ಸ್ನೇಹಿತರೆ ಮುಂದಿನ ತಿಂಗಳು ಅಂದರೆ ಇದೆ ಅಕ್ಟೋಬರ್ 1 ನೇ ತಾರೀಕಿನಿಂದ ದೇಶದಲ್ಲಿ ಹಲವು ರೀತಿಯ ಹೊಸ ಹೊಸ ಬದಲಾವಣೆಗಳು ಮತ್ತು ಹೊಸ ನಿಯಮಗಳನ್ನ ಜಾರಿಗೆ ತರಲಾಗುತ್ತಿದೆ. ಜನರು ದಿನನಿತ್ಯ ಬಳಸುವ ಕೆಲಸ ವಸ್ತುಗಳ ಬೆಳೆಗಳಲ್ಲಿ ಏರಿಕೆ ಮತ್ತು ಇಳಿಕೆ ಮಾಡಲಾಗಿದೆ, ಇನ್ನು ಕೆಲವು ವಸ್ತುಗಳು ಬಹಳ ದುಭಾರಿಯಾದರೆ ಇನ್ನು ಕೆಲವು ವಸ್ತುಗಳ ಬೆಲೆಯಲ್ಲಿ ಬಾರಿ ಪ್ರಮಾಣದ ಇಳಿಕೆ ಆಗಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಹಾಗಾದರೆ ನಾವು ದಿನನಿತ್ಯ ಬಳಸುವ ಯಾವ ವಸ್ತುಗಳ ಬೆಲೆಯಲ್ಲಿ ಇಳಿಕೆ ಆಗಲಿದೆ ಮತ್ತು ಯಾವ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಲಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ವಸ್ತುಗಳನ್ನ ಖರೀದಿ ಮಾಡುವ ಮುನ್ನ ಒಮ್ಮೆ ಬೆಲೆಗಳ ಕುರಿತು ತಿಳಿದುಕೊಳ್ಳಿ. ಹೌದು ಸ್ನೇಹಿತರೆ ಕೇಂದ್ರ ಸರ್ಕಾರವು ಹೊಸದಾದ GST ದರವನ್ನ ಅಕ್ಟೋಬರ್ 1 ನೇ ತಾರೀಕಿನಿಂದ ದೇಶಾದ್ಯಂತ ಜಾರಿಗೆ ತರಲಿದೆ ಮತ್ತು ಈ ಹೊಸದಾದ GST ದರದಿಂದ ಕೆಲವು ವಸ್ತುಗಳ ಬೆಲೆ ಇಳಿಕೆ ಮತ್ತು ಕೆಲವು ವಸ್ತುಗಳ ಬೆಲೆ ಏರಿಕೆ ಆಗಲಿದೆ.

October GST

ಮೊದಲನೆಯದಾಗಿ ಒಂದು ಸಾವಿರದ ವರಗೆ ಇರುವ ಬಾಡಿಗೆಯ ಮೊತ್ತಕ್ಕೆ ಯಾವುದೇ ರೀತಿಯ ತೆರಿಗೆ ಇರುವುದಿಲ್ಲ ಮತ್ತು ಶುಲ್ಕ ವಿನಾಯತಿ ಇರಲಿದೆ. ಇನ್ನು 7.5 ಸಾವಿರ ರೂಪಾಯಿಯ ತನಕ ಇರುವ ಬಾಡಿಗೆಯ ಮನೆಯ ಮೇಲೆ ಶೇಕಡಾ 12 ರಷ್ಟು GST ಇರಲಿದೆ ಮತ್ತು 7.5 ಸಾವಿರ ರೂಪಾಯಿಗಿಂತ ಜಾಸ್ತಿಯಾಗಿ ಇರುವ ಎಲ್ಲಾ ಮನೆಯ ಮಾಲೀಕರಿಗೆ ಹಾಗು ಗ್ರಾಹಕರಿಗೆ ಶೇಕಡಾ 18 ರಷ್ಟು GST ಯನ್ನ ಕಡ್ಡಾಯವಾಗಿ ಪಾವತಿ ಮಾಡಲೇಬೇಕು. ಇನ್ನು ಎರಡನೆಯದಾಗಿ ಈ ಭಾರಿಯ GST ಕೌಂಸಿಲ್ ಸಭೆಯಲ್ಲಿ 10 -13 ಸೀಟನ್ನ ಒಳಗೊಂಡ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ದರವನ್ನ ಇಳಿಕೆ ಮಾಡಲಾಗಿದೆ.

