ಭಾರತ ಈಗ ಬಲಿಷ್ಠ ಆರ್ಥಿಕತೆಯ ದೇಶವಾಗಿ ಮುನ್ನುಗುತ್ತಿದೆ ಆದರೂ ಇಲ್ಲಿನ ಯುವಜನತೆಗೆ ಯಾವುದೇ ಒಂದು ವ್ಯಾಪಾರ ವ್ಯವಹಾರ ಮಾಡಬೇಕೆಂದರೆ ಬ್ಯಾಂಕುಗಳಿಂದ ಸಲ ಪಡೆಯಲು ಅದೆಷ್ಟೋ ಯೋಜನೆಗಳಿದ್ದರು ಕೂಡ ಅಲೆದಾಟ, ಕಾದಾಟ, ಸಾಕ್ಷಿಗಳು, ಬೇಜವಾಬ್ದಾರಿ ತೋರಿಸುವ ಬ್ಯಾಂಕ್ ಸಿಬ್ಬಂದಿಗಳು, ಕಾಗದ ಪಾತ್ರಗಳು, ಬ್ಯಾಂಕ್ ಶಾಖೆಯಿಂದ ಶಾಖೆಗೆ ಅಲೆದಾಟ ತಪ್ಪಿದ್ದಲ್ಲ ಇದರಿಂದ ಜನತೆ ರೋಸಿ ಹೋಗಿದೆ. ಇನ್ನು ನಿಮಗೆ ಈ ತೊಂದರೆಗಳು ಕಾಡುವುದಿಲ್ಲ. ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಉತ್ತೇಜಿಸಲು 12 ನೀತಿಗಳನ್ನು ಕೇಂದ್ರ ಸರಕಾರ ಜಾರಿಗೊಳಿಸಿದೆ. ಇದರಲ್ಲಿ 59 ನಿಮಿಷಗಳಲ್ಲಿ 1 ಕೋಟಿ ರೂ ತನಕ ಸಾಲ ನೀಡುವ ಯೋಜನೆಯೂ ಪ್ರಮುಖ. ದೇಶದಲ್ಲಿ ನೋಟು ಅಮಾನ್ಯತೆ ಮತ್ತು ಜಿಎಸ್ಟಿ ಬಂದ ಮೇಲೆ ಸಣ್ಣ ವ್ಯಾಪಾರಿಗಳಿಗೆ ಉದ್ದಿಮೆದಾರರಿಗೆ ಸ್ವಲ್ಪ ಮಟ್ಟಿನ ಹೊಡೆತ ಬಿದ್ದಿತ್ತು.

ಆರಂಭಿಕ ದಿನಗಳಲ್ಲಿ ನಗದು ಕೊರತೆ ಹಾಗೂ ಸಾಲದ ಪೂರೈಕೆಯಲ್ಲಿ ವ್ಯತ್ಯಯದಿಂದ ಸಾಕಷ್ಟು ತೊಂದರೆಗೆ ಸಿಲುಕಿದ್ದ ದೇಶದ ಸಣ್ಣ ಮತ್ತು ಮಧ್ಯಮ ವಲಯದ ಉದ್ದಿಮೆಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿರುವ ಸುಲಭ ಹಾಗೂ ತ್ವರಿತ ಸಾಲ ಯೋಜನೆ ಅನುಕೂಲಕರವಾಗಿದೆ. ಇದು ಹಲವು ಆಯಾಮಗಳಲ್ಲಿ ಆರ್ಥಿಕತೆಗೆ ಸಹಕಾರಿ. ಮೊದಲನೆಯದಾಗಿ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ಇನ್ನು ಸುಲಭವಾಗಿ ಸಾಲ ಸಿಗಲಿದೆ.

ಇದುವರೆಗೆ ಬ್ಯಾಂಕ್‌ಗಳು ಎಂಎಸ್‌ಎಂಇಗಳಿಗೆ ಸಾಲ ವಿತರಿಸಲು ಹಿಂದೇಟು ಹಾಕುತ್ತಿದ್ದವು. ಬಹುತೇಕ ಎಂಎಸ್‌ಎಂಇಗಳು ಅಸಂಘಟಿತ ವಲಯದಲ್ಲಿರುವುದರಿಂದ ಸಾಲ ಕೊಡುವ ರಿಸ್ಕ್‌ ದೊಡ್ಡದಾಗಿತ್ತು. ಹೀಗಾಗಿ ಬ್ಯಾಂಕ್‌ಗಳು ಅಂಜುತ್ತಿದ್ದವು. ಈ ಸಮಸ್ಯೆ ಇನ್ನು ಬಗೆಹರಿಯಲಿದೆ. ಮುದ್ರಾ ಸಾಲ ಯೋಜನೆಯಲ್ಲಿ ಸಣ್ಣ ಪುಟ್ಟ ವರ್ತಕರಿಗೆ 10 ಲಕ್ಷ ರೂ ತನಕ ಸಾಲ ಸಿಗುತ್ತದೆ.

