ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಇದೀಗ ಟ್ರೇಲರ್ ಮೂಲಕ ರಾಜ್ಯದಲ್ಲಿ ಅಬ್ಬರಿಸುತ್ತಿದೆ, ಹೌದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಪೈಲ್ವಾನ್ ಟ್ರೇಲರ್ ಕೊನೆಗೂ ಇಂದು ಬಿಡುಗಡೆಯಾಗಿ ಯೌಟ್ಯೂಬ್ ನಲ್ಲಿ ಧೂಳ್ ಎಬ್ಬಿಸಿದೆ. ಮೂರು ವರ್ಷದ ನಂತರ ಕಿಚ್ಚ ಸುದೀಪ್ ಅಣ್ಣನ ಚಿತ್ರ ತೆರೆಮೇಲೆ ಬಂದಿದ್ದು ಅಭಿಮಾನಿಗಳಿಗೆ ಖುಷಿ ತಂದಿದೆ. ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಟ್ರೇಲರ್ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ರಿಲೀಸ್ ಆಗಿದ್ದು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಟ್ರೇಲರ್‌ನಲ್ಲಿ ಕಿಚ್ಚನ ಡೈಲಾಗ್‌ಗೆ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿರುವುದನ್ನು ಕಾಣಬಹುದು.

ಆರ್‌ಆರ್‌ಆರ್ ಮೋಷನ್ ಪಿಕ್ಚರ್ಸ್ ಚೊಚ್ಚಲ ನಿರ್ಮಾಣದ ಸಿನಿಮಾ ಇದು. ಕೃಷ್ಣ ಆ್ಯಕ್ಷನ್ ಕಟ್ ಹೇಳಿದ್ದಾರೆ. ರಾಷ್ಟ್ರೀಯ ಕುಸ್ತಿ ಸ್ಪರ್ಧೆಯಲ್ಲಿ ಸೆಣೆಸಲು ಸುನೀಲ್ ಶೆಟ್ಟಿ ಟ್ರೇನಪ್ ಮಾಡುವ ಸನ್ನಿವೇಶವನ್ನೂ ಟ್ರೇಲರ್‌ನಲ್ಲಿ ಕಾಣಬಹುದು. ಈ ಚಿತ್ರದಲ್ಲಿ ಆಕಾಂಕ್ಷಾ ಸಿಂಗ್ ನಾಯಕಿಯಾಗಿದ್ದು ಉಳಿದ ತಾರಾಗಣದಲ್ಲಿ ಸುಶಾಂತ್ ಸಿಂಗ್, ಕಬೀರ್ ದುಹಾನ್ ಸಿಂಗ್, ಶರತ್ ಲೋಹಿತಾಶ್ವ ಸೇರಿದಂತೆ ಹಲವರು ನಟಿಸಿದ್ದಾರೆ.

 

ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಇನ್ನು ಟ್ರೈಲರ್ ಬಿಡುಗಡೆಯಾಗಿ 1 ಗಂಟೆಯಲ್ಲೇ 4 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ಚಿತ್ರವನ್ನು ಕೃಷ್ಣ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಸುದೀಪ್ ಹೆಸರು ಮತ್ತೆ ಕಿಚ್ಚ ಆಗಿ ಕಾಣಿಸಿಕೊಂಡಿದೆ. ಸ್ವತಃ ಸುನಿಲ್ ಶೆಟ್ಟಿ ದ್ವನಿ ನೀಡಿದ್ದಾರೆ. ಇದು ಆಕ್ಷನ್-ಪ್ಯಾಕ್ಡ್ ಪ್ರಚಾರದ ವೀಡಿಯೊವಾಗಿದ್ದು, ಇದು ಕುಸ್ತಿಪಟು ಮತ್ತು ಬಾಕ್ಸರ್ ನ ಎರಡು ವಿಭಿನ್ನ ಅವತಾರಗಳಲ್ಲಿ ಸುದೀಪ್ ಅನ್ನು ಪ್ರಸ್ತುತಪಡಿಸುತ್ತದೆ.


