ಪಾನ್ ಕಾರ್ಡ್ ಇದ್ದವ್ರಿಗೆ ದೇಶದಲ್ಲಿ ಇದೀಗ ಭಾರಿ ಲಾಭವಿದೆ ಏಕೆಂದರೆ ನಿಯತ್ತಾಗಿ ತನ್ನ ಆದಾಯ ತೋರಿಸುವವರಿಗೆ ಕೇಂದ್ರ ಉತ್ತಮ ವ್ಯವಸ್ಥೆಯನ್ನೇ ನೀಡಿದೆ, ಹೀಗಾಗಿ ದೇಶದಲ್ಲಿ ಪಾನ್ ಮತ್ತು ಆಧಾರ್ ಕಾರ್ಡುಗಳಿಗೆ ಹೆಚ್ಚಿನ ಮಹತ್ವವಿದೆ. ಪಾನ್ ಕಾರ್ಡ್ ಕುರಿತ ಕೆಲವೊಂದು ಮುಖ್ಯ ಮಾಹಿತಿಗಳು ನಿಮಗಾಗಿ ಇಲ್ಲಿವೆ. ಮೊದಲನೆಯದಾಗಿ ಇದುವರೆಗೂ ಪಾನ್ ಜೊತೆ ಆಧಾರ್ ಜೋಡಣೆ ಮಾಡದವರಿಗೆ ಇದೆ ಮಾರ್ಚ್ 31 ಕೊನೆಯ ದಿನಾಂಕವಾಗಿದೆ, ಹೀಗಾಗಿ ಈ ಬಾರಿ ಮಾಡದಿದ್ದರೆ ಕೋಟಿ ಕೋಟಿ ಪಾನ್ ಕಾರ್ಡುಗಳು ನಿಷ್ಕ್ರಿಯವಾಗಲಿದೆ. ಇದಕ್ಕೆ ಅನುಮಾನವೇ ಇಲ್ಲ ಎಂದು ಹೇಳಲಾಗಿದೆ. ಇನ್ನು ಪಾನ್ ಇದ್ದವರಿಗೆ ಮತ್ತೊಂದು ಸಿಹಿಸುದ್ದಿ ಏನಪ್ಪಾ ಎಂದರೆ ಉಳಿತಾಯ ಯೋಜನೆಗಳ ಲಾಭ ಪಡೆಯುವ ಮೂಲಕ ವಾರ್ಷಿಕ 9 ರಿಂದ ಒಂಬತ್ತೂವರೆ ಲಕ್ಷ ರೂ ತನಕ ಆದಾಯ ಇರುವ ಮಧ್ಯಮ ವರ್ಗದ ಜನತೆ ಕೂಡ ವೈಯಕ್ತಿಕ ಆದಾಯ ತೆರಿಗೆಯಿಂದ ಮುಕ್ತರಾಗಬಹುದು ಎಂದು ಹಣಕಾಸು ಸಚಿವ ಪಿಯೂಷ್‌ ಗೋಯಲ್‌ ತಿಳಿಸಿದ್ದಾರೆ.

ಉಳಿತಾಯ ಯೋಜನೆಗಳ ಲಾಭ ಪಡೆಯುವ ಮೂಲಕ ವಾರ್ಷಿಕ 9 ರಿಂದ ಒಂಬತ್ತೂವರೆ ಲಕ್ಷ ರೂ ತನಕ ಆದಾಯ ಇರುವ ಮಧ್ಯಮ ವರ್ಗದ ಜನತೆ ಕೂಡ ವೈಯಕ್ತಿಕ ಆದಾಯ ತೆರಿಗೆಯಿಂದ ಮುಕ್ತರಾಗಬಹುದು ಎಂದು ಹಣಕಾಸು ಸಚಿವ ಪಿಯೂಷ್‌ ಗೋಯಲ್‌ ತಿಳಿಸಿದ್ದಾರೆ. ಕೇಂದ್ರ ಸರಕಾರ ಆದಾಯ ತೆರಿಗೆ ವಿನಾಯ್ತಿಯನ್ನು 5 ಲಕ್ಷ ರೂ ಗೆ ಹೆಚ್ಚಳ ಮಾಡಿರುವುದು ಮಹತ್ವದ ಹೆಜ್ಜೆ.

