Pailwan Kannada Movie

ಸ್ನೇಹಿತರೆ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವುದು ನಿಮಗೆಲ್ಲ ಗೊತ್ತೇ ಇದೆ, ಇನ್ನು ಚಿತ್ರ ಚಿತ್ರ ಪ್ರಿ ರಿಲೀಸ್ ಕಾರ್ಯಕ್ರಮ ನಿನ್ನೆ ನಡೆದಿದ್ದು ರವಿಚಂದ್ರನ್ ಅವರನ್ನ ವಿಶೇಷ ಅಥಿತಿಯಾಗಿ ಕರೆಯಲಾಗಿತ್ತು. ಇನ್ನು ಚಿತ್ರವನ್ನ ನೋಡಿದ ರವಿಚಂದ್ರನ್ ಅವರು ಸುದೀಪ್ ಅವರಿಗೆ ಶುಭಾಶಯವನ್ನ ಹೇಳಿದ್ದಾರೆ.

ಇನ್ನು ಚಿತ್ರದ ಬಗ್ಗೆ ಮಾತನಾಡಿದ ರವಿಚಂದ್ರನ್ ಅವರು ಚಿತ್ರದ ಕುರಿತು ತಮ್ಮ ಅನಿಸಿಕೆಯನ್ನ ಹೇಳಿದ್ದಾರೆ, ಹಾಗಾದರೆ ರವಿಚಂದ್ರ ಅವರು ಹೇಳಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಪೈಲ್ವಾನ್ ಚಿತ್ರವನ್ನ ನೀವು ಎಷ್ಟನೇ ಶೋ ನೋಡುತ್ತಿರಿ ಅನ್ನುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Pailwan Kannada Movie

ಇತ್ತೀಚಿಗೆ ನಾವು ಕುರುಕ್ಷೇತ್ರ ಚಿತ್ರದಲ್ಲಿ ಶ್ರೀ ಕೃಷ್ಣನ ಪಾತ್ರವನ್ನ ಮಾಡಿದ್ದೆ, ಆದರೆ ನನ್ನ ಕೈಯಲ್ಲಿ ಆ ಪಾತ್ರವನ್ನ ನಿಭಾಯಿಸುವುದು ಬಹಳ ಕಷ್ಟ ಎಂದು ಅನೇಕ ಜನರು ಅನುಮಾನಿಸಿದ್ದರು, ಆದರೆ ಅವರ ಅನುಮಾನ ಸುಳ್ಳಾಗಿ ಆ ಕೃಷ್ಣ ಗೆದ್ದ ಮತ್ತು ಈ ಕೃಷ್ಣ ಕೂಡ ಗೆಲ್ಲುತ್ತಾನೆ ಎಂದು ಕಿಚ್ಚ ಸುದೀಪ್ ಅವರಿಗೆ ಶುಭಾಶಯ ಹೇಳಿದ್ದಾರೆ ರವಿಚಂದ್ರನ್ ಅವರು.

ನಿರ್ದೇಶನದ ಜೊತೆಗೆ ಮೊದಲ ಭಾರಿಗೆ ನಿರ್ಮಾಣವನ್ನ ಕೂಡ ಮಾಡಿದ್ದಾರೆ, ಇನ್ನು ಪೈಲ್ವಾನ್ ಚಿತ್ರದಲ್ಲಿ ಒಂದು ಬೆಂಕಿ ಇದೆ ಎಂದು ಹೇಳಿದ್ದಾರೆ ರವಿಚಂದ್ರನ್ ಅವರು, ಒಂದು ಚಿತ್ರದಲ್ಲಿ ಬೆಂಕಿ ಕಾಣಿಸಬೇಕು, ಜೋಷ್ ಇರಬೇಕು ಮತ್ತು ಚಿತ್ರವನ್ನ ಪದೇ ಪದೇ ನೋಡಬೇಕು ಎಂದು ಜನರಿಗೆ ಅನಿಸಬೇಕು, ಈ ಎಲ್ಲಾ ಶಕ್ತಿ ಪೈಲ್ವಾನ್ ಚಿತ್ರದಲ್ಲಿ ಇದೆ ಎಂದು ಹೇಳಿದ್ದಾರೆ ರವಿಚಂದ್ರನ್.

