ಜೀವನೋಪಾಯಕ್ಕಾಗಿ ರಸ್ತೆ ಬದಿಗಳಲ್ಲಿ ಸಣ್ಣ ಸಣ್ಣ ವ್ಯಾಪಾರ ಮಾಡಿಕೊಂಡು ಬದುಕುತ್ತಿರುವ ಬಡ ವ್ಯಾಪಾರಿಗಳಿಗೆ ರಾಜ್ಯ ಸರ್ಕಾರ ಬಂಪರ್ ಆಫರ್ ಒಂದನ್ನು ನೀಡಿದೆ. ಬೀದಿ ಬದಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುವ ಎಲ್ಲ ಕುಟುಂಬಗಳಿಗೂ ಸರ್ಕಾರ ಈ ಯೋಜನೆಯ ಮೂಲಕ ನೆರವು ನೀಡಲಿದೆ, ಹಾಗಿದ್ದರೆ ಏನಿದು ಯೋಜನೆ ಯಾವ ರೀತಿ ಪಡೆದುಕೊಳ್ಳಬಹುದು ನೋಡೋಣ. ಮೊದಲೆನೆಯದಾಗಿ ಬೀದಿ ಬದಿ ವ್ಯಾಪಾರಿಗಳಿಗೆ ಸಂಕಷ್ಟವೇನೆಂದರೆ ಅದು ಹಣವನ್ನು ಜೋಡಿಸುವುದು, ಯಾಕೆಂದರೆ ಎಲ್ಲ ಸಮಯದಲ್ಲಿ ವ್ಯಾಪಾರ ಒಂದೇ ರೀತಿ ಇರುತ್ತದೆ ಎಂದು ಹೇಳಲಾಗುವುದಿಲ್ಲ ಹೀಗೆ ವ್ಯಾಪಾರ ಡಲ್ ಆದಾಗ ಹಣದ ಕೊರತೆ ಉಂಟಾಗಿ ಸಾಲ ಮಾಡಬೇಕಾಗುತ್ತದೆ ಅದು ಕೂಡ ಬಡ್ಡಿಯ ಮೇಲೆ, ಹೀಗಾಗಿ ರಾಜ್ಯ ಸರ್ಕಾರ ಇನ್ನು ಮುಂದೆ ಇದನ್ನು ನಿವಾರಿಸುವ ಸಲುವಾಗಿ ಬಡ್ಡಿ ಇಲ್ಲದೆಯೇ ಸಾಲ ನೀಡಲಿದೆ.

ಬೆಂಗಳೂರು ಸೇರಿದಂತೆ ಹತ್ತು ಮಹಾನಗರಪಾಲಿಕೆ ಹಾಗು ಜೆಲ್ಲೆಯ ಪ್ರಮುಖ ನಗರಗಳಲ್ಲಿ ಸಾಲ ನೀಡಲಾಗುತ್ತದೆ. ಬೆಂಗಳೂರಿನ ವ್ಯಾಪ್ತಿಯಲ್ಲಿ ಐದು ಸಾವಿರ ಹಾಗು ಇತರ ಮೂರು ಸಾವಿರ ಜಿಲ್ಲಾವಾರು ಒಂದು ಸಾವಿರ ರು ಸಾಲವನ್ನು ಬಡ್ಡಿ ಇಲ್ಲದೆ ಇನ್ನು ಮುಂದೆ ನೀಡಲಾಗುವುದು. ಪಾನಿಪುರಿ ಮಾರುವವರು ದೋಸೆ ತಿಂಡಿ, ಹೂವು ಹಣ್ಣು, ವಾಹನಗಳಲ್ಲಿ ಕ್ಯಾಂಟೀನ್ ಮಾಡಿಕೊಂಡವರು ಹೀಗೆ ಎಲ್ಲರು ಈ ಸಾಲಿಗೆ ಬರುತ್ತಾರೆ.