ಜತೆಗೆ, ಆದಾಯ ತೆರಿಗೆ ಕಾಯ್ದೆಯಡಿ ಇರುವ ಕೆಲವು ವಿನಾಯ್ತಿ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಂಡರೆ ವಾರ್ಷಿಕ 8 ಲಕ್ಷ ರೂ. ಆದಾಯ ಹೊಂದಿರುವ ವೇತನ ಆಶ್ರಿತರು ಕೂಡ ಯಾವುದೇ ತೆರಿಗೆ ಕಟ್ಟದೇ ಬದುಕು ಕಟ್ಟಿಕೊಳ್ಳಬಹುದು. ಎನ್‌ಡಿಎ ಸರಕಾರದ ಕೊನೆಯ ಓವರ್‌ ಎಂದೇ ಬಿಂಬಿಸಲಾಗಿದ್ದ ಕೊನೆಯ ಬಜೆಟ್‌ನಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಭಾರಿ ಸಿಕ್ಸರ್‌ ಬಾರಿಸಿದೆ.

ಕೋಟ್ಯಂತರ ತೆರಿಗೆ ಪಾವತಿದಾರರ ನಿರೀಕ್ಷೆಯನ್ನು ಪಿಯೂಷ್‌ ಗೋಯಲ್‌ ಪೂರೈಸಿದ್ದಾರೆ. ವೈಯಕ್ತಿಕ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನುಎರಡೂವರೆ ಲಕ್ಷ ರೂಗಳಿಂದ 5 ಲಕ್ಷ ರೂಗಳಿಗೆ ಹೆಚ್ಚಿಸುವ ಮಹತ್ವದ ಘೋಷಣೆಯನ್ನು ಹಣಕಾಸು ಸಚಿವ ಪಿಯೂಷ್‌ ಗೋಯಲ್‌ ಮಾಡುತ್ತಿದ್ದಂತೆ ನರೇಂದ್ರ ಮೋದಿ ಸೇರಿದಂತೆ ಇಡೀ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದ್ದರು.

Please follow and like us:
error0
http://karnatakatoday.in/wp-content/uploads/2019/02/paan-card-now-1024x576.jpghttp://karnatakatoday.in/wp-content/uploads/2019/02/paan-card-now-150x104.jpgKarnataka Trendingಎಲ್ಲಾ ಸುದ್ದಿಗಳುಹಣಪಾನ್ ಕಾರ್ಡ್ ಇದ್ದವ್ರಿಗೆ ದೇಶದಲ್ಲಿ ಇದೀಗ ಭಾರಿ ಲಾಭವಿದೆ ಏಕೆಂದರೆ ನಿಯತ್ತಾಗಿ ತನ್ನ ಆದಾಯ ತೋರಿಸುವವರಿಗೆ ಕೇಂದ್ರ ಉತ್ತಮ ವ್ಯವಸ್ಥೆಯನ್ನೇ ನೀಡಿದೆ, ಹೀಗಾಗಿ ದೇಶದಲ್ಲಿ ಪಾನ್ ಮತ್ತು ಆಧಾರ್ ಕಾರ್ಡುಗಳಿಗೆ ಹೆಚ್ಚಿನ ಮಹತ್ವವಿದೆ. ಪಾನ್ ಕಾರ್ಡ್ ಕುರಿತ ಕೆಲವೊಂದು ಮುಖ್ಯ ಮಾಹಿತಿಗಳು ನಿಮಗಾಗಿ ಇಲ್ಲಿವೆ. ಮೊದಲನೆಯದಾಗಿ ಇದುವರೆಗೂ ಪಾನ್ ಜೊತೆ ಆಧಾರ್ ಜೋಡಣೆ ಮಾಡದವರಿಗೆ ಇದೆ ಮಾರ್ಚ್ 31 ಕೊನೆಯ ದಿನಾಂಕವಾಗಿದೆ, ಹೀಗಾಗಿ ಈ ಬಾರಿ ಮಾಡದಿದ್ದರೆ ಕೋಟಿ...Film | Devotional | Cricket | Health | India