ಕಿರುತೆರೆಯ ರಿಯಾಲಿಟಿ ಶೋ ನಲ್ಲಿ ಆದ ಸ್ನೇಹ ನಂತರ ಪ್ರೀತಿಗೆ ತಿರುಗಿ ಇಬ್ಬರೂ ಕೂಡ ಪ್ರೀತಿಯ ಬೆಲೆಯಲ್ಲಿ ಬಿದ್ದು ಮೈಸೂರು ದಸರಾ ವೇದಿಕೆಯ ಮೇಲೆ ಚಂದನ್ ಶೆಟ್ಟಿ ಅವರು ನಿವೇದಿತಾ ಗೌಡ ಅವರಿಗೆ ಸಾವಿರಾರು ಜನರ ಮುಂದೆ ಕೈ ಬೆರಳಿಗೆ ಉಂಗುವ ತೊಡಿಸುವ ಮೂಲಕ ಜನರ ಲವ್ ಪ್ರೊಪೋಸ್ ಮಾಡಿ ಎಲ್ಲರಿಗೂ ಅಚ್ಚರಿಯನ್ನ ಮೂಡಿಸಿದರು ಚಂದನ್ ಶೆಟ್ಟಿ. ಇನ್ನು ಯುವದಸರಾ ವೇದಿಕೆಯ ಮೇಲೆ ನಿವೇದಿತಾ ಗೌಡ ಅವರು ಕೂಡ ಚಂದನ್ ಶೆಟ್ಟಿ ಅವರ ಪ್ರೀತಿಯ ಪ್ರೊಪೋಸ್ ನ್ನ ಒಪ್ಪಿಕೊಂಡು ಸದ್ಯದಲ್ಲೇ ಇಬ್ಬರು ಮದುವೆಯಾಗುವುದಾಗಿ ವೇದಿಕೆಯ ಮೇಲೆ ತಿಳಿಸಿದ್ದಾರೆ ನಿವೇದಿತಾ ಗೌಡ ಅವರು.

ಇನ್ನು ಈ ವಿಷಯ ಈಗ ಇಡೀ ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗಿ ಬೆಳೆಯುತ್ತಿದ್ದು ಇದಕ್ಕೆ ನಾಡಿನ ಜನರ ಅಭಿಪ್ರಾಯ ಹೇಗಿದೆ ಎಂದು ತಿಳಿದರೆ ನೀವು ಕೂಡ ಶಾಕ್ ಆಗುತ್ತೀರಿ. ಹಾಗಾದರೆ ಜನರ ಅಭಿಪ್ರಾಯ ಹೇಗಿದೆ ಮತ್ತು ಕೆಲವರು ಇದರ ವಿರುದ್ಧ ಆಕ್ರೋಶವನ್ನ ವ್ಯಕ್ತಪಡಿಸಲು ಕಾರಣ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಚಂದನ್ ಶೆಟ್ಟಿ ಮತ್ತು ನಿವೇದಿತಾ ಅವರ ಪ್ರೀತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

People reaction of Chandhan shetty

ಸ್ನೇಹಿತರೆ ವಿಶ್ವ ಪಾರಂಪರಿಕ ಐತಿಹಾಸಿಕ ದಸರಾಗೆ ತನ್ನದೇ ಆದ ಜಾಗತಿಕ ಮನ್ನಣೆ ಇದೆ, ದೇಶ ವಿದೇಶಗಳಿಂದ ದಸರಾ ನೋಡಲು ಕೋಟ್ಯಾಂತರ ಜನರು ಬರುತ್ತಾರೆ, ಮೈಸೂರಿನಲ್ಲಿ ನಡೆಯುವ ಯುವದಸರ ವೇದಿಕೆ ತಾರೆಯರಿಬ್ಬರ ವೈಯಕ್ತಿಕ ಜೀವನದ ಆಚರಣೆಗೆ ವೇದಿಕೆ ಆಗುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಜನರು ತಮ್ಮ ಆಕ್ರೋಶವನ್ನ ಹೊರಹಾಕಲು ಕಾರಣವಾಗಿದೆ. ಚಂದನ್ ಶೆಟ್ಟಿ ತನ್ನ ಬಹುಕಾಲದ ಗೆಳತಿ ನಿವೇದಿತಾ ಗೌಡ ಅವರಿಗೆ ಪ್ರೊಪೋಸ್ ಮಾಡಿದ್ದು ಮತ್ತು ಕೈಗೆ ಮುತ್ತಿಕ್ಕಿ ಉಂಗುರವನ್ನ ಹಾಕಿದ್ದು ದಸರಾ ವೇದಿಕೆಗೆ ದಕ್ಕೆ ಉಂಟುಮಾಡಿದೆ ಎಂದು ಜನರು ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ.

