ಪಪ್ಪಾಯಿ ಹಣ್ಣು ಸೇವೆನೆಯಿಂದ ಎಷ್ಟೊಂದು ಲಾಭಗಳಿವೆ ಎಂದು ಗೊತ್ತಾದರೆ ಖಂಡಿತ ನೀವು ಕೂಡ ಇಂದಿನಿಂದಲೇ ಆರಂಭಿಸ್ತಿರಾ, ಹೌದು ಅಂತಹ ಅದ್ಬುತ ರೋಗ ನಿರೋಧಕ ಶಕ್ತಿಗಳನ್ನು ಹೊಂದಿದೆ ಈ ಪಪ್ಪಾಯಿ ಇದರ ಬಗ್ಗೆ ಒಂದೊಂದೇ ತಿಳಿದುಕೊಳ್ಳೋಣ ಬನ್ನಿ. ವರ್ಷದ ಎಲ್ಲ ಕಾಲದಲ್ಲೂ ದೊರೆಯುವ ಪಪ್ಪಾಯಿ ಅಥವಾ ಪರಂಗಿಹಣ್ಣು ಸೇವನೆಯಿಂದ ಹತ್ತು ಹಲವು ಪ್ರಯೋಜನಗಳಿವೆ. ವಿಟಮಿನ್ `ಸಿ’ ಹೇರಳವಾಗಿರುವ ಈ ಹಣ್ಣು, ದೇಹದ ಆರೋಗ್ಯ ಕಾಪಾಡುವಲ್ಲಿ ಅತ್ಯಂತ ಪ್ರಮುಖಪಾತ್ರ ವಹಿಸಲಿದೆ. ಪರಂಗಿಹಣ್ಣನ್ನು ಕತ್ತರಿಸಿ ತಿನ್ನಬಹುದಾಗಿದೆ ಹಾಗೂ `ಜ್ಯೂಸ್’ ತಯಾರಿಸಿಯೂ ಸೇವಿಸಬಹುದು. ಪ್ರೋಟೀನ್ ಮಿನರಲ್ಸ್ ಅಂಶಗಳು ಇದರಲ್ಲಿ ಸಾಕಷ್ಟಿವೆ. ರೋಗ ನಿರೋಧಕ ಶಕ್ತಿವೃದ್ಧಿ, ಜೀರ್ಣಕ್ರಿಯೆ ಸುಧಾರಣೆ, ಕಣ್ಣು ದೃಷ್ಟಿ ರಕ್ಷಣೆ ಮಾಡುವಲ್ಲಿ ಹೆಚ್ಚು ನೆರವಾಗಲಿದೆ.

ನಿತ್ಯವೂ ತಿನ್ನಬಹುದಾದ ಪರಂಗಿಹಣ್ಣಿನಲ್ಲಿ ಕೊಲೆಸ್ಟ್ರಾಲ್ ಅಂಶವನ್ನು ತಗ್ಗಿಸುವ ಗುಣ ಇರುವುದಲ್ಲದೆ, ನಿರೋಧಕ ಶಕ್ತಿಯನ್ನು ವೃದ್ಧಿಸಲಿದೆ. ಪರಂಗಿಹಣ್ಣಿನಲ್ಲಿರುವ ಫೈಬರ್, ವಿಟಮಿನ್ `ಸಿ’ ಮತ್ತು ಉತ್ಕರ್ಷಣ ನಿರೋಧಿ ಅಂಶಗಳು, ದೇಹದಲ್ಲಿ ಕೊಲೆಸ್ಟ್ರಾಲ್ ಉತ್ಪತ್ತಿಯಾಗುವುದನ್ನು ತಡೆಯಬಲ್ಲ ಸಾಮರ್ಥ್ಯ ಹೊಂದಿದೆ. ಇದರಿಂದ ಹೃದಯಾಘಾತ ಹಾಗೂ ಅಧಿಕ ರಕ್ತದ ಒತ್ತಡದ ಅಪಾಯಗಳನ್ನು ಕಡಿಮೆ ಮಾಡುತ್ತದೆ.

ತೂಕ ತಗ್ಗಿಸಲಿದೆ ಅತಿಯಾದ ತೂಕ ಹೊಂದಿರುವವರು, ತಮ್ಮ ದೈನಂದಿನ ಆಹಾರದಲ್ಲಿ ಪರಂಗಿ ಹಣ್ಣನ್ನು ಸೇರಿಸಿಕೊಂಡು ತಿನ್ನುವುದರಿಂದ ತೂಕ ಕ್ರಮೇಣ ಕಡಿಮೆಯಾಗಲಿದೆ. ಕ್ಯಾಲೋರಿ ಕಡಿಮೆ ಪ್ರಮಾಣದಲ್ಲಿರುವ ಈ ಹಣ್ಣು ಸೇವನೆಯಿಂದ ತೂಕ ಇಳಿಯಲು ನೆರವಾಗುತ್ತದೆ. ನಿರೋಧಕ ಶಕ್ತಿ ವೃದ್ಧಿಸಲಿದೆ ಎಂದರೆ, ದೇಹದಲ್ಲಿನ ಸೋಂಕುಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಒದಗಿಸುತ್ತದೆ. ಪರಂಗಿ ಹಣ್ಣಿನ ಒಂದು ತುಂಡಿನಲ್ಲಿ ಶೇ 200ರಷ್ಟು ವಿಟಮಿನ್ `ಸಿ’ ಅಂಶಗಳಿರುತ್ತದೆ ಎನ್ನಲಾಗಿದೆ.

