ಮಹತ್ವದ ಬೆಳವಣೆಗೆಯಲ್ಲಿ ದೇಶಾದ್ಯಂತ ಏಕರೂಪದ ಚಾಲನಾ ಪರವಾನಗಿ ವಿತರಣೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ದೇಶಾದ್ಯಂತ ಏಕರೂಪ ಚಾಲನಾ ಪರವಾನಗಿ (ಡಿಎಲ್), ವಾಹನ ನೋಂದಣಿ ಪ್ರಮಾಣ ಪತ್ರ (ಆರ್​ಸಿ) ವಿತರಿಸಲು ಕೇಂದ್ರ ಮಹತ್ವದ ಹೆಜ್ಜೆ ಇರಿಸಿದೆ. ಈ ಸಂಬಂದ್ಧ ಹಳೆಯ ಡ್ರೈವಿಂಗ್ ಲೈಸನ್ಸ್ ಇನ್ನು ಮುಂದೆ ಕಾಣಸಿಗುವುದು ಕಷ್ಟ ಇದರಿಂದ ವಾಹನ ಚಾಲಕರಿಗೆ ದೊಡ್ಡ ಶಾಕ್ ಎನ್ನಬಹುದು ಯಾಕೆಂದರೆ ಬಹಳಷ್ಟು ಉಪಯುಕ್ತ ಬದಲಾವಣೆಗಳೊಂದಿಗೆ ಹೊಸ ಲೈಸನ್ಸ್ ಅಪ್ಡೇಟ್ ಆಗಲಿದೆ ಆದ್ದರಿಂದ ಬರುವ ಜುಲೈ ನಲ್ಲಿ ಈ ಪ್ರಕ್ರಿಯೆ ಆರಂಭವಾಗಲಿದೆ. ಈಗಿರುವ ಕಾರ್ಡ್ ಅನ್ನು ಯಾವ ರೀತಿ ಬದಲಾವಣೆ ಮಾಡಬೇಕು ಎನ್ನುವುದರ ಬಗ್ಗೆ ಶೀಘ್ರವೇ ಮಾಹಿತಿ ಹೊರಬೀಳಲಿದೆ. ಈ ಸಂಬಂಧ ಕೇಂದ್ರ ಸರ್ಕಾರ ಕಾರ್ಯಮಗ್ನವಾಗಿದ್ದು, 2019ರ ಜುಲೈನಿಂದ ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದೇ ವಿನ್ಯಾಸ, ಬಣ್ಣದ ಡಿಎಲ್ ಕಾರ್ಡ್ ವಿತರಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಮೂಲಗಳ ಪ್ರಕಾರ ಮುಂದಿನ ಜುಲೈನಿಂದ ದೇಶಾದ್ಯಂತ ಏಕರೂಪದ ಡ್ರೈವಿಂಗ್ ಲೈಸೆನ್ಸ್‌‌ (ಡಿಎಲ್) ಮತ್ತು ವಾಹನ ನೋಂದಣಿ ಸರ್ಟಿಫಿಕೇಟ್‌ಗಳು(ಆರ್‌ಸಿ) ನೀಡಲು ಕೇಂದ್ರ ರಸ್ತೆ ಸರಿಗೆ ಸಚಿವಾಲಯ ಚಿಂತನೆ ನಡೆಸಿದ್ದು, ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ವಿತರಿಸುವ ಡಿಎಲ್ ಹಾಗೂ ಆರ್‌ಸಿಗಳ ಬಣ್ಣ, ವಿನ್ಯಾಸ ಮತ್ತು ಭದ್ರತಾ ವೈಶಿಷ್ಟ್ಯಗಳು ಒಂದೇ ರೀತಿಯಾಗಿ ಇರಲಿವೆ.

ಸ್ಮಾರ್ಟ್ ಕಾರ್ಡ್‌ಗಳಲ್ಲಿ ಡಿಎಲ್ ಮತ್ತು ಆರ್‌ಸಿಗಳಲ್ಲಿ ಮೈಕ್ರೋಚಿಪ್‌ಗಳನ್ನು ಅಳವಡಿಸಲಿದ್ದು, ಕ್ಯೂ ಆರ್ ಕೋಡ್‌ ಗಳನ್ನೂ ಈ ಕಾರ್ಡ್ ಗಳು ಹೊಂದಿರುತ್ತವೆ. ಅವುಗಳಲ್ಲಿ ಎನ್‌ಎಫ್‌ಸಿ(ನಿಯರ್ ಫೀಲ್ಡ್ ಕಮ್ಯುನಿಕೇಶನ್) ವೈಶಿಷ್ಟ್ಯವನ್ನೂ ಅಳವಡಿಸಲಾಗುತ್ತಿದ್ದು ಮೆಟ್ರೋ ಮತ್ತು ಎಟಿಎಂ ಕಾರ್ಡ್ ಗಳ ರೀತಿಯಲ್ಲಿ ಬಳಸಬಹುದಾಗಿದೆ. ಇದರಿಂದ ಟ್ರಾಫಿಕ್ ಪೊಲೀಸರು ವಿಶೇಷ ಸಾಧನಗಳ ಮೂಲಕ ಈ ಕಾರ್ಡ್‌ಳನ್ನು ಸ್ಕ್ಯಾನ್ ಮಾಡಿ ಎಲ್ಲ ವಿವರ ಪಡೆಯಬಹುದು.

