ದೇಶಾದ್ಯಂತ ಇದೀಗ ಏಟಿಎಂ ಕಾರ್ಡ್ ಗಳ ಬಗ್ಗೆ ಭಾರಿ ಪ್ರಮಾಣದ ಚರ್ಚೆ ನಡೆಯುತ್ತಿದೆ. ಇತ್ತ ಸರ್ಕಾರ ಡೆಬಿಟ್ ಕಾರ್ಡ್, ಕ್ಯಾಶ್ ಲೆಸ್ ವ್ಯವಹಾರಗಳಿಗೆ ಮಹತ್ವ ನೀಡುತ್ತಿದ್ದಾರೆ ರಿಸೆರ್ವ್ ಬ್ಯಾಂಕ್ ದೇಶದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಮತ್ತೊಂದು ಕ್ಷಿಪ್ರ ಗತಿಯ ಬದಲಾವಣೆ ತರಲು ಮುಂದಾಗಿದೆ ಹೌದು ಎಲ್ಲ ಸುದ್ದಿ ಮಾಧ್ಯಮಗಳಲ್ಲಿ ಈಗ ಏಟಿಎಂ ಕಾರ್ಡ್ ಗಳ ಭವಿಷ್ಯ ಅಕ್ಟೋಬರ್ 15 ಕ್ಕೆ ನಿರ್ಧಾರವಾಗಲಿದೆ ಎಂದು ಹೇಳಲಾಗುತ್ತಿದೆ.

ಈ ಸುದ್ದಿಯ ಹಿಂದಿನ ಸತ್ಯವನ್ನು ನಾವಿಂದು ನಿಮಗೆ ಹೇಳುತ್ತಿದ್ದೇವೆ. ಇಷ್ಟಕ್ಕೂ ಭಾರತದಲ್ಲಿ ಇದೀಗ ಬಳಕೆಯಾಗುತ್ತಿರುವ 90 ಕೋಟಿಯಷ್ಟು ಏಟಿಎಂ ಕಾರ್ಡುಗಳು ವಿದೇಶಿ ನಿರ್ಮಿತ.

ಉದಾಹರಣೆಗೆ ವೀಸಾ, ಮಾಸ್ಟರ್, ಪೆಪೆಲ್, ಮುಂತಾದವು ಹೇಗೆ ಈ ವಿದೇಶಿ ಕಂಪನಿಗಳು ನಮ್ಮ ದಾಖಲೆಗಳನ್ನು ಅವರ ದೇಶದ ಸರ್ವರ್ ಗಳಲ್ಲಿ ಲೋಡ್ ಮಾಡಿ ಇಡುತ್ತಿದೆ, ಇದೆ ಕಾರಣವನ್ನು ಮುಂದಿಟ್ಟುಕೊಂಡು ರೆಸೆರ್ವ್ ಬ್ಯಾಂಕ್ ಎಲ್ಲ ಡಾಟಾವನ್ನು ನಮ್ಮ ದೇಶದಲ್ಲೆ ಇಡಬೇಕು ಮತ್ತು ಸ್ಟೋರ್ ಮಾಡಬೇಕೆಂದು ಆದೇಶ ನೀಡಿತ್ತು. ಈ ಸಂಬಂಧ ಅಕ್ಟೋಬರ್ 15 ಕ್ಕೆ ಕೊನೆಯ ದಿನಾಂಕ ನಿಗದಿ ಮಾಡಲಾಗಿತ್ತು.

ಆದರೆ ಕಂಪನಿಗಳಿಂದ ಇನ್ನು ಸೂಕ್ತವಾದ ಕಾರಣ ಬಾರದ ಕಾರಣ ಎಲ್ಲ ಕಾರ್ಡುಗಳು ಬಂದ್ ಆಗಲಿವೆ ಎನ್ನುವ ಸುದ್ದಿಯೊಂದು ಎಲ್ಲೆಡೆ ಕೇಳಬಂದಿತ್ತು ಆದರೆ ಹೀಗಾಗುವ ಸಾಧ್ಯತೆ ಕಮ್ಮಿ ಇದೆ. ಏಕೆಂದರೆ ಹೇಳಿಕೇಳಿ ಈಗ ಬರುತ್ತಿರುವುದು ಹಬ್ಬದ ಸಮಯ ಈ ಸಂದರ್ಭದಲ್ಲಿ ಜನರ ಕೈಯಲ್ಲಿ ಹಣವಿಲ್ಲವೆಂದರೆ ಬಹಳಷ್ಟು ತೊಂದರೆ ಪಡಬೇಕಾಗುತ್ತದೆ ಆದ್ದರಿಂದ ರಿಸರ್ವ್ ಬ್ಯಾಂಕ್ ಈ ಯೋಚನೆ ಮಾಡಿಲ್ಲ.

