ಪತಂಜಲಿ ಉತ್ಪನ್ನಗಳು ದೇಶದೆಲ್ಲೆಡೆ ಪ್ರಸಿದ್ದಿ ಪಡೆದಿರುವುದು ನಮಗೆ ಗೊತ್ತೇ ಇದೆ, ಸ್ವದೇಹಿ ನಿರ್ಮಾಣದ ವಸ್ತುಗಳು ಜನರಲ್ಲಿ ಕಿಚ್ಚು ಹಚ್ಚಿಸಿ ಬಹು ಬೇಗನೆ ಉತ್ತಮ ಗುಣಮಟ್ಟದ ಪತಂಜಲಿ ಜನರ ಮನಸನ್ನ ಸೆಳೆಯಿತು. ಈ ನಡುವೆ ಸ್ವದೇಶೀ ಕಂಪನಿ ಜಿಯೋ ಕೂಡ ಕಾಲಿಟ್ಟು ಟೆಲಿಕಾಂ ಕ್ಷೇತ್ರದಲ್ಲಿ ಎಂದು ಕಂಡು ಕೇಳರಿಯದ ಆಫರ್ ನೀಡಿತ್ತು.

ಅದೇ ಸಮಯದಲ್ಲಿ ಪತಂಜಲಿ ಕೂಡ ಇದೆ ರೀತಿಯ ಆಫರ್ ನೀಡುತ್ತೆ ಎನ್ನುವ ಸುದ್ದಿ ಹರಡಿತ್ತು ಆದರೆ ಅದು ಸಾಧ್ಯವಾಗಲಿಲ್ಲ. ಆದರೆ ಈಗ ಪತಂಜಲಿ ತನ್ನ ಮೊದಲ ಸಿಮ್ ಲಾಂಚ್ ಮಾಡಿದೆ. ಪತಂಜಲಿ ಕಂಪನಿಯು ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‍ಎನ್‍ಎಲ್ ) ಸಹಭಾಗಿತ್ವದೊಂದಿಗೆ ಸ್ವದೇಶಿ ಸಮೃದ್ಧಿ ಸಿಮ್‌ ಕಾರ್ಡ್‌ ಲೋಕಾರ್ಪಣೆ ಮಾಡಿದ್ದು, ಆಕರ್ಷಕ ಆಫರ್‌ಗಳನ್ನು ಪರಿಚಯಿಸಿದೆ.

ಆರಂಭದಲ್ಲಿ ಪತಂಜಲಿ ಕಂಪನಿಯ ನೌಕರರಿಗೆ ಮಾತ್ರ ಈ ಸಿಮ್ ಕಾರ್ಡ್ ಲಭ್ಯವಿದ್ದು ಸ್ವದೇಶಿ ಸಮೃದ್ಧಿ ಸಿಮ್‌ ಕಾರ್ಡ್‌ ಹೊಂದಿರುವರಿಗೆ ಪತಂಜಲಿ ಉತ್ಪನ್ನಗಳಲ್ಲಿ ಶೇ.10 ರಿಯಾಯಿತಿ ಸಿಗಲಿದೆ. ₹144ಗೆ ಪ್ರತಿದಿನ 2ಜಿಬಿ ಡೇಟಾ 100 ಎಸ್‌ಎಂಎಸ್‌ಗಳು ಮತ್ತು ರಾಷ್ಟ್ರದಾದ್ಯಂತ ಅನಿಯಮಿತ ಕರೆಗಳನ್ನು ಮಾಡುವ ಆಫರ್‍ ನೀಡಲಾಗಿದೆ .

ಇದಲ್ಲದೆ ಸಿಮ್‌ ಕಾರ್ಡ್‌ ಜತೆ ಅಫಘಾತ ವಿಮೆ, ₹2.5 ಲಕ್ಷ  ವರೆಗೆ ವೈದ್ಯಕೀಯ ಆರೋಗ್ಯ ವಿಮೆ ಹಾಗೂ 5 ಲಕ್ಷ ರೂ. ವರೆಗೆ ಜೀವ ವಿಮೆಯನ್ನು ಅಳವಡಿಸಲಾಗಿದೆ.ಸಿಮ್ ಕಾರ್ಡ್ ಲೋಕಾರ್ಪಣೆ ಮಾಡಿದ ನಂತರ ಸುದ್ದಿಗಾರರೊಡನೆ ಮಾತನಾಡಿದ ರಾಮ್‍ದೇವ್, ಬಿಎಸ್‍ಎನ್‍ಎನ್ ಸ್ವದೇಶಿ ನೆಟ್‍ವರ್ಕ್ ಆಗಿದ್ದು, ದೇಶದ ಅಭಿವೃದ್ದಿಗಾಗಿ ಪತಂಜಲಿ ಮತ್ತು ಬಿಎಸ್‍ಎನ್‍ಎಲ್ ಶ್ರಮಿಸುತ್ತಿದೆ ಎಂದಿದ್ದಾರೆ.

Please follow and like us:
0
http://karnatakatoday.in/wp-content/uploads/2018/05/patanjali-1024x576.pnghttp://karnatakatoday.in/wp-content/uploads/2018/05/patanjali-150x150.pngKarnataka Today's Newsಅಂಕಣಆರೋಗ್ಯಎಲ್ಲಾ ಸುದ್ದಿಗಳುಗ್ಯಾಡ್ಜೆಟ್ಸ್ಪತಂಜಲಿ ಉತ್ಪನ್ನಗಳು ದೇಶದೆಲ್ಲೆಡೆ ಪ್ರಸಿದ್ದಿ ಪಡೆದಿರುವುದು ನಮಗೆ ಗೊತ್ತೇ ಇದೆ, ಸ್ವದೇಹಿ ನಿರ್ಮಾಣದ ವಸ್ತುಗಳು ಜನರಲ್ಲಿ ಕಿಚ್ಚು ಹಚ್ಚಿಸಿ ಬಹು ಬೇಗನೆ ಉತ್ತಮ ಗುಣಮಟ್ಟದ ಪತಂಜಲಿ ಜನರ ಮನಸನ್ನ ಸೆಳೆಯಿತು. ಈ ನಡುವೆ ಸ್ವದೇಶೀ ಕಂಪನಿ ಜಿಯೋ ಕೂಡ ಕಾಲಿಟ್ಟು ಟೆಲಿಕಾಂ ಕ್ಷೇತ್ರದಲ್ಲಿ ಎಂದು ಕಂಡು ಕೇಳರಿಯದ ಆಫರ್ ನೀಡಿತ್ತು. ಅದೇ ಸಮಯದಲ್ಲಿ ಪತಂಜಲಿ ಕೂಡ ಇದೆ ರೀತಿಯ ಆಫರ್ ನೀಡುತ್ತೆ ಎನ್ನುವ ಸುದ್ದಿ ಹರಡಿತ್ತು ಆದರೆ ಅದು ಸಾಧ್ಯವಾಗಲಿಲ್ಲ....Kannada News