ಬಿಪಿಎಲ್ ಮತ್ತು ಅಂತ್ಯೋದಯ ರೇಷನ್ ಕಾರ್ಡ್ ಇದ್ದವರಿಗೆ ರಾಜ್ಯ ಸರ್ಕಾರವು ದೊಡ್ಡ ಆಘಾತದ ಸುದ್ದಿಯನ್ನ ನೀಡಿದೆ, ಬಿಪಿಎಲ್ ರೇಷನ್ ಕಾರ್ಡ್ ಮತ್ತು ಅಂತ್ಯೋದಯ ರೇಷನ್ ಕಾರ್ಡ್ ಇದ್ದವರಿಗೆ ರಾಜ್ಯ ಸರ್ಕಾರವು ಇತ್ತೀಚಿನ ದಿನಗಳಲ್ಲಿ ಹೊಸ ನಿಯಮಗಳು ಮತ್ತು ಬದಲಾವಣೆಗಳನ್ನ ಜಾರಿಗೆ ತರುತ್ತಿದೆ. ಇನ್ನು ಈಗ ಮತ್ತೆ ಹೊಸ ನಿಯಮವನ್ನ ಜಾರಿಗೆ ತರಲಾಗುತ್ತಿದೆ, ಹೌದು ಆಹಾರ ಇಲಾಖೆಯು ರಾಜ್ಯಾದ್ಯಂತ ಹತ್ತು ದಿನಗಳ ಕಾಲ ರೇಷನ್ ದಾನ್ಯಗಳನ್ನ ವಿತರಣೆಯನ್ನ ಬಂದ್ ಮಾಡಲಾಗುತ್ತಿದೆ. ಹಾಗಾದರೆ ರೇಷನ್ ವಿತರಣೆಯನ್ನ ಯಾಕೆ ಬಂದ್ ಮಾಡಲಾಗುತ್ತಿದೆ ಮತ್ತು ಹೊಸದಾಗಿ ಬಂದಿರುವ ನಿಯಮ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಸ್ನೇಹಿತರೆ ರಾಜ್ಯದಲ್ಲಿ ಸುಮಾರು 4.99 ಕೋಟಿ ರೇಷನ್ ಕಾರ್ಡುಗಳು ಇದ್ದು ಇದರಲ್ಲಿ ಬಿಪಿಎಲ್, ಎಪಿಎಲ್ ಮತ್ತು ಅಂತ್ಯೋದಯ ರೇಷನ್ ಕಾರ್ಡ್ ಕೂಡ ಇದೆ, ಇನ್ನು ಪ್ರತಿ ತಿಂಗಳು ರೇಷನ್ ವಿತರಣೆಯನ್ನ ಮಾಡುತ್ತಿರುವುದರಿಂದ ಸರ್ಕಾರದ ಹಣದ ಖಜಾನೆಗೆ ಭಾರಿ ಹೊಡೆತ ಬೀಳುತ್ತಿದೆ. ಇನ್ನು ರಾಜ್ಯದಲ್ಲಿ ಬಡರಲ್ಲದೆ ಇರುವವರು, ಸುಳ್ಳು ದಾಖಲೆಯನ್ನ ನೀಡಿ ಬಿಪಿಎಲ್ ಕಾರ್ಡುಗಳನ್ನ ಮಾಡಿಸಿಕೊಂಡವರಿಗೆ ಕಾನೂನಾತ್ಮಕವಾಗಿ ಕಠಿಣ ದಂಡವನ್ನ ಹಾಕುವುದರ ಜೊತೆಗೆ ಅಂತಹ ರೇಷನ್ ಕಾರ್ಡುಗಳನ್ನ ಬಂದ್ ಮಾಡಲು ಆಹಾರ ಇಲಾಖೆಯು ಮುಂದಾಗಿದೆ.

No ration in ration shop

ಇನ್ನು ನಿಜವಾದ ಬಡವರಿಗೆ ಮಾತ್ರ ಸರ್ಕಾರದ ಅನ್ನಭಾಗ್ಯ ಯೋಜನೆ ಹಾಗು ಸರ್ಕಾರದ ಸವಲತ್ತು ಮತ್ತು ಸೌಲಭ್ಯಗಳನ್ನ ನೀಡಬೇಕು ಅನ್ನುವುದೇ ರಾಜ್ಯ ಆಹಾರ ಇಲಾಖೆಯ ಮುಖ್ಯ ಗುರಿ ಆಗಿದೆ. ಇನ್ನು ಬಳಿ ಬಿಪಿಎಲ್ ರೇಷನ್ ಇದ್ದರೆ ಅದರಲ್ಲಿ ಮದುವೆಯಾಗಿ ಹೋದವರು, ವಲಸೆ ಹೋದವರು, ಮರಣ ಹೊಂದಿದವವರ ಹೆಸರುಗಳನ್ನ ತೆಗೆದುಹಾಕಲು ಎಲ್ಲಾ ರೇಷನ್ ಕಾರ್ಡುದಾರರಿಗೆ ತಿಳಿಸಲಾಗಿದೆ. ಇನ್ನು ಕುಟುಂಬದ ಎಲ್ಲಾ ಸದಸ್ಯರು ರೇಷನ್ ಅಂಗಡಿಗೆ ಹೋಗಿ ತಮ್ಮ ಬೆರಳಚ್ಚುಗಳನ್ನ ನೀಡಲು ಆದೇಶವನ್ನ ಹೊರಡಿಸಲಾಗಿದೆ, ಒಂದುವೇಳೆ ನೀವು ಬೆರಳಚ್ಚುಗಳನ್ನ ನೀಡದೆ ಇದ್ದ ಪಕ್ಷದಲ್ಲಿ ನಿಮ್ಮ ರೇಷನ್ ಕಾರ್ಡುಗಳನ್ನ ಬಂದ್ ಮಾಡಲಾಗುತ್ತದೆ.

