new news of Aadhar and pan card

ಈಗೀಗ ಪಾನ್ ಕಾರ್ಡ್ ಹಾಗು ಆಧಾರ್ ದೇಶದ ಎಲ್ಲಾ ರೀತಿಯ ಯೋಜನೆಗಳನ್ನು ಪಡೆಯಲು ಹಾಗು ಸೇವೆಗಳಿಗೆ ಅರ್ಜಿ ಸಲ್ಲಿಸಲು ಹಾಗು ಐಡೆಂಟಿಟಿ ಪ್ರರೋಫ್ ಆಗಿಯೂ ಕೂಡ ಹೆಚ್ಚಿನ ಸರಕಾರಿ ಕೇಂದ್ರಗಳಲ್ಲಿ ಕೇಳಲಾಗುತ್ತಿದೆ.

ಅಷ್ಟೇ ಅಲ್ಲದೆ ವ್ಯವಹಾರಗಳಿಗಂತೂ ಆಧಾರ್ ಮತ್ತು  ಪಾನ್ ಕಾರ್ಡ್ ಇವೆರಡು ಇಲ್ಲದೆ ಮುಂದಿನ ಕೆಲಸ ಅಸಾಧ್ಯ ಹೀಗಾಗಿ ಸರ್ಕಾರ ಈ ಮೊದಲಿನಿಂದಲೂ ಆಧಾರ್ ಅನ್ನು ಪಾನ್ ಗೆ ಜೋಡಿಸಿ ಎನ್ನುತ್ತಾ ಬಂದಿತ್ತು ಮತ್ತು ಅಂತಿಮ ಗಡುವನ್ನು ವಿಸ್ತರಿಸುತ್ತ ಇದೆ.

ಸಂವಿಧಾನ ಪೀಠವು, ಆಧಾರ್‌ ಕ್ರಮಬದ್ಧತೆ ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ಅಂತಿಮ ತೀರ್ಪು ನೀಡುವವರೆಗೆ ಗಡುವನ್ನು ಅನಿರ್ದಿಷ್ಟಾವಧಿಗೆ ಈಗಾಗಲೇ ವಿಸ್ತರಿಸಿದ್ದು, ಇಂದು ಕೇಂದ್ರ ಸರ್ಕಾರದ ಆದಾಯ ತೆರಿಗೆ ಇಲಾಖೆ ಅಂತಿಮ ಗಡುವನ್ನು ಇದೆ ಮಾರ್ಚ್ 31 ಕ್ಕೆ ನೀಡಿದೆ.

new news of Aadhar and pan card

ಇನ್ನುಳಿದ 18 ದಿನಗಳಲ್ಲಿ ನೀವು ಈ ಕೆಲಸ ಮಾಡಿಲ್ಲವೆನ್ದರೆ ಖಂಡಿತ ನಿಮ್ಮ ಪಾನ್ ರದ್ದಾಗುವುದರಲ್ಲಿ ಎರಡು ಮಾತಿಲ್ಲ, ಅಂತಿಮ ಗಡುವಿನ ಮೊದಲೇ ನಿಮ್ಮ ಆಧಾರ್ ಜೋಡಣೆ ಮಾಡಿಕೊಳ್ಳಿ ಇಲ್ಲವಾದಲ್ಲಿ ತೆರಿಗೆ ಇಲಾಖೆಯ ಸೂಚನೆ ಪ್ರಕಾರ ಕ್ಷಣದಲ್ಲೇ ಪಾನ್ ಬ್ಲಾಕ್ ಆಗಲಿದೆ.

ಆದಾಯ ತೆರಿಗೆ ಇಲಾಖೆಯಿಂದ ಐ.ಟಿ ರಿಟರ್ನ್ ಮತ್ತು ಪ್ಯಾನ್‌ ಪಡೆಯಲು ಆಧಾರ್‌ ಸಂಖ್ಯೆ ನಮೂದಿಸುವುದನ್ನು ಸರ್ಕಾರ ಈಗ ಕಡ್ಡಾಯ ಮಾಡಿದೆ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ 139 ಎಎ (2) ಪ್ರಕಾರ, 2017ರ ಜುಲೈ 1ರಂದು ಪ್ಯಾನ್‌ ಹೊಂದಿದವರು ಮತ್ತು ಆಧಾರ್‌ ಹೊಂದಿದವರು, ತಮ್ಮ ಆಧಾರ್‌ ಸಂಖ್ಯೆಯನ್ನು ಆದಾಯ ತೆರಿಗೆ ಇಲಾಖೆಗೆ ಕಡ್ಡಾಯವಾಗಿ ನೀಡಬೇಕಾಗುತ್ತದೆ.

