ಪ್ರೀತಿ ಪ್ರೇಮ ಎಂದರೆ ಹಾಗೆ ಒಬ್ಬರೊನ್ನಬ್ಬರು ಅರ್ಥೈಸಿಕೊಂಡು ಬದುಕಿದರೆ ಬಾಳು ಸುಂದರ, ಪ್ರೀತಿಯ ಮೋಹಕ್ಕೆ ಬಿದ್ದು ತನ್ನ ಆಸೆಯನ್ನು ಈಡೇರಿಸಿಕೊಳ್ಳಲು ಬೇರೆ ಮಾರ್ಗ ಹಿಡಿದರೆ ಅದು ಖಂಡಿತ ಪ್ರೀತಿಯಲ್ಲ. ಇಂದಿನ ಈ ಲೋಕದಲ್ಲಿ ಪ್ರೀತಿಗಾಗಿ ಏನೆಲ್ಲಾ ಮಾಡಿದವರನ್ನು ನೀವು ನೋಡಿರುತ್ತೀರಿ, ಆದರೆ ಇದು ಸ್ವಲ್ಪ ಭಿನ್ನ ಒಮ್ಮೆ ನೋಡಿ.

ತಾನು ಪ್ರೀತಿಸಿದ ಹುಡುಗಿಗೆ ಅವಳು ಆಸೆಪಟ್ಟಿದ್ದನ್ನು ಕೊಡುವುದು ಪ್ರೀತಿಯಲ್ಲಿ ಹುಡುಗನ ಕರ್ತವ್ಯ ಆದರೆ ಇಲ್ಲೊಬ್ಬ ಪ್ರೇಮಿ ಇದಕ್ಕಾಗಿ ದುರ್ಮಾರ್ಗವನ್ನು ಹಿಡಿದು ಪೊಲೀಸರ ಅಥಿತಿಯಾಗಿದ್ದಾನೆ . ಇಷ್ಟಕ್ಕೂ ಇಂಥ ಮಾಡಿದ ಮಾಸ್ಟರ್ ಪ್ಲಾನ್ ಕೇಳಿದ್ರೆ ನೀವು ಬೆರಗಾಗುತ್ತೀರಿ. ಡೆಲ್ಲಿಯಲ್ಲಿ ನಡೆದ ಈ ಪ್ರೇಮಿಯ ಸ್ಟೋರಿ ಕೇಳಿ ತನ್ನ ಪ್ರೇಯಸಿಗಾಗಿ ದುಬಾರಿ ವಾಚ್ ಒಂದನ್ನು ಆನ್ಲೈನ್ ಮೂಲಕ ಖರೀದಿಸುತ್ತಾನೆ ಇಲ್ಲೇ ನೋಡಿ ಈತ ಬಳಸಿದ ಅಸ್ತ್ರ ಬೇಕು ಅಂತಾನೆ ಈತ ಬೇರೆ ಯಾರದ್ದೋ ವಿಳಾಸಕ್ಕೆ ಈ ವಾಚ್ ಬುಕ್ ಮಾಡುತ್ತಾನೆ.

ವಾಚ್ ಡೆಲಿವರಿ ಆಗುವ ಸಮಯಕ್ಕೆ ಕಾದು ಕುಳಿತಿದ್ದ ಈತ ಡೆಲಿವರಿ ಮ್ಯಾನ್ ಹತ್ತಿರ ಬಂದಾಗ ಆರ್ಡರ್ ತಗೆದುಕೊಂಡು ಈ ಎದುರಿನ ಕಟ್ಟಡದಲ್ಲಿ ನನ್ನ ತಂದೆ ಕೆಲಸ ಮಾಡುತ್ತಿದ್ದಾರೆ ಅವರ ಹತ್ತಿರ ಹೇಳಿದ್ದೇನೆ ಹಣ ತಗೆದುಕೊ ಎಂದು ಹೇಳುತ್ತಾನೆ. ಆತನ ನಯವಾದ ಮಾತಿಗೆ ಮರುಳಾದ ಡೆಲಿವರಿ ಹುಡುಗ ಪಕ್ಕದ ಕಟ್ಟಡದಲ್ಲಿ ವಿಚಾರಿಸಿದಾಗ ಅವರು ತಾವು ಯಾವುದೇ ಆರ್ಡರ್ ಬುಕ್ ಮಾಡಿಲ್ಲ ಎಂದು ಹೇಳುತ್ತಾರೆ.

