ಪ್ರೀತಿ  ಎಂಬ ಎರಡೂವರೆ ಅಕ್ಷರವನ್ನು ನಿರೂಪಿಸುವುದು ಬಹಳ ಕಷ್ಟ. ಯಾಕೆಂದರೆ ಅದನ್ನು ಪದಗಳಲ್ಲಿ ವರ್ಣಿಸುವುದಕ್ಕೆ ಸಾಧ್ಯ ಇಲ್ಲ. ಅದೇನೇ ಇದ್ದರೂ ಅದನ್ನು ಅನುಭವಿಸಿಯೇ ತೀರಬೇಕು.

ಅದರಲ್ಲೂ ನಿಜವಾದ ಪ್ರೀತಿ ಅಂದರೆ ಯಾವುದು? ನಿಜವಾದ ಪ್ರೀತಿ ಅಂದರೇನು? ನಿಜವಾದ ಪ್ರೀತಿಯನ್ನು ಗುರುತಿಸುವುದು ಹೇಗೆ? ಎಂಬೆಲ್ಲಾ ಪ್ರಶ್ನೆಗಳು ಪ್ರೀತಿಸಿದವರ, ಮನದಲ್ಲಿ ಮೂಡುವುದು ಸಹಜ. ಯಾರದೋ ಪ್ರೀತಿಯಲ್ಲಿ ಬಿದ್ದಾಗ ನಿಮ್ಮನ್ನು ನಿಮಗೆ ನಿಯಂತ್ರಿಸಿಕೊಳ್ಳುವುದು ಕಷ್ಟವಾಗಬಹುದು. ಯಾಕೆಂದರೆ ಭಾವನೆಗಳನ್ನು ಹಿಡಿದಿಟ್ಟುಕೊಳ್ಳುವುದು ಬಹಳ ಕಷ್ಟ. ಐ ಲವ್ ಯೂ’ ಅಂತ್ಹೇಳಿ ಅವರ ಪ್ರತಿಕ್ರಿಯೆ ಮತ್ತು ಮುಂದಿನ ನಿರ್ಧಾರಕ್ಕಾಗಿ ತುದಿಗಾಲಲ್ಲಿ ನಿಂತಿರುತ್ತೀರಿ.

ಆದರೆ ಪ್ರತಿಕ್ರಿಯೆ ಬಂದಿಲ್ಲವಾದರೆ ತುಸು ಗಾಬರಿಯಾಗುವುದು ಸಹಜ. ಹಾಗೆಂದು ತೀರಾ ನಿರಾಶರಾಗಬೇಕಿಲ್ಲ. ಯಾಕೆಂದರೆ ಪ್ರೀತಿಯ ವಿಷಯದಲ್ಲಿ ಯೋಚಿಸಿ ಮುಂದುವರಿಯುವುದು ಒಳ್ಳೆಯದು. ಇನ್ನು ಪ್ರೀತಿಯ ವಿಚಾರಕ್ಕೆ ಬಂದಾಗ ಈ ಐದು ರಾಶಿಯವರು ಕೊನೆಯತನಕ ಒಬ್ಬರನ್ನೇ ಇಷ್ಟ ಪಡುತ್ತಾರಂತೆ ಒಂದು ವೇಳೆ ಅವರ ಪ್ರೀತಿ ಸಿಗದಿದ್ದರೂ ಕೂಡ.

ಒನ್ ಸೈಡೆಡ್ ಲವ್ ರೀತಿ, ಹಾಗಿದ್ದರೆ ಆ ರಾಶಿಯ ಪ್ರೇಮಿಗಳು ಹೇಗಿರುತ್ತಾರೆ ಎಂದು ತಿಳಿಯೋಣ ಬನ್ನಿ. ಮೇಷ ರಾಶಿಯವರು ಒಬ್ಬರನ್ನ ಇಷ್ಟಪಟ್ಟರೆ ಕೊನೆಯವರೆಗೂ ತಮ್ಮ ಸಂಬಂಧವನ್ನು ಬಹಳ ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ ಮತ್ತು ತನ್ನ ಜೊತೆಗಾರ್ತಿಗೆ ಯಾವ ರೀತಿಯ ನೋವಾಗದಂತೆ ನೋಡಿಕೊಳ್ಳುತ್ತಾರೆ.

