ದೇಶಾದ್ಯಂತ ಇನ್ನು ಮೇಲೆ ಪಾನ್ ಕಾರ್ಡಿನ ಮೇಲೆ ಕ್ಷಿಪ್ರ ಬದಲಾವಣೆಯೊಂದು ಆಗಲಿದೆ. ಹೌದು ನಮ್ಮ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆ ತಂದಿರುವ ಕೇಂದ್ರ ಸರ್ಕಾರ ಈಗಾಗಲೇ ಬ್ಯಾಂಕ್ ಖಾತೆಗೆ ಮತ್ತು ವಿವಿಧ ಸರಕಾರಿ ಕೆಲಸಗಳಿಗೆ ಪಾನ್ ಕಾರ್ಡ್ ಬೇಕೇ ಬೇಕು ಎಂದು ನಿರ್ದೇಶನ ನೀಡಿದೆ. ಹೀಗಾಗಿ ಪಾನ್ ಕಾರ್ಡ್ ಇಲ್ಲದೆ ಯಾವ ಕೆಲಸವು ಆಗುವುದು ಅಷ್ಟೊಂದು ಸುಲಭವಲ್ಲ. ಹೀಗಾಗಿ ದೇಶದಲ್ಲಿ ಇನ್ಮೇಲೆ ಕೇವಲ 4 ಗಂಟೆಗಳಲ್ಲಿ ಪಾನ್ ಕಾರ್ಡ್ ನೀಡುವ ಬಗ್ಗೆ ಸರ್ಕಾರ ಚಿಂತಿಸಿದೆ. ಹಾಗಿದ್ರೆ ಹೇಗೆ ಪಡೆಯುವುದು ಮತ್ತು ಏನಿದು ಯೋಜನೆ ಎಂದು ತಿಳಿಯೋಣ ಬನ್ನಿ. ಹೌದು, ತೆರಿಗೆ ಇಲಾಖೆ ಕೇವಲ 4 ಗಂಟೆಗಳಲ್ಲಿ ಪ್ಯಾನ್ ಕಾರ್ಡ್ ನ್ನು ನೀಡುವುದಕ್ಕೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಶೀಘ್ರವೇ ಗ್ರಾಹಕರಿಗೆ ಪ್ಯಾನ್ ಕಾರ್ಡ್ ನಾಲ್ಕು ಗಂಟೆಗಳಲ್ಲೇ ಕೈ ಸೇರಲಿದೆ.

ನೇರ ತೆರಿಗೆ ವಿಭಾಗದ ಕೇಂದ್ರ ಮಂಡಾಳಿಯ ಅಧ್ಯಕ್ಷ ಸುಶೀಲ್ ಚಂದ್ರ ಇಂಡಸ್ಟ್ರಿ ಕಾನ್ಫರೆನ್ಸ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ತಮ್ಮ ಇಲಾಖೆ ತಂತ್ರಜ್ಞಾನ ಹಾಗೂ ಆಟೋಮೇಷನ್ ನ್ನು ತೆರಿಗೆ ಪೂರ್ವಪಾವತಿ, ರಿಟರ್ನ್ಸ್ ಸಲ್ಲಿಕೆ, ರೀಫಂಡ್ ಸೇರಿದಂತೆ ಹಲವು ವಿಭಾಗಗಳಲ್ಲಿ ಅಳವಡಿಸಿಕೊಂಡಿದೆ. ಕೆಲ ದಿನಗಳ ಹಿಂದೆ ಪಾನ್ ಕಾರ್ಡಿನಲ್ಲಿ ಹಲವು ಬದಲಾವಣೆಗಳನ್ನು ಸರಕಾರ ತಂದಿತ್ತು ಇದರಲ್ಲಿ ತಾಯಿಯ ಹೆಸರು ಸೇರಿಸುವ ಅವಕಾಶ ಕೂಡ ತಂದಿತ್ತು.

