ಈ ಮೊಬೈಲ್ ಯುಗದಲ್ಲಿ ನಾವು ಎಷ್ಟು ಮುಂದುವರಿದಿದ್ದೇವೆ ಎಂದರೆ ಹೇಳತೀರದು. ಹೌದು ಡಿಜಿಟಲ್ ಯುಗ ಬೆಳೆಯುತ್ತಿದ್ದಂತೆ ಇಲ್ಲಿ ನಾನಾ ಬಗೆಯ ಆಚರಣೆ, ವಿವಿಧ ಬಗೆಯ ಮೋಜು ಮಸ್ತಿಗಳು ಕೂಡ ಹೆಚ್ಚುತ್ತಿವೆ, ಈಗಂತೂ ಆನ್ಲೈನ್ ಯುಗ, ಪ್ರತಿಯೊಬ್ಬರ ಹತ್ತಿರವೂ ಮೊಬೈಲ್, ಲ್ಯಾಪ್ಟಾಪ್, ಇಂಟರ್ನೆಟ್ ಸೇವೆಗಳಿವೆ. ಇದರ ಸಹಾಯದಿಂದ ಯಾವೆಲ್ಲ ರೀತಿಯಾಗಿ ಜನರನ್ನು ಮೋಸಗೊಳಿಸುತ್ತಾರೆ ಎನ್ನುವುದಕ್ಕೆ ಇಲ್ಲಿದೆ ಒಂದು ನೈಜ ಉದಾಹರಣೆ ಹೌದು. ದಿನವೊಂದಕ್ಕೆ 20 ಲಕ್ಷಕ್ಕೂ ಹೆಚ್ಚು ಸಂಪಾದಿಸುತ್ತಿದ್ದಳು ಈ ಮಹಿಳೆ ಮತ್ತು ಇವರ ಗ್ಯಾಂಗ್ ಇಷ್ಟಕ್ಕೂ ಇವರು ಮಾಡುತ್ತಿದ್ದ ಕೆಲಸವೇನು ಎಂದು ಕೇಳಿದರೆ ನೀವು ಕೂಡ ಶಾಕ್ ಆಗುವಿರಿ.

ಈ ಬಗ್ಗೆ ಕಂಪ್ಲೀಟ್ ಹೇಳ್ತಿವಿ ಕೇಳಿ. ಹೈಟೆಕ್ ನಗರಗಳಾದ ಡೆಲ್ಲಿ, ಬೆಂಗಳೂರು, ಕೋಲ್ಕತ್ತಾ ಈ ಭಾಗದ ಯುವಕರಿಗೆ ಡೇಟಿಂಗ್ ಎಂದರೆ ಸಾಕು ಏನೋ ಒಂದು ಹುಚ್ಚು, ಗೆಳತಿಯರನ್ನು ಹುಡುಕಿ ಸ್ನೇಹ ಬೆಳೆಸಿ ಲಾಂಗ್ ಡ್ರೈವ್ ಮುಂತಾದ ಮೋಜು ಮಸ್ತಿ ಮಾಡುವುದು ಸರ್ವೇ ಸಾಮಾನ್ಯ. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ನೀತಾ ಶಂಕರ್ ಮತ್ತು ಸಂದೀಪ್ ಮಿತ್ರ ಎನ್ನುವ ಇಬ್ಬರು ಈಗ ಪೋಲೀಸರ ಅತಿಥಿಯಾಗಿದ್ದಾರೆ. ಇವರಿಬ್ಬರು ಡೇಟಿಂಗ್ ಹೆಸರಿನಲ್ಲಿ ಹಲವಾರು ವೆಬ್ಸೈಟ್ ಆರಂಭಿಸಿ ಅಲ್ಲಿ ಅಂದವಾದ ಹುಡುಗಿಯರ ಫೋಟೋ ಹಾಕಿ ತಮ್ಮ ತಂತ್ರ ಆರಂಭಿಸುತ್ತಾರೆ ಮತ್ತು ಇಲ್ಲಿ ನೀವು ಇವರ ಜೊತೆ ಸ್ನೇಹ ಬೆಳೆಸಲು ರಿಜಿಸ್ಟರ್ ಕೂಡ ಮಾಡಬೇಕಾಗುತ್ತದೆ.

