ಬೆಂಗಳೂರಿನಲ್ಲಿ ಇನ್ನು ಮುಂದೆ ಕ್ಯಾಬ್ ಬುಕ್ ಮಾಡುವವರಿಗೆ ದೊಡ್ಡ ಶಾಕ್ ಎದುರಾಗಲಿದೆ.ಕರ್ನಾಟಕ ರಾಜ್ಯ ಬೇಡಿಕೆ ಆಧಾರಿತ ಸಂಚಾರ ತಂತ್ರಜ್ಞಾನ ಅಗ್ರಿಗೇಟರ್ಸ್‌ ನಿಯಮಗಳನ್ನು ಉಲ್ಲಂಘಿಸಿ, ಬೈಕ್‌ ಟ್ಯಾಕ್ಸಿಗಳನ್ನು ಕಾರ್ಯಾಚರಣೆಗೊಳಿಸುತ್ತಿದ್ದ ಹಿನ್ನೆಲೆಯಲ್ಲಿ ಓಲಾ ಕಂಪೆನಿಗೆ ನೀಡಿದ್ದ ಪರವಾನಗಿಯನ್ನು ಆರು ತಿಂಗಳ ಕಾಲ ಅಮಾನತುಗೊಳಿಸಿ ಆದೇಶ ಹೊರಡಿಸಿರುವ ರಾಜ್ಯ ಸಾರಿಗೆ ಪ್ರಾಧಿಕಾರವು, ತಕ್ಷಣವೇ ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆಯನ್ನು ಸ್ಥಗಿತಗೊಳಿಸುವಂತೆ ಸೂಚಿಸಿದೆ.

ಈ ಸಂಬಂಧ ಮಾ 18ರಂದು ಆದೇಶ ಹೊರಡಿಸಿರುವ ಪ್ರಾಧಿಕಾರವು, ಮೂರು ದಿನಗಳೊಳಗೆ 2021ರ ಜೂ 19ರವರೆಗೆ ಚಾಲ್ತಿಯಲ್ಲಿರುವ ಪರವಾನಗಿಯನ್ನು ಪ್ರಾಧಿಕಾರಕ್ಕೆ ಒಪ್ಪಿಸಬೇಕು. ಜತೆಗೆ ಕೂಡಲೇ ಟ್ಯಾಕ್ಸಿ ಸೇವೆಯನ್ನು ನಿಲ್ಲಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಆಯುಕ್ತರು ಅಮಾನತು ಆದೇಶವನ್ನು ಜಾರಿಗೊಳಿಸುವಂತೆ ಎಲ್ಲ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ (ಆರ್‌ಟಿಒ) ಮಾ 21ರಂದು ಸುತ್ತೋಲೆ ಹೊರಡಿಸಿದ್ದಾರೆ.

ಅಮಾನತು ಆದೇಶವನ್ನು ಉಲ್ಲಂಘಿಸಿ ಸೇವೆ ಒದಗಿಸುವ ಓಲಾ ಟ್ಯಾಕ್ಸಿಗಳನ್ನು ಜಪ್ತಿ ಮಾಡಿ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ. 25 ರಿಂದ ಓಲಾ ಆ್ಯಪ್‌ ಬಳಸಿ ಪ್ರಯಾಣಿಕರಿಗೆ ಸೇವೆ ಒದಗಿಸುವ ಟ್ಯಾಕ್ಸಿಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ಆಯುಕ್ತ ವಿಪಿ ಇಕ್ಕೇರಿ ಎಚ್ಚರಿಕೆ ನೀಡಿದ್ದಾರೆ. ವಾರದ ಹಿಂದೆಯೇ ನಮ್ಮ ಬೈಕ್‌ ಟ್ಯಾಕ್ಸಿ ಸೇವೆಯನ್ನು ಸ್ಥಗಿತಗೊಳಿಸಿದ್ದೇವೆ.