ಮೊದಲು ಅರ್ಜಿ ಸ್ವೀಕರಿಸಿ ಒಂದು ಬ್ಯಾಂಕ್ ಅಕೌಂಟ್ ಮಾಡಿಕೊಡಲಾಗುತ್ತದೆ ಸಾಲ ವಸೂಲಾತಿಗೆ ಪಿಗ್ಮಿ ರೂಪದಲ್ಲಿ ವ್ಯವಸ್ಥೆ ಮಾಡಿಕೊಡಲಾಗುತ್ತದೆ ಎಂದು ತಿಳಿದು ಬಂದಿದೆ. ದುಡಿಯುವ ಕೈಗಳಿಗೆ ಹಣ ನೀಡುವುದು ಮಾತ್ರವಲ್ಲದೇ ಯೋಜನೆಯಲ್ಲಿ ಕೆಲ ನಿಯಮಗಳನ್ನ ಅಳವಡಿಸಲಾಗಿದೆ.

 

 

ರಸ್ತೆ ಬದಿ ಸ್ವಚ್ಛತೆ ಹಾಳು ಮಾಡುವವರಿಗೆ ಹಾಗೂ ಪರಿಸರಕ್ಕೆ ಹಾನಿಯುಂಟು ಮಾಡುವ ವಸ್ತುಗಳನ್ನು ಮಾರಾಟ ಮಾಡುವವರಿಗೆ ಯೋಜನೆ ಅನ್ವಯಿಸುವುದಿಲ್ಲ ಎಂಬ ನಿಯಮ ರೂಪಿಸಲಾಗಿದೆ. ಸಹಕಾರಿ ಬ್ಯಾಂಕುಗಳ ಮೂಲಕ ಸಾಲ ವಿತರಿಸುವ ಕೆಲಸಕ್ಕೆ ಸರಕಾರ ಮುಂದಾಗಿದೆ.ಈ ಯೋಜನೆ ಇಷ್ಟವಾಗಿದ್ದರೆ ಜನರಿಗೆ ತಿಳಿಸಿ ಮತ್ತು ನಿಮ್ಮ ಅಭಿಪ್ರಾಯ ತಿಳಿಸಿ.

Please follow and like us:
0
http://karnatakatoday.in/wp-content/uploads/2018/11/roadside-buisness-1024x576.jpghttp://karnatakatoday.in/wp-content/uploads/2018/11/roadside-buisness-150x104.jpgKarnataka Today's Newsಅಂಕಣಎಲ್ಲಾ ಸುದ್ದಿಗಳುಜೀವನೋಪಾಯಕ್ಕಾಗಿ ರಸ್ತೆ ಬದಿಗಳಲ್ಲಿ ಸಣ್ಣ ಸಣ್ಣ ವ್ಯಾಪಾರ ಮಾಡಿಕೊಂಡು ಬದುಕುತ್ತಿರುವ ಬಡ ವ್ಯಾಪಾರಿಗಳಿಗೆ ರಾಜ್ಯ ಸರ್ಕಾರ ಬಂಪರ್ ಆಫರ್ ಒಂದನ್ನು ನೀಡಿದೆ. ಬೀದಿ ಬದಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುವ ಎಲ್ಲ ಕುಟುಂಬಗಳಿಗೂ ಸರ್ಕಾರ ಈ ಯೋಜನೆಯ ಮೂಲಕ ನೆರವು ನೀಡಲಿದೆ, ಹಾಗಿದ್ದರೆ ಏನಿದು ಯೋಜನೆ ಯಾವ ರೀತಿ ಪಡೆದುಕೊಳ್ಳಬಹುದು ನೋಡೋಣ. ಮೊದಲೆನೆಯದಾಗಿ ಬೀದಿ ಬದಿ ವ್ಯಾಪಾರಿಗಳಿಗೆ ಸಂಕಷ್ಟವೇನೆಂದರೆ ಅದು ಹಣವನ್ನು ಜೋಡಿಸುವುದು, ಯಾಕೆಂದರೆ ಎಲ್ಲ ಸಮಯದಲ್ಲಿ ವ್ಯಾಪಾರ...Kannada News