ಈಗಿನ ಕಾಲದಲ್ಲಿ ಯುವಕರು ಮತ್ತು ಯುವತಿಯರು ಫಾಶಿಯನ್ ಕಡೆಗೆ ಹೆಚ್ಚಿನ ಗಮನವನ್ನ ಕೊಡುತ್ತಾರೆ ಮತ್ತು ನಾವು ಚಂದವಾಗಿ ಕಾಣಲು ವಿವಿಧ ರೀತಿಯ ಹೊಸ ಹೊಸ ಉಡುಗೆಗಳನ್ನ ಧರಿಸುತ್ತಾರೆ. ಹೌದು ಹಿಂದಿನ ಕಾಲದಲ್ಲಿ ಜನರು ಹೆಚ್ಚಾಗಿ ಹತ್ತಿಯ ಬಟ್ಟೆಗಳನ್ನ ಬಳಸುತ್ತಿದ್ದರು ಆದರೆ ಈಗಿನ ಯುವಕರು ಹತ್ತಿಯ ಬಟ್ಟೆಗಳನ್ನ ಹೆಚ್ಚಾಗಿ ಬಳಸದೆ ನಮ್ಮ ದೇಹದ ಕೆಟ್ಟ ಪರಿಣಾಮವನ್ನ ಭೀರುವ ಬಟ್ಟೆಗಳನ್ನ ಬಳಕೆ ಮಾಡುತ್ತಿದ್ದಾರೆ. ಇನ್ನು ಪ್ರಸ್ತುತ ದಿನಗಳಲ್ಲಿ ಯುವಕ ಮತ್ತು ಯುವತಿಯರು ಹೆಚ್ಚಾಗಿ ಜೀನ್ಸ್ ಪ್ಯಾಂಟ್ ಗಳನ್ನ ಬಳಕೆ ಮಾಡುವುದನ್ನ ನಾವು ನೋಡುತ್ತಲೇ ಇರುತ್ತೇವೆ ಮತ್ತು ಈ ಜೀನ್ಸ್ ಉಡುಪು ಈಗ ತುಂಬಾ ಚಿರಪರಿಚಿತವಾದ ಉಡುಪು ಆಗಿದೆ. ಕೆಲವು ವರ್ಷಗಳ ಹಿಂದೆ ಪುರುಷರು ಧರಿಸುವ ಈ ಜೀನ್ಸ್ ಪ್ಯಾಂಟ್ ಗಳನ್ನ ಹೆಣ್ಣು ಮಕ್ಕಳು ಧರಿಸುತ್ತಿರಲಿಲ್ಲ, ಆದರೆ ಈಗ ಪುರುಷ ಮಹಿಳೆ ಅನ್ನುವ ಬೇಧ ಭಾವ ಇಲ್ಲದೆ ಎಲ್ಲರೂ ಕೂಡ ಈ ಜೀನ್ಸ್ ಪ್ಯಾಂಟ್ ಗಳ ಬಳಕೆ ಮಾಡುತ್ತಿದ್ದಾರೆ.

