ಪ್ರಪಂಚದಲ್ಲಿ ಈರುಳ್ಳಿ ಬಳಕೆ ಮಾಡದೆ ಇರುವವರನ್ನ ಹುಡುಕುವುದು ಅಸಾಧ್ಯ ಏನು ಹೇಳಿದರೆ ತಪ್ಪಾಗಲ್ಲ, ಹೆಚ್ಚಿನ ಪದಾರ್ಥಗಳ ತಯಾರಿಕೆಯಲ್ಲಿ ಈರುಳ್ಳಿಯನ್ನ ಬಳಕೆ ಮಾಡಲಾಗುತ್ತದೆ. ಇನ್ನು ದೇಶದ ಆರ್ಥಿಕತೆ ಈಗ ಯಾವ ಮಟ್ಟಕ್ಕೆ ಬಂದಿದೆ ಅನ್ನುವುದರ ಅರಿವು ಪ್ರತಿಯೊಬ್ಬರಿಗೂ, ಹೌದು ಸ್ನೇಹಿತರೆ ದೇಶದ ಆರ್ಥಿಕತೆ ಪಾತಾಳಕ್ಕೆ ಕುಸಿದಿದ್ದು ಎಲ್ಲಾ ಕಂಪನಿಗಳು ತುಂಬಾ ನಷ್ಟವನ್ನ ಅನುಭವಿಸುತ್ತಿದೆ ಮತ್ತು ಕೆಲವು ಕಂಪನಿಗಳು ಕೆಲಸದವರನ್ನ ಕೆಲಸದಿಂದ ತೆಗೆದು ಹಾಕುತ್ತಿದ್ದಾರೆ. ಇನ್ನು ದೇಶದಲ್ಲಿ ಚಿನ್ನ ಮತ್ತು ಪೆಟ್ರೋಲ್ ಗಳ ಬೆಲೆ ಏರಿಕೆ ಆಗಿರವುದು ಮಾತ್ರವಲ್ಲದೆ ದಿನನಿತ್ಯ ಬಳಕೆ ಮಾಡುವ ವಸ್ತುಗಳ ಬೆಲೆ ಕೂಡ ಗಗನಕ್ಕೆ ಏರುತ್ತಿದೆ.

ಇನ್ನು ನಾವು ದಿನನಿತ್ಯ ಅಡುಗೆ ಮಾಡಲು ಬಳಕೆ ಮಾಡುವ ಈರುಳ್ಳಿಯ ಬೆಲೆ ಈಗ ಗಗನಕ್ಕೆ ಏರಿದುವು ಗ್ರಾಹಕರಿಗೆ ಶಾಕ್ ನೀಡಿದೆ, ಇನ್ನು ಈರುಳ್ಳಿ ಬೆಲೆ ಈಗ ಗಗನಕ್ಕೆ ಏರಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಜಾಸ್ತಿ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಬೆಲೆ ಏರಿಕೆ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ದೇಶದಲ್ಲಿ ಈರುಳ್ಳಿ ಬೆಲೆ ಗಗನಕ್ಕೆ ಏರಿದೆ, ಸೋಮವಾರ ಅಂದರೆ ಇಂದು ಅಂಗಡಿಗಳಲ್ಲಿ ಒಂದು ಕೆಜಿ ಈರುಳ್ಳಿಯ ಬೆಲೆ ನೂರು ರೂಪಾಯಿ ಆಗಿದೆ, ಮಾರುಕಟ್ಟೆಗಳಿಗೆ ಈರುಳ್ಳಿ ಪೂರೈಕೆ ಪ್ರಮಾಣ ಕಡಿಮೆಯಾದ ಕಾರಣ ಈರುಳ್ಳಿ ಬೆಲೆ ಗಗನಕ್ಕೆ ಏರಿದೆ ಎಂದು ಹೇಳಲಾಗುತ್ತಿದೆ.

Onion Prices

ಕಳೆದ ತಿಂಗಳು ಈರುಳ್ಳಿ ಬೆಲೆ ಸ್ವಲ್ಪ ಕಡಿಮೆ ಆಗಿತ್ತು ಆದರೆ ದಿಡೀರ್ ಆಗಿ ಶೇಕಡಾ 10 ರಷ್ಟು ಜಾಸ್ತಿ ಆಗಿದೆ ಈರುಳ್ಳಿ ಬೆಲೆ, ಇನ್ನು ಈಗ ಈರುಳ್ಳಿ ಬೆಲೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಒಂದು ದಿಟ್ಟ ನಿರ್ಧಾರವನ್ನ ತೆಗೆದುಕೊಂಡಿದ್ದು ಗ್ರಾಹಕರು ಸ್ವಲ್ಪ ನಿಟ್ಟುಸಿರಿ ಬಿಡುವಂತೆ ಮಾಡಿದೆ. ಹೌದು ಈರುಳ್ಳಿ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಗ್ರಾಹಕರಿಗೆ ಕೇಂದ್ರ ಸರ್ಕಾರ ನೆಮ್ಮದಿಯ ಸುದ್ದಿಯನ್ನ ನೀಡಿದೆ, ಈರುಳ್ಳಿ ಮೇಲಿನ ದುಬಾರಿ ದರವನ್ನ ನಿಯಂತ್ರಣ ಮಾಡುವ ಸಲುವಾಗಿ ಕೇಂದ್ರ ಸರ್ಕಾರ ಒಂದು ಲಕ್ಷ ಟಾನ್ ಈರುಳ್ಳಿಯನ್ನ ಆಮದು ಮಾಡಿಕೊಳ್ಳಲು ತೀರ್ಮಾನವನ್ನ ಮಾಡಿದೆ.

