ಎರಡು ತಿಂಗಳ ಕಾಲ ದೇಶದಲ್ಲಿ ಭಾರಿ ಕೋಲಾಹಲ ಸ್ರಷ್ಟಿಸಿದ್ದ ಪೆಟ್ರೋಲ್ ಹಾಗು ಡೀಸೆಲ್ ಬೆಲೆ ಇದೀಗ ಭಾರಿ ಇಳಿಮುಖ ಕಾಣುತ್ತಿದೆ. ಇದರಿಂದಾಗಿ ಸಹಜವಾಗಿಯೇ ಜನರಿಗೆ ಸ್ವಲ್ಪ ರಿಲೀಫ್ ಸಿಕ್ಕಿದೆ ಎನ್ನಬಹುದು. ಇಷ್ಟಕ್ಕೂ ಕಳೆದ 18 ದಿನಗಳಲ್ಲಿ ಪೆಟ್ರೋಲ್ ಬೆಲೆ 4 ರೂ ಕಡಿಮೆಯಾಗಿದೆ, ವಾಹನ ಸವಾರರಂತೂ ಬಹಲ್ ಖುಷ್ ಆಗಿದ್ದಾರೆ, ಡೀಸೆಲ್‌ ದರ  2  ರೂ 33 ಪೈಸೆ ಇಳಿಕೆಯಾಗಿದೆ. ಇನ್ನೊಂದು ಸಿಹಿಸಿಸುದ್ದಿ ಏನಪ್ಪಾ ಏನಂದ್ರೆ ದೀಪಾವಳಿಯು ಮುಗಿಯುತ್ತಿದ್ದಂತೆ ಸರಕಾರ ಜನತೆಗೆ ದೊಡ್ಡ ಗಿಫ್ಟ್ ನೀಡಲಿದೆ ಎನ್ನಲಾಗುತ್ತಿದೆ, ಹೌದು ದೀಪಾವಳಿ ಮುಗಿದ ಮೇಲೆ ಪೆಟ್ರೋಲ್ ಬೆಲೆ ಭಾರಿ ಕಡಿಮೆಯಾಗುವ ಸಾಧ್ಯತೆ ಹೆಚ್ಚಿದೆ ಇದಕ್ಕೆ ಕಾರಣ ಕೂಡ ಇದೆ. ಇರಾನ್‌ ವಿರುದ್ಧ ನ.5ರಿಂದ ಕಠಿಣ ನಿರ್ಬಂಧ ವಿಧಿಸಲಿದ್ದರೂ, ಭಾರತ ಸೇರಿದಂತೆ 8 ರಾಷ್ಟ್ರಗಳ ತೈಲ ಆಮದಿಗೆ ಇದು ಅಡ್ಡಿಯಾಗುವುದಿಲ್ಲ ಎಂದು ಅಮೆರಿಕ ಶುಕ್ರವಾರ ತಿಳಿಸಿದೆ.

ಇದರೊಂದಿಗೆ ಭಾರತಕ್ಕೆ ಇರಾನ್‌ನಿಂದ ಕಚ್ಚಾ ತೈಲ ಪೂರೈಕೆ ಮುಂದುವರಿಯಲಿದ್ದು, ದರ ಇಳಿಕೆಯಾಗುವ ನಿರೀಕ್ಷೆ ಇದೆ. ಇರಾನ್‌ನಿಂದ ತೈಲ ಆಮದಿಗೆ ಅಮೆರಿಕ ವಿಧಿಸಿದ್ದ ನಿಷೇಧದಿಂದ ಭಾರತಕ್ಕೆ ಈಗಾಗಲೇ 180 ದಿನಗಳ ವಿನಾಯಿತಿ ಸಿಕ್ಕಿದೆ. ಈ ನಡುವೆ, ತೈಲ ಆಮದಿನ ಹಣಕಾಸು ವ್ಯವಹಾರವನ್ನು ರೂಪಾಯಿಯಲ್ಲೇ ನಡೆಸಲು ಇರಾನ್‌ ಮತ್ತು ಭಾರತ ಕಾರ್ಯತಂತ್ರ ಅಂತಿಮಗೊಳಿಸುತ್ತಿವೆ.