Pailwan Kannada Movie

ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರಗಳು ಬಹಳ ಅದ್ಭುತವಾಗಿ ಮೂಡಿ ಬರುತ್ತಿದೆ, ಚಿತ್ರ ಅದ್ಭುತವಾಗಿ ಮೂಡಿ ಬರಲು ಕಾರಣ ನಾಯಕ ನಟ ಮತ್ತು ಚಿತ್ರತಂಡ, ವರ್ಷಗಟ್ಟಲೆ ಕಷ್ಟಪಟ್ಟು ಮಾಡಿದ ಪೈಲ್ವಾನ್ ಚಿತ್ರ ಖಂಡಿತ ಯಶಸ್ಸು ಸಾಧಿಸುತ್ತದೆ ಎಂದು ಹೇಳುತ್ತಿದ್ದಾರೆ ರವಿಚಂದ್ರನ್ ಮತ್ತು ಚಿತ್ರದ ಟ್ರೈಲರ್ ನೋಡಿದ ಅಭಿಮಾನಿಗಳು.

ಸ್ನೇಹಿತರೆ ಪೈಲ್ವಾನ್ ಚಿತ್ರ ಕನ್ನಡ ಮಾತ್ರವಲ್ಲದೆ ಪರಭಾಷೆಗಳಲ್ಲಿ ಕೂಡ ರಿಲೀಸ್ ಆಗುತ್ತಿದೆ, ಇನ್ನು ಚಿತ್ರವನ್ನ ನೋಡಲು ಜನರು ಇದೆ ಟಿಕೆಟ್ ಗಳನ್ನ ಬುಕ್ ಮಾಡುತ್ತಿದ್ದಾರೆ  ಮತ್ತು ಕನ್ನಡ ಇನ್ನೊಂದು ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವುದರಲ್ಲಿ ಎರಡು ಮಾತಿಲ್ಲ, ಪೈಲ್ವಾನ್ ಚಿತ್ರದ ಟ್ರೈಲರ್ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Pailwan Kannada Movie

Please follow and like us:
error0
http://karnatakatoday.in/wp-content/uploads/2019/09/Pailwan-Kannada-Movie-1-1024x576.jpghttp://karnatakatoday.in/wp-content/uploads/2019/09/Pailwan-Kannada-Movie-1-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಮಂಗಳೂರುಸುದ್ದಿಜಾಲಸ್ನೇಹಿತರೆ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿರುವುದು ನಿಮಗೆಲ್ಲ ಗೊತ್ತೇ ಇದೆ, ಇನ್ನು ಚಿತ್ರ ಚಿತ್ರ ಪ್ರಿ ರಿಲೀಸ್ ಕಾರ್ಯಕ್ರಮ ನಿನ್ನೆ ನಡೆದಿದ್ದು ರವಿಚಂದ್ರನ್ ಅವರನ್ನ ವಿಶೇಷ ಅಥಿತಿಯಾಗಿ ಕರೆಯಲಾಗಿತ್ತು. ಇನ್ನು ಚಿತ್ರವನ್ನ ನೋಡಿದ ರವಿಚಂದ್ರನ್ ಅವರು ಸುದೀಪ್ ಅವರಿಗೆ ಶುಭಾಶಯವನ್ನ ಹೇಳಿದ್ದಾರೆ. ಇನ್ನು ಚಿತ್ರದ ಬಗ್ಗೆ ಮಾತನಾಡಿದ ರವಿಚಂದ್ರನ್ ಅವರು ಚಿತ್ರದ ಕುರಿತು ತಮ್ಮ ಅನಿಸಿಕೆಯನ್ನ ಹೇಳಿದ್ದಾರೆ, ಹಾಗಾದರೆ ರವಿಚಂದ್ರ ಅವರು ಹೇಳಿದ್ದೇನು ಅನ್ನುವುದರ...Film | Devotional | Cricket | Health | India