ಬೆಂಗಳೂರು  “ಅಯ್ಯೋ ಹೋಯ್ತಲ್ಲ ದುಡ್ಡು ,” ಆ ಫೋಟೋವನ್ನು ನೋಡಿದಿವರೆಲ್ಲ ಹೀಗೆ ಅಂದುಕೊಂಡೇ ಅಂದುಕೊಂಡಿರುತ್ತಾರೆ. ಯಾಕೆಂದರೆ, ಆ ಚಿತ್ರದಲ್ಲಿದ್ದ ಎಟಿಎಂ ಕೇಂದ್ರದಲ್ಲಿ ಎರಡು ಸಾವಿರ ಮುಖಬೆಲೆಯ ನೋಟುಗಳು ಚಿಂದಿ ಚಿಂದಿಯಾಗಿ ಬಿದ್ದಿದ್ದವು. ಅದು ಇಲಿರಾಯನ ಕೈವಾಡ ಎಂಬುದು ಆ ಚಿತ್ರದ ಕೆಳಗಿರುವ ಅಡಿ ಬರಹ. ಇಂಥ ಚಿತ್ರವೊಂದು ಕಳೆದ ಮೂರ್ನಾಲ್ಕು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್​ ಆಗಿದೆ.

ಆದರೆ, ಆ ಎಟಿಎಂ ಕೇಂದ್ರ ಯಾವುದು? ಎಲ್ಲಿಯದ್ದು? ಇದಕ್ಕೆ ಒಂದೊಂದು ವಾಟ್ಸ್​ಆ್ಯಪ್ ಗ್ರೂಪ್​ನಲ್ಲೂ ಒಂದೊಂದು ರೀತಿಯ ಉತ್ತರ. ಒಂದರಲ್ಲಿ ಬೆಂಗಳೂರಿನ ಮತ್ತಿಕೆರೆ ಎಂದರೆ ಮತ್ತೊಂದರಲ್ಲಿ ಇನ್ನೊಂದು ಊರು, ಇನ್ನೊಂದು ಗ್ರೂಪ್​ನಲ್ಲಿ ಇನ್ನೊಂದು ಊರು. ಆದರೆ, ಎಲ್ಲಿಯೂ ಅದರ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲ.

ಇನ್ನು ಆ ಎಟಿಎಂ ಕೇಂದ್ರ ಯಾವ ಬ್ಯಾಂಕಿನದ್ದು? ಅದಕ್ಕೂ ಉತ್ತರವಿಲ್ಲ. ಇದು ಇಲಿ ಕೈವಾಡ ಎಂದು ಆ ಚಿತ್ರದ ಕೆಳಗೆ ಅಡಿ ಬರಹ ನೀಡಲಾಗಿದೆ. ಆದರೆ, ಅದಕ್ಕೆ ಪುರಾವೆಯೂ ಇಲ್ಲ. ಅದು ಇಲಿ, ಹೆಗ್ಗಣಗಳ ಕೈವಾಡವೇ ಆಗಿದ್ದರೆ, ಎಟಿಎಂ ಮಷಿನ್​ ಒಳಗೆ ಅವುಗಳು ಹೋಗಿದ್ದಾದರೂ ಹೇಗೆ ಎಂಬ ಪ್ರಶ್ನೆಗಳು ಮೂಡುತ್ತವೆ.

ಇಲಿ ಹೆಗ್ಗಣಗಳು ಹೋಗುವಷ್ಟರ ಮಟ್ಟಿಗೆ ಎಟಿಎಂ ಮಷಿನ್​ಗಳು ಅಸುರಕ್ಷಿತವೇ ಎಂದೂ ಅನಿಸುತ್ತದೆ. ಯಾಕೆಂದರೆ ಎಟಿಎಂ ಯಂತ್ರಗಳನ್ನು ಒಡೆಯಲೆತ್ನಿಸಿದ ಹಲವು ಪ್ರಕರಣಗಳಲ್ಲಿ ಪ್ರಯತ್ನಗಳು ವಿಫಲವಾಗಿರುವುದನ್ನು ನಾವು ಕೇಳಿದ್ದೇವೆ, ಓದಿದ್ದೇವೆ.

Please follow and like us:
0
http://karnatakatoday.in/wp-content/uploads/2018/06/atm-chor-1024x576.pnghttp://karnatakatoday.in/wp-content/uploads/2018/06/atm-chor-150x150.pngKarnataka Today's Newsಅಂಕಣಆರೋಗ್ಯಎನ್‌ಆರ್‌ಐಎಲ್ಲಾ ಸುದ್ದಿಗಳುಕ್ರಿಕೆಟ್ಬೆಂಗಳೂರು  “ಅಯ್ಯೋ ಹೋಯ್ತಲ್ಲ ದುಡ್ಡು ,” ಆ ಫೋಟೋವನ್ನು ನೋಡಿದಿವರೆಲ್ಲ ಹೀಗೆ ಅಂದುಕೊಂಡೇ ಅಂದುಕೊಂಡಿರುತ್ತಾರೆ. ಯಾಕೆಂದರೆ, ಆ ಚಿತ್ರದಲ್ಲಿದ್ದ ಎಟಿಎಂ ಕೇಂದ್ರದಲ್ಲಿ ಎರಡು ಸಾವಿರ ಮುಖಬೆಲೆಯ ನೋಟುಗಳು ಚಿಂದಿ ಚಿಂದಿಯಾಗಿ ಬಿದ್ದಿದ್ದವು. ಅದು ಇಲಿರಾಯನ ಕೈವಾಡ ಎಂಬುದು ಆ ಚಿತ್ರದ ಕೆಳಗಿರುವ ಅಡಿ ಬರಹ. ಇಂಥ ಚಿತ್ರವೊಂದು ಕಳೆದ ಮೂರ್ನಾಲ್ಕು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್​ ಆಗಿದೆ. ಆದರೆ, ಆ ಎಟಿಎಂ ಕೇಂದ್ರ ಯಾವುದು? ಎಲ್ಲಿಯದ್ದು? ಇದಕ್ಕೆ ಒಂದೊಂದು...Kannada News