ಆದರೆ ಎಂಎಸ್‌ಎಂಇಗೆ 1 ಕೋಟಿ ರೂ. ತನಕ ಸಾಲ ಸಿಗುವುದರಿಂದ ಈ ಯೋಜನೆಯನ್ನು ಮುದ್ರಾ ಯೋಜನೆಯ ಸೋದರ ಎನ್ನಬಹುದು. ಒಂದು ವೇಳೆ ಎಂಎಸ್‌ಎಂಇಗಳಿಗೆ ಸಾಲದ ಹಾದಿ ಸುಗಮವಾದರೆ, ವಿಶ್ವ ಬ್ಯಾಂಕ್‌ನ ರಾಂಕಿಂಗ್ ನಲ್ಲಿ ಮತ್ತಷ್ಟು ಸುಧಾರಣೆಗೂ ಕಾರಣವಾಗಲಿದೆ.

ಸಾಮಾನ್ಯವಾಗಿ ಸದ್ಯದ ವ್ಯವಸ್ಥೆಯಲ್ಲಿ ಸಾಲದ ಅರ್ಜಿ, ಅದರ ಪರಿಶೀಲನೆ, ಸಾಲ ಮಂಜೂರು ಸೇರಿದಂತೆ ಈ ಪ್ರಕ್ರಿಯೆಗೆ 20-25 ದಿನಗಳು ಬೇಕು. ಈ ಅವಧಿಯನ್ನು 59 ನಿಮಿಷಕ್ಕೆ ಇಳಿಸಲಾಗಿದೆ. ಸಾಲ ಮಂಜೂರಾದ ಬಳಿಕ ವಾರದೊಳಗೆ ಸಾಲವು ಉದ್ಯಮಿಗಳಿಗೆ ಸಿಗುತ್ತದೆ. ಸಾಲ ಪಡೆಯಲು ಕೆಳಗಿನ ಫೋಟೋದಲ್ಲಿ ನೀಡಿರುವ ವೆಬ್ಸೈಟ್ ಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಿ.

loan in 59 minutes

ಇಲ್ಲಿ ನಿಮಗೆ ಕೆಲ ಪ್ರಶ್ನೆಗಳನ್ನು, ನಿಮ್ಮ ಕಂಪನಿಯ ವಿವರ, ವ್ಯವಸ್ಥಾಪಕರು, ನಿರ್ದೇಶಕರು ಸಾಲದ ವಿವರ ಹಾಗು ಜಿಎಸ್ಟಿ ಬಗ್ಗೆ ವಿವರಿಸಿ. ನೀವು ನೀಡಿದ ವಿವರಗಳು ಸಮರ್ಪಕವಾಗಿದ್ದರೆ ‘ಸಾಲ ಮಂಜೂರಾತಿ ಪತ್ರ’ವು ಬರುತ್ತದೆ. ಅದನ್ನು ಡೌನ್‌ಲೋಡ್‌ ಮಾಡಿಕೊಳ್ಳಿ. ಎಲ್ಲರಿಗು ಈ ಉತ್ತಮ ಮಾಹಿತಿಯನ್ನು ತಿಳಿಸಿ.

Please follow and like us:
0
http://karnatakatoday.in/wp-content/uploads/2018/11/59-minutes-loan-1024x576.jpghttp://karnatakatoday.in/wp-content/uploads/2018/11/59-minutes-loan-150x104.jpgKarnataka Today's Newsಅಂಕಣಎಲ್ಲಾ ಸುದ್ದಿಗಳುಹಣಭಾರತ ಈಗ ಬಲಿಷ್ಠ ಆರ್ಥಿಕತೆಯ ದೇಶವಾಗಿ ಮುನ್ನುಗುತ್ತಿದೆ ಆದರೂ ಇಲ್ಲಿನ ಯುವಜನತೆಗೆ ಯಾವುದೇ ಒಂದು ವ್ಯಾಪಾರ ವ್ಯವಹಾರ ಮಾಡಬೇಕೆಂದರೆ ಬ್ಯಾಂಕುಗಳಿಂದ ಸಲ ಪಡೆಯಲು ಅದೆಷ್ಟೋ ಯೋಜನೆಗಳಿದ್ದರು ಕೂಡ ಅಲೆದಾಟ, ಕಾದಾಟ, ಸಾಕ್ಷಿಗಳು, ಬೇಜವಾಬ್ದಾರಿ ತೋರಿಸುವ ಬ್ಯಾಂಕ್ ಸಿಬ್ಬಂದಿಗಳು, ಕಾಗದ ಪಾತ್ರಗಳು, ಬ್ಯಾಂಕ್ ಶಾಖೆಯಿಂದ ಶಾಖೆಗೆ ಅಲೆದಾಟ ತಪ್ಪಿದ್ದಲ್ಲ ಇದರಿಂದ ಜನತೆ ರೋಸಿ ಹೋಗಿದೆ. ಇನ್ನು ನಿಮಗೆ ಈ ತೊಂದರೆಗಳು ಕಾಡುವುದಿಲ್ಲ. ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು...Kannada News