ಪಾನ್ ಕಾರ್ಡ್ ಇದ್ದವರಿಗೆ ಈಗ ಮತ್ತೊಂದು ಶಾಕ್ ಎದುರಾಗಿದೆ, ಹೌದು ಆಗಸ್ಟ್ 31 ಕ್ಕೆ ಸರ್ಕಾರ ನಿಮಗೆ ಶಾಕ್ ನೀಡಲಿದೆ. ಈಗಾಗಲೇ ಪಾನ್ ಕಾರ್ಡಿಗೆ ಬಯೋಮೆಟ್ರಿಕ್ ಗುರುತನ್ನು ಸೇರಿಸಿ ಎಂದು ಸರ್ಕಾರ ಎಷ್ಟೇ ಗಡುವು ನೀಡಿದರು ಕೂಡ ಜನರು ನಿರ್ಲಕ್ಷ ವಹಿಸಿದ್ದಾರೆ ಎಂದು ತಿಳಿದು ಬಂದಿದೆ.ಹೀಗಾಗಿ ದೇಶದಲ್ಲಿ ಇರುವ 20 ಕೋಟಿಗೂ ಹೆಚ್ಚು ಪಾನ್ ಕಾರ್ಡ್ ಬಂದ್ ಆಗುವ ಭೀತಿಯಲ್ಲಿದೆ. ವ್ಯಕ್ತಿ, ಕಂಪನಿ, ಹಾಗು ಕುಟುಂಬದ ಹೆಸರಿನಲ್ಲಿರುವ ಯಾವುದೇ ಪಾನ್ ಕಾರ್ಡಿಗೂ ಕೂಡ ಆಧಾರ್ ಲಿಂಕ್ ಮಾಡಿಲ್ಲವೆಂದರೆ ಬ್ಲಾಕ್ ಆಗಲಿದೆ. ಆಗಸ್ಟ್ 31 ರ ಒಳಗಡೆ ನೀವು ಈ ಕೆಲಸ ಮಾಡಿಲ್ಲ ಎಂದರೆ ಅದನ್ನು ಅಮಾನ್ಯ ಎಂದು ಘೋಷಿಸಲಾಗುವುದು ಎಂದು ಸರ್ಕಾರ ಈಗಾಗಲೇ ಎಚ್ಚರಿಕೆ ನೀಡಿದೆ.

ಇನ್ನು ಆದಾಯ ತೆರಿಗೆ ಇಲಾಖೆ ಕೂಡ ಪಾನ್ ಕಾರ್ಡ ಲಿಂಕ್ ಮಾಡದವರಿಗೆ ತೆರಿಗೆ ಕಟ್ಟಲು ಸಾಧ್ಯವಿಲ್ಲ ಎಂದು ಹೇಳಿದೆ. ಒಂದು ವೇಳೆ ನಿಮ್ಮ ಪಾನ್ ಕಾರ್ಡ್ ಅಮಾನ್ಯಗೊಂಡರೆ ಸಾಕಷ್ಟು ತೊಂದರೆಗಳನ್ನು ನೀವು ಅನುಭವಿಸಲಿದ್ದೀರಿ. ಹೌದು ಬ್ಯಾಂಕಿಂಗ್ ವ್ಯವಹಾರಗಳಿಗೆ ನೀವು ಪಾನ್ ಬಳಸದೆ ಕೆಲಸ ಮಾಡುವುದು ಬಹಳಷ್ಟು ಕಷ್ಟಕರ ಆಗಲಿದೆ. ನಿರ್ದಿಷ್ಟ ಮೊತ್ತದ ಹಣವನ್ನು ಹಾಕಿ ತೆಗೆಯಲು ಕೂಡ ಪಾನ್ ಸಹಾಯ ಮಾಡಲಿದೆ.

ಇಲ್ಲವಾದಲ್ಲಿ ಹಣ ವರ್ಗಾವಣೆಗೆ ತೊಂದರೆ ಆಗಲಿದೆ. ಇನ್ನು ಹೊಸ ತೆರಿಗೆದಾರರಿಗೆ ಈ ಬಾರಿ ಪಾನ್ ಇಲ್ಲವಾದಲ್ಲಿ ಸಂಕಷ್ಟ ತಪ್ಪಿದ್ದಲ್ಲ. ಪಾನ್ ಕೇವಲ ಹಣಕಾಸಿನ ವ್ಯವಹಾರಗಳಿಗೆ ಮಾತ್ರವಲ್ಲದೆ ಗುರುತಿನ ಚೀಟಿಯಾಗಿ ಕೂಡ ನೀವು ಬಳಸಬಹುದು. ಪಾನ್ ಕಾರ್ಡ್ ಬಳಸಿ ಬ್ಯಾಂಕಿನಿಂದ ಸಾಲ ತೆಗೆಯಲು, ಹಾಗೂ ಕ್ರೆಡಿಟ್ ಕಾರ್ಡಗಳನ್ನು ಪಡೆಯುವುದು ಕೂಡ ಇನ್ಮೇಲೆ ಅಸಾದ್ಯವೇ ಸರಿ. ಹೀಗಾಗಿ ಕೂಡಲೇ ನೀವು ಸರ್ಕಾರದ ಅಧಿಕೃತ ಜಾಲತಾಣಕ್ಕೆ ಭೇಟಿ ಕೊಟ್ಟು ನಿಮ್ಮ ಕಾರ್ಡ್ ಗೆ ಆಧಾರ್ ಲಿಂಕ್ ಆಗಿದೆಯೋ ಇಲ್ಲವೋ ಪರಿಶೀಲಿಸಿ.

