ಒಮ್ಮೊಮ್ಮೆ ನಮ್ಮ ಬೈಕ್ ಅಥವಾ ಕಾರು ಸರ್ವಿಸ್ ಮಾಡಿಸಿದ ಬಳಿಕವೂ ಕೂಡ ಉತ್ತಮ ಮೈಲೇಜ್ ನೀಡುತ್ತಿಲ್ಲ ಎನ್ನುವ ಯೋಚನೆ ನಿಮ್ಮ ಮನದಲ್ಲಿದ್ದರೆ ಅದಕ್ಕೆ ಕೇವಲ ಬೈಕ್ ಅಥವಾ ಕಾರಿನ ದೋಷ ಕಾರಣವಲ್ಲ ಬದಲಿಗೆ ನೀವು ಹಣ ಕೊಟ್ಟು ಹಾಕಿಸಿಕೊಳ್ಳುವ ಪೆಟ್ರೋಲ್ ಅಥವಾ ಡೀಸೆಲ್ ಗಳಲ್ಲಿಯೂ ವ್ಯತ್ಯಯ ಕಾರಣ ಆಗಿರಬಹುದು. ಹೌದು ನಮ್ಮ ದೇಶದಲ್ಲಿ ಕಳೆದ ಐದಾರು ವರ್ಷಗಳಿಂದ ಪೆಟ್ರೋಲ್ ಪಂಪ್ ಗಳಲ್ಲಿ ಹೇಗೆ ಮೋಸ ನಡೆಯುತ್ತವೆ ಎನ್ನುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ವಿಡಿಯೋ ಗಳು ವೈರಲ್ ಆಗಿದೆ. ಇದರ ಬಗ್ಗೆ ನೀವು ಒಮ್ಮೆ ತಿಳಿದುಕೊಂಡರೆ ಸಾಕು ಇನ್ನೆಂದು ನೀವು ಪೆಟ್ರೋಲ್ ಪಂಪ್ ಗಾಲ ಹಗಲು ದರೋಡೆಗೆ ಬಲಿಯಾಗಲ್ಲ. ಎಲ್ಲ ಪಂಪ್ ಗಳು ಹೀಗೆ ಮಾಡುತ್ತವೆ ಎಂದು ನಾವು ಹೇಳುತ್ತಿಲ್ಲ ಆದರೆ ದೇಶದಲ್ಲಿ ವೈರಲ್ ಆದ ಕೆಲ ವಿಡಿಯೋಗಳು ಈ ಸಾಮಾಜಿಕ ಸಂದೇಶ ಸಾರುತ್ತಿವೆ. ಹೌದು ಇತ್ತೀಚಿಗೆ ಪೆಟ್ರೋಲ್‌ ಅಳತೆಯಲ್ಲಿ ಮೋಸ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಪ್ರತಿಭಟನೆ ನಡೆಸಿದ ಘಟನೆ ಕರ್ನಾಟಕದಲ್ಲಿ ನಡೆದಿದೆ.

ಕೆಲವು ತಿಂಗಳುಗಳ ಹಿಂದೆ ಬಂಕ್‌ನಲ್ಲಿ ತಮ್ಮ ಬೈಕ್‌ಗೆ 100 ರೂನ ಪೆಟ್ರೋಲ್‌ ಹಾಕಿಸಿದ್ದ ವ್ಯಕ್ತಿಯೊಬ್ಬರು ಪೆಟ್ರೋಲ್ ಹಾಕುವ ವೇಳೆ ಅಳತೆಯಲ್ಲಿ ಮೋಸ ಆಗಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಕೆಲಸಗಾರನನ್ನು ಪ್ರಶ್ನಿಸಿದ್ದರು. ಪರಸ್ಪರ ಮಾತಿನ ಚಕಮಕಿ ನಡೆದು ಕೊನೆಗೆ ಸ್ಥಳದಲ್ಲೇ ಬೈಕ್‌ನಲ್ಲಿದ್ದ ಪೆಟ್ರೋಲ್‌ ಎಲ್ಲವನ್ನು ಬಾಟಲಿಯೊಂದರಲ್ಲಿ ಸಂಗ್ರಹಿಸಿದಾಗ ಅದರಲ್ಲಿ ಕೇವಲ 30 ರೂ ನಷ್ಟು ಮಾತ್ರ ಪೆಟ್ರೋಲ್‌ ಇರುವುದು ಕಂಡುಬಂತು.ಕೂಡಲೇ ಅಲ್ಲಿದ್ದ ಇತರೆ ಗ್ರಾಹಕರು ಬಂಕ್‌ ಮ್ಯಾನೇಜರ್‌ ಮತ್ತು ಕೆಲಸಗಾರರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ನೂರಾರು ಜನರು ಸ್ಥಳದಲ್ಲಿ ಜಮಾಯಿಸಿದರು.