ಇನ್ನು ಕೆಲವು ಈ ಜೀನ್ಸ್ ಪ್ಯಾಂಟ್ ಗಳನ್ನ ಫಾಶಿಯನ್ ಗಾಗಿ ಬಳಸಿದರೆ ಇನ್ನು ಕೆಲವರು ಕಂಫರ್ಟ್ ಗಾಗಿ ಧರಿಸುತ್ತಾರೆ, ಇನ್ನು ನಾವು ಜೀನ್ಸ್ ಪ್ಯಾಂಟ್ ನಲ್ಲಿ ದೊಡ್ಡ ಜೇಬಿನ ಮದ್ಯದಲ್ಲಿ ಚಿಕ್ಕದಾದ ಒಂದು ಜೇಬನ್ನ ನೋಡುತ್ತೇವೆ, ಇನ್ನು ಕೆಲವರು ಆ ಜೇಬನ್ನ ಬಳಸಿದರೆ ಇನ್ನು ಕೆಲವರಿಗೆ ಆ ಜೇಬು ಯಾಕೆ ಇದೆ ಅನ್ನುವುದೇ ತಿಳಿದಿಲ್ಲ. ಹಾಗಾದರೆ ಜೀನ್ಸ್ ಪ್ಯಾಂಟ್ ನಲ್ಲಿ ಆ ಚಿಕ್ಕ ಜೇಬು ಯಾಕಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ಸಾಮಾನ್ಯವಾಗಿ ನಾವು ಜೀನ್ಸ್ ಪ್ಯಾಂಟ್ ಗಳಲ್ಲಿ ನಾಲ್ಕು ಜೇಬುಗಳನ್ನ ನೋಡುತ್ತೇವೆ, ಇನ್ನು ಮುಂದಿನ ಎರಡು ದೊಡ್ಡ ಜೇಬುಗಳ ಜೊತೆಗೆ ಒಂದು ಚಿಕ್ಕ ಜೇಬು ಕೂಡ ಇರುತ್ತದೆ, ಆದರೆ ಈ ಚಿಕ್ಕ ಜೇಬುಗಳು ಯಾಕೆ ಇದೆ ಮತ್ತು ಈ ಜೇಬುಗಳನ್ನ ಇಟ್ಟಿರುವ ಉದ್ದೇಶ ಹಲವು ಜನರಿಗೆ ಇನ್ನು ತಿಳಿದಿಲ್ಲ.

Packets of Jeans Pants

ಹೌದು ಸ್ನೇಹಿತರೆ 1800 ಇಸವಿಯಷ್ಟು ಹಿಂದಕ್ಕೆ ಹೋಗೋಣ, ಆಗಿನ ಕಾಲದಲ್ಲಿ ಕೌ ಬಾಯ್ಸ್ ಸರಪಳಿಗಳಿಗೆ ಚಿಕ್ಕ ಗಡಿಯಾರವನ್ನ ಕಟ್ಟಿಕೊಂಡು ತಮ್ಮ ಕೋಟಿನಲ್ಲಿ ಇಟ್ಟುಕೊಳ್ಳುತ್ತಿದ್ದರಂತೆ, ದೂರ ದೂರ ಸ್ಥಗಳಿಗೆ ಸುತ್ತಾಡುವಾಗ ನಮ್ಮ ಗಡಿಯಾರ ಕೆಳಗೆ ಬಿದ್ದು ಒಡೆದು ಹೋಗಬಾರದು ಅನ್ನುವ ಉದ್ದೇಶದಿಂದ ಈ ರೀತಿ ಜಾಗ್ರತೆಯನ್ನ ವಹಿಸಿದ್ದರು. ಇನ್ನು ಈ ವಿಧಾನ ಇನ್ನಷ್ಟು ಸ್ಟೈಲ್ ಆಗಿ ಕಾಣುವ ಹಾಗೆ ಮಾಡುವ ಸಲುವಾಗಿ ಲೆವಿಸ್ ಕಂಪನಿಯವರು ಜೀನ್ಸ್ ಪ್ಯಾಂಟ್ ಗಳಿಗೆ ಈ ರೀತಿಯ ಚಿಕ್ಕ ಜೇಬನ್ನ ಒದಗಿಸಲು ಆರಂಭ ಮಾಡಿದರು.

