according to your birth week who are you

ಹುಟ್ಟಿದ ದಿನದ ಪ್ರಕಾರವಾಗಿ ನೀವು ಇಂತಹ ವ್ಯಕ್ತಿಗಳು ಅನ್ನುವುದರ ಬಗ್ಗೆ ವಿಶ್ಲೇಷಣೆ ನೀಡಿದರೆ ಹೇಗಿರುತ್ತದೆ ಹೇಳಿ ಅದೇ ರೀತಿಯ ಪ್ರಯತ್ನವೊಂದನ್ನ ಕೆಲ ಸಮೀಕ್ಷೆಗಳು ಮಾಡಿವೆ ಅದರ ಪ್ರಕಾರ ಇಂತಹ ತಿಂಗಳಿನಲ್ಲಿ ಅಥವಾ ಇಂತಹುದೇ ದಿನದಲ್ಲಿ ಜನಿಸಿದ ವ್ಯಕ್ತಿಗಳ ವ್ಯಕ್ತಿತ್ವ, ಹವ್ಯಾಸ , ಜೀವನಶೈಲಿ ಹೇಗಿರುತ್ತದೆ ಎನ್ನುವುದನ್ನ ಕೆಲ ಸಂಸ್ಥೆಗಳು ಕಲೆ ಹಾಕಿವೆ. ಅದರ ಆಧಾರದ ಪ್ರಕಾರ ಯಾವ ವಾರದಲ್ಲಿ ಜನಿಸಿದ ವ್ಯಕ್ತಿ ಯಾವ ರೀತಿ ಇರುತ್ತಾನೆ ಎಂದು ಒಮ್ಮೆ ಕಣ್ಣು ಹಾಯಿಸೋಣ ಬನ್ನಿ.

ನಮ್ಮ ಜ್ಯೋತಿಷ್ಯಶಾಸ್ತ್ರದಲ್ಲೂ ಕೂಡ ಇದೆ ರೀತಿಯ ಪದ್ಧತಿ ಇದೆ ಸಾಮಾನ್ಯವಾಗಿ ಜನಿಸಿದ ಘಳಿಗೆ ವಾರ, ಮುಂತಾದವುಗಳ ಲೆಕ್ಕಾಚಾರದ ಮೂಲಕ ವ್ಯಕ್ತಿ ಹೀಗೆ ಇರುತ್ತಾನೆಂದು ಊಹಿಸುತ್ತಾರಂತೆ.

according to your birth week who are you

ಸಮೀಕ್ಷೆಯ ಪ್ರಕಾರ ಸೋಮವಾರ ಜನಿಸಿದವರು ಹೆಚ್ಚಾಗಿ ಎಲ್ಲರನ್ನು ಆಕರ್ಷಿಸುತ್ತಾರೆ, ಕುಟುಂಬ ನಿರ್ವಹಣೆ ಮಾಡುತ್ತಾರೆ, ಇವರು ಯಾವ ರಂಗದಲ್ಲಿ ಇರುತ್ತಾರೋ ಅದರ ನಾಯಕತ್ವ ಇವರದ್ದೇ ಆಗಲಿದೆ. ಪರಿಶ್ರಮದಿಂದ ತನಗೆ ಬೇಕಾಗಿದ್ದನ್ನ ಪಡೆದುಕೊಳ್ಳುತ್ತಾರೆ.

ಇನ್ನು ಮಂಗಳವಾರ ಹುಟ್ಟಿದವರು ಸಾಮಾನ್ಯವಾಗಿ ಜೀವನದಲ್ಲಿ ಕಷ್ಟಪಟ್ಟು ಮೇಲೆ ಬರುತ್ತಾರೆ, ಸೋತೆನೆಂದು ಕುಗ್ಗಲ್ಲ ಬದಲಿಗೆ ಪ್ರಯತ್ನವನ್ನು ಮಾಡುವ ವಿಜಯದ ಗುಣ ಇವರದ್ದು.

