲು ಸರ್ಕಾರ ನಿರ್ಧಾರವನ್ನ ಮಾಡಿದೆ.

News Samuhika marriage

ಇನ್ನು ಮದುವೆಗೆ ಆಗುವ ಎಲ್ಲಾ ಖರ್ಚು ವೆಚ್ಚಗಳನ್ನ ಆಯಾ ದೇವಸ್ಥಾನದಲ್ಲಿ ಆಗುವ ಸಂಗ್ರಹದಿಂದಲೇ ಭರಿಸಲಾಗುತ್ತದೆ, ಇನ್ನು ಈ ಸಾಮೂಹಿಕ ವಿವಾಹದಲ್ಲಿ ಮದುವೆಯಾಗುವ ಮಹಿಳೆಯರಿಗೆ 8 ಗ್ರಾಂ ಚಿನ್ನದ ಮಾಂಗಲ್ಯವನ್ನ ಉಚಿತವಾಗಿ ನೀಡಲಾಗುತ್ತದೆ. ಇನ್ನು ಮದುವೆಯ ಸಮಯದಲ್ಲಿ ವಧು ಮತ್ತು ವರನಿಗೆ ಮದುವೆಗೆ ಬೇಕಾಗುವ ಎಲ್ಲಾ ವಸ್ತ್ರಗಳನ್ನ ಉಚಿತವಾಗಿ ವಿತರಣೆ ಮಾಡಲಾಗುತ್ತದೆ, ವರ್ಷದಲ್ಲಿ ಕನಿಷ್ಠ ಅಂದರು ಒಂದು ಸಾವಿರ ಜೋಡಿಗಳಿಗೆ ಕಂಕಣ ಭಾಗ್ಯವನ್ನ ಕಲ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿನ ಎಲ್ಲಾ A ದರ್ಜೆಯ ದೇಗುಲಗಳಲ್ಲಿ ವರ್ಷಕ್ಕೊಮ್ಮೆ ಸಾಮೂಹಿಕ ವಿವಾಹ ನಡೆಯಲಿದ್ದು ಇದರ ಸಾರಥ್ಯವನ್ನ ಸರ್ಕಾರವೇ ವಹಿಸಲಿದೆ ಮತ್ತು ಮದುವೆಗೆ ಆಗುವ ಎಲ್ಲಾ ಖರ್ಚು ವೆಚ್ಚಗಳನ್ನ ದೇವಸ್ಥಾನ ನೋಡಿಕೊಳ್ಳಲಿದೆ.

ರಾಜ್ಯದಲ್ಲಿನ ಅನೇಕ ಬಡಜನರಿಗೆ ಈ ಸಾಮೂಹಿಕ ವಿವಾಹ ತುಂಬಾ ಪ್ರಯೋಜನಕಾರಿಯಾಗಲಿದ್ದು ರಾಜ್ಯದಲ್ಲಿನ ಎಲ್ಲಾ ಬಡವರಿಗೆ ಈ ಮಾಹಿತಿಯನ್ನ ತಪ್ಪದೆ ತಲುಪಿಸಿ. ಇನ್ನು ಮದುವೆಗಳು A ದರ್ಜೆ ದೇಗುಲಗಳಾದ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಇಸ್ಕಾನ್, ಹೊರನಾಡು ಮತ್ತು ಇನ್ನು ಇತರೆ ದೇಗುಲಗಳಲ್ಲಿ ನಡೆಯಲಿದೆ ಎಂದು ಸರ್ಕಾರ ತಿಳಿಸಿದೆ, ಸ್ನೇಹಿತರೆ ನಿಮ್ಮ ಅಭಿಪ್ರಾಯದ ಪ್ರಕಾರ ಸರ್ಕಾರ ತೆಗೆದುಕೊಳ್ಳುತ್ತಿರುವ ಈ ನಿರ್ಧಾರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ ಮತ್ತು ಎಲ್ಲರಿಗೂ ಈ ಮಾಹಿತಿ ತಲುಪಿಸಿ.

News Samuhika marriage

Please follow and like us:
error0
http://karnatakatoday.in/wp-content/uploads/2019/10/Mangalasutra-marriage-1024x576.jpghttp://karnatakatoday.in/wp-content/uploads/2019/10/Mangalasutra-marriage-150x104.jpgeditorಎಲ್ಲಾ ಸುದ್ದಿಗಳುಬೆಂಗಳೂರುಮಂಗಳೂರುಹಣರಾಜ್ಯದಲ್ಲಿ ಇರುವ ಬಡವರಿಗೆ ರಾಜ್ಯ ಸರ್ಕಾರವು ಸಿಹಿ ಸುದ್ದಿಯನ್ನ ನೀಡಿದೆ, ಇನ್ನುಮುಂದೆ ಸರ್ಕಾರವೇ ಮಾಡಲಿದೆ ಬಡವರ ಮದುವೆ, ನಮ್ಮ ರಾಜ್ಯದ ಮುಖ್ಯ ಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರು ನೂತನ ಯೋಜನೆಯನ್ನ ಜಾರಿಗೆ ತರಲು ನಿರ್ಧಾರವನ್ನ ಮಾಡಲಾಗಿದೆ. ಹಾಗಾದರೆ ಬಡವರ ಮದುವೆಯನ್ನ ಸರ್ಕಾರವೇ ಮಾಡುತ್ತದೆ ಅಂದರೆ ಅದೂ ಎಲ್ಲಿ, ಹೇಗೆ ಮತ್ತು ಮಧುವಿಗೆ ಎಷ್ಟು ಗ್ರಾಂ ಚಿನ್ನದ ಮಾಂಗಲ್ಯವನ್ನ ನೀಡಲಾಗುತ್ತದೆ ಅನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ...Film | Devotional | Cricket | Health | India