ಸ್ನೇಹಿತರೆ ಪ್ರತಿ ತಿಂಗಳ ಕೊನೆಯ ದಿನ ಮತ್ತು ತಿಂಗಳ ಮೊದಲ ವಾರ ಸಿಲಿಂಡರ್ ಬೆಲೆಯಲ್ಲಿ ಏರಿಳಿತವಾಗುತ್ತದೆ, ಸಿಲಿಂಡರ್ ಬೆಲೆ ಏರಿಕೆ ಆಗಬಹುದು ಅಥವಾ ಇಳಿಕೆಯಾಗಬಹುದು ಆದರೆ ಇದರ ಕುರಿತು ಜನರಿಗೆ ಅರಿವೇ ಇರುವುದಿಲ್ಲ. ಸ್ನೇಹಿತರೆ ಈ ತಿಂಗಳು ಸಿಲಿಂಡರ್ ಬೆಲೆಯಲ್ಲಿ ಮತ್ತೆ ಭಾರಿ ಇಳಿಕೆ ಕಂಡಿದ್ದು ಬದಲಾದ ಬೆಲೆಯನ್ನ ನೀವು ಕಡ್ಡಾಯವಾಗಿ ತಿಳಿದುಕೊಳ್ಳಲೇಬೇಕು.

ಹಾಗಾದರೆ ತಿಂಗಳ ಮೊದಲ ವಾರವಾದ ಇಂದು ಸಿಲಿಂಡರ್ ಬೆಲೆಯಲ್ಲಿ ಎಷ್ಟು ಇಳಿಕೆಯಾಗಿದೆ ಮತ್ತು ಸಬ್ಸಿಡಿ ಸಹಿತ ಇಂಧನ ಬೆಲೆ ಮತ್ತು ಸಬಿಸಿ ರಹಿತ ಇಂಧನದ ಬೆಲೆ ಎಷ್ಟಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ತಿಂಗಳ ಸಿಲಿಂಡರ್ ಬೆಲೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಗ್ಯಾಸ್ ಸಿಲಿಂಡರ್ ಹೊಂದಿರುವ ಎಲ್ಲಾ ಗ್ರಾಹಕರಿಗೂ ಇದು ಒಂದು ರೀತಿಯ ಸಿಹಿ ಸುದ್ದಿ ಅಂತಾನೆ ಹೇಳಬಹುದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ LPG ಬೆಲೆ ಇಳಿಕೆ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯ ಏರಿಕೆಯಾಗಿರುವ ಹಿನ್ನಲೆಯಲ್ಲಿ ಗೃಹ ಬಳಕೆಯ ಅಡುಗೆ ಇಂಧನದ ಬೆಲೆ ಪಾತಾಳಕ್ಕೆ ಕುಸಿದಿದೆ.

October gas rate

ಸಬ್ಸಿಡಿ ಸಹಿತ ಸಿಲಿಂಡರ್ ಬೆಲೆಯಲ್ಲಿ ಭಾರಿ ಇಳಿಕೆಯಾಗಿದ್ದು ಜನರಲ್ಲಿ ಸಂತಸವನ್ನ ಮೂಡಿಸಿದೆ, ಹೌದು ಸ್ನೇಹಿತರೆ ಸಬ್ಸಿಡಿ ಸಹಿತ ಗ್ಯಾಸ್ ಸಿಲಿಂಡರ್ ನ ಬೆಲೆ 46 ರೂಪಾಯಿ ಇಳಿಕೆಯಾಗಿದೆ, ಇನ್ನು ಬೆಲೆ ಇಳಿಕೆಯಾದ ಕಾರಣದಿಂದ ಗ್ರಹ ಬಳಕೆಯ ಸಬ್ಸಿಡಿ ಸಹಿತ ಗ್ಯಾಸ್ ಸಿಲಿಂಡರ್ ನ ಬೆಲೆ ಇಂದು 590 ರೂಪಾಯಿ ಆಗಿದೆ. ಇನ್ನು ಜುಲೈ ತಿಂಗಳಲ್ಲಿ ಸುಮಾರು 100 ರೂಪಾಯಿಯಷ್ಟು ಇಳಿಕೆಯಾಗಿದ್ದ ಚಿನ್ನದ ಬೆಲೆ ಮತ್ತೆ ಅಕ್ಟೋಬರ್ ತಿಂಗಳಲ್ಲಿ 46 ರೂಪಾಯಿ ಇಳಿಕೆ ಕಂಡಿದೆ, ಇನ್ನು ಒಟ್ಟಾರೆಯಾಗಿ ಕಳೆದ ಮೂರೂ ತಿಂಗಳಲ್ಲಿ ಗ್ರಹ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ 146 ರೂಪಾಯಿ ಇಳಿಕೆಯಾಗಿದೆ.

