nurse lini letter

ಜೀವನದಲ್ಲಿ ಯಾವಾಗ ಏನು ತಲೆಕೆಳಗೆ ಆಗುತ್ತೋ ಗೊತ್ತಿಲ್ಲ, ವಿದಿಯಾಡುವ ನಾಟಕದಲ್ಲಿ ಯಾರು ಬಲಿಪಶುವಾಗುತ್ತಾರೋ ಗೊತ್ತಿಲ್ಲ, ಅದರಲ್ಲಿ ಮನುಷ್ಯರು ಕೂಡ ಒಬ್ಬರು.

ಇನ್ನು ಅದೇ ರೀತಿ ಒಳ್ಳೆಯ ಮನಸ್ಸು ಇರುವ ಹುಡುಗಿಯರಲ್ಲಿ ಲಿನಿ ಕೂಡ ಒಬ್ಬರು, ಈಕೆಯ ವಯಸ್ಸು ಬಂದು 31 ವರ್ಷ, ವೃತ್ತಿಯಲ್ಲಿ ಈಕೆ ನರ್ಸ್ ಆಗಿದ್ದಳು, ಲಿನಿ ಗೆ ಮದುವೆಯಾಗಿ ಇಬ್ಬರು ಮಕ್ಕಳು ಇದ್ದರು.

ಕೇರಳದಲ್ಲಿ ನೀಫಾ ವೈರಸ್ ಹೆಚ್ಚಾಗಿ ಜನರು ಸಾಯುತ್ತಾ ಇದ್ದಾರೆ, ಈ ನೀಫಾ ವೈರಸ್ ಗೆ ಅಲ್ಲಿನ ಸರ್ಕಾರವೇ ನಡುಗಿ ಹೋಗಿದೆ, ನರ್ಸ್ ಆಗಿದ್ದ ಕಾರಣ ಲಿನಿ ವೈರಸ್ ತಗುಲಿದ ರೋಗೋಗಳಿಗೆ ಶುಶ್ರುಷೆಯನ್ನ ಮಾಡುತ್ತಿದ್ದರು.

nurse lini letter

ಆದರೆ ದುರದೃಷ್ಟಕರ ಈಕೆಗೆ ಕೂಡ ವೈರಸ್ ತಗುಲಿ ಕೆಲವೇ ದಿನಗಳಲ್ಲಿ ಸಾವನ್ನಪ್ಪಿದಳು, ಆದರೆ ಈಕೆ ತಾನು ಸಾಯುತ್ತಿದ್ದೇನೆ ಎಂದು ಗೊತ್ತಿದ್ದರೂ ತನ್ನ ಗಂಡನಿಗೆ ಬರೆದ ಪತ್ರ ಈಗ ಎಲ್ಲಾ ಸುದ್ದಿಯಾಗುತ್ತಿದೆ.

ಈಕೆ ತನ್ನ ಆಸ್ಪತ್ರೆ ಸಿಬ್ಬಂದಿಯೊಂದಿಗೆ ಹೀಗೆಂದು ಹೇಳಿದ್ದಳು, ನಾನು ಸತ್ತುಹೋದಮೇಲೆ ತನ್ನ ಕುಟುಂಬ ಬರುವ ಮುಂಚೆ ನನ್ನ ದೇಹವನ್ನ ಸುಟ್ಟುಹಾಕಿ, ಯಾಕೆ ಅಂದರೆ ಅವರಿಗೂ ಈ ವೈರಸ್ ತಾಕಬಹುದು.

nurse lini letter

ತನ್ನ ಗಂಡನಿಗೆ ಪತ್ರದಲ್ಲಿ ಹೀಗೆಂದು ಬರೆದಿದ್ದಳು, ನಾನು ಇನ್ನೇನು ಕಾಲವೇ ಘಂಟೆಗಳಲ್ಲಿ ಸಾಯುತ್ತಿದ್ದೇನೆ, ಇದು ಎಷ್ಟು ವಿಚಿತ್ರ ಅಂದರೆ ನಾವು ನಿಮ್ಮನ್ನ ಕೊನೆಯಬಾರಿ ನೋಡಲೇಬೇಕೆಂದು ಅನಿಸಿದರೂ ಈ ಖಾಯಿಲೆ ನಿಮ್ಮನ್ನ ನೋಡಲು ನನಗೆ ಬಿಡುತ್ತಿಲ್ಲ, ಒಂದು ವೇಳೆ ನಾನೇನಾದರೂ ನಿಮ್ಮನ್ನ ನೋಡುವ ಪ್ರಯತ್ನ ಮಾಡಿದ್ದರೆ ನಿಮಗೆ ಕೂಡ ವೈರಸ್ ತಗುಲುತ್ತದೆ ಎನ್ನುವುದು ನನ್ನ ಭಯ.