ರಾಜ್ಯ ಸರಕಾರದ ಸಹಯೋಗದೊಂದಿಗೆ ಕಾನೂನಿನ ಚೌಕಟ್ಟಿನಲ್ಲಿ ಪ್ರಾಯೋಗಿಕವಾಗಿ ಬೈಕ್‌ ಟ್ಯಾಕ್ಸಿ ಸೇವೆ ಮುಂದುವರಿಸಲು ಸೂಕ್ತ ಮಾರ್ಗೋಪಾಯಗಳನ್ನು ಕಂಡುಕೊಳ್ಳುವ ಉದ್ದೇಶ ಹೊಂದಿದ್ದೇವೆ,” ಎಂದು ಓಲಾ ಕಂಪೆನಿಯು ತಿಳಿಸಿದೆ. ಓಲಾ ಕಂಪೆನಿಯು ಪರವಾನಗಿ ನಿಯಮಗಳನ್ನು ಉಲ್ಲಂಘಿಸಿ, ಕಾನೂನುಬಾಹಿರವಾಗಿ ಬೈಕ್‌ ಟ್ಯಾಕ್ಸಿ ಒದಗಿಸುತ್ತಿರುವ ಕುರಿತು ಉಪ ಸಾರಿಗೆ ಆಯುಕ್ತರು ಹಾಗೂ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಯು (ಬೆಂಗಳೂರು ದಕ್ಷಿಣ) ಸಾರಿಗೆ ಪ್ರಾಧಿಕಾರಕ್ಕೆ ತನಿಖಾ ವರದಿ ಸಲ್ಲಿಸಿದ್ದರು.

ಓಲಾ ಟ್ಯಾಕ್ಸಿಗಳನ್ನು ನೆಚ್ಚಿಕೊಂಡು ಸಾವಿರಾರು ಚಾಲಕರು ಕೆಲಸ ಮಾಡುತ್ತಿದ್ದಾರೆ. ಜತೆಗೆ ಸುರಕ್ಷಿತ ಪ್ರಯಾಣ ಎನ್ನುವ ಕಾರಣಕ್ಕೆ ಸಹಸ್ರಾರು ಗ್ರಾಹಕರು ತಮ್ಮ ಸಂಚಾರಕ್ಕಾಗಿ ಓಲಾ ಸೇವೆಯನ್ನೇ ಅವಲಂಬಿಸಿದ್ದಾರೆ. ಈಗ ಸೇವೆ ಬಂದ್‌ ಆದರೆ, ಲಕ್ಷಾಂತರ ಮಂದಿಗೆ ತೊಂದರೆಯಾಗಲಿದೆ.

Please follow and like us:
0
http://karnatakatoday.in/wp-content/uploads/2019/03/ola-cab-1024x576.jpghttp://karnatakatoday.in/wp-content/uploads/2019/03/ola-cab-150x104.jpgKarnataka Today's Newsಅಂಕಣಆಟೋಬೆಂಗಳೂರಿನಲ್ಲಿ ಇನ್ನು ಮುಂದೆ ಕ್ಯಾಬ್ ಬುಕ್ ಮಾಡುವವರಿಗೆ ದೊಡ್ಡ ಶಾಕ್ ಎದುರಾಗಲಿದೆ.ಕರ್ನಾಟಕ ರಾಜ್ಯ ಬೇಡಿಕೆ ಆಧಾರಿತ ಸಂಚಾರ ತಂತ್ರಜ್ಞಾನ ಅಗ್ರಿಗೇಟರ್ಸ್‌ ನಿಯಮಗಳನ್ನು ಉಲ್ಲಂಘಿಸಿ, ಬೈಕ್‌ ಟ್ಯಾಕ್ಸಿಗಳನ್ನು ಕಾರ್ಯಾಚರಣೆಗೊಳಿಸುತ್ತಿದ್ದ ಹಿನ್ನೆಲೆಯಲ್ಲಿ ಓಲಾ ಕಂಪೆನಿಗೆ ನೀಡಿದ್ದ ಪರವಾನಗಿಯನ್ನು ಆರು ತಿಂಗಳ ಕಾಲ ಅಮಾನತುಗೊಳಿಸಿ ಆದೇಶ ಹೊರಡಿಸಿರುವ ರಾಜ್ಯ ಸಾರಿಗೆ ಪ್ರಾಧಿಕಾರವು, ತಕ್ಷಣವೇ ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆಯನ್ನು ಸ್ಥಗಿತಗೊಳಿಸುವಂತೆ ಸೂಚಿಸಿದೆ. ಈ ಸಂಬಂಧ ಮಾ 18ರಂದು ಆದೇಶ ಹೊರಡಿಸಿರುವ ಪ್ರಾಧಿಕಾರವು, ಮೂರು ದಿನಗಳೊಳಗೆ...Kannada News