ರೈಲಿನಲ್ಲಿ ಪ್ರಯಾಣ ಮಾಡದೆ ಇರುವವರನ್ನ ಹುಡುಕುವುದು ಬಹಳ ಕಷ್ಟ, ಹೌದು ದೂರ ದೂರದ ಸ್ಥಳಗಳಿಗೆ ಹೋಗಬೇಕು ಅಂದರೆ ಜನರು ಹೆಚ್ಚಾಗಿ ಆಯ್ಕೆ ಮಾಡುವ ಸಾರಿಗೆ ಅಂದರೆ ರೈಲು ಸಾರಿಗೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಉಳಿದ ಎಲ್ಲಾ ಸಾರಿಗೆ ವ್ಯವಸ್ಥೆಯಲ್ಲಿ ರೈಲು ಸಾರಿಗೆ ಬಹಳ ಕಡಿಮೆ ವೆಚ್ಚದ್ದು ಎಂದು ಹೇಳಿದರೆ ತಪ್ಪಾಗಲ್ಲ, ಹೌದು ರೈಲಿನಲ್ಲಿ ಟಿಕೆಟ್ ಗಳ ದರ ಬಹಳ ಕಡಿಮೆ ಇರುವ ಕಾರಣ ಬಡವರು ಹೆಚ್ಚಾಗಿ ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ ಮತ್ತು ರೈಲಿನಲ್ಲಿ ಪ್ರಯಾಣ ಮಾಡುವುದರಿಂದ ನಮಗೆ ಜಾಸ್ತಿ ಆಯಾಸ ಕೂಡ ಆಗುವುದಿಲ್ಲ. ಇನ್ನು ಹಗಲಿನ ಸಮಯದಲ್ಲಿ ನಾವು ರೈಲಿನಲ್ಲಿ ಪ್ರಯಾಣ ಮಾಡುವಾಗ ರೈಲು ಹೆಚ್ಚು ವೇಗವಾಗಿ ಓಡುವುದಿಲ್ಲ ಮತ್ತು ಅದನ್ನ ನಾವು ಗಮನಕ್ಕೆ ಕೂಡ ತಗೆದುಕೊಳ್ಳುವುದಿಲ್ಲ, ಆದರೆ ರಾತ್ರಿಯ ಸಮಯದಲ್ಲಿ ರೈಲುಗಳು ಬಹಳ ವೇಗವಾಗಿ ಚಲಿಸುತ್ತದೆ.

ಹೌದು ರೈಲುಗಳು ಹಗಲಿಗಿಂತ ರಾತ್ರಿಯ ಸಮಯದಲ್ಲಿ ತುಸು ವೇಗವಾಗಿ ಚಲಿಸುತ್ತದೆ, ಹಾಗಾದರೆ ರಾತ್ರಿಯ ಸಮಯದಲ್ಲಿ ರೈಲುಗಳು ವೇಗವಾಗಿ ಚಲಿಸಲು ಕಾರಣ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ರೈಲನ್ನ ಚಾಲನೆ ಮಾಡುವ ಡ್ರೈವರ್ ಗಳನ್ನ ಲೋಕೋ ಪೈಲೆಟ್ ಗಳು ಎಂದು ಕರೆಯಲಾಗುತ್ತದೆ, ಇನ್ನು ಈ ಡ್ರೈವರ್ ಗಳಿಗೆ ಹಗಲಿನ ಸಮಯದಲ್ಲಿ ನಿಧಾನವಾಗಿ ಚಲಿಸಿ ಮತ್ತು ರಾತ್ರಿಯ ಸಮಯದಲ್ಲಿ ವೇಗವಾಗಿ ಚಲಿಸಿ ಎಂದು ಯಾರು ಕೂಡ ಹೇಳಿರುವುದಿಲ್ಲ ಮತ್ತು ಆ ಡ್ರೈವರ್ ಗಳು ತಮಗೆ ನೀಡಿರುವ ಮ್ಯಾಪ್ ನ ಪ್ರಕಾರ ರೈಲನ್ನ ನಡೆಸುತ್ತಾರೆ.

Night journey in train

ಇನ್ನು ರೈಲಿನ ಚಾಲಕರು ಯಾವಾಗಲೂ ಸಮಯಕ್ಕೆ ಸರಿಯಾಗಿ ನಾವು ತಲುಪಬೇಕು ಅನ್ನುವ ದೃಷ್ಟಿಯಿಂದ ರೈಲನ್ನ ಆದಷ್ಟು ವೇಗವಾಗಿ ಓಡಿಸಲು ಪ್ರಯತ್ನ ಮಾಡುತ್ತಾರೆ. ಇನ್ನು ಹಗಲಿನ ಸಮಯದಲ್ಲಿ ಕೆಲವು ರೈಲು ಹಳಿಗಳ ನಡುವೆ ಕೆಲವು ವೇಗ ನಿರ್ಬಂಧಗಳು ಇರುತ್ತದೆ ಮತ್ತು ಇದನ್ನ ಅನುಸರಿಸಿ ರೈಲಿನ ಚಾಲಕರು ರೈಲನ್ನ ಚಾಲನೆ ಮಾಡಬೇಕಾಗುತ್ತದೆ. ಇನ್ನು ನಾವು ರೈಲಿನಲ್ಲಿ ಪ್ರಯಾಣ ಮಾಡುವ ಹಗಲಿನಲ್ಲಿ ತುಸು ನಿಧಾನವಾಗಿ ಮತ್ತು ರಾತ್ರಿಯ ಸಮಯದಲ್ಲಿ ತುಸು ವೇಗವಾಗಿ ರೈಲು ಚಲಿಸಿದಂತೆ ನಮಗೆ ಭಾಸವಾಗುತ್ತದೆ, ಹೌದು ರಾತ್ರಿಯ ಸಮಯದಲ್ಲಿ ರೈಲು ಹಳಿಗಳ ಮೇಲೆ ಜನರು ಮತ್ತು ಪ್ರಾಣಿಗಳು ಓಡಾಡುವುದು ತುಂಬಾ ಕಡಿಮೆ, ಇನ್ನು ಹಗಲಿಗೆ ಹೋಲಿಸಿದರೆ ರಾತ್ರಿಯ ಸಮಯದಲ್ಲಿ ರೈಲು ಚಾಲಕರಿಗೆ ವೇಗ ನಿರ್ಬಂಧನೆಗಳು ಕಡಿಮೆ ಇರುತ್ತದೆ, ಈ ಕಾರಣಕ್ಕೆ ಅವರು ತುಸು ವೇಗವಾಗಿ ರೈಲನ್ನ ಚಲಾಯಿಸುತ್ತಾರೆ.