ಇನ್ನು ಅದೇ ರೀತಿಯಾಗಿ ಸಬ್ಸಿಡಿ ಸಿಗುವ ಗ್ಯಾಸ್ ಸಿಲಿಂಡರ್ ನ ಬೆಲೆ 494 ರೂಪಾಯಿ ಆಗಿದೆ, ಹೌದು ಸಬ್ಸಿಡಿ ಸಿಗುವ ಸಿಲಿಂಡರ್ ನ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಆದರೆ ಸಬ್ಸಿಡಿ ಸಹಿತ ಇಂಧನದ ಬೆಲೆಯಲ್ಲಿ ಮೂರೂ ತಿಂಗಳಲ್ಲಿ 146 ರೂಪಾಯಿ ಇಳಿಕೆಯಾಗಿದೆ. ಇನ್ನು ಕೇಂದ್ರ ಸರ್ಕಾರ 2019 ರಲ್ಲಿ ಗ್ಯಾಸ್ ಸಿಲಿಂಡರ್ ನ ಬೆಲೆಯಲ್ಲಿ ಭಾರಿ ಪ್ರಮಾಣದ ಇಳಿಕೆ ಮಾಡುವುದರ ಜೊತೆಗೆ ಬಡ ಕುಟುಂಬಗಳಿಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಉಚಿತವಾಗಿ ಗ್ಯಾಸ್ ಸಿಲಿಂಡರ್ ಮತ್ತು ಗ್ಯಾಸ್ ಸ್ಟವ್ ಗಳನ್ನ ನೀಡುತ್ತಿದೆ. ಇನ್ನು ಮುಂದಿನ ದಿನಗಳಲ್ಲಿ ಭಾರತ ಷೇರು ಮಾರುಕಟ್ಟೆ ಇನ್ನಷ್ಟು ಚೇತರಿಸಿಕೊಳ್ಳಲಿದ್ದು ಮುಂದಿನ ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ನ ಬೆಲೆ ಇನ್ನಷ್ಟು ಕಡಿಮೆಯಾಗಲಿದೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ.

October gas rate

Please follow and like us:
error0
http://karnatakatoday.in/wp-content/uploads/2019/10/Gas-rate-in-Karnataka-1024x576.jpghttp://karnatakatoday.in/wp-content/uploads/2019/10/Gas-rate-in-Karnataka-150x104.jpgeditorಅಂಕಣಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಹಣಸ್ನೇಹಿತರೆ ಪ್ರತಿ ತಿಂಗಳ ಕೊನೆಯ ದಿನ ಮತ್ತು ತಿಂಗಳ ಮೊದಲ ವಾರ ಸಿಲಿಂಡರ್ ಬೆಲೆಯಲ್ಲಿ ಏರಿಳಿತವಾಗುತ್ತದೆ, ಸಿಲಿಂಡರ್ ಬೆಲೆ ಏರಿಕೆ ಆಗಬಹುದು ಅಥವಾ ಇಳಿಕೆಯಾಗಬಹುದು ಆದರೆ ಇದರ ಕುರಿತು ಜನರಿಗೆ ಅರಿವೇ ಇರುವುದಿಲ್ಲ. ಸ್ನೇಹಿತರೆ ಈ ತಿಂಗಳು ಸಿಲಿಂಡರ್ ಬೆಲೆಯಲ್ಲಿ ಮತ್ತೆ ಭಾರಿ ಇಳಿಕೆ ಕಂಡಿದ್ದು ಬದಲಾದ ಬೆಲೆಯನ್ನ ನೀವು ಕಡ್ಡಾಯವಾಗಿ ತಿಳಿದುಕೊಳ್ಳಲೇಬೇಕು. ಹಾಗಾದರೆ ತಿಂಗಳ ಮೊದಲ ವಾರವಾದ ಇಂದು ಸಿಲಿಂಡರ್ ಬೆಲೆಯಲ್ಲಿ ಎಷ್ಟು ಇಳಿಕೆಯಾಗಿದೆ ಮತ್ತು ಸಬ್ಸಿಡಿ ಸಹಿತ...Film | Devotional | Cricket | Health | India