Pailwan movie director

ಪೈರಸಿ ಸಮಸ್ಯೆಯ ನಡುವೆಯೂ ಪೈಲ್ವಾನ್ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ, ಇನ್ನು ಫ್ಯಾನ್ ಇಂಡಿಯಾ ಕಾನ್ಸೆಪ್ಟ್ ನಲ್ಲಿ ಚಿತ್ರ ಐದು ಭಾಷೆಗಳಲ್ಲಿ ತೆರೆಕಂಡಿದ್ದು ಎಲ್ಲಾ ಭಾಷೆಗಳಲ್ಲಿ ಭರ್ಜರಿಯಾಗಿ ಪ್ರದರ್ಶನವನ್ನ ಕಾಣುತ್ತಿದೆ. ಇನ್ನು ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿದ ಪೈಲ್ವಾನ್ ಚಿತ್ರ ಮೂರೂ ದಿನದ ಸಂಪಾದನೆ 50 ಕೋಟಿ ದಾಟಿದೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ

ಇನ್ನು ಶುಕ್ರವಾರ ಉತ್ತರ ಭಾರತದಲ್ಲಿ ತೆರೆಕಂಡಿದ್ದ ಪೈಲ್ವಾನ್ ಚಿತ್ರವನ್ನ ಜನರು ಮೆಚ್ಚಿಕೊಂಡಿದ್ದಾರೆ, ಇನ್ನು ಚಿತ್ರ ಭಾರತದಲ್ಲಿ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ್ದರಿಂದ ಪ್ರತಿಯೊಬ್ಬರೂ ಸಿನಿಮಾವನ್ನ ನೋಡುತ್ತಿದ್ದಾರೆ.

Pailwan movie director

ಇನ್ನು ನಿನ್ನೆ ಭಾನುವಾರ ಆದಕಾರಣ ಪೈಲ್ವಾನ್ ಚಿತ್ರ ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನವನ್ನ ಕಂಡಿದೆ, ಹಾಗಾದರೆ ಪೈಲ್ವಾನ್ ಚಿತ್ರ ನಾಲ್ಕನೆಯ ದಿನ ಎಷ್ಟು ಕಲೆಕ್ಷನ್ ಮಾಡಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಪೈಲ್ವಾನ್ ಚಿತ್ರದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಇನ್ನು ಪೈಲ್ವಾನ್ ಚಿತ್ರದ ಗೆಲುವಿನ ಬಗ್ಗೆ ಮಾತನಾಡಿದ ಚಿತ್ರ ನಿರ್ದೇಶಕ ಕೃಷ್ಣ ಅವರು ಏನು ಹೇಳಿದಾದರೆ ಅಂದರೆ, ಸಾಮಾನ್ಯವಾಗಿ ದೊಡ್ಡ ಬಜೆಟ್ ನ ಸಿನಿಮಾವನ್ನ ಬಿಡುಗಡೆ ಮಾಡಬೇಕು ಅಂದರೆ ಮೂರೂ ಅಥವಾ ನಾಲ್ಕು ದಿನದ ರಜೆಯನ್ನ ನೋಡಿ ಚಿತ್ರವನ್ನ ರಿಲೀಸ್ ಮಾಡುತ್ತಾರೆ, ಆದರೆ ನಾವು ಸಿನಿಮಾ ಬಿಡುಗಡೆ ಮಾಡಿದಾಗ ಯಾವುದೇ ಸರ್ಕಾರೀ ರಜೆ ಇರಲಿಲ್ಲ ಆದರೂ ಕೂಡ ಹೌಸ್ ಪ್ರದರ್ಶನ ಕಂಡಿರುವುದು ನಮಗೆ ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ ನಿರ್ದೇಶಕ ಕೃಷ್ಣ ಅವರು.

Image result for kiccha sudeep pailwan

ಇನ್ನು ಚಿತ್ರದಲ್ಲಿ ಅಪ್ಪ ಮಗನ ಸೆಂಟಿಮೆಂಟ್, ಕುಸ್ತಿ, ಪ್ರೀತಿ ಪ್ರೇಮ ಮತ್ತು ಒಳ್ಳೆಯ ಸಂದೇಶವನ್ನ ಒಳಗೊಂಡಿರುವುದರಿಂದ ಜನರು ಚಿತ್ರವನ್ನ ತುಂಬಾ ಮೆಚ್ಚಿಕೊಂಡಿದ್ದಾರೆ ಎಂದು ಹೇಳಿದ್ದಾರೆ ನಿರ್ದೇಶಕ ಕೃಷ್ಣ ಅವರು, ಇನ್ನು ಪೈಲ್ವಾನ್ ಚಿತ್ರದ ಕಲೆಕ್ಷನ್ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಲೇ ಇದೆ.

ಇನ್ನು ಪೈಲ್ವಾನ್ ಚಿತ್ರ ಬಿಡುಗಡೆಯಾದ ನಾಲ್ಕನೆಯ ದಿನ ಬರೋಬ್ಬರಿ 21 ಕೋಟಿ ಕಲೆಕ್ಷನ್ ಮಾಡಿದೆ ಗಾಂಧಿನಗರದ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ ಮತ್ತು ಮೊದಲ ನಾಲ್ಕು ದಿನ ಬರೋಬ್ಬರಿ 60 -70 ಕೋಟಿ ಗಳಿಕೆ ಮಾಡಿದೆ ಎಂದು ಲೆಕ್ಕಾಚಾರ ಮಾಡಿದ್ದಾರೆ ಗಾಂಧಿನಗರದ ಪಂಡಿತರು. ಸ್ನೇಹಿತರೆ ಪೈಲ್ವಾನ್ ಚಿತ್ರ ನೂರು ಕೋಟಿ ಗಳಿಕೆ ಮಾಡಲು ಎಷ್ಟು ದಿನ ಸಮಯ ತೆಗೆದುಕೊಳ್ಳಬಹುದು ಅನ್ನುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Pailwan movie director

Please follow and like us:
error0
http://karnatakatoday.in/wp-content/uploads/2019/09/Pailwan-Movie-director-1024x576.jpghttp://karnatakatoday.in/wp-content/uploads/2019/09/Pailwan-Movie-director-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರನಗರಬೆಂಗಳೂರುಸುದ್ದಿಜಾಲಪೈರಸಿ ಸಮಸ್ಯೆಯ ನಡುವೆಯೂ ಪೈಲ್ವಾನ್ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ, ಇನ್ನು ಫ್ಯಾನ್ ಇಂಡಿಯಾ ಕಾನ್ಸೆಪ್ಟ್ ನಲ್ಲಿ ಚಿತ್ರ ಐದು ಭಾಷೆಗಳಲ್ಲಿ ತೆರೆಕಂಡಿದ್ದು ಎಲ್ಲಾ ಭಾಷೆಗಳಲ್ಲಿ ಭರ್ಜರಿಯಾಗಿ ಪ್ರದರ್ಶನವನ್ನ ಕಾಣುತ್ತಿದೆ. ಇನ್ನು ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿದ ಪೈಲ್ವಾನ್ ಚಿತ್ರ ಮೂರೂ ದಿನದ ಸಂಪಾದನೆ 50 ಕೋಟಿ ದಾಟಿದೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ ಇನ್ನು ಶುಕ್ರವಾರ ಉತ್ತರ ಭಾರತದಲ್ಲಿ ತೆರೆಕಂಡಿದ್ದ ಪೈಲ್ವಾನ್...Film | Devotional | Cricket | Health | India