ಈ ವಿಷಯ ಯಾಕೆ ಹೇಳುತ್ತಿದ್ದೇವೆ ಎಂದರೆ ಸರ್ಕಾರ ಈಗಾಗಲೇ ನೀಡಿದ ವರದಿಯ ಪ್ರಕಾರ 20 ಕೋಟಿಗೂ ಹೆಚ್ಚು ಕಾರ್ಡುಗಳು ನಿಷೇಧದ ಭೀತಿಯಲ್ಲಿದೆ.ಹಣಕಾಸು ಸಚಿವಾಲಯದಿಂದ ಪಡೆದ ಮಾಹಿತಿಯ ಪ್ರಕಾರ, ಸುಮಾರು 22 ಮಿಲಿಯನ್ ಪಾನ್ ಕಾರ್ಡ್‌ಗಳನ್ನು ಮಾತ್ರ ಮಾತ್ರ ಸೇರಿಸಲಾಗಿದೆ. ಆದಾಯ ತೆರಿಗೆ ಇಲಾಖೆ ನೀಡಿರುವ ಒಟ್ಟು ಕಾರ್ಡನ್ನು ನೋಡಿದರೆ ಅದು ಸುಮಾರು 43 ಕೋಟಿ. ಇದರರ್ಥ 200 ದಶಲಕ್ಷಕ್ಕೂ ಹೆಚ್ಚು ಕಾರ್ಡುಗಳು ಇನ್ನು ದುರ್ಬಲವಾಗಿವೆ. ಅಂತಹ ಕಾರ್ಡ್ ಬಳಕೆದಾರರಿಗೆ ಇನ್ನು ಕೂಡ ಅವಕಾಶ ನೀಡಲಾಗಿದ್ದು ಇನ್ನು ಒಂದು ತಿಂಗಳಲ್ಲಿ ಸರಿಪಡಿಸಿಕೊಳ್ಳಿ.

ಪಾನ್ “ಆಧಾರ್‌ನೊಂದಿಗೆ ಸಂಪರ್ಕ ಸಾಧಿಸುವ ಮೂಲಕ, ಯಾವುದೇ ನಕಲಿ ಪ್ಯಾನ್ ಇದೆಯೋ ಇಲ್ಲವೋ ಎಂದು ನಮಗೆ ತಿಳಿಯುತ್ತದೆ. ಮತ್ತು ದೇಶದಲ್ಲಿ ಕೆಲವು ನಕಲಿ ಪಾನ್ ಗಳಿವೆ.ಅದನ್ನು ಲಿಂಕ್ ಮಾಡದಿದ್ದರೆ, ನಾವು ಕಾರ್ಡ್ ಅನ್ನು ಸಹ ರದ್ದುಗೊಳಿಸಬಹುದು. ಎಂದು ಹಿರಿಯ ಮಂತ್ರಿಯೊಬ್ಬರು ತಿಳಿಸಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ಕೇಂದ್ರದ ಪ್ರಮುಖ ಆಧಾರ್ ಯೋಜನೆಯನ್ನು ಸಾಂವಿಧಾನಿಕವಾಗಿ ಮಾನ್ಯ ಎಂದು ಘೋಷಿಸಿತ್ತು. ಒಮ್ಮೆ ಆಧಾರ್ ಅನ್ನು ಪಾನ್ ಮತ್ತು ಪಾನ್ ಅನ್ನು ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಿದರೆ, ಐ-ಟಿ ಇಲಾಖೆಯು ಖರ್ಚಿನ ಮಾದರಿ ಮತ್ತು ಮೌಲ್ಯಮಾಪಕರ ಇತರ ವಿವರಗಳನ್ನು ಕಂಡುಹಿಡಿಯಬಹುದು.

Please follow and like us:
error0
http://karnatakatoday.in/wp-content/uploads/2019/07/august-31-1024x576.jpghttp://karnatakatoday.in/wp-content/uploads/2019/07/august-31-150x104.jpgKarnataka Trendingಅಂಕಣಎಲ್ಲಾ ಸುದ್ದಿಗಳುಪಾನ್ ಕಾರ್ಡ್ ಇದ್ದವರಿಗೆ ಈಗ ಮತ್ತೊಂದು ಶಾಕ್ ಎದುರಾಗಿದೆ, ಹೌದು ಆಗಸ್ಟ್ 31 ಕ್ಕೆ ಸರ್ಕಾರ ನಿಮಗೆ ಶಾಕ್ ನೀಡಲಿದೆ. ಈಗಾಗಲೇ ಪಾನ್ ಕಾರ್ಡಿಗೆ ಬಯೋಮೆಟ್ರಿಕ್ ಗುರುತನ್ನು ಸೇರಿಸಿ ಎಂದು ಸರ್ಕಾರ ಎಷ್ಟೇ ಗಡುವು ನೀಡಿದರು ಕೂಡ ಜನರು ನಿರ್ಲಕ್ಷ ವಹಿಸಿದ್ದಾರೆ ಎಂದು ತಿಳಿದು ಬಂದಿದೆ.ಹೀಗಾಗಿ ದೇಶದಲ್ಲಿ ಇರುವ 20 ಕೋಟಿಗೂ ಹೆಚ್ಚು ಪಾನ್ ಕಾರ್ಡ್ ಬಂದ್ ಆಗುವ ಭೀತಿಯಲ್ಲಿದೆ. ವ್ಯಕ್ತಿ, ಕಂಪನಿ, ಹಾಗು ಕುಟುಂಬದ ಹೆಸರಿನಲ್ಲಿರುವ ಯಾವುದೇ...Film | Devotional | Cricket | Health | India