ಇನ್ನು ಕಂಪನಿಗಳಿಗೆ ನೀಡಿದ ಡೆಡ್ಲೈನ್ ವಿಸ್ತರಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ರಿಸೆರ್ವ್ ಬ್ಯಾಂಕ್ ಯಾವ ರೀತಿಯ ನಿರ್ಣಯ ಕೈಗೊಳ್ಳುತ್ತದೆ ಎನ್ನುವುದನ್ನು ಕಾಡು ನೋಡಬೇಕಾಗಿದೆ.

ಇನ್ನು ಸ್ವದೇಶೀ ನಿರ್ಮಿತ ರುಪೆ ಕಾರ್ಡ್ ಬಳಸುವವರಿಗೆ ಯಾವುದೇ ರೀತಿಯ ತೊಂದರೆ ಇಲ್ಲ ಎಂದು ಹೇಳಲಾಗಿದೆ. ವಿದೇಶಿಗಳ ಈ ನಿಯಮ ನಮ್ಮ ದೇಶದ ಆಂತರಿಕ ಭದ್ರತೆಗೆ ಸ್ವಲ್ಪ ತೊಂದರೆ ಉಂಟು ಮಾಡುವ ಸಾಧ್ಯತೆ ಹೆಚ್ಚು ಎನ್ನುವ ಕಾರಣದಿಂದ ಸರ್ಕಾರ ಈ ನಿರ್ಣಯಕ್ಕೆ ಬಂದಿದೆ ಎನ್ನಲಾಗಿದೆ.

Please follow and like us:
0
http://karnatakatoday.in/wp-content/uploads/2018/10/ATM-CARD-BAND-1024x576.jpghttp://karnatakatoday.in/wp-content/uploads/2018/10/ATM-CARD-BAND-150x104.jpgeditorಅಂಕಣಆಟೋಎಲ್ಲಾ ಸುದ್ದಿಗಳುದೇಶಾದ್ಯಂತ ಇದೀಗ ಏಟಿಎಂ ಕಾರ್ಡ್ ಗಳ ಬಗ್ಗೆ ಭಾರಿ ಪ್ರಮಾಣದ ಚರ್ಚೆ ನಡೆಯುತ್ತಿದೆ. ಇತ್ತ ಸರ್ಕಾರ ಡೆಬಿಟ್ ಕಾರ್ಡ್, ಕ್ಯಾಶ್ ಲೆಸ್ ವ್ಯವಹಾರಗಳಿಗೆ ಮಹತ್ವ ನೀಡುತ್ತಿದ್ದಾರೆ ರಿಸೆರ್ವ್ ಬ್ಯಾಂಕ್ ದೇಶದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಮತ್ತೊಂದು ಕ್ಷಿಪ್ರ ಗತಿಯ ಬದಲಾವಣೆ ತರಲು ಮುಂದಾಗಿದೆ ಹೌದು ಎಲ್ಲ ಸುದ್ದಿ ಮಾಧ್ಯಮಗಳಲ್ಲಿ ಈಗ ಏಟಿಎಂ ಕಾರ್ಡ್ ಗಳ ಭವಿಷ್ಯ ಅಕ್ಟೋಬರ್ 15 ಕ್ಕೆ ನಿರ್ಧಾರವಾಗಲಿದೆ ಎಂದು ಹೇಳಲಾಗುತ್ತಿದೆ. ಈ ಸುದ್ದಿಯ ಹಿಂದಿನ ಸತ್ಯವನ್ನು ನಾವಿಂದು...Kannada News