according to your birth week who are you

ಇನ್ನು ಬುಧವಾರದವರು ಗಲಾಟೆ ಗೋಜಿಗೆ ಹೋಗಲ್ಲ , ಎಲ್ಲರನ್ನು ಪ್ರೀತಿಸುವ ಗುಣ, ಇವರನ್ನ ಮೇಲಕ್ಕೆ ತರುತ್ತದೆ. ಸ್ವತಂತ್ರವಾಗಿ ಯಾರ ಹಂಗಿಲ್ಲದೆ ಜೀವಿಸಲು ಇಷ್ಟಪಡುತ್ತಾರೆ ಗುರುವಾರ ಜನಮ ತಾಳಿದವರು, ಕಷ್ಟಪಟ್ಟರೆ ಸುಖ ಎನ್ನುವ ತತ್ವ ಇವರದ್ದು. ಶುಕ್ರವಾರದವರು ಜ್ಞಾನಿಗಳು ಮತ್ತು ಅಧ್ಯಾತ್ಮದತ್ತ ಸ್ವಲ್ಪ ಒಲವು ಜಾಸ್ತಿ.

according to your birth week who are you

ಪೂಜೆ ಪುನಸ್ಕಾರಗಳಿಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಶನಿವಾರ ಜನಿಸಿದವರು ಸ್ವಲ್ಪ ಕೋಪಿಷ್ಟರಂತೆ ಕಂಡರೂ ವಿಶಾಲ ಹೃದಯದವರು, ಮತ್ತು ಅಹಂಕಾರದ ಗುಣ ಇಲ್ಲದವರು. ಆದಿತ್ಯವಾರದವರು ಶಕ್ತಿವಂತ ವ್ಯಕ್ತಿತ್ವ, ಯುವುದೇ ಕೆಲಸಕ್ಕೂ ಸಾಯಿ ಎನ್ನುವ ಗುಣದವರು ಆದರೆ ಇವರು ಹೆಚ್ಚಾಗಿ ಒಂಟಿಯಾಗಿ ಇರಲು ಬಯಸುತ್ತಾರೆ.

Please follow and like us:
0
http://karnatakatoday.in/wp-content/uploads/2018/08/birth-date-1024x576.jpghttp://karnatakatoday.in/wp-content/uploads/2018/08/birth-date-150x104.jpgKarnataka Today's Newsಅಂಕಣಎಲ್ಲಾ ಸುದ್ದಿಗಳುಲೈಫ್ ಸ್ಟೈಲ್ಹುಟ್ಟಿದ ದಿನದ ಪ್ರಕಾರವಾಗಿ ನೀವು ಇಂತಹ ವ್ಯಕ್ತಿಗಳು ಅನ್ನುವುದರ ಬಗ್ಗೆ ವಿಶ್ಲೇಷಣೆ ನೀಡಿದರೆ ಹೇಗಿರುತ್ತದೆ ಹೇಳಿ ಅದೇ ರೀತಿಯ ಪ್ರಯತ್ನವೊಂದನ್ನ ಕೆಲ ಸಮೀಕ್ಷೆಗಳು ಮಾಡಿವೆ ಅದರ ಪ್ರಕಾರ ಇಂತಹ ತಿಂಗಳಿನಲ್ಲಿ ಅಥವಾ ಇಂತಹುದೇ ದಿನದಲ್ಲಿ ಜನಿಸಿದ ವ್ಯಕ್ತಿಗಳ ವ್ಯಕ್ತಿತ್ವ, ಹವ್ಯಾಸ , ಜೀವನಶೈಲಿ ಹೇಗಿರುತ್ತದೆ ಎನ್ನುವುದನ್ನ ಕೆಲ ಸಂಸ್ಥೆಗಳು ಕಲೆ ಹಾಕಿವೆ. ಅದರ ಆಧಾರದ ಪ್ರಕಾರ ಯಾವ ವಾರದಲ್ಲಿ ಜನಿಸಿದ ವ್ಯಕ್ತಿ ಯಾವ ರೀತಿ ಇರುತ್ತಾನೆ ಎಂದು ಒಮ್ಮೆ...Kannada News