ಟ್ರೈಲರ್ ಮೂಲಕ ಹೋದರೆ, ಚಲನಚಿತ್ರವನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು. ಮೊದಲ ವಿಭಾಗವು ಕುಸ್ತಿಪಟುವಿನ ಸುತ್ತ ಸುತ್ತುತ್ತದೆ ಮತ್ತು ಎರಡನೆಯದು ಬಾಕ್ಸರ್ ಬಗ್ಗೆ. ಸಂಭಾವ್ಯವಾಗಿ, ಇದು ಕುಸ್ತಿಪಟು ಕಿಚ್ಚಾ (ಸುದೀಪ್) ಅವರ ಪ್ರಯಾಣವಾಗಿದೆ, .ಸುನಿಲ್ ಶೆಟ್ಟಿ ಮತ್ತು ಶರತ್ ಲೋಹಿತಾಶ್ವ ಕ್ರಮವಾಗಿ ಅವರ ಕುಸ್ತಿ ಮತ್ತು ಬಾಕ್ಸಿಂಗ್ ಗುರುಗಳ ಪಾತ್ರವನ್ನು ನಿರ್ವಹಿಸುತ್ತಾರೆ.
ಪಾತ್ರಗಳ ಆಕಾರವನ್ನು ಪಡೆಯಲು ಸುದೀಪ್ ಮಾಡಿದ ಪ್ರಯತ್ನಗಳು ಟ್ರೈಲರ್‌ನಲ್ಲಿ ಗೋಚರಿಸುತ್ತವೆ. ಮುಖ್ಯವಾಗಿ ಚಿತ್ರದಲ್ಲಿ ಯುವಕರನ್ನು ಹುರಿದುಂಬಿಸುವ ಟ್ರೇಲರ್ ಹೆಚ್ಚು ಗಮನ ಸೆಳೆದಿದೆ. ಇದು ಯುವಜನರಿಗೆ ಸ್ಫೂರ್ತಿ ನೀಡುವಂತಹ ಸಂಭಾಷಣೆಗಳೊಂದಿಗೆ ಕೂಡಿದೆ.


ನಾನು ಗೆಲ್ಲುತ್ತಿನೋ, ಸೋಲ್ತಿನೋ ಗೊತ್ತಿಲ್ಲ, ಆದ್ರೆ ಸೋಲನ್ನ ಅಷ್ಟು ಸುಲಭವಾಗಿ ಒಪ್ಪಿಕೊಳಲ್ಲ” ಎಂಬ ಡೈಲಾಗ್ ಅಭಿಮಾನಿಗಳ ಶಿಳ್ಳೆ ಗಿಟ್ಟಿಸಿಕೊಳ್ಳುವಂತಿದೆ. ಟ್ರೇಲರ್ ಸೂಪರ್ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದು ಲೈಕ್‌ಗಳ ಸುರಿಮಳೆಯಾಗುತ್ತಿದೆ. ಕನ್ನಡ ಅಷ್ಟೇ ಅಲ್ಲದೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂನಲ್ಲೂ ರಿಲೀಸ್ ಆಗಿದೆ. ಸೆಪ್ಟೆಂಬರ್ 12ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ.

Please follow and like us:
error0
http://karnatakatoday.in/wp-content/uploads/2019/08/pailwan-trailor-1024x576.jpghttp://karnatakatoday.in/wp-content/uploads/2019/08/pailwan-trailor-150x104.jpgKarnataka Trendingಅಂಕಣಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ಇದೀಗ ಟ್ರೇಲರ್ ಮೂಲಕ ರಾಜ್ಯದಲ್ಲಿ ಅಬ್ಬರಿಸುತ್ತಿದೆ, ಹೌದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಪೈಲ್ವಾನ್ ಟ್ರೇಲರ್ ಕೊನೆಗೂ ಇಂದು ಬಿಡುಗಡೆಯಾಗಿ ಯೌಟ್ಯೂಬ್ ನಲ್ಲಿ ಧೂಳ್ ಎಬ್ಬಿಸಿದೆ. ಮೂರು ವರ್ಷದ ನಂತರ ಕಿಚ್ಚ ಸುದೀಪ್ ಅಣ್ಣನ ಚಿತ್ರ ತೆರೆಮೇಲೆ ಬಂದಿದ್ದು ಅಭಿಮಾನಿಗಳಿಗೆ ಖುಷಿ ತಂದಿದೆ. ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಟ್ರೇಲರ್ ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ರಿಲೀಸ್ ಆಗಿದ್ದು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ....Film | Devotional | Cricket | Health | India