ಹೊಸದಾಗಿ ವಿತರಿಸಲಾಗುವ ಡಿಎಲ್, ಆರ್​ಸಿ ಸ್ಮಾರ್ಟ್ ಕಾರ್ಡ್ ರೂಪದಲ್ಲಿರುತ್ತವೆ. ಮೈಕ್ರೋಚಿಪ್ ಜತೆಗೆ ಕ್ಯೂಆರ್ ಕೋಡ್ ಕೂಡ ಅಳವಡಿಕೆ ಆಗಿರುತ್ತದೆ. ಮೆಟ್ರೋ ರೈಲು, ಎಟಿಎಂ ಕಾರ್ಡ್​ಗಳಲ್ಲಿರುವಂತೆ ನಿಯರ್ ಫೀಲ್ಡ್ ಕಮ್ಯುನಿಕೇಷನ್ (ಎನ್​ಎಫ್​ಸಿ ಕಾರ್ಡ್ ಅನ್ನು ಗುರುತಿಸುವ ಯಂತ್ರಕ್ಕೆ 4 ಸೆಂ ಮೀ  ಹತ್ತಿರ ತಂದಾಗ ಅದರಲ್ಲಿನ ವಿವರಗಳು ಯಂತ್ರದಲ್ಲಿ ಕಾಣಿಸುವುದು) ವ್ಯವಸ್ಥೆಯನ್ನು ಹೊಂದಿರುತ್ತದೆ. ಇದರಿಂದಾಗಿ ಸಂಚಾರ ಪೊಲೀಸರಿಗೆ ಸುಲಭವಾಗಿ ದಾಖಲೆ ಪರಿಶೀಲಿಸಲು ಮತ್ತು ಜುಲ್ಮಾನೆ ವಿಧಿಸಲು ಅನುಕೂಲವಾಗುತ್ತದೆ.

Please follow and like us:
0
http://karnatakatoday.in/wp-content/uploads/2018/10/DL-karnataka-1024x576.pnghttp://karnatakatoday.in/wp-content/uploads/2018/10/DL-karnataka-150x104.pngKarnataka Today's Newsಅಂಕಣಆಟೋಎಲ್ಲಾ ಸುದ್ದಿಗಳುಮಹತ್ವದ ಬೆಳವಣೆಗೆಯಲ್ಲಿ ದೇಶಾದ್ಯಂತ ಏಕರೂಪದ ಚಾಲನಾ ಪರವಾನಗಿ ವಿತರಣೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ದೇಶಾದ್ಯಂತ ಏಕರೂಪ ಚಾಲನಾ ಪರವಾನಗಿ (ಡಿಎಲ್), ವಾಹನ ನೋಂದಣಿ ಪ್ರಮಾಣ ಪತ್ರ (ಆರ್​ಸಿ) ವಿತರಿಸಲು ಕೇಂದ್ರ ಮಹತ್ವದ ಹೆಜ್ಜೆ ಇರಿಸಿದೆ. ಈ ಸಂಬಂದ್ಧ ಹಳೆಯ ಡ್ರೈವಿಂಗ್ ಲೈಸನ್ಸ್ ಇನ್ನು ಮುಂದೆ ಕಾಣಸಿಗುವುದು ಕಷ್ಟ ಇದರಿಂದ ವಾಹನ ಚಾಲಕರಿಗೆ ದೊಡ್ಡ ಶಾಕ್ ಎನ್ನಬಹುದು ಯಾಕೆಂದರೆ ಬಹಳಷ್ಟು ಉಪಯುಕ್ತ ಬದಲಾವಣೆಗಳೊಂದಿಗೆ ಹೊಸ ಲೈಸನ್ಸ್ ಅಪ್ಡೇಟ್ ಆಗಲಿದೆ ಆದ್ದರಿಂದ...Kannada News