ಈ ಪೈಕಿ ಬಹುತೇಕ ಜನರು ನಮಗೂ ಈ ಹಿಂದೆ ಮೋಸ ಆಗಿದೆ ಎಂದು ಆರೋಪಿಸಿದ್ದಲ್ಲದೆ ಬಂಕ್‌ನ್ನು ಬಂದ್‌ ಮಾಡಬೇಕು. ಕಳೆದ ಹಲವು ದಿನದಿಂದ ಗ್ರಾಹಕರಿಗೆ ಲಕ್ಷಾಂತರ ರೂ ಮೋಸವಾಗಿದೆ. ಬಂಕ್‌ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಪಟ್ಟು ಹಿಡಿದರು. ನೋಡಿದಿರಲ್ಲ ಸ್ನೇಹಿತರೆ ಬ್ಯಾಂಕ್ ಗಾಲ ಕಾರ್ಯವೈಖರಿ ಹೀಗೂ ಇರುತ್ತೆ ಅಂತಾ. ಕೇವಲ ಇದಷ್ಟೇ ಅಲ್ಲದೆ ಪೆಟ್ರೋಲ್ ಹಾಕುವ ಕೆಲ ಗ್ರಾಹಕರು 100 ರೂನ ಬದಲು 110 ಹೀಗೆ ಹಾಕುತ್ತಾರೆ ಇದಕ್ಕೆ ಮುಖ್ಯ ಕಾರಣ ಟ್ಯಾಂಪರಿಂಗ್.

ಹೌದು ಹಲವಾರು ಮಂದಿ ಕೆಲ ಫಿಕ್ಸೆಡ್ ಮೊತ್ತಗಳಿಗೆ ಪೆಟ್ರೋಲ್ ಬಂಕ್ ಮಷಿನ್ ನಲ್ಲಿ ಸ್ವಲ್ಪ ಕಡಿಮೆ ಅಮೌಂಟ್ ನ ಪೆಟ್ರೋಲ್ ಬೀಳುವಂತೆ ಮಾಡಿರುತ್ತಾರೆ ಎನ್ನುವುದು ಹಲವರ ಅಭಿಪ್ರಾಯ. ಅದೇ ರೀತಿಯಲ್ಲಿ ಇತ್ತೀಚಿಗೆ ಕಾರಿಗೆ ಪೆಟ್ರೋಲ್ ಹಾಕುತ್ತಿರುವ ಸಂದರ್ಭದಲ್ಲಿ ಪೆಟ್ರೋಲ್ ಗನ್ ಇರುವ ಜಾಗದಲ್ಲಿ ವ್ಯಕ್ತಿಯೊಬ್ಬ ಅವಿತು ಅದನ್ನು ಒತ್ತುವ ಮೂಲಕ ಪೆಟ್ರೋಲ್ ಬೀಳದಂತೆ ಮಾಡುವ ದ್ರಶ್ಯ ಕೂಡ ಕಂಡು ಬಂದಿತ್ತು.

ಹೀಗಾಗಿ ಇನ್ನು ಮೇಲೆ ಈ ತರಹದ ಯಾವುದೇ ಬಂಕ್ ಗಳ ಮೇಲೆ ನಿಮಗೆ ಅನುಮಾನ ಇದ್ದಲ್ಲಿ ಒಂದು ಬಾಟಲಿಯ ಮೂಲಕ ಪೆಟ್ರೋಲ್ ತುಂಬಿಸಿಕೊಳ್ಳಿ. ಅಷ್ಟೇ ಅಲ್ಲದೆ ಕೇವಲ ಪೆಟ್ರೋಲ್ ಅಥವಾ ಡೀಸೆಲ್ ಹಾಕಿಸಿಕೊಳ್ಳುವಾಗ ಜೀರೋ ಮಾತ್ರವಲ್ಲದೆ ಮಷಿನ್ ಬಳಿಯೂ ಕೂಡ ಯಾರು ನಿಂತಿಲ್ಲ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಿ. ಮಾಹಿತಿಯನ್ನು ಆದಷ್ಟು ವಾಹನ ಸವಾರರಿಗೆ ಹಂಚಿಕೊಳ್ಳಿ.

Please follow and like us:
error0
http://karnatakatoday.in/wp-content/uploads/2019/11/cheating-in-bunk-1024x576.pnghttp://karnatakatoday.in/wp-content/uploads/2019/11/cheating-in-bunk-150x104.pngKarnataka Trendingಆಟೋಒಮ್ಮೊಮ್ಮೆ ನಮ್ಮ ಬೈಕ್ ಅಥವಾ ಕಾರು ಸರ್ವಿಸ್ ಮಾಡಿಸಿದ ಬಳಿಕವೂ ಕೂಡ ಉತ್ತಮ ಮೈಲೇಜ್ ನೀಡುತ್ತಿಲ್ಲ ಎನ್ನುವ ಯೋಚನೆ ನಿಮ್ಮ ಮನದಲ್ಲಿದ್ದರೆ ಅದಕ್ಕೆ ಕೇವಲ ಬೈಕ್ ಅಥವಾ ಕಾರಿನ ದೋಷ ಕಾರಣವಲ್ಲ ಬದಲಿಗೆ ನೀವು ಹಣ ಕೊಟ್ಟು ಹಾಕಿಸಿಕೊಳ್ಳುವ ಪೆಟ್ರೋಲ್ ಅಥವಾ ಡೀಸೆಲ್ ಗಳಲ್ಲಿಯೂ ವ್ಯತ್ಯಯ ಕಾರಣ ಆಗಿರಬಹುದು. ಹೌದು ನಮ್ಮ ದೇಶದಲ್ಲಿ ಕಳೆದ ಐದಾರು ವರ್ಷಗಳಿಂದ ಪೆಟ್ರೋಲ್ ಪಂಪ್ ಗಳಲ್ಲಿ ಹೇಗೆ ಮೋಸ ನಡೆಯುತ್ತವೆ ಎನ್ನುವುದಕ್ಕೆ ಸಾಮಾಜಿಕ...Film | Devotional | Cricket | Health | India