ದೇಶದಲ್ಲಿ ಕಪ್ಪು ಹಣ ಮತ್ತು ಹವಾಲಾ ಹಣಗಳನ್ನು ತಪ್ಪಿಸುವ ಸಲುವಾಗಿ ಮಾಡಿದ ನೋಟ್ ಬ್ಯಾನ್ ಬಹುತೇಕ ಯಶಸ್ಸು ಕಂಡಿದೆ. ಹೌದು ದೇಶದಲ್ಲಿ ಇದೀಗ 2000 ರು ನೋಟುಗಳ ಕುರಿತು ಮಹತ್ವದ ಸುದ್ದಿಯೊಂದು ಹೊರಬೀಳುತ್ತಿದೆ. ಸ್ವಲ್ಪ ಮಟ್ಟಿಗೆ ಹಣ ಕೂಡಿಟ್ಟವರಿಗೆ ಇದು ಶಾಕಿಂಗ್ ಸುದ್ದಿಯಾಗಬಹುದು. ನವೆಂಬರ್ 2016ರಲ್ಲಿ ನೋಟು ಅಮಾನ್ಯೀಕರಣದ ವೇಳೆ ಬಂದ 2 ಸಾವಿರ ರುಪಾಯಿ ನೋಟು ಮುದ್ರಿಸುವುದನ್ನು ಆರ್ ಬಿಐ ನಿಲ್ಲಿಸಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. 2000 ರುಪಾಯಿ ನೋಟಿನ ಚಲಾವಣೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಈ ನೋಟಿನ ಮುದ್ರಣವನ್ನು ನಿಲ್ಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಎಷ್ಟು ಪ್ರಮಾಣದ ನೋಟು ಚಲಾವಣೆಯಲ್ಲಿರಬೇಕು ಎಂಬುದರ ಬಗ್ಗೆ ಆರ್ ಬಿಐ ಹಾಗೂ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತವೆ ಎಂದು ಅವರು ತಿಳಿಸಿದ್ದಾರೆ.

2016 ರಲ್ಲಿ ಕಪ್ಪುಹಣವನ್ನು ತಡೆಯುವ ಉದ್ದೇಶದೊಂದಿಗೆ ದೇಶದಲ್ಲಿ 500 ರು ಮತ್ತು 1,000 ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯೀಕರಣ ಗೊಳಿಸಲಾಗಿತ್ತು.  ಈ ವೇಳೆ ಸಾವಿರ ರುಗೆ ಬದಲಾಗಿ 2 ಸಾವಿರದ ನೋಟನ್ನು ಚಲಾವಣೆಗೆ ತರಲಾಗಿತ್ತು. ನೋಟು ರದ್ದತಿ ಬಳಿಕ ಮಾರ್ಚ್​, 2018 ರವರೆಗೆ ದೇಶದಲ್ಲಿ ಒಟ್ಟು 18 03 ಲಕ್ಷ ಕೋಟಿ ರೂ  ಕರೆನ್ಸಿ ಚಲಾವಣೆಯಲ್ಲಿವೆ.

ಇದರಲ್ಲಿ 6 ಕೋಟಿ 73 ಲಕ್ಷಅಥವಾ ಶೇ 37ರಷ್ಟು 2,000 ರೂ. ನೋಟುಗಳು ಎಂಬುದು ವಿಶೇಷ.  ಹಾಗೆಯೇ 7 &73 ಲಕ್ಷ ಕೋಟಿ ರೂ ಮೌಲ್ಯದ 500 ರೂ ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿದೆ. ಹೀಗಾಗಿ ಸರ್ಕಾರ ಯಾವಾಗ ನೋಟು ಮತ್ತೆ ಬಂದ್ ಮಾಡುತ್ತದೋ ಎನ್ನುವ ಭಯ ಹಲವರಲ್ಲಿ ಕಾಡುತ್ತಿದೆ. ಅದೇನೇ ಇರಲಿ ಭ್ರಷ್ಟಾಚಾರ ಮೂಕ್ತ ಭಾರತಕ್ಕ್ಕೆ ಮುಂದಾಗುತ್ತಿರುವ ಯಾವುದೇ ಸರ್ಕಾರ ಇರಲಿ ಅದಕ್ಕೆ ನಾವು ಶ್ರಮಿಸೋಣ.

ಇನ್ನು 2000 ರೂ ನೋಟಿನ ಕುರಿತ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಎಲ್ಲರೊಂದಿಗೆ ಹಂಚಿಕೊಳ್ಳಿ ಮತ್ತು ನಿಮ್ಮವರಿಗೂ ತಲುಪಿಸಿ. ಸಮಾಜದಲ್ಲಿ ಭ್ರಷ್ಟರನ್ನು ಇಂದಿಗೂ ಗೌರವಿಸಬೇಡಿ. ವಂದೇ ಮಾತರಂ ಜೈ ಭಾರತ ಮಾತೆ ಜಯ ಶ್ರೀರಾಮ. ಕಪ್ಪುಹಣದ ವಿರುದ್ಧ ನಮ್ಮ ಹೋರಾಟ ಹೀಗೆ ಮುಂದುವರಿಯಲಿ.

Please follow and like us:
0
http://karnatakatoday.in/wp-content/uploads/2019/01/notes-1024x576.pnghttp://karnatakatoday.in/wp-content/uploads/2019/01/notes-150x104.pngKarnataka Today's Newsಅಂಕಣಎಲ್ಲಾ ಸುದ್ದಿಗಳುದೇಶದಲ್ಲಿ ಕಪ್ಪು ಹಣ ಮತ್ತು ಹವಾಲಾ ಹಣಗಳನ್ನು ತಪ್ಪಿಸುವ ಸಲುವಾಗಿ ಮಾಡಿದ ನೋಟ್ ಬ್ಯಾನ್ ಬಹುತೇಕ ಯಶಸ್ಸು ಕಂಡಿದೆ. ಹೌದು ದೇಶದಲ್ಲಿ ಇದೀಗ 2000 ರು ನೋಟುಗಳ ಕುರಿತು ಮಹತ್ವದ ಸುದ್ದಿಯೊಂದು ಹೊರಬೀಳುತ್ತಿದೆ. ಸ್ವಲ್ಪ ಮಟ್ಟಿಗೆ ಹಣ ಕೂಡಿಟ್ಟವರಿಗೆ ಇದು ಶಾಕಿಂಗ್ ಸುದ್ದಿಯಾಗಬಹುದು. ನವೆಂಬರ್ 2016ರಲ್ಲಿ ನೋಟು ಅಮಾನ್ಯೀಕರಣದ ವೇಳೆ ಬಂದ 2 ಸಾವಿರ ರುಪಾಯಿ ನೋಟು ಮುದ್ರಿಸುವುದನ್ನು ಆರ್ ಬಿಐ ನಿಲ್ಲಿಸಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ...Kannada News