ಇನ್ನು ಎರಡು ಸಾವಿರ ಟಾನ್ ಈರುಳ್ಳಿ ಶೀಘ್ರದಲ್ಲೇ ಬರಲಿದ್ದು ಉಳಿದದ್ದು ಆದಷ್ಟು ಬೇಗ ಬರಲಿದೆ, ಸಸ್ಯಾಹಾರವೇ ಇರಲಿ ಮಾಂಸಾಹಾರವೇ ಇರಲಿ ಈರುಳ್ಳಿ ಇದ್ದರೆ ಮಾತ್ರ ಅಡುಗೆ ಪರಿಪೂರ್ಣವಾಗುತ್ತದೆ ಆದರೆ ದಿನದಿಂದ ದಿನಕ್ಕೆ ಈರುಳ್ಳಿ ಬೆಲೆ ಏರುತ್ತಿರುವುದು ಗ್ರಾಹಕರಿಗೆ ಬೇಸರ ತರುವಂತೆ ಮಾಡಿದೆ. ಇನ್ನು ಕಳೆದ ವಾರ 70 -80 ರೂಪಾಯಿ ಇದ್ದ ಈರುಳ್ಳಿ ಬೆಲೆ ಈಗ 100 ರೂಪಾಯಿ ಆಗಿದೆ, ಮಳೆ ಹೆಚ್ಚಾದ ಕಾರಣ ಬಹುತೇಕ ಈರುಳ್ಳಿಗಳು ಕೊಳೆತು ಹೋಗಿದೆ ಮತ್ತು ಮಳೆಯಿಂದ ಬೆಳೆಗಳು ನಾಶವಾದ ಕಾರಣ ಇರುಲ್ಲೆ ಬೆಲೆ ಏರಿಕೆ ಆಗಿದೆ ಎಂದು ಹೇಳಲಾಗುತ್ತಿದೆ.

Onion Prices

Please follow and like us:
error0
http://karnatakatoday.in/wp-content/uploads/2019/11/Onion-prices-in-India-1024x576.jpghttp://karnatakatoday.in/wp-content/uploads/2019/11/Onion-prices-in-India-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಪ್ರಪಂಚದಲ್ಲಿ ಈರುಳ್ಳಿ ಬಳಕೆ ಮಾಡದೆ ಇರುವವರನ್ನ ಹುಡುಕುವುದು ಅಸಾಧ್ಯ ಏನು ಹೇಳಿದರೆ ತಪ್ಪಾಗಲ್ಲ, ಹೆಚ್ಚಿನ ಪದಾರ್ಥಗಳ ತಯಾರಿಕೆಯಲ್ಲಿ ಈರುಳ್ಳಿಯನ್ನ ಬಳಕೆ ಮಾಡಲಾಗುತ್ತದೆ. ಇನ್ನು ದೇಶದ ಆರ್ಥಿಕತೆ ಈಗ ಯಾವ ಮಟ್ಟಕ್ಕೆ ಬಂದಿದೆ ಅನ್ನುವುದರ ಅರಿವು ಪ್ರತಿಯೊಬ್ಬರಿಗೂ, ಹೌದು ಸ್ನೇಹಿತರೆ ದೇಶದ ಆರ್ಥಿಕತೆ ಪಾತಾಳಕ್ಕೆ ಕುಸಿದಿದ್ದು ಎಲ್ಲಾ ಕಂಪನಿಗಳು ತುಂಬಾ ನಷ್ಟವನ್ನ ಅನುಭವಿಸುತ್ತಿದೆ ಮತ್ತು ಕೆಲವು ಕಂಪನಿಗಳು ಕೆಲಸದವರನ್ನ ಕೆಲಸದಿಂದ ತೆಗೆದು ಹಾಕುತ್ತಿದ್ದಾರೆ. ಇನ್ನು ದೇಶದಲ್ಲಿ ಚಿನ್ನ ಮತ್ತು ಪೆಟ್ರೋಲ್...Film | Devotional | Cricket | Health | India