ಹಿಂದೆ 45% ರೂಪಾಯಿಯಲ್ಲಿ,  55% ಯೂರೋ ಮೂಲಕ ಪಾವತಿಸಲಾಗುತ್ತಿತ್ತು. ಇದು ಏರುತ್ತಿರುವ ಅಮೆರಿಕದ ಡಾಲರ್‌ಗೆ ಸಡ್ಡು ಹೊಡೆಯುವ ತಂತ್ರ ಎನ್ನಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇರಾನ್‌ನ ಬ್ಯಾಂಕ್‌ಗಳಿಗೆ ಭಾರತದಿಂದ ಪಾವತಿಸುವ ಹಣಕಾಸು ವ್ಯವಸ್ಥೆ ಮೇಲೆ ಅಮೆರಿಕ ನಿರ್ಬಂಧ ವಿಧಿಸಿದರೂ, ಯಾವುದೇ ಸಮಸ್ಯೆಯಾಗದಂತೆ ಮತ್ತು ಭಾರತವು ರೂಪಾಯಿಯಲ್ಲೇ ಪಾವತಿಸುವಂತೆ ವ್ಯವಸ್ಥೆ ರೂಪಿಸಿಕೊಳ್ಳಲು ಮುಂದಾಗಿದೆ.

ಮುಂಬರುವ ದಿನಗಳಲ್ಲಿ ತೈಲ ದರ ಮತ್ತಷ್ಟು ಇಳಿಕೆಯಾಗುವ ನಿರೀಕ್ಷೆ ಇದೆ. ಈ ನಡುವೆ, ಪೆಟ್ರೋಲ್‌ ದರ 1 ತಿಂಗಳಲ್ಲಿ 4 ರೂ 23  ಪೈಸೆ  ಇಳಿಕೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಇಳಿಕೆಯ ಫಲ ಇದಾಗಿದೆ. ಈ ನಡುವೆ, ಇರಾನ್‌ನಿಂದ ತೈಲ ಆಮದಿಗೆ ಎದುರಾಗಿದ್ದ ಆತಂಕ ನಿವಾರಣೆಯಾದ ಹಿನ್ನೆಲೆಯಲ್ಲಿ ದರ ಇನ್ನಷ್ಟು ಇಳಿಯುವ ಸಾಧ್ಯತೆಗಳಿವೆ. ನಿಮ್ಮ ಪ್ರಕಾರ ತೈಲ ದರ ಎಷ್ಟಿದ್ದರೆ ಜನತೆಗೆ ಸಹಾಯವಾಗಬಹುದು ತಿಳಿಸಿ.

Please follow and like us:
0
http://karnatakatoday.in/wp-content/uploads/2018/11/petrol-price-down-1024x576.jpghttp://karnatakatoday.in/wp-content/uploads/2018/11/petrol-price-down-150x104.jpgKarnataka Today's Newsಅಂಕಣಎಲ್ಲಾ ಸುದ್ದಿಗಳುಎರಡು ತಿಂಗಳ ಕಾಲ ದೇಶದಲ್ಲಿ ಭಾರಿ ಕೋಲಾಹಲ ಸ್ರಷ್ಟಿಸಿದ್ದ ಪೆಟ್ರೋಲ್ ಹಾಗು ಡೀಸೆಲ್ ಬೆಲೆ ಇದೀಗ ಭಾರಿ ಇಳಿಮುಖ ಕಾಣುತ್ತಿದೆ. ಇದರಿಂದಾಗಿ ಸಹಜವಾಗಿಯೇ ಜನರಿಗೆ ಸ್ವಲ್ಪ ರಿಲೀಫ್ ಸಿಕ್ಕಿದೆ ಎನ್ನಬಹುದು. ಇಷ್ಟಕ್ಕೂ ಕಳೆದ 18 ದಿನಗಳಲ್ಲಿ ಪೆಟ್ರೋಲ್ ಬೆಲೆ 4 ರೂ ಕಡಿಮೆಯಾಗಿದೆ, ವಾಹನ ಸವಾರರಂತೂ ಬಹಲ್ ಖುಷ್ ಆಗಿದ್ದಾರೆ, ಡೀಸೆಲ್‌ ದರ  2  ರೂ 33 ಪೈಸೆ ಇಳಿಕೆಯಾಗಿದೆ. ಇನ್ನೊಂದು ಸಿಹಿಸಿಸುದ್ದಿ ಏನಪ್ಪಾ ಏನಂದ್ರೆ ದೀಪಾವಳಿಯು ಮುಗಿಯುತ್ತಿದ್ದಂತೆ...Kannada News