ಇನ್ನು ಚಂದನ್ ಶೆಟ್ಟಿ ಅವರು ಪ್ರೊಪೋಸ್ ಮಾಡಿದಾಗ ಮೇಲಿನಿಂದ ಹೂಮಳೆ ಕೂಡ ಸುರಿಯಿತು ಆದ್ದರಿಂದ ಇದೊಂದು ದೊಡ್ಡ ಫ್ರೀ ಪ್ಲ್ಯಾನ್ ಮತ್ತು ಇದ್ದಕ್ಕೆ ಸರ್ಕಾರೀ ಕಾರ್ಯಕ್ರಮದ ಆಯೋಜಕರಾಗಲಿ ಅಥವಾ ಆಡಳಿತ ಮಂಡಳಿಯ ಸದಸ್ಯರಾಗಲಿ ಸುಮ್ಮನೆ ಕೈಕಟ್ಟಿ ಕುಳಿತು ಅನುವು ಮಾಡಿಕೂತಿರುವುದಕ್ಕೆ ಜನರು ತೀವ್ರವಾದ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ.

ದಸರಾ ಸಾಂಸ್ಕ್ರತಿಕ ಪವಿತ್ರವಾದ ಕಾರ್ಯಕ್ರಮವಾಗಿದ್ದು ಅದರ ಆಚರಣೆಯ ಸಮಯದಲ್ಲಿ ಈ ರೀತಿ ನಡೆದುಕೊಳ್ಳುವುದು ನಿಜಕ್ಕೂ ಬೇಸರದ ಸಂಗತಿ ಎಂದು ಜನರು ತಮ್ಮ ಬೇಸರವನ್ನ ಸಾಮಾಜಿಕ ಜಾಲತಾಣಗಳಲ್ಲಿ ಹೊರಹಾಕಿದ್ದಾರೆ. ಹೇಗೋ ದಸರಾದಲ್ಲಿ ಮೆರವಣಿಗೆ ನಡೆಯುತ್ತಿದೆ ಮತ್ತು ಅದರ ಜೊತೆಗೆ ಇವರಿಬ್ಬರಿಗೆ ಅರಮನೆಯಲ್ಲಿ ಮದುವೆ ನಡೆಸಿ ಮತ್ತು ಮದುವೆ ಮೆರವಣಿಗೆಯನ್ನ ನಡೆಸಿ ಬೀಗರೂಟವನ್ನ ಹಾಕಿ ಎಂದು ನೆಟ್ಟಿಗರು ತಮ್ಮ ಆಕ್ರೋಶವನ್ನ ಹೊರಹಾಕಿದ್ದಾರೆ, ಸ್ನೇಹಿತರೆ ಈ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

People reaction of Chandhan shetty

Please follow and like us:
error0
http://karnatakatoday.in/wp-content/uploads/2019/10/People-Reaction-of-Chandan-Shetty-1024x576.jpghttp://karnatakatoday.in/wp-content/uploads/2019/10/People-Reaction-of-Chandan-Shetty-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಕಿರುತೆರೆಯ ರಿಯಾಲಿಟಿ ಶೋ ನಲ್ಲಿ ಆದ ಸ್ನೇಹ ನಂತರ ಪ್ರೀತಿಗೆ ತಿರುಗಿ ಇಬ್ಬರೂ ಕೂಡ ಪ್ರೀತಿಯ ಬೆಲೆಯಲ್ಲಿ ಬಿದ್ದು ಮೈಸೂರು ದಸರಾ ವೇದಿಕೆಯ ಮೇಲೆ ಚಂದನ್ ಶೆಟ್ಟಿ ಅವರು ನಿವೇದಿತಾ ಗೌಡ ಅವರಿಗೆ ಸಾವಿರಾರು ಜನರ ಮುಂದೆ ಕೈ ಬೆರಳಿಗೆ ಉಂಗುವ ತೊಡಿಸುವ ಮೂಲಕ ಜನರ ಲವ್ ಪ್ರೊಪೋಸ್ ಮಾಡಿ ಎಲ್ಲರಿಗೂ ಅಚ್ಚರಿಯನ್ನ ಮೂಡಿಸಿದರು ಚಂದನ್ ಶೆಟ್ಟಿ. ಇನ್ನು ಯುವದಸರಾ ವೇದಿಕೆಯ ಮೇಲೆ ನಿವೇದಿತಾ ಗೌಡ ಅವರು ಕೂಡ...Film | Devotional | Cricket | Health | India