ಈ ರೀತಿಯ ಜೇಬುಗಳನ್ನ ಜೀನ್ಸ್ ಪ್ಯಾಂಟುಗಳಲ್ಲಿ ಮೊಟ್ಟ ಮೊದಲ ಭಾರಿ 1897 ರಲ್ಲಿ ಲೆವಿಸ್ ಕಂಪನಿ ಜಾರಿಗೆ ತಂದಿತು, ಇನ್ನು ಜೇಬುಗಳನ್ನ ಕೇವಲ ಸ್ಟೈಲ್ ಗಾಗಿ ಮಾತ್ರವಲ್ಲದೆ ಕೀ ಮತ್ತು ಸಣ್ಣ ಸರಪಳಿಯನ್ನ ಹೊಂದಿರುವ ಗಡಿಯಾರವನ್ನ ಇಡಬಹುದಾಗಿದೆ. ನಾಣ್ಯಗಳು, ಬಸ್ ಟಿಕೆಟ್, ಸಿನಿಮಾ ಟಿಕೆಟ್ ಮತ್ತು ಕೆಳಗೆ ಬೀಳಬಹುದಾದ ಚಿಕ್ಕ ಚಿಕ್ಕ ವಸ್ತುಗಳನ್ನ ಈ ಜೇಬಿನಲ್ಲಿ ಇಡಬಹುದಾಗಿದೆ, ಇನ್ನು ಮಹಿಳೆಯರು ಲಿಪ್ಸ್ ಬಾಂಬ್, ಲಿಪ್ಸ್ ಟಿಕ್ ಮತ್ತು ಚಿಕ್ಕ ಬಾಚಣಿಗೆಗಳನ್ನ ಈ ಜೇಬಿನಲ್ಲಿ ಇಟ್ಟುಕೊಳ್ಳಬಹುದಾಗಿದೆ. ಚಾಕು, ಪೇನ್ ಡ್ರೈವ್ ಮತ್ತು ಜೇಬಿನಿಂದ ಹೊರತೆಗೆಯುವಾಗ ಕೆಳಗೆ ಬೀಳುವ ಚಿಕ್ಕ ಚಿಕ್ಕ ವಸ್ತುಗಳನ್ನ ಜಾಗ್ರತೆ ಮಾಡಲು ಈ ಜೇಬು ತುಂಬಾ ಸಹಕಾರಿಯಾಗಿದೆ. ಸ್ನೇಹಿತರೆ ಜೀನ್ಸ್ ಪ್ಯಾಂಟುಗಳ ಬಗೆಗಿನ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಜೀನ್ಸ್ ಪ್ಯಾಂಟ್ ಬಳಸುವ ಪ್ರತಿಯೊಬ್ಬರಿಗೂ ತಲುಪಿಸಿ.

Packets of Jeans Pants

Please follow and like us:
error0
http://karnatakatoday.in/wp-content/uploads/2020/02/Packets-of-Jeans-Pants-1024x576.jpghttp://karnatakatoday.in/wp-content/uploads/2020/02/Packets-of-Jeans-Pants-150x104.jpgeditorಎಲ್ಲಾ ಸುದ್ದಿಗಳುಬೆಂಗಳೂರುಲೈಫ್ ಸ್ಟೈಲ್ಸುದ್ದಿಜಾಲಈಗಿನ ಕಾಲದಲ್ಲಿ ಯುವಕರು ಮತ್ತು ಯುವತಿಯರು ಫಾಶಿಯನ್ ಕಡೆಗೆ ಹೆಚ್ಚಿನ ಗಮನವನ್ನ ಕೊಡುತ್ತಾರೆ ಮತ್ತು ನಾವು ಚಂದವಾಗಿ ಕಾಣಲು ವಿವಿಧ ರೀತಿಯ ಹೊಸ ಹೊಸ ಉಡುಗೆಗಳನ್ನ ಧರಿಸುತ್ತಾರೆ. ಹೌದು ಹಿಂದಿನ ಕಾಲದಲ್ಲಿ ಜನರು ಹೆಚ್ಚಾಗಿ ಹತ್ತಿಯ ಬಟ್ಟೆಗಳನ್ನ ಬಳಸುತ್ತಿದ್ದರು ಆದರೆ ಈಗಿನ ಯುವಕರು ಹತ್ತಿಯ ಬಟ್ಟೆಗಳನ್ನ ಹೆಚ್ಚಾಗಿ ಬಳಸದೆ ನಮ್ಮ ದೇಹದ ಕೆಟ್ಟ ಪರಿಣಾಮವನ್ನ ಭೀರುವ ಬಟ್ಟೆಗಳನ್ನ ಬಳಕೆ ಮಾಡುತ್ತಿದ್ದಾರೆ. ಇನ್ನು ಪ್ರಸ್ತುತ ದಿನಗಳಲ್ಲಿ ಯುವಕ ಮತ್ತು ಯುವತಿಯರು...Film | Devotional | Cricket | Health | India