ಇನ್ನು ಹಗಲಿನ ಸಮಯದಲ್ಲಿ ಸಾಮಾನ್ಯವಾಗಿ ಕೆಲವು ಸ್ಥಳಗಳಲ್ಲಿ ರಿಪೇರಿ ಕೆಲಸಗಳು ನಡೆಯುತ್ತಾ ಇರುತ್ತದೆ ಮತ್ತು ಈ ರೀತಿಯಾಗಿ ರಿಪೇರಿಗಳು ನಡೆಯುತ್ತಿಯುವಾಗ ರೈಲನ್ನ ಜಾಸ್ತಿ ವೇಗವಾಗಿ ಚಾಲನೆ ಮಾಡಲು ಸಾಧ್ಯವಾಗುವುದಿಲ್ಲ ಮತ್ತು ಈ ಕಾರಣಕ್ಕೆ ಹಗಲಿನ ಸಮಯದಲ್ಲಿ ರೈಲಿನ ವೇಗ ಕಡಿಮೆ ಆಗಬೇಕಾಗುತ್ತದೆ. ಇನ್ನು ಕೆಲವು ಭಾರಿ ರೈಲುಗಳ ವೇಗ ಸಿಗ್ನಲ್ ಗಳ ಆಧಾರದ ಮೇಲೆ ಅವಲಂಬಿತವಾಗಿದೆ, ಇನ್ನು ಹಗಲಿಗೆ ಹೋಲಿಸಿದರೆ ಈ ಸಿಗ್ನಲ್ ಗಳು ರಾತ್ರಿಯ ಸಮಯದಲ್ಲಿ ರೈಲಿನ ಚಾಲಕರಿಗೆ ತುಂಬಾ ಬೇಗ ಮತ್ತು ಸ್ಪಷ್ಟವಾಗಿ ಕಾಣುತ್ತದೆ, ಹೌದು ಸಿಗ್ನಲ್ ಇನ್ನು ತುಂಬಾ ದೂರ ಇದ್ದಾಗಲೇ ಅವರಿಗೆ ಸ್ಪಷ್ಟವಾಗಿ ಸಿಗ್ನಲ್ ಗಳು ಕಾಣಿಸುವುದರಿಂದ ಇದು ಅವರ ಕಾರ್ಯದಕ್ಷತೆಯನ್ನ ಹೆಚ್ಚಿಸುತ್ತದೆ. ಒಟ್ಟಾರೆ ಈ ಎಲ್ಲಾ ಕಾರಣಗಳಿಂದ ರಾತ್ರಿಯ ಸಮಯದಲ್ಲಿ ರೈಲುಗಳು ಸ್ವಲ್ಪ ವೇಗವಾಗಿ ಚಲಿಸುತ್ತದೆ, ಸ್ನೇಹಿತರೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Train Speed in Night

Please follow and like us:
error0
http://karnatakatoday.in/wp-content/uploads/2020/02/Train-Speed-in-Night-1-1024x576.jpghttp://karnatakatoday.in/wp-content/uploads/2020/02/Train-Speed-in-Night-1-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲರೈಲಿನಲ್ಲಿ ಪ್ರಯಾಣ ಮಾಡದೆ ಇರುವವರನ್ನ ಹುಡುಕುವುದು ಬಹಳ ಕಷ್ಟ, ಹೌದು ದೂರ ದೂರದ ಸ್ಥಳಗಳಿಗೆ ಹೋಗಬೇಕು ಅಂದರೆ ಜನರು ಹೆಚ್ಚಾಗಿ ಆಯ್ಕೆ ಮಾಡುವ ಸಾರಿಗೆ ಅಂದರೆ ರೈಲು ಸಾರಿಗೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಉಳಿದ ಎಲ್ಲಾ ಸಾರಿಗೆ ವ್ಯವಸ್ಥೆಯಲ್ಲಿ ರೈಲು ಸಾರಿಗೆ ಬಹಳ ಕಡಿಮೆ ವೆಚ್ಚದ್ದು ಎಂದು ಹೇಳಿದರೆ ತಪ್ಪಾಗಲ್ಲ, ಹೌದು ರೈಲಿನಲ್ಲಿ ಟಿಕೆಟ್ ಗಳ ದರ ಬಹಳ ಕಡಿಮೆ ಇರುವ ಕಾರಣ ಬಡವರು ಹೆಚ್ಚಾಗಿ ರೈಲಿನಲ್ಲಿ...Film | Devotional | Cricket | Health | India