1200 ಸಿಸಿ ಹೊಂದಿರುವ ಪೆಟ್ರೋಲ್ ವಾಹನದ ಮೇಲೆ ಶೇಕಡಾ 1 ರಷ್ಟು ಹಾಗು 1500 ಸಿಸಿ ಹೊಂದಿರುವ ಡಿಸೇಲ್ ವಾಹನದ ಮೇಲೆ ಶೇಕಡಾ 3 ರಷ್ಟು ದರವನ್ನ ಜಾಸ್ತಿ ಮಾಡಲಾಗಿದೆ. ಇನ್ನು ಮೂರನೆಯದಾಗಿ ಕಾರ್ಪೊರೇಟ್ ತೆರಿಗೆಯಲ್ಲಿ ಇಳಿಕೆ ಮಾಡಲಾಗಿದೆ ಮತ್ತು ಅದಕ್ಕೆ ಮಾರುತಿ ಸುಸುಕಿ ಕಂಪನಿಯು ಕೆಲವು ವಾಹನಗಳ ಬೆಲೆಯನ್ನ ಇಳಿಕೆ ಮಾಡಿದೆ, ಇನ್ನು ನಾಲ್ಕನೆಯದಾಗಿ ಒಣ ಹುಣಸೆಯ ಬೆಲೆ, ಸಮುದ್ರ ವಾಹನಗಳ ಇಂಧನ, ವಜ್ರ, ಮಾಣಿಕ್ಯ, ಪಚ್ಛೆ ರತ್ನ ಹೀಗೆ ಎಲ್ಲಾ ವಸ್ತುಗಳ ತೆರಿಗೆಯಲ್ಲಿ ಇಳಿಕೆ ಮಾಡಲಾಗಿದೆ.

ಇನ್ನು ರೈಲು ಬೋಗಿಗಳ ಮತ್ತು ವ್ಯಾಗನ್ ಮೇಲಿನ GST ದರವನ್ನ ಶೇಕಡಾ 5 -12 ರ ತನಕ ಏರಿಕೆ ಮಾಡಲಾಗಿದೆ, ಇನ್ನು ಚಹಾ ಪುಡಿ, ಟೀ ಪುಡಿ ಮತ್ತು ಪಾನೀಯಗಳ ದರವನ್ನ ಏರಿಕೆ ಮಾಡಲಿದೆ ಸ್ನೇಹಿತರೆ ನಿಮ್ಮ ಪ್ರಕಾರ ಇನ್ನು ಯಾವ ವಸ್ತುಗಳ ಬೆಲೆಯಲ್ಲಿ ಇಳಿಕೆ ಆಗಬೇಕು ಅನ್ನುವುದರ ಬಗ್ಗೆ ಪ್ರಭಿಪ್ರಾಯ ಹೇಳಿ.

October GST

Please follow and like us:
error0
http://karnatakatoday.in/wp-content/uploads/2019/09/New-GST-in-India-1024x576.jpghttp://karnatakatoday.in/wp-content/uploads/2019/09/New-GST-in-India-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಹಣಸ್ನೇಹಿತರೆ ಮುಂದಿನ ತಿಂಗಳು ಅಂದರೆ ಇದೆ ಅಕ್ಟೋಬರ್ 1 ನೇ ತಾರೀಕಿನಿಂದ ದೇಶದಲ್ಲಿ ಹಲವು ರೀತಿಯ ಹೊಸ ಹೊಸ ಬದಲಾವಣೆಗಳು ಮತ್ತು ಹೊಸ ನಿಯಮಗಳನ್ನ ಜಾರಿಗೆ ತರಲಾಗುತ್ತಿದೆ. ಜನರು ದಿನನಿತ್ಯ ಬಳಸುವ ಕೆಲಸ ವಸ್ತುಗಳ ಬೆಳೆಗಳಲ್ಲಿ ಏರಿಕೆ ಮತ್ತು ಇಳಿಕೆ ಮಾಡಲಾಗಿದೆ, ಇನ್ನು ಕೆಲವು ವಸ್ತುಗಳು ಬಹಳ ದುಭಾರಿಯಾದರೆ ಇನ್ನು ಕೆಲವು ವಸ್ತುಗಳ ಬೆಲೆಯಲ್ಲಿ ಬಾರಿ ಪ್ರಮಾಣದ ಇಳಿಕೆ ಆಗಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಹಾಗಾದರೆ ನಾವು ದಿನನಿತ್ಯ...Film | Devotional | Cricket | Health | India