ಇನ್ನು ಈ ಸಲುವಾಗಿ ರಾಜ್ಯದಲ್ಲಿ ಡಿಸೆಂಬರ್ 1 ನೇ ತಾರೀಕಿನಿಂದ 10 ನೇ ತಾರೀಕಿನ ವರೆಗೆ ಮತ್ತು ಜನವರಿ 1 ನೇ ತಾರೀಕಿನಿಂದ 10 ನೇ ತಾರೀಕಿನ ವರೆಗೆ ರಾಜ್ಯದ ಎಲ್ಲಾ ರೇಷನ್ ಅಂಗಡಿಗಳನ್ನ ರೇಷನ್ ವಿತರಣೆಯನ್ನ ಮಾಡಲಾಗುವುದಿಲ್ಲ ಮತ್ತು ಈ ಎರಡು ತಿಂಗಳ ಮೊದಲ ಹತ್ತು ದಿನಗಳಲ್ಲಿ ರೇಷನ್ ಕಾರ್ಡುದಾರರ ಬೆರಳಚ್ಚುಗಳನ್ನ ರೇಷನ್ ಅಂಗಡಿಗಳನ್ನ ತೆಗೆದುಕೊಳ್ಳಲಾಗುತ್ತದೆ. ಇನ್ನು ಪ್ರತಿಯೊಬ್ಬ ಬಡವ ಮತ್ತು ಶ್ರೀಮಂತ ರೇಷನ್ ಅಂಗಡಿಗೆ ಹೋಗಿ ತನ್ನ ಬೆರಳಚ್ಚುಗಳನ್ನ ನೀಡುವುದು ಕಡ್ಡಾಯವಾಗಿದೆ ಮತ್ತು ನೀಡಿದ್ದ ಪಕ್ಷದಲ್ಲಿ ನಿಮಗೆ ಮುಂದಿನ ರೇಷನ್ ಸಿಗುವುದಿಲ್ಲ ಮತ್ತು ನಿಮ್ಮ ರೇಷನ್ ಕಾರ್ಡುಗಳನ್ನ ಬಂದ್ ಮಾಡಲಾಗುತ್ತದೆ. ರಾಜ್ಯದಲ್ಲಿ ಇರುವ ನಕಲಿ ರೇಷನ್ ಕಾರ್ಡುಗಳನ್ನ ತಡೆಗಟ್ಟುವ ಸಲುವಾಗಿ ಈ ನಿಯಮಗಳನ್ನ ಜಾರಿಗೆ ತರಲಿದೆ, ಸ್ನೇಹಿತರೆ ರಾಜ್ಯ ಸರ್ಕಾರದ ಈ ನಿಯಮದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

No ration in ration shop

Please follow and like us:
error0
http://karnatakatoday.in/wp-content/uploads/2019/12/No-ration-in-ration-shop-1-1024x576.jpghttp://karnatakatoday.in/wp-content/uploads/2019/12/No-ration-in-ration-shop-1-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಬಿಪಿಎಲ್ ಮತ್ತು ಅಂತ್ಯೋದಯ ರೇಷನ್ ಕಾರ್ಡ್ ಇದ್ದವರಿಗೆ ರಾಜ್ಯ ಸರ್ಕಾರವು ದೊಡ್ಡ ಆಘಾತದ ಸುದ್ದಿಯನ್ನ ನೀಡಿದೆ, ಬಿಪಿಎಲ್ ರೇಷನ್ ಕಾರ್ಡ್ ಮತ್ತು ಅಂತ್ಯೋದಯ ರೇಷನ್ ಕಾರ್ಡ್ ಇದ್ದವರಿಗೆ ರಾಜ್ಯ ಸರ್ಕಾರವು ಇತ್ತೀಚಿನ ದಿನಗಳಲ್ಲಿ ಹೊಸ ನಿಯಮಗಳು ಮತ್ತು ಬದಲಾವಣೆಗಳನ್ನ ಜಾರಿಗೆ ತರುತ್ತಿದೆ. ಇನ್ನು ಈಗ ಮತ್ತೆ ಹೊಸ ನಿಯಮವನ್ನ ಜಾರಿಗೆ ತರಲಾಗುತ್ತಿದೆ, ಹೌದು ಆಹಾರ ಇಲಾಖೆಯು ರಾಜ್ಯಾದ್ಯಂತ ಹತ್ತು ದಿನಗಳ ಕಾಲ ರೇಷನ್ ದಾನ್ಯಗಳನ್ನ ವಿತರಣೆಯನ್ನ ಬಂದ್ ಮಾಡಲಾಗುತ್ತಿದೆ....Film | Devotional | Cricket | Health | India