ಈ ಪೈಕಿ ಪ್ಯಾನ್ ಕಾರ್ಡ್ ವಿತರಣೆಯೂ ಒಂದಾಗಿದ್ದು ಒಂದು ವರ್ಷದೊಳಗಾಗಿ ಕೇವಲ 4 ಗಂಟೆಗಳಲ್ಲಿ ಪ್ಯಾನ್ ಕಾರ್ಡ್ ಗ್ರಾಹಕರ ಕೈ ಸೇರಲಿದೆ ಎಂದು ಹೇಳಿದ್ದಾರೆ. ಒಂದು ವೇಳೆ ಈ ಯೋಜನೆ ಶೀಘ್ರದಲ್ಲೇ ಜಾರಿ ಆದರೆ ಇನ್ನು ಮುಂದೆ ಪಾನ್ ಕಾರ್ಡಿಗೆ ಅಳೆಯಬೇಕಾದ ಅವಶ್ಯಕತೆ ಇರುವುದಿಲ್ಲ.

ಇಷ್ಟೇ ಅಲ್ಲದೆ ಆಧಾರ್ ಮತ್ತು ಪಾನ್ ಕಾರ್ಡ್ ಬಲಪಡಿಸಿದ ನಂತ್ರ ಈ ವರ್ಷ ತೆರಿಗೆ ಪಾವತಿಸುವ ಕಂಪನಿಗಳು ಹಾಗು ವ್ಯಕ್ತಿಗಳ ಸಂಖ್ಯೆ ಶೇಕಡಾ ಐವತ್ತರಷ್ಟು ಹೆಚ್ಚಾಗಿದೆ ಎಂದು ತಿಳಿಸಿದೆ. ತೆರಿಗೆ ಕಟ್ಟುವವರ ಸಂಖ್ಯೆ ಹೆಚ್ಚುತ್ತಿರುವುದು ದೇಶದ ಆರ್ಥಿಕತೆಗೆ ಮತ್ತಷ್ಟು ಬಲ ತುಂಬಲಿದೆ, ಈ ಮೂಲಕ ಕಾಳಧನಿಕರಿಗೆ ಹಾಗು ತೆರಿಗೆ ಕಟ್ಟದೆ ವಂಚಿಸುತ್ತಿದ್ದವರಿಗೆ ಇನ್ನು ಮುಂದೆ ಉಳಿಗಾಲವಿಲ್ಲದಂತೆ ಆಗಿದೆ.ಸಾಧ್ಯವಾದಷ್ಟು ಜನರಿಗೆ ಈ ಮಾಹಿತಿ ತಲುಪಿಸಿರಿ.

Please follow and like us:
0
http://karnatakatoday.in/wp-content/uploads/2018/12/pan-card-in-4-hours-1024x576.jpghttp://karnatakatoday.in/wp-content/uploads/2018/12/pan-card-in-4-hours-150x104.jpgKarnataka Today's Newsಅಂಕಣಎಲ್ಲಾ ಸುದ್ದಿಗಳುದೇಶಾದ್ಯಂತ ಇನ್ನು ಮೇಲೆ ಪಾನ್ ಕಾರ್ಡಿನ ಮೇಲೆ ಕ್ಷಿಪ್ರ ಬದಲಾವಣೆಯೊಂದು ಆಗಲಿದೆ. ಹೌದು ನಮ್ಮ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆ ತಂದಿರುವ ಕೇಂದ್ರ ಸರ್ಕಾರ ಈಗಾಗಲೇ ಬ್ಯಾಂಕ್ ಖಾತೆಗೆ ಮತ್ತು ವಿವಿಧ ಸರಕಾರಿ ಕೆಲಸಗಳಿಗೆ ಪಾನ್ ಕಾರ್ಡ್ ಬೇಕೇ ಬೇಕು ಎಂದು ನಿರ್ದೇಶನ ನೀಡಿದೆ. ಹೀಗಾಗಿ ಪಾನ್ ಕಾರ್ಡ್ ಇಲ್ಲದೆ ಯಾವ ಕೆಲಸವು ಆಗುವುದು ಅಷ್ಟೊಂದು ಸುಲಭವಲ್ಲ. ಹೀಗಾಗಿ ದೇಶದಲ್ಲಿ ಇನ್ಮೇಲೆ ಕೇವಲ 4 ಗಂಟೆಗಳಲ್ಲಿ ಪಾನ್...Kannada News