new news of Aadhar and pan card

ಆದಷ್ಟು ಬೇಗ ಈ ಸುದ್ದಿಯನ್ನು ನಿಮ್ಮವರಿಗೆ ತಲುಪಿಸಿ ಮತ್ತು ಸೂಕ್ತ ಸಮಯದಲ್ಲಿ ಕೆಲಸ ಮಾಡಿಕೊಳ್ಳಿ, ಇದಲ್ಲದೆ ಹೊಸ ಪಾನ್ ಮಾಡುವವರು ಇನ್ನು ಮುಂದೆ ಪ್ಯಾನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡುವಾಗ ಅಲ್ಲಿ ತಂದೆಯ ಹೆಸರನ್ನು ತಿಳಿಸುವುದು ಕಡ್ಡಾಯವಲ್ಲ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಪಾನ್ ಕಾರ್ಡ್ ಅರ್ಜಿಗಳಲ್ಲಿ, ತಾಯಿಯು ಸಿಂಗಲ್ ಪೇರೆಂಟ್ ಆಗಿದ್ದಾರೆಯೇ ಎಂದು ಅರ್ಜಿದಾರರಲ್ಲಿ ಕೇಳಲಾಗುವುದು, ಹೌದಾದಲ್ಲಿ ಅರ್ಜಿದಾರರು ಕೇವಲ ತನ್ನ ತಾಯಿಯ ಹೆಸರನ್ನು ತಿಳಿಸಿದರೆ ಸಾಕು ಎಂದು ಆದಾಯ ತೆರಿಗೆ ನಿಯಮಗಳಿಗೆ ತಿದ್ದುಪಡಿಯನ್ನು ಮಾಡಲಾದ ಅಧಿಸೂಚನೆಯಲ್ಲಿ ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ತಿಳಿಸಿದೆ.

new news of Aadhar and pan card

Please follow and like us:
0
http://karnatakatoday.in/wp-content/uploads/2019/03/paan-card-cancel-1024x576.jpghttp://karnatakatoday.in/wp-content/uploads/2019/03/paan-card-cancel-150x104.jpgKarnataka Today's Newsಅಂಕಣಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಈಗೀಗ ಪಾನ್ ಕಾರ್ಡ್ ಹಾಗು ಆಧಾರ್ ದೇಶದ ಎಲ್ಲಾ ರೀತಿಯ ಯೋಜನೆಗಳನ್ನು ಪಡೆಯಲು ಹಾಗು ಸೇವೆಗಳಿಗೆ ಅರ್ಜಿ ಸಲ್ಲಿಸಲು ಹಾಗು ಐಡೆಂಟಿಟಿ ಪ್ರರೋಫ್ ಆಗಿಯೂ ಕೂಡ ಹೆಚ್ಚಿನ ಸರಕಾರಿ ಕೇಂದ್ರಗಳಲ್ಲಿ ಕೇಳಲಾಗುತ್ತಿದೆ. ಅಷ್ಟೇ ಅಲ್ಲದೆ ವ್ಯವಹಾರಗಳಿಗಂತೂ ಆಧಾರ್ ಮತ್ತು  ಪಾನ್ ಕಾರ್ಡ್ ಇವೆರಡು ಇಲ್ಲದೆ ಮುಂದಿನ ಕೆಲಸ ಅಸಾಧ್ಯ ಹೀಗಾಗಿ ಸರ್ಕಾರ ಈ ಮೊದಲಿನಿಂದಲೂ ಆಧಾರ್ ಅನ್ನು ಪಾನ್ ಗೆ ಜೋಡಿಸಿ ಎನ್ನುತ್ತಾ ಬಂದಿತ್ತು ಮತ್ತು ಅಂತಿಮ ಗಡುವನ್ನು ವಿಸ್ತರಿಸುತ್ತ...Kannada News