ನಮ್ಮ ಮಕ್ಕಳನ ಚೆನ್ನಾಗಿ ನೋಡಿಕೊಳ್ಳಿ, ಅವರನ್ನ ಕೂಡ ದುಬೈ ದೇಶಕ್ಕೆ ಕರೆದುಕೊಂಡು ಹೋಗಿ, ಪ್ರತಿದಿನ ನಾನು ಆಸ್ಪತ್ರೆಗೆ ಹೋಗುವಾಗ ಹೋಗಿ ಬರುತ್ತೇನೆ ಅಂತ ಹೇಳಿ ಹೋಗುವ ಅಭ್ಯಾಸ ನನಗೆ ಇತ್ತು ಆದರೆ ನಾನು ಈಗ ಇಂದಿಗೂ ಬರುವುದಿಲ್ಲ ಎಂದು ಹೇಳುವುದಕ್ಕೆ ತುಂಬಾನೇ ನೋವು ಆಗುತ್ತಾ ಇದೆ.

nurse lini letter

ಲಿನಿ ದೇಹವನ್ನ ಆಸ್ಪತ್ರೆಯಲ್ಲಿ ಎಲೆಕ್ಟ್ರಿಕ್ ರೆಮೋಟೋರಿಯಂ ಉಪಯೋಗಿಸಿ ಶರೀರವನ್ನ ಭಸ್ಮ ಮಾಡಿದರು, ನಿಜವಾದ ಪ್ರೀತಿ ಸತ್ತುಹೋದಮೇಲೂ ಕೂಡ ಜೀವಂತವಾಗಿರುತ್ತದೆ, ದುರಾದೃಷ್ಟವಶಾ ತನ್ನ ಕುಟುಂಬವನ್ನ ತೊರೆದ ಲಿನಿ ತನ್ನ ಕುಟುಂಬಕ್ಕೆ ಮಾಡಿದ ತ್ಯಾಗವನ್ನ ಕೇಳಿ ಒಂದು ಸೆಲ್ಯೂಟ್ ಹೊಡೆಯಲೇಬೇಕು ಅಲ್ಲವಾ ಸ್ನೇಹಿತರೆ.

Please follow and like us:
0
http://karnatakatoday.in/wp-content/uploads/2018/06/wife-karnataka-toda-1024x576.pnghttp://karnatakatoday.in/wp-content/uploads/2018/06/wife-karnataka-toda-150x150.pngeditorಆರೋಗ್ಯಎಲ್ಲಾ ಸುದ್ದಿಗಳುನಗರಸುದ್ದಿಜಾಲಜೀವನದಲ್ಲಿ ಯಾವಾಗ ಏನು ತಲೆಕೆಳಗೆ ಆಗುತ್ತೋ ಗೊತ್ತಿಲ್ಲ, ವಿದಿಯಾಡುವ ನಾಟಕದಲ್ಲಿ ಯಾರು ಬಲಿಪಶುವಾಗುತ್ತಾರೋ ಗೊತ್ತಿಲ್ಲ, ಅದರಲ್ಲಿ ಮನುಷ್ಯರು ಕೂಡ ಒಬ್ಬರು. ಇನ್ನು ಅದೇ ರೀತಿ ಒಳ್ಳೆಯ ಮನಸ್ಸು ಇರುವ ಹುಡುಗಿಯರಲ್ಲಿ ಲಿನಿ ಕೂಡ ಒಬ್ಬರು, ಈಕೆಯ ವಯಸ್ಸು ಬಂದು 31 ವರ್ಷ, ವೃತ್ತಿಯಲ್ಲಿ ಈಕೆ ನರ್ಸ್ ಆಗಿದ್ದಳು, ಲಿನಿ ಗೆ ಮದುವೆಯಾಗಿ ಇಬ್ಬರು ಮಕ್ಕಳು ಇದ್ದರು. ಕೇರಳದಲ್ಲಿ ನೀಫಾ ವೈರಸ್ ಹೆಚ್ಚಾಗಿ ಜನರು ಸಾಯುತ್ತಾ ಇದ್ದಾರೆ, ಈ ನೀಫಾ ವೈರಸ್ ಗೆ...Kannada News