ಪಪ್ಪಾಯ ಹಣ್ಣಿನಲ್ಲಿ ಸಕ್ಕರೆ ಪ್ರಮಾಣ ಕಡಿಮೆ ಇದ್ದು, ಮಧುಮೇಹಿಗಳೂ ತಿನ್ನಬಹುದಾಗಿದೆ. ಮಧುಮೇಹ ಇಲ್ಲದವರೂ ಅದನ್ನು ದೂರದಲ್ಲಿಡಲು ಈ ಹಣ್ಣನ್ನು ಸೇವಿಸಬಹುದು. ಕಣ್ಣುಗಳಿಗೆ ಒಳ್ಳೆಯದು ಕಣ್ಣುಗಳ ದೃಷ್ಟಿ ರಕ್ಷಣೆಗೆ ಪಪ್ಪಾಯದಲ್ಲಿರುವ ವಿಟಮಿನ್ `ಎ’ ಹೆಚ್ಚು ಸಹಕಾರಿ. ಕಣ್ಣು ಮಂಜಾಗುವುದು, ಪೊರೆ ಬರುವುದನ್ನು ದೂರ ಮಾಡಲಿದೆ. ಜೀರ್ಣಕ್ರಿಯೆ ಸುಧಾರಿಸಬಲ್ಲ ಸಾಮರ್ಥ್ಯ ಈ ಹಣ್ಣಿನಲ್ಲಿದೆ. ಜೀರ್ಣಕ್ರಿಯೆಗೆ ತೊಂದರೆ ಮಾಡದಂತಹ ಆಹಾರ ಪದಾರ್ಥಗಳನ್ನು ಸೇವನೆ ಮಾಡದೇ ಇರುವುದು ಕಷ್ಟಸಾಧ್ಯವಾದರೂ, ತಿಂದ ಮೇಲೆ ಅವನ್ನು ಜೀರ್ಣಿಸಿಕೊಳ್ಳಲು ಪಪ್ಪಾಯಿ ತಿನ್ನುವುದು ಅಗತ್ಯ.

ಸಂಧಿವಾತ ಎಂಬುದು ಆಘಾತಕಾರಿ ರೋಗವಾಗಿದ್ದು, ಮಾನವನ ಆಯಸ್ಸು ಕಡಿಮೆ ಮಾಡಲಿದೆ. ಇದರಿಂದ ದೂರವಿರಲು, ಪಪ್ಪಾಯಿ ಸೇವಿಸಬೇಕು. ಇದರಲ್ಲಿರುವ ಆಂಟಿಇನ್‌ಫ್ಲಾಮೇಟರಿ ಅಂಶಗಳು, ವಿಟಮಿನ್ `ಸಿ’ಯೊಂದಿಗೆ ಸೇರಿ, ಸಂಧಿವಾತದ ಮೂಲವನ್ಮು ನಿಯಂತ್ರಿಸಲು ನೆರವಾಗಲಿದೆ. ವಿಟಮಿನ್ `ಸಿ’ ಅಂಶ ಇರುವ ಆಹಾರ ಸೇವನೆ ಮಾಡುವುದರಿಂದ ಸಂಧಿವಾತ ರೋಗದಿಂದ ಗುಣಮುಖರಾಗಿರುವುದು ಸಂಶೋಧನೆಗಳಿಂದ ಸಾಬೀತಾಗಿದೆ, ಮಕ್ಕಳಿಗೂ ತಿನ್ನಿಸಬಹುದು.’ ಗಮನದಲ್ಲಿಡಬೇಕಾದ ಅಂಶವೆಂದರೆ ಮಕ್ಕಳಿಗೆ ಪಪ್ಪಾಯಿ ನೀಡುವ ಮುನ್ನ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು.

Please follow and like us:
0
http://karnatakatoday.in/wp-content/uploads/2019/02/SHASHI-KUMAR-1024x576.jpghttp://karnatakatoday.in/wp-content/uploads/2019/02/SHASHI-KUMAR-150x104.jpgKarnataka Today's Newsಎಲ್ಲಾ ಸುದ್ದಿಗಳುಕ್ರಿಕೆಟ್ಚಲನಚಿತ್ರಪಪ್ಪಾಯಿ ಹಣ್ಣು ಸೇವೆನೆಯಿಂದ ಎಷ್ಟೊಂದು ಲಾಭಗಳಿವೆ ಎಂದು ಗೊತ್ತಾದರೆ ಖಂಡಿತ ನೀವು ಕೂಡ ಇಂದಿನಿಂದಲೇ ಆರಂಭಿಸ್ತಿರಾ, ಹೌದು ಅಂತಹ ಅದ್ಬುತ ರೋಗ ನಿರೋಧಕ ಶಕ್ತಿಗಳನ್ನು ಹೊಂದಿದೆ ಈ ಪಪ್ಪಾಯಿ ಇದರ ಬಗ್ಗೆ ಒಂದೊಂದೇ ತಿಳಿದುಕೊಳ್ಳೋಣ ಬನ್ನಿ. ವರ್ಷದ ಎಲ್ಲ ಕಾಲದಲ್ಲೂ ದೊರೆಯುವ ಪಪ್ಪಾಯಿ ಅಥವಾ ಪರಂಗಿಹಣ್ಣು ಸೇವನೆಯಿಂದ ಹತ್ತು ಹಲವು ಪ್ರಯೋಜನಗಳಿವೆ. ವಿಟಮಿನ್ `ಸಿ’ ಹೇರಳವಾಗಿರುವ ಈ ಹಣ್ಣು, ದೇಹದ ಆರೋಗ್ಯ ಕಾಪಾಡುವಲ್ಲಿ ಅತ್ಯಂತ ಪ್ರಮುಖಪಾತ್ರ ವಹಿಸಲಿದೆ. ಪರಂಗಿಹಣ್ಣನ್ನು...Kannada News