ಹೀಗೆ ಮಾಡಿದ ನಂತರ ನಿಮಗೆ ಇವರ ಕಡೆಯಿಂದ ಕಾಲ್ ಬಂದು ಇಷ್ಟು ಚಾರ್ಜ್ ಆಗುತ್ತದೆ. ಈ ರೀತಿಯ ಸೇವೆ ಲಭ್ಯವಿದೆ ಎಂದು ಐಷಾರಾಮಿ ಜೀವನ ನಡೆಸುವ ಹುಡುಗರನ್ನೇ ಬಲೆಗೆ ಹಾಕಿಕೊಳ್ಳುತ್ತಾರೆ. ಕಾಲ್ ಸೆಂಟರ್ ಹೆಸರಿನಲ್ಲಿ ಈಗಾಗಲೇ ಇವರು ಬಂಗಾಳದಲ್ಲಿ ಹಲವು ಕಚೇರಿಗಳನ್ನು ಕೂಡ ತೆರೆದಿದ್ದರು, ಪಾಪ ಇಲ್ಲಿ ಅಮಾಯಕ ಹೆಣ್ಣು ಮಕ್ಕಳನ್ನು ಆಯುರ್ವೇದದ ಪ್ರಾಡಕ್ಟ್ ಮಾರುತ್ತಿದ್ದೇವೆ ಎಂದು ಹೇಳಿ ಕೆಲ್ಸಕ್ಕೆ ಇಟ್ಟುಕೊಂಡಿದ್ದರು ಎಂದು ತನಿಖೆಯಿಂದ ಬಯಲಾಗಿದೆ.

ಈ ವ್ಯವಹಾರ ತುಂಬಾ ವರ್ಷಗಳಿಂದ ನಡೆದಿದ್ದು ಕೋಟ್ಯಂತರ ರೂಪಾಯಿ ನಡೆಸಿದ್ದಾರೆ ಎನ್ನಲಾಗಿದೆ ತಾವು ಹೇಳಿದ ಯಾವುದೇ ಸೇವೆಯನ್ನು ಕೂಡ ನೀಡದೆ ಯುವಕರಿಗೆ ವಂಚಿಸಲಾಗಿದೆ. 600 ಕ್ಕೂ ಹೆಚ್ಚು ಜನರು ಇವರಿಂದ ಮೋಸ ಹೋಗಿದ್ದಾರೆ ಎನ್ನಲಾಗಿದೆ. ಬಹಳ ವರ್ಷಗಳಿಂದ ಈ ಅವ್ಯವಹಾರ ನಡೆಯುತ್ತಿದ್ದು ಬೆಳಕಿಗೆ ಬಂದದ್ದು ಮಾತ್ರ ಇತ್ತೀಚೆಗೇ ವ್ಯಕಿಯೊಬ್ಬರು 15 ಲಕ್ಷ ರು ಕಳೆದುಕೊಂಡು ಪೊಲೀಸರಿಗೆ ದೂರು ನೀಡಿದ ಬಳಿಕ. ಇನ್ನಾದರೂ ಯುವಕರು ಎಚ್ಛೆತ್ತುಕೊಳ್ಳಿ.

Please follow and like us:
0
http://karnatakatoday.in/wp-content/uploads/2018/09/20-LAKHS-A-DAY-CHEAT-1024x576.pnghttp://karnatakatoday.in/wp-content/uploads/2018/09/20-LAKHS-A-DAY-CHEAT-150x104.pngKarnataka Today's Newsಅಂಕಣಎಲ್ಲಾ ಸುದ್ದಿಗಳುಜ್ಯೋತಿಷ್ಯಮಂಗಳೂರುಈ ಮೊಬೈಲ್ ಯುಗದಲ್ಲಿ ನಾವು ಎಷ್ಟು ಮುಂದುವರಿದಿದ್ದೇವೆ ಎಂದರೆ ಹೇಳತೀರದು. ಹೌದು ಡಿಜಿಟಲ್ ಯುಗ ಬೆಳೆಯುತ್ತಿದ್ದಂತೆ ಇಲ್ಲಿ ನಾನಾ ಬಗೆಯ ಆಚರಣೆ, ವಿವಿಧ ಬಗೆಯ ಮೋಜು ಮಸ್ತಿಗಳು ಕೂಡ ಹೆಚ್ಚುತ್ತಿವೆ, ಈಗಂತೂ ಆನ್ಲೈನ್ ಯುಗ, ಪ್ರತಿಯೊಬ್ಬರ ಹತ್ತಿರವೂ ಮೊಬೈಲ್, ಲ್ಯಾಪ್ಟಾಪ್, ಇಂಟರ್ನೆಟ್ ಸೇವೆಗಳಿವೆ. ಇದರ ಸಹಾಯದಿಂದ ಯಾವೆಲ್ಲ ರೀತಿಯಾಗಿ ಜನರನ್ನು ಮೋಸಗೊಳಿಸುತ್ತಾರೆ ಎನ್ನುವುದಕ್ಕೆ ಇಲ್ಲಿದೆ ಒಂದು ನೈಜ ಉದಾಹರಣೆ ಹೌದು. ದಿನವೊಂದಕ್ಕೆ 20 ಲಕ್ಷಕ್ಕೂ ಹೆಚ್ಚು ಸಂಪಾದಿಸುತ್ತಿದ್ದಳು ಈ...Kannada News