 

ಮಿಥುನ ರಾಶಿಯವರು ಬಹಳ ಆಕರ್ಷಕ ಗುಣವನ್ನು ಹೊಂದಿರುತ್ತಾರೆ ಇವರನ್ನ ಕಂಡರೆ ಎಲ್ಲರಿಗು ಬಹಳ ಇಷ್ಟ ಆದರೆ ಇವರಿಗೆ ನಿಜವಾದ ಪ್ರೀತಿ ಅಷ್ಟು ಸುಲಭವಾಗಿ ಸಿಗಲ್ಲ. ಪ್ರೀತಿಯಲ್ಲಿ ನೋವುಂಡಾಗ ಇವರನ್ನ ಸಂತೈಸುವುದು ಬಹಳ ಕಷ್ಟ. ಕರ್ಕ ರಾಶಿಯವರು ಸಂಬಂಧಗಳಿಗೆ ಬೆಲೆ ನೀಡುತ್ತಾರೆ ಮತ್ತು ಭಾವನಾತ್ಮಕ ವ್ಯಕ್ತಿಗಳು ಸ್ವಲ್ಪ ನೋವಾದರೂ ಕೂಡ ಸಹಿಸಲಾರರು, ಆದಷ್ಟು ತಮ್ಮ ಸಂಬಂಧವನ್ನು ಗಟ್ಟಿ ಇರುವಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತಾರೆ.

ಕನ್ಯಾ ಮತ್ತು ಮೀನಾ ರಾಶಿಯವರಲ್ಲಿ ಸ್ವಲ್ಪ ಸಾಮ್ಯತೆ ಇದೆ. ಪ್ರೀತಿಯಲ್ಲಿ ನಿಷ್ಠೆ, ತ್ಯಾಗ, ಹೊಂದಿಕೊಂಡು ಹೋಗುವ ಗುಣ ಇವರದ್ದು. ಒಬ್ಬರ ಅಗಲಿಕೆ ಎಷ್ಟೊಂದು ನೋವು ನೀಡುತ್ತದೆ ಎನ್ನುವ ಸತ್ಯ ಇವರಿಗೆ ಗೊತ್ತು ಆದ್ದರಿಂದ ತಮ್ಮ ಜೀವನದಲ್ಲಿ ಬಂದು ಹೋಗುವ ವ್ಯಕ್ತಿಗಳಿಗೆ ಅಪಾರ ಗೌರವ ನೀಡುತ್ತಾರೆ. ಆದರೂ ಕೂಡ ಒಮ್ಮೊಮ್ಮೆ ಜೀವನದಲ್ಲಿ ಇವರಿಗೆ ನಿಜವಾದ ಪ್ರೀತಿ ಸಿಗದೇ ತುಂಬಾ ಕಷ್ಟಪಡುತ್ತಾರೆ. ಮಾಹಿತಿ ಇಷ್ಟವಾಗಿದ್ದರೆ ದಯವಿಟ್ಟು ಎಲ್ಲರಿಗು ತಲುಪಿಸಿ.

 

Please follow and like us:
0
http://karnatakatoday.in/wp-content/uploads/2018/10/LOVE-ONE-SIDE-1024x576.jpghttp://karnatakatoday.in/wp-content/uploads/2018/10/LOVE-ONE-SIDE-150x104.jpgeditorಅಂಕಣಎಲ್ಲಾ ಸುದ್ದಿಗಳುಜ್ಯೋತಿಷ್ಯಪ್ರೀತಿ  ಎಂಬ ಎರಡೂವರೆ ಅಕ್ಷರವನ್ನು ನಿರೂಪಿಸುವುದು ಬಹಳ ಕಷ್ಟ. ಯಾಕೆಂದರೆ ಅದನ್ನು ಪದಗಳಲ್ಲಿ ವರ್ಣಿಸುವುದಕ್ಕೆ ಸಾಧ್ಯ ಇಲ್ಲ. ಅದೇನೇ ಇದ್ದರೂ ಅದನ್ನು ಅನುಭವಿಸಿಯೇ ತೀರಬೇಕು. ಅದರಲ್ಲೂ ನಿಜವಾದ ಪ್ರೀತಿ ಅಂದರೆ ಯಾವುದು? ನಿಜವಾದ ಪ್ರೀತಿ ಅಂದರೇನು? ನಿಜವಾದ ಪ್ರೀತಿಯನ್ನು ಗುರುತಿಸುವುದು ಹೇಗೆ? ಎಂಬೆಲ್ಲಾ ಪ್ರಶ್ನೆಗಳು ಪ್ರೀತಿಸಿದವರ, ಮನದಲ್ಲಿ ಮೂಡುವುದು ಸಹಜ. ಯಾರದೋ ಪ್ರೀತಿಯಲ್ಲಿ ಬಿದ್ದಾಗ ನಿಮ್ಮನ್ನು ನಿಮಗೆ ನಿಯಂತ್ರಿಸಿಕೊಳ್ಳುವುದು ಕಷ್ಟವಾಗಬಹುದು. ಯಾಕೆಂದರೆ ಭಾವನೆಗಳನ್ನು ಹಿಡಿದಿಟ್ಟುಕೊಳ್ಳುವುದು ಬಹಳ ಕಷ್ಟ. ಐ ಲವ್...Kannada News