ಅಷ್ಟೇ ಅಲ್ಲದೆ ಈ ವಿಳಾಸ ಕೂಡ ನನ್ನದಲ್ಲ ಆತ ನನ್ನ ಮಗನು ಅಲ್ಲ ಎಂದು ಹೇಳಿ ಬಿಡುತ್ತಾರೆ ತಾನು ಮೋಸ ಹೋದನೆಂದು ತಿಳಿದ ಡೆಲಿವರಿ ಮ್ಯಾನ್ ಕೂಡಲೇ ಕಂಪನಿಗೆ ವಿಷಯ ತಿಳಿಸುತ್ತಾನೆ. ಪೊಲೀಸ್ ತನಿಖೆ ಕೂಡ ಆರಂಭವಾಗುತ್ತದೆ. ೯೦ ಸಾವಿರ ಬೆಲೆಯುಳ್ಳ ಆ ವಾಚ್ ಆನ್ಲೈನ್ ಅಲ್ಲಿ ಅರವತ್ತು ಸಾವಿರಕ್ಕೆ ಮಾರಲಾಗಿತ್ತು. ಪೊಲೀಸ್ ತನಿಖೆಯ ನಂತರ ಸಿಕ್ಕಿಬಿದ್ದ ಯುವಕ ತನ್ನ ಪ್ರೇಯಸಿಗಾಗಿ ಈ ಕೃತ್ಯ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಕೊನೆಗೂ ಡೆಲಿವರಿ ಹುಡುಗನಿಗೆ ಜಯವಾಗಿದೆ, ಈ ಪ್ರೇಮಿಯ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ.

Please follow and like us:
0
http://karnatakatoday.in/wp-content/uploads/2018/08/plan-1024x576.pnghttp://karnatakatoday.in/wp-content/uploads/2018/08/plan-150x104.pngEditorಅಂಕಣಪ್ರೀತಿ ಪ್ರೇಮ ಎಂದರೆ ಹಾಗೆ ಒಬ್ಬರೊನ್ನಬ್ಬರು ಅರ್ಥೈಸಿಕೊಂಡು ಬದುಕಿದರೆ ಬಾಳು ಸುಂದರ, ಪ್ರೀತಿಯ ಮೋಹಕ್ಕೆ ಬಿದ್ದು ತನ್ನ ಆಸೆಯನ್ನು ಈಡೇರಿಸಿಕೊಳ್ಳಲು ಬೇರೆ ಮಾರ್ಗ ಹಿಡಿದರೆ ಅದು ಖಂಡಿತ ಪ್ರೀತಿಯಲ್ಲ. ಇಂದಿನ ಈ ಲೋಕದಲ್ಲಿ ಪ್ರೀತಿಗಾಗಿ ಏನೆಲ್ಲಾ ಮಾಡಿದವರನ್ನು ನೀವು ನೋಡಿರುತ್ತೀರಿ, ಆದರೆ ಇದು ಸ್ವಲ್ಪ ಭಿನ್ನ ಒಮ್ಮೆ ನೋಡಿ. ತಾನು ಪ್ರೀತಿಸಿದ ಹುಡುಗಿಗೆ ಅವಳು ಆಸೆಪಟ್ಟಿದ್ದನ್ನು ಕೊಡುವುದು ಪ್ರೀತಿಯಲ್ಲಿ ಹುಡುಗನ ಕರ್ತವ್ಯ ಆದರೆ ಇಲ್ಲೊಬ್ಬ ಪ್ರೇಮಿ ಇದಕ್ಕಾಗಿ ದುರ್ಮಾರ್ಗವನ